Labels

Monday, 7 October 2019

ಗುರುವಿನ ಗುಲಾಮನಾಗುವ gurivina gulam

ಗುರುವಿನ ಗುಲಾಮನಾಗುವ ತನಕ ದೂರೆಯದಣ್ಣ ಮುಕುತಿ
ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ IIಪII

ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ ಧೀರ ನೆನುತ ತಿರಿಗಿದರೇನು
(ನ್ಯಾಯ ಕಥೆಗಳ ಕೆಳ್ದರಿಲ್ಲ ಧಿರನಾಗಿ ತಾ ಪೇಳಿದರಿಲ್ಲ) II1II

ಕೊರಲೋಳು ಮಾಲೆ ಧರಿಸಿದರಿಲ್ಲ ಬೇರೆಳೂಳು ಜಪಮಣಿ ಎಣಿಸದರಿಲ್ಲ
ಮರುಳನಾಗಿ ತಾ ಶರಿರಕೆ ಬೂದಿ ಒರೆಸಿಕೊಂಡು ತಾನು ತಿರುದಿದಲ್ಲಿ II2II

ನಾರಿಯ ಭೂಗ ಅಳಿಸಿದರಿಲ್ಲ ಶರಿರಕೆ ಸುಖ ಬಿಡಿಸಿದರಿಲ್ಲ
ನಾರದ ವರದ ಪುರಂದರವಿಠಲನ ಸೇರಿಕೊಂಡು ತಾ ಪಡೆಯುವ ತನಕ II3II

No comments:

Post a Comment