Labels

Saturday, 19 October 2019

ಅಂಜಲೇತಕೆ ಮನವೆ anjaletake manave

ಅಂಜಲೇತಕೆ ಮನವೆ ಅನುಗಾಲವು
ಕಂಜನಾಭನ ಭಕುತಿ ಕೈಕೊಂಡ ಬಳಿಕ ಪ
ನಾರಾಯಣನೆಂಬ ನಾಲ್ಕು ಅಕ್ಷರದಿಂದ
ಘೋರಪಾಪವನೆಲ್ಲ ಕಳೆಯಬಹುದು ||
ಶ್ರೀ ರಾಮನಾಮವೆಂಬ ಸಿಂಗಾಡಿ ತಕ್ಕೊಂಡು
ವೈರಿಷಡ್ವರ್ಗಗಳ ವಧೆ ಮಾಡಬಹುದು 1
ಶ್ರೀ ಕೇಶವನೆ ಎಂಬ ಸಿದ್ಧ ಮಂತ್ರಗಳಿಂದ
ಕಾಕು ಕರ್ಮಗಳನ್ನು ಕಳೆಯಬಹುದು ||
ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡು
ನೂಕಿ ಯಮಬಂಟರನು ನುಗ್ಗು ಮಾಡಲುಬಹುದು 2
ಹರಿವಾಸುದೇವನೆಂಬ ಅಮೃತಪಾನಗಳಿಂದ
ಮರಣ ಜನನಗಳೆರಡ ಜಯಿಸಬಹುದು ||
ಅರಿತರೆ ಮನದೊಳಗೆ ಪುರಂದರವಿಠಲನ
ಸರಸ ಸದ್ಗತಿಯನ್ನು ಸವಿಗಾಣಬಹುದು3

No comments:

Post a Comment