Labels

Tuesday, 22 October 2019

ಇದು ಏನಂಗ ಮೋಹನಾಂಗ idu enanga mohananga


ಇದು ಏನಂಗ ಮೋಹನಾಂಗ |
ಮದನಜನಕ ತೊರವೆಯ ನರಸಿಂಗ ಪ.
ಸುರರು ತುತಿಸಿ ಕರೆಯೆ ತುಟಿಯ ಮಿಸುಕದವ
ತೆರೆದೆ ಏತಕೆ ಬಾಯ ತೆರನ ಪೇಳೊಮ್ಮೆ 1
ವರನೀಲರತುನ ಮಾಣಿಕದ ಹಾರಗಳಿರೆ |
ಕೊರಳೊಳು ಕರುಳ ಮಾಲೆಯ ನಿಟ್ಟು ಮೆರೆವುದು 2
ಸಿರಿಮುದ್ದು ನರಸಿಂಹ ಪುರಂದರವಿಠಲ |
ಸಿರಿಯಿಪ್ಪ ತೊಡೆಯಲಿ ಅರಿಯ ತಂದಿಡುವುದು 3

No comments:

Post a Comment