Labels

Saturday, 19 October 2019

ಅಪಮಾನವಾದರೆ ಒಳಿತು | apamanavadare olitu

ಅಪಮಾನವಾದರೆ ಒಳಿತು |
ಅಪರೂಪ ಹರಿನಾಮ ಜಪಿಸುವ ಮನುಜಗೆ ಪ
ಮಾನದಿಂದಲಿ ಅಭಿಮಾನ ಪುಟ್ಟವುದು |
ಮಾನದಿಂದಲಿ ತಪ ಹಾನಿಯಾಯಿತು ಹಾನಿಯಾಗುವುದು ||
ಮಾನಿ ಕೌರವನಿಗೆ ಹಾನಿಯಾಯಿತು-ಅನು-|
ಮಾನವಿಲ್ಲವು ಮಾನ-ಅಪಮಾನ ಸಮರಿಗೆ 1
ಅಪಮಾನದಿಂದಲಿ ತಪವೃದ್ಧಿಯಾಹುದು |
ಅಪಮಾನದಿಂ ಪುಣ್ಯ ಸಫಲವಾಗುವುದು ||
ಅಪಮಾನದಿಂದಲಿ ನೃಪ ಧ್ರುವರಾಯಗೆ |
ಕಪಟ ನಾಟಕ ಕೃಷ್ಣ ಅಪರೋಕ್ಷನಾದನು 2
ನಾನೇನ ಮಾಡಲಿ ಆರಲ್ಲಿ ಪೋಗಲಿ |
ಕಾನನಚರರಾರಾಧ್ಯ ನೀನಿರಲು ||
ದೀನರಕ್ಷಕ ನಮ್ಮ ಪುರಂದರವಿಠಲನೆ |
ಏನು ಬೇಡೆನಗಪಮಾನವೆ ಇರಲಿ 3

No comments:

Post a Comment