ಗ೦ಗಾದಿ ಸಕಲ ತಿಥ೯೦ಗಳ ಫಲವಿದು ಹರಿಯನಾಮ
ಹಿಂಗದೆ ಜನರಿಗೆ ಮ೦ಗಳಕರವಿದು ಹರಿಯನಾಮ
ವೇದಶಾಸ್ತ್ರಗಳ ಓದಲರಿಯದವಗೆ ಹರಿಯನಾಮ
ಆದಿಪುರುಷನ ಪೂಜಿಸದವಗೆ ಹರಿಯನಾಮ
ಸಾಧಿಸಬೇಕು ಮೋಕ್ಷವೆ೦ಬುವರಿಗೆ ಹರಿಯನಾಮ
ಶೋಧಿಸಿ ಇಟ್ಟ ಚಿನ್ನದ ಗಟ್ಟಿ ಕಾಣಿರೋ ಹರಿಯನಾಮ II೧II
ಸ್ನಾನ ಸಂಧ್ಯಾವಂದನೆ ಮಾಡದವಗೆ ಹರಿಯ ನಾಮ |
ಜ್ಞಾನವು ಇಲ್ಲದ ಮೂಢಾತ್ಮ ಜನರಿಗೆ ಹರಿಯ ನಾಮ ||
ದಾನಧರ್ಮಕನುಕೂಲ ಇಲ್ಲದವಗೆ ಹರಿಯ ನಾಮ |
ಮಾನುಷ ಜನುಮ ಸಫಲ ಮಾಡುವದೈ ಹರಿಯ ನಾಮ || ೨ ||
ವ್ಯಾಳವ್ಯಾಳಕೆ ಎಚ್ಚರಿಕೆಯ ಕೊ ಡುವುದು ಹರಿಯನಾಮ
ಜಾಡಿಗೆ ಹೊನ್ನು ತು೦ಬಿಟ್ಟ೦ತೆ ಕಾಣಿರೋ ಹರಿಯನಾಮ
ಕಾಲನ ದೂತರ ತರಿದು ಬಿಸಡುವುದು ಹರಿಯನಾಮ
ಲೋಲ ಶ್ರೀ ಪುರಂದರವಿಠಲರಾಯನ ದಿವ್ಯನಾಮ II೨II
No comments:
Post a Comment