Labels

Saturday 25 January 2020

ಆವ ಭಯವಿಲ್ಲವೋ ಆವ ಭಯವಿಲ್ಲ aava Bhayavillavo


ಆವ ಭಯವಿಲ್ಲವೋ ಆವ ಭಯವಿಲ್ಲ
ಆವ ಭಯವಿಲ್ಲ ಪರಾವರೇಶನ ಸಕಲ ಪ
ಠಾವಿಲಿ ಚಿಂತಿಸುವ ಭಾವಜ್ಞ ಜನರಿಗಿನ್ನು ಅ.ಪ.
ದೇಶಕಾಲೋಚಿತ ಧರ್ಮ ಗಿರ್ಮಗಳು ಸ
ನ್ಯಾಸ ಮೊದಲಾದಾಶ್ರಮೋಚಿತ ಸುಕರ್ಮಗಳು
ಮಾಸೋಪವಾಸ ವ್ರತ ನೇಮ ಗೀಮಗಳು ಸದ್
ವ್ಯಾಸಂಗ ಗೀಸಾಂಗವೊ ಆಸನ ಜಯಗಿಯ
ಪ್ರದೋಷನ ಧ್ಯಾಯಗೀಯ
ಶ್ವಾಸ ಬಂಧನ ಉಪನ್ಯಾಸ ತೀರ್ಥಾಟನೆ ರ
ಮೇಶನ ಗುಣಗಳಟ್ಟಹಾಸದಲಿ ನೆನೆವುತ ನಿ
ರಾಶೆಯಿಂದಿಪ್ಪ ಹರಿದಾಸ ದಾಸರಿಗೆ 1
ಸ್ನಾನ ಜಪ ದೇವತಾರ್ಚನೆ ವೈಶ್ಯದೇವ ಬಲಿ
ದಾನ ಪಾತ್ರಾಪಾತ್ರ ವಿಧಿ ನಿಷೇಧಗಳು ವಿ
e್ಞÁನ ವಿಹಿತಾಚರಣೆ ಸರ್ವತ್ರ ವಿನಯ
ಸಂಹನನ ವೈರಾಗ್ಯ ಶಕ್ತಿ
ಶ್ರೀನಿವಾಸನ ಪರಮ ವಿಮಲ ಲೋಕೈಕ ಕ
ಲ್ಯಾಣ ಗುಣ ರೂಪ ಕ್ರಿಯೆಗಳನು ಜಡ ಚೇತನದಿ
ಧೇನಿಸುತ ಮನದಿ ಹಿಗ್ಗುತ ತುತಿಸಿ ನಲಿವ ಸುಮ
ಹಾನು ಭಾವರಿಗೆ ಈರೇಳು ಲೋಕದೊಳು ಇನ್ನು2
ಮಲಿನರಾಗಿಹರು ನೋಳ್ಪರಿಗೆ ಪ್ರತಿ ದಿನದಲ್ಲಿ
ಸುಲಭರಂತಿಹರು ದುರ್ಗಮರಾಗಿ ತೋರುವರು
ಅಳುವರೊಮ್ಮೊಮ್ಮೆ ಪರವಶರಾಗಿ ಮೈ ಮರೆದು
ನಲಿವರೊಮ್ಮೊಮ್ಮೆ ನಗುತಾ
ಜಲಜಾಕ್ಷನಮಲ ಮಂಗಳ ಗುಣವ ಕೇಳಿ ಗಂ
ಟಲ ಶಿರಗಳುಬ್ಬಿ ಚಪ್ಪಳೆಗಳಂ ಬಾರಿಸುತ
ಮುಳುಗಿ ಸುಖ ವನಧಿಯೊಳು ತನು ಪುಳಕೋತ್ಪವದಿ
ಇಳೆಯೊಳಗೆ ಸಂಚರಿಪ ಕಲುಷವರ್ಜಿತಂಗೆ 3
ನೋಡುವುದೆ ಹರಿಮೂರ್ತಿ ಕೇಳುವುದೆ ಹರಿಕೀರ್ತಿ
ಆಡುವುದೆ ಹರಿವಾರ್ತೆ ಮಾಡುವುದೆ ಹರಿಪೂಜೆ
ನೀಡುವುದೆ ಅವಧಾನ ಬೇಡುವುದೆ ಪುರುಷಾರ್ಥ
ಕೂಡುವುದೆ ಸಾಯುಜ್ಯವು
ದಾಡಿಯಿಂದಲಿ ದನುಜರಳಿದು ಧರಣಿಯನು ತಂದ
ಕ್ರೋಢರೂಪನೆ ಲೋಕಕ್ಕೆಲ್ಲ ಆನಂದ
ನಾಡಾಡ ದೈವದಂತಿವನಲ್ಲವೆಂದು ಕೊಂ
ಡಾಡುತವನಿಯೊಳು ಸಂಚರಿಸುವ ವಿಪಶ್ಚಿತರಿಗೆ 4
ಕುಟಿಲರಹಿತನು ಧರ್ಮಾರ್ಥ ಮುಕುತಿ ಸಂ
ಘಟಸಲೆಮಗೆಂದು ಸುರನದಿ ಮುಖ್ಯ ತೀರ್ಥ ವೆಂ
ಕಟ ಶೈಲ ಮೊದಲಾದ ಕ್ಷೇತ್ರದಲಿ ಸತ್ಕರ್ಮ
ಹಟದಿಂದ ಮಾಳ್ಪರೆಲ್ಲಾ
ವಟ ಪತ್ರಶಯನನೊಲುಮೆಯನೆ ಬಯಸುವ ಜಾಂಡ
ಕಟಹದ್ಭಹಿವ್ರ್ಯಾಪ್ತನಾದ ಶ್ರೀ ಜಗನ್ನಾಥ
ವಿಠಲನಾವ ದೇಶದಿ ಕಾಲದಲ್ಲಿ ಪಾ
ಸಟೆಯಿಲ್ಲವೆನುತ ಲಾಲಿಸುತಿಪ್ಪರಿಗೆ5


