ಆರು ಬಿಟ್ಟರೂ ನಿನ್ನ ಬಿಡದೆ ನಾ ನಂಬಿದೆ
ರಾಮರಾಮ - ಸ್ವಾಮಿ |
ನೀ ಬಿಟ್ಟರಿನ್ನು ಅದಾರ ಸೇರಲು ಬೇಕೊ -
ರಾಮರಾಮ ಪ.
ತುಂಬಿದ ನದಿಯಲಿ ಹರಿಗೋಲು ಮುಳುಗಿತೊ
ರಾಮ ರಾಮ - ಅಲ್ಲಿ
ಅಂಬಿಗನಾಶೆಯು ಅನುಗಾಲ ತಪ್ಪಿತೊ -
ರಾಮ ರಾಮ 1
ನಂಬಿ ಹಿಡಿದರೆ ಬಲು ಕೊಂಬೆಯು ಮುರಿಯಿತೊ -
ರಾಮ ರಾಮ - ಅಲ್ಲಿ
ಹಂಬಲಿಸಿದರೆ ಕೈ ಹಿಡಿವರ ನಾ ಕಾಣೆ ರಾಮ ರಾಮ 2
ಅಂಗನೆಯರೆಲ್ಲ ನೆರೆದು ಚಪ್ಪಳೆಯಿಕ್ಕುತ ದಿವ್ಯ |ಮಂಗಳನಾಮವ ಪಾಡಿ ರಂಗನ ಕುಣಿಸುವರು ಪಪಾಡಿ ಮಲಹರಿ ಭೈರವ ಸಾರಂಗ ದೇಶಿ |ಗುಂಡಕ್ರಿ ಗುಜ್ಜರಿ ಕಲ್ಯಾಣ ರಾಗದಿ ||ತಂಡತಂಡದಿ ನೆರೆದು ರಂಗನ ಉಡಿಗಂಟೆ |ಢಂ ಢಣ ಢಣಿರೆಂದು ಹಿಡಿದು ಕುಣಿಸುವರು 1
ತುತ್ತೂರಿ ಮೌರಿ ತಾಳ ದಂಡಿಗೆ ಮದ್ದಲೆ |ಉತ್ತಮ ಶಂಖದ ನಾದಗಳಿಂದ ||ಸುತ್ತಮುತ್ತಿ ನಾರಿಯರು ತಾಥೈಯೆಂದು |ಅರ್ತಿಯಿಂದ ಕುಣಿಸುವರು ಪರವಸ್ತು ತತ್ಥೈಹಿಡಿದು 2
ಕಾಮಿನಿಯರೆಲ್ಲ ನೆರೆದು ಕಂದನೊಡನಾಟವಾಡಿ |ಪ್ರೇಮದಿಂದ ಬಿಗಿಬಿಗಿದಪ್ಪಿ ಮುದ್ದಾಡಿ ||ಕಾಮಿತ ಫಲವೀವ ಭಕುತಜನರೊಡೆಯ |ಸ್ವಾಮಿ ಶ್ರೀ ಪುರಂದರವಿಠಲರಾಯನ 3
No comments:
Post a Comment