ವಾಯುಕುಮಾರಗೆ ಮಂಗಳ - ರಘು - |
ರಾಯಸೇವಕಗೆ ಮಂಗಳ ಪ.
ಅಂಜನಿಗರ್ಭಸಂಜಾತಗೆ ಮಂಗಳ |
ರಂಜಿತ ದಿವ್ಯ ಮೂರ್ತಿಗೆ ಮಂಗಳ ||
ಮಂಜುಳ ಕೀರ್ತಿ ಮಾಹತ್ಮ್ಯಗೆ ಮಂಗಳ |
ಸಂಜೀವರಾಯಗೆ ಮಂಗಳ 1
ದನುಜನಿಕರ ಸಂಹಾರಗೆ ಮಂಗಳ |
ಜಾನಕಿ ಶೋಕ ವಿನಾಶಗೆ ಮಂಗಳ ||
ವನಧಿ ವಿರೋಧಿಗೆ ಮಂಗಳ ಜಯ |
ಹನುಮವಿಲಾಸಗೆ ಮಂಗಳ 2
ಸೇತುವೆಗಟ್ಟಿದಾತಗೆ ಮಂಗಳ |
ಸೀತೆಯ ತಂದ ಬಂಟಗೆ ಮಂಗಳ ||
ಖ್ಯಾತ ಪುರಂದರವಿಠಲನ ಕರುಣೆಗೆ |
ಪಾತ್ರನಾದ ಭಕುತೆಗೆ ಮಂಗಳ 3
No comments:
Post a Comment