Labels

Monday, 7 October 2019

ಭೋ ಯತಿ ವರದೇಂದ್ರ bho yati varadendra

ಭೋ ಯತಿ ವರದೇಂದ್ರ - ಶ್ರೀಗುರುರಾಯ ರಾಘವೇಂದ್ರ IIಪII

ಕಾಯೋ ಎನ್ನ ಶುಭಕಾಯ ಭಜಿಸುವೆನು
ಕಾಯೋ ಮಾಯತಮಕೆ ಚಂದ್ರಾ IIಅII

ಕಂಡ ಕಂಡ ಕಡೆಗೆ ತಿರುಗಿ - ಬೆಂಡಾದೆನೋ ಕೊನೆಗೆ
ಕಂಡ ಕಂಡವರ ಕೊಂಡಾಡುತ
ನಿಮ್ಮ ಕಂಡೆ ಕಟ್ಟ ಕಡೆಗೆ II೧II


ನೇಮವು ಎನಗೆಲ್ಲೀ ಇರುವುದು - ಕಾಮಾಧಮನಲ್ಲಿ
ಭೋ ಮಹಾಮಹಿಮನೆ ಪಾಮರ ನಾ
ನಿಮ್ಮ ನಾಮವೊಂದೆ ಬಲ್ಲೆ II೨II

ಮಂತ್ರವ ನಾನರಿಯೇ - ಶ್ರೀಮನ್ಮಂತ್ರಾಲಯ ಧೊರೆಯೆ
ಅಂತರಂಗದೊಳು ನಿಂತು ಪ್ರೇರಿಸುವ
ಅನಂತಾದ್ರೀಶ ನಾನರಿಯೆ II೩ II

No comments:

Post a Comment