Labels

Tuesday, 22 October 2019

ಇದಿರಾರೊ-ಗುರುವೆ idiraro guruve

ಇದಿರಾರೊ-ಗುರುವೆ-ಸಮರಾರೊ ಪ
ಮದನ ಜನಕಪ್ರಿಯ ಗುರುಮಧ್ವರಾಯ ಅ.ಪ
ಸನ್ನುತ ಮಹಿಮ ಪ್ರಸನ್ನವದನ ನಿನ-
ಗನ್ಯನಲ್ಲವೊ ನೀಯೆನ್ನ ರಕ್ಷಿಸಬೇಕೋ ||
ನಿನ್ನ ನೋಡಿದವರ್ಧನ್ಯರಾಗುವರು
ಎನ್ನ ದಯಾಮೂರ್ತಿ ಮನ್ನಿಸಿ ನೋಡೋ 1
ದುರ್ಜನರನು ಗರ್ಜೆನೆಯಿಂದ ಓಡಿಸಿ
ಸಜ್ಜನರನು ಸಂರಕ್ಷಿಸಿದಾತನೆ |
ಈ ಜಗದಲಿ ಮಧ್ಯಗೇಹರ ಪತ್ನಿಯ
ಪೂಜ್ಯ ಜಠರದಲಿ ಜನಿಸಿದ ಧೀರ 2
ವೇದಶಾಸ್ತ್ರಗಳಿಂದ ಮಾಯಿಗಳ ಖಂಡಿಸಿ
ಸಾಧಿಸಿ ಹರಿಯೆ ಸರ್ವೋತ್ತಮನೆಂದು ||
ಮೋದಭರಿತವಾದ ದಿವ್ಯಶಾಸ್ತ್ರವ ಗೈದ
ಮೋದ ತೀರ್ಥ-ಪುರಂದರವಿಠಲದಾಸ 3

No comments:

Post a Comment