ಅರಿಯಧಮನ ಸಂಗ ಕರಗಿದ್ದ ಹಿತ್ತಾಳೆ
ಒರೆದು ನೋಡಲು ಬಣ್ಣ ಬರುವುದೇ ಹೇಳಿ ಪ.
ಮಂಜುನೀರನೆ ತಂದು ತಂದನವ ಹದಮಾಡಿ
ಒಂದಾಗಿ ಕೂಡಿ ಪರಿಮಳವ ಬೇಗ
ಹಂದಿಯನು ಕರೆದು ಸೆಲೆ - ಪೊಸಲು ಅದು ತನ್ನ
ಗಂಜಲವ ನೆನೆನೆನೆದು ಹೋಹಂತೆ ರಮಣಿ 1
ಚೀನಿಕೋಲನೆ ತಂದು ಕೊರೆದು ತುಂಡನೆ ಮಾಡಿ
ಶ್ವಾನನನು ಕರೆದು ಬಾಯೊಳಗಿರಿಸಲು
ತಾನದನು ಸವಿಸವಿದು ನೋಡಲರಿಯದ ತನ್ನ
ದನದ ಮೂಳೆಯ ನೆನೆದು ಹೋಹಂತೆ ರಮಣಿ 2
ಅಂತರವನರಿಯದಲೆ ಮಿಯಾ ಹೋಗುವುದರಿಂದ
ಅಂತೆ ಇರುವುದೇ ಲೇಸು ಬಹು ಪ್ರೌಢರು
ಚಿಂತಿತಾರ್ಥವನೀವ ಸುಗುಣ ಪುರಂದರವಿಠಲ
ನೆಂತೆಂತು ಭಜಿಸಿದರೆ ಅಂತಂತೊಲಿವನಲ್ಲರೆ 3
No comments:
Post a Comment