ಇರಬೇಕು - ಹರಿದಾಸರ ಸಂಗ
ವರe್ಞÁನಿಗಳ ದಯ ಸಂಪಾದಿಸಬೇಕು ಪ.
ಅತಿe್ಞÁನಿಯಾಗಿ ಹರಿಕಥೆಯ ಕೇಳಬೇಕು
ಯತಿಗಳ ಪಾದಕ್ಕೆ ಎರಗಬೇಕು
ಸತಿ ಸುತರಿದ್ದು ಮಮತೆಯನು ಬಿಡಬೇಕು
ಗತಿಯೆಂದು ಬಿಡದೆ ಹರಿಯ ಪೋಪರಸಂಗ 1
ನಡೆ ಯಾತ್ರಿಯನಬೇಕು ನುಡಿ ನೇಮವಿರಬೇಕು
ಬಿಡದೆ ಹರಿಯ ಪೂಜೆಯ ಮಾಡಬೇಕು
ಅಡಿಗಡಿಗೆ ಬಂದು ಹರಿಗಡ್ಡ ಬೀಳಬೇಕು
ಬಿಡದೆ ಹರಿಭಜನೆಯ ಮಾಡುವರ ಸಂಗ 2
ಹರಿ - ಹರ - ವಿರಂಚಿಯರ ಪರಿಯ ತಿಳಿಯಬೇಕು
ತರತಮದಿ ರುದ್ರ - ಇಂದ್ರಾದಿಗಳ
ಅರಿಯದಿದ್ದರೆ ಗುರುಹಿರಿಯರ ಕೇಳಬೇಕು
ಪರಮಾನಂದದಲಿ ಓಲಾಡುವರ ಸಂಗ 3
ಷಟ್ಕರ್ಮ ಮಾಡಬೇಕು ವೈಷ್ಣವನೊಲಿಸಬೇಕು ಉ -
ತ್ಕಷ್ಟ ವೈರಾಗ್ಯಬೇಕು ದುಷ್ಟಸಂಗ ಬಿಡಬೇಕು
ವಿಷ್ಣುವಿನ ದಾಸರ ದಾಸನಾಗಲುಬೇಕು
ಎಷ್ಟು ಕಷ್ಟಬಂದರೂ ಹರಿಯ ಭಜಿಪರ ಸಂಗ 4
ಏಕಾಂತ ಕುಳ್ಳಿರಬೇಕು ಲೋಕವಾರ್ತೆ ಬಿಡಬೇಕು
ಲೋಕೈಕನಾಥನ ಭಜಿಸಬೇಕು
ಸಾಕು ಸಂಸಾರವೆಂದು ಕಕ್ಕುಲತೆ ಬೀಡಬೇಕು
ಶ್ರೀಕಾಂತ ಪುರಂದರ ವಿಠಲರಾಯನ ಸಂಗ 5
____
No comments:
Post a Comment