ಆವ ಜನುಮದ ಸುಕೃತ ಫಲಿಸಿತೆನಗೆ aava kannada sukrata


ಆವ ಜನುಮದ ಸುಕೃತ ಫಲಿಸಿತೆನಗೆ
ಕೋವಿದಾಗ್ರಣಿ ವ್ಯಾಸತತ್ವಜ್ಞರ ಕಂಡೆ ಪ
ಜೀವ ಸಾಮಾನ್ಯವೆಂದರಿಯದಿಲಿ ಶಾಸ್ತ್ರಗಳ
ನಾವಲೋಕನದಿ ಪೇಳ್ವರು ನಿತ್ಯದಿ
ದೇವಾಂಶರಿವರು ಸಂಶಯವು ಬಡಸಲ್ಲ ಮಾ
ಯಾ ವಲ್ಲಭನು ಇವರ ಹೃದಯದೊಳಗಿರುತಿಪ್ಪ 1
ಕವಿ ಭರಿಡಿತ ಮಹಾಮುನಿ ವ್ಯಾಸಕೃತ ಸುಭಾ
ಗವತಾದಿ ಗ್ರಂಥ ವ್ಯಾಖ್ಯಾನ ನೋಡಿ
ಭುವನೇಂದ್ರರಾಯರ ಕರುಣದಲಿ ತುರೀಯಾ ಶ್ರ
ಮನವಿತ್ತು ವ್ಯಾಸತತ್ವಜ್ಞ ರಹುದೆಂದು 2
ಈ ಜಗತ್ರಯ ದೊಳಗೆ ಪೂಜ್ಯ ಪೂಜಕರ ನಿ
ವ್ರ್ಯಾಜದಲಿ ತಳುಪಿದನು ಭಕ್ತಜನಕೆ
ಶ್ರೀ ಜಗನ್ನಾಥ ವಿಠಲನೊಬ್ಬ ಪೂಜ್ಯ ಪಂ
ಕೇಜ ಭವ ಭವರು ಪೂಜಕರೆಂಬುವರ ನೋಡ್ಡೆ 3


ಆವ ಕಾರಣ ಮೊಗವ ತಿರುಗಿಹಿದ್ಯೊ ಪೇಳು aava kaaran mogava tirugidyo


ಆವ ಕಾರಣ ಮೊಗವ ತಿರುಗಿಹಿದ್ಯೊ ಪೇಳು
ಭೂವರಹ ಸ್ವಾಮಿ ಪುಷ್ಕರಣಿ ತೀರಗನೆ ಪ
ರಥ ಸಮೂಹಗಳೇರಿ ನೀ ಪ್ರಕಾಶಿಪ ಬಗೆಯೇ
ಸತಿಯ ಲಾವಣ್ಯಾತಿಶಯವ ನೋಡುವ ಬಗೆಯೋ
ಮಿತಿಯಿಲ್ಲದಸುರರ ಉಪೇಕ್ಷೆ ಮಾಡುವ ಬಗೆಯೋ
ಪತಿತ ಪಾವನ ಪೂರ್ಣಕಾಮ ನಿನಗೆ
ನುತಿಸಿ ಬಿನ್ನೈಸುವೆನು ಪೇಳೋ ಗುಣಧಾಮಾ 1
ಭಜಕರೆನ್ನನು ಬಿಡರೆಂಬ ಮನಸಿನಾ ಬಗೆಯೇ
ಅಜಭವಾದಿಗಳ ಸಂಸ್ತುತಿಗಳಾಲಿಪ ಬಗೆಯೋ
ರಜನೀಚರರ ಸದೆಯ ನಾಟ್ಯವಾಡುವ ಬಗೆಯೇ
ಭುಜಗ ಭೂಷಣ ಪೂಜ್ಯ ಚರಣ
ತ್ರಿಜಗದ್ವಿ ಲಕ್ಷಣ ಸುರೂಪಾ ನಿರ್ಲೇಪ 2
ಅನುಗರೊಶ ನೀನಾದಡೆಮ್ಮನ ಮರೆವರೆಂದು
ವನತಿಗಾರರಿಯದಂತುಪದೇಶಿಸು ಬಗೆಯೋ
ಘನಲಕ್ಷಣ ಮುಖಾಬ್ಜವನು ಚುಂಬಿಸುವ ಬಗೆಯೋ
ವನಜ ಸಂಭವನ ನಾಸಜನೆ ಜಗ
ಜ್ಜನಕ ಜಗನ್ನಾಥವಿಠ್ಠಲ ಕೃಪಾಸಾಂದ್ರಾ 3


ಆನೆಂತು ತುತಿಪೆ ನಿನ್ನಾ ಶ್ರೀ aanentu tutipe ninna


ಆನೆಂತು ತುತಿಪೆ ನಿನ್ನಾ ಶ್ರೀ ಗುರು ರನ್ನಾ
ಆನೆಂತು ತುತಿಪೆ ನಿನ್ನಾ ಪ
ಆನೆಂತು ತುತಿಪೆ ಪಂಚಾನನಸುತ ಪವ
ಮಾನ ಹನುಮ ಭೀಮ ಆನಂದತೀರ್ಥನೆ ಅ.ಪ.
ಸನಕನಂದನ ಸನತಕುಮಾರಾದಿ
ಮುನಿಗಳು ಹರಿ ದರುಶನವ ಮಾಡುವೆವೆಂದು
ಘನಹರುಷದಿ ಮೋಕ್ಷವನು ಕುರಿತು ಬಂದೊ
ಡನೆ ಬಾಗಿಲಲಿ ನಿಲ್ಲೆನಲು ಜಯ ವಿಜಯ
ರನ ನೋಡಿ ಎರಡೊಂದು ಜನುಮದಲಿ ಕ್ರೂರ
ದನುಜಕುಲದಲಿ ಜನಿಸಿರೆಂದೆನೆ ಸಿರಿ
ವನಜಾಕ್ಷರಗೋಸ್ಕರಾ ಅವತರಸಿ
ಗುಣಪೂರ್ಣ ಗುರು ಸಮೀರಾ ಸೇವಿಪೆನೆಂದಾ
ಕ್ಷಣದಿ ಜನಿಸಿ ವಾನರಾ ರೂಪಿಲಿ ಭುವ
ವನದೊಳು ಮೆರೆದೆ ಅಸಮಶೂರಾ ಹರಿಹರಾ 1
ಕೋತಿ ಕಟಕಮಾಡಿ ಜಾತರಹಿತ ಹರಿ
ಗೇ ತಲೆಬಾಗಿ ಸುಪ್ರೀತಿಯಿಂದಲಿ ರವಿ
ಜಾತನ ಸಲಹಿ ಅತೀ ತೀವ್ರದಿಂದಲಿ
ಸೀತೆಯ ಕ್ಷೇಮವ ದೂತ ಪೇಳುವೆನೆಂದು
ವಾತವೇಗದಿ ವನಧಿಯ ತಡಿಲ್ಲದೆ ದಾಟಿ
ಮಾತೆಗುಂಗುರವಿತ್ತ ಶೋಕತರುಗಳ
ಭೀತಿ ಬಡದಲೆ ಕಿತ್ತಿ ರೋಮ ಬಳ
ವ್ರಾತವೆಲ್ಲವ ನುಗ್ಗೊತ್ತೀ ಲಂಕಾಪುರ
ಜಾತವೇದಸಗೆ ಇತ್ತೀ ಹನುಮಶಿರಿ
ನಾಥನಿಗೆರಗಿ ಪಡೆದ ಬಹುಕೀರ್ತಿ 2
ದುರುಳ ಕಲ್ಯಾದ್ಯರು ಊರ್ವಿಯೊಳ್ಪುಟ್ಟಿ ಸಂ
ಚರಿಸುತ್ತ ಇರಲಾಗಿ ಮರುತದೇವನು ಅವ
ತರಿಸಿ ಅವನಿಯೊಳು ದುರಿಯೋಧನುಣಲಿತ್ತ
ಗರಳವ ಭುಂಜಿಸಿ ಅರಗಿನ ಸದನದಿ
ಪುರೋಚನಾದಿಗಳನ್ನು ಉರುಹಿ ಏಕಚಕ್ರಾ
ಪುರದಲ್ಲಿದ್ದ ಬಕಾಸುರನ ಸದೆದು ಭೂಮಿ
ಸುರವೇಷವನೆ ಧರಿಸೀ ಪಾಂಚಾಲಿ ಸ್ವಯಂ
ವರ ಪತಿಕರಿಸಿ ಮಗಧದೇಶ
ದರಸನ ಸಂಹರಿಸೀ ರಾಜಸೂಯಜ್ಞ
ಹರಿಗೆ ಅರ್ಪಿಸಿದಿ ಮೆರೆಸೀ 3

ಭಕುತಳಾದ ಇಂದುಮುಖಿ ದ್ರೌಪದಿಗೆ ಸೌಗಂ
ಧಿಕವ ತರುವೆನೆಂದು ವೃಕೋದರ ಪೋಗಲು
ಅಕುಟಿಲ ಹನುಮಂತನನು ಅವಲೋಕಿಸ್ಯಂ
ಜಿಕೆಯಿಂದ ನಿಂದು ಮಾರಕಜನರಿಗೆ ಮೋ
ಹಕವ ತೋರಿಸಿ ಕುಪಥ ಖಳರನೊರಿಸಿ ನೀ
ಸಖಿಗೆ ಪೂವಿತ್ತು ಗುರುಕುಮಾರನಸ್ತ್ರಕ
ಳುಕದೆ ಯುದ್ಧವ ಮಾಡಿದೆ ದುಶ್ಯಾಸನ
ರಕುತ ವೆರಿಸಿ ಕುಡಿದೆ ಉಭಯಗಳ ರ
ಥಿಕರ ಬಲವಕರೆದೆ ಭಯದಲಿ ಉ
ದಕದಲಿರ್ದ ದುರ್ಯೋಧನನೂರು ಕಡಿದೆ 4
ಭೀಮ ಭಯಂಕರ ಕಾಮಕೋಟಿ ಚಲ್ವ
ಧೀಮಂತಜನ ಮನೋಪ್ರೇಮ ಪಾವನ ಗುಣ
ಸ್ತೋಮ ಸರ್ವಾಧಾರ ಭ್ರಾಮಕಜನ ವನ
ಧೂಮಕೇತುವೆ ಸರ್ವಾಸೀಮ ಸೌಖ್ಯ ಪೂರ್ಣ
ಸೋಮಾರ್ಕ ಸುರಪತಿ ಸಾಮಜ ಹರಿಗುರು
ರೋಮ ಕೋಟೇಶ್ವರ ಶ್ರೀಮಾನ್ಯ ಭಕುತಲ
ಲಾಮ ಭವ್ಯ ಚರಿತಾ ಸೋಮಕುಲ
ಸೋಮ ಸುಖ ಭರಿತಾ ಭಕುತ ಪ್ರೀತಾ
ಹೇಮವರ್ಣ ಕಾಯ ಹಿತದಿಂದ ನಿರುತಾ 5
ಮಣಿಮಂತನೆಂಬವನಿಯೊಳು ಪುಟ್ಟಿ ವೇ
ನನ ಮತ ಪಿಡಿದು ಜೀವನೆ ಪರಮಾತ್ಮನೆಂ
ದೆನುತ ಸ್ಥಾಪಿಸಿ ಪಣೆಗಣ್ಣೆನ್ವರದಿಂದ
ಅನಿಮಿಷರೆಲ್ಲರು ವನಜಜಗುಸುರಲು
ಮುನಿಗಳು ಸಹ ನಾರಾಯಣನ ಪದಕೆ ದಂಡ
ಪ್ರಣಾಮವ ಮಾಡಿ ಸ್ತೋತ್ರವಿನಯದಿ ಗೈಯೆ
ಅನಿಲನ ಅವಲೋಕಿಸಿ ಪೇಳಲು ಹರಿ
ಮನ ಭಾವವನು ಗ್ರಹಿಸಿ ಮಧ್ಯಗೇಹ
ಮನೆಯೊಳಗವತರಿಸಿ ಮೆರೆದೆ ಗುರು
ಅನುಗಾಲದಲಿ ನಿನ್ನ ಗುಣಗಳಾಶ್ರೈಸೀ 6
ವಾಸುದೇವನೆಂಬ ಭೂಸುರನಾಮದಿ
ಲೇಸಾಗಿ ಚರಿಸಿ ಸಂತೋಷ ಭರಿತರಾಗಿ ಸಂ
ನ್ಯಾಸಾಚ್ಯುತ ಪ್ರೇಕ್ಷರಾ ಕರಸರಸಿಜ
ದೀ ಸಂತೋಷದಿ ಕೊಂಡು ಆಶÀಂಕರರÀ ಭಾಷ್ಯ
ದೂಷಿಸೆ ಗರುಗಳುಲ್ಲಾಸ ಸನ್ಮುಖದಲಿ ವಿ
ಶೇಷದಿಂದಲಿ ವಿರಚಿಸುವುದೆನಲು ಉ
ಲ್ಲಾಸದಿಂದಲಿ ಕೇಳಿ ಆಕ್ಷಣದಿ ಸಂ
ತೋಷ ಮನದಲಿ ತಾಳಿ ಮೋಹಕವ ಪರಿಹ
ರಿಸಿ ಅರ್ಥವ ಪೇಳೆ ಭೂಸುಜನರ
ಆಶೆ ಪೂರೈಸಿದ ಘನನಿನ್ನ ಲೀಲೆ 7
ತರಳತನದಲಿ ಬದರಿಗೈದಿ ಪಾರಾ
ಶರ ನಾರಾಯಣನ ಸಂದರುಶನ ಕೊಂಡು ತೀ
ವರದಿಂದ ಹರಿತತ್ವ ನಿರ್ಣಯ ಶಾಸ್ತ್ರವ
ವಿರಚಿಸುವುದಕಿನ್ನು ವರವ ಪಡೆದು ಬಂದು
ಎರಡೇಳು ಆರೊಂದು ದುರುಳ ಭಾಷ್ಯಗಳೆಂಬ
ಗರಳ ತರುಗಳ ಮುರಿದಿಕ್ಕಿ ನೀ ಮೂವ
ತ್ತೆರಡೈದು ಗ್ರಂಥಗಳ ನಿರ್ಮಿಸಿ ವಿಬು
ಧರಿಗೆಲ್ಲ ಪೇಳಿ ವ್ಯಾಳ ಭೂಷಣದೇವ
ಪರನೆಂಬ ಯುಕುತಿಜಾಲ ಹರಿದು ಹರಿ
ಪರ ಶ್ರೀ ಬೊಮ್ಮಾದ್ಯರೆ ಗುರುಗಳೆಂದೆನಲು 8
ನಮೋ ನಮೋ ಸಮೀರನೆ ನಮೋ ಶ್ರೀ ಮುಖ್ಯಪ್ರಾಣ
ನಮೋ ನಮೋ ದಯಾಸಿಂಧು ನಮೋ ಭಕ್ತಜನ ಬಂಧು
ನಮೋ ನಮೋ ಗುಣಶೀಲ ನಮೋ ಭಾರತಿಲೋಲ
ನಮೋ ನಮೋ ಭವ್ಯಾಂಗ ನಮೋ ಅರಿಗಜಸಿಂಗ
ನಮೋ ನಮೋ ಜಗದ್ವ್ಯಾಪ್ತ ನಮಿತಜನರಾಪ್ತ
ನಮೋ ನಮೋ ಸುಖತೀರ್ಥ ನಮೋ ಮೂರ್ಲೋಕದ ಕರ್ತ
ನಮೋ ಗುರುಕುಲ ತಿಲಕ ಪಾಲಿಸು ಎನ್ನ
ತಮಹರದೂರಶೋಕ ಸಜ್ಜನರಿಗೆ
ಅಮಿತ ಮೋದದಾಯಕ ಶ್ರೀಭೂ ದುರ್ಗಾ
ರಮಣ ಜಗನ್ನಾಥವಿಠಲ ಭಕ್ತಾಧಿಕಾ 9


ವಿಠಲಯ್ಯ ವಿಠಲಯ್ಯ vitalayya Vitalayya


ವಿಠಲಯ್ಯ ವಿಠಲಯ್ಯ ಪ
ತಟಿತ್ಕೋಟಿನಿಭಕಾಯ ಜಗನ್ನಾಥ ವಿಠಲಯ್ಯಾ ಅ.ಪ.
ಭಜಿಸುವೆ ನಿನ್ನನು ಅಜಭವ ಸುರನುತ
ಭಜಕಾಮರತರು ಕುಜನ ಕುಠಾರಾ 1
ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರು ದಯಾಕರ ಮೂರುತಿ 2
ಶರಣಾಗತರನು ಪೊರೆವನೆಂಬ ತವ
ಬಿರಿದು ಕಾಯೋ ಕರಿವರದ ಜಗನ್ನಾಥ 3


ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ ranga ninna kondaduva



ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ
ಸಂಗಸುಖವಿತ್ತು ಕಾಯೋ ಕರುಣಾ ಸಾಗರ ಪ
ಅರಿಯರೋ ನೀನಲ್ಲದೆ ಮತ್ತನ್ಯದೈವರ
ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ
ತೊರೆಯರೋ ನಿನ್ನಂಘ್ರಿ ಸೇವಾ ಪ್ರತಿವಾಸರಾ
ಒರೆಯರೋ ಪರತತ್ವವಲ್ಲದೆ ಇತರ ವಿಚಾರಾ 1
ಮೂಕ ಬಧಿರರಂತಿಪ್ಪರೋ ನೋಳ್ಪಜನಕೆ
ಕಾಕುಯುಕುತಿಗಳನ್ನು ತಾರರೋ ಮನಕೆ
ಸ್ವೀಕರಿಸರನರ್ಪಿತ ಒಂದು ಕಾಲಕ್ಕೆ
ಆ ಕೈವಲ್ಯಭೋಗ ಸುಖ ಅವರಿಗೆ ಬೇಕೆ 2
ಕಂಡಕಂಡಲ್ಲಿ ವಿಶ್ವರೂಪ ಕಾಂಬೋರೋ
ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞವೆಂಬರೋ
ಬಂಡುಣಿಯಂದದಿ ನಾಮಾಮೃತವ ಸವಿವರೋ
ಹೆಂಡಿರು ಮಕ್ಕಳು ನಿನ್ನ ತೊಂಡರೆಂಬೋರೋ 3
ಬಿಡರು ತಮ್ಮ ಸ್ವಧರ್ಮಗಳೇನು ಬಂದರೂ
ಬಡರು ದೈನ್ಯ ಒಬ್ಬರಿಗೂ ಲೋಕ ವಂದ್ಯರೊ
ಪಿಡಿಯರೋ ನಿನ್ನ ದ್ವೇಷಿಗಳಿಂದೇನು ಬಂದರು
ಕೊಡುವರೋ ಬೇಡಿದಿಷ್ಟಾರ್ಥ ನಿತ್ಯಾನಂದರೂ 4
ಜಯಾಜಯ ಲಾಭಾಲಾಭ ಮಾನಾಪಮಾನಾ
ಭಯಾಭಯ ಸುಖದುಃಖ ಲೋಷ್ಟ ಕಾಂಚನಾ
ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನಾ
ಶ್ರೀಯರಸ ಚಿಂತಿಸುವರೋ ನಿನ್ನ ಅಧೀನ 5
ಈಶಿತವ್ಯರೆಂಬರೋ ಏಕಾಂತ ಭಕ್ತರೋ
ದೇಶಕಾಲೋಚಿತ ಧರ್ಮ ಕರ್ಮಾಸಕ್ತರು
ಆಶಾ ಕ್ರೋಧ ಲೋಭ ಮೋಹ ಪಾಶ ಮುಕ್ತರು
ಈ ಸುಜನರೇವೆ ಶಾಪಾನುಗ್ರಹ ಶಕ್ತರು 6
ನಗುವರೋ ರೋದಿಸುವರೊ ನಾಟ್ಯವಾಡೋರೊ
ಬಗೆಯರೋ ಬಡತನ ಭಾಗ್ಯ ಭಾಗವತರು
ತೆಗೆಯರೋ ನಿನ್ನಲ್ಲಿ ಮನ ಒಮ್ಮೆಗಾದರೂ
ಜಗನ್ನಾಥವಿಠಲ ನಿನ್ನವರೇನು ಧನ್ಯರೋ 7


ಸಿರಿರಮಣ ತವ ಚರÀಣ siri ramana tava



ಸಿರಿರಮಣ ತವ ಚರÀಣ ಸೇವೆ ದೊರಕುವುದು ಹ್ಯಾಂಗಿನ್ನು
ಪರಮ ಪಾಪಿಷ್ಠ ನಾನು ಪ
ನರಹರಿಯೆ ನಿಮ್ಮ ನಾಮ ಸ್ಮರಣ ಮಾಡದಲೆ
ನರಕಕ್ಕೆ ಗುರಿಯಾದೆನೋ ಹರಿಯೆ ಅ.ಪ.
ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ
ಕೊಸರಿ ಹಾಕುತ ದಬ್ಬುತ
ಶಶಿಮುಖಿಯೆ ಬಾರೆಂದು ಅಸಮಸದಿ ಬಣ್ಣಿಸಿ
ವಶವಾಗಿ ಅವಳೊಲಿಸುತ
ದಶಮಿ ಏಕಾದಶಿ ದ್ವಾದಶೀ ದಿನತ್ರಯದಿ
ಅಶನವೆರಡ್ಹೊತ್ತುಣ್ಣುತ
ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು
ಕುಸುಮ ಗಂಧಿಯ ರಮಿಸುತ ಸತತ 1
ಕೆರೆ ಭಾವಿ ದೇವಾಲಯವ ಕೆಡಿಸಿ ದಿವ್ಯ
ಹಿರಿದಾಗಿ ಮನೆ ಕಟ್ಟದೆ
ನೆರೆ ನಡೆವ ಮಾರ್ಗದೊಳು ಅರವಟ್ಟಗೆಗಳನ್ನು
ಧರಧರದಿ ಬಿಚ್ಚಿ ತೆಗೆದೆ
ಪರಮ ಸಂಭ್ರಮದಿಂದ ಅರಳಿಯಾ ಮರ ಕಡಿಸಿ
ಕೊರೆಸಿ ಬಾಗಿಲು ಮಾಡಿದೆ
ಏಕ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ
ಪರಿಪರಿಯ ಸುಖ ಸಾರಿದೇ ಮೆರೆದೆ 2
ಸಾಕಲ್ಯದಿಂದ ಸಾಲಿಗ್ರಾಮದ ಅಭಿಷೇಕ
ಆಕಳ ಹಾಲಲಿ ಮಾಡದೆ
ನಾಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕ
ಬೇಕೆಂದು ಹಾಲು ಹೊಯ್ದೆ
ಕಾಕು ಬುದ್ಧಿಗಳಿಂದ ಗುಡಿ ಗುಡಿ ನಸಿ ಪುಡಿ
ಹಾಕಿ ಭಂಗಿಯಾ ಸೇದಿದೆ
ಲೋಕ ನಿಂದಕ ನಾಗಿ ಪಾಪಕ್ಕೆ ಕೈ ಹಚ್ಚಿ ಅ
ನೇಕ ಜೂಜುಗಳಾಡಿದೇ ಬಿಡದೆ 3
ಸ್ನಾನ ಸಂಧ್ಯಾನ ಅತಿಮೌನ ಗಾಯಿತ್ರಿ ಜಪ
ಭಾನುಗಘ್ರ್ಯವನು ಕೊಡದೆ
ಹೀನತ್ವ ವಹಿಸಿ ದಾನ ಧರ್ಮವ ಮಾಡದೆ
ಶ್ವಾನನಂದದಿ ಚರಿಸಿದೇ
ಶ್ರೀನಿವಾಸನೆ ನಿನ್ನ ಅನುಪೂರ್ವಕ ಪೂಜೆ
ನಾನೊಂದು ಕ್ಷಣಮಾಡದೇ
ಬೇನೆ ಬಂದಂತಾಗೆ ಹೀನ ಸಕೇಶಿಯ ಕೈಲೆ
ನಾನ ವಿಧಾನ್ನ ತಿಂದೇ ನೊಂದೇ 4
ಬಾದರಾಯಣ ಕೃತ ಭಾಗವತ ಕೇಳಲಿಕೆ
ಆದರವೆ ಪುಟ್ಟಲಿಲ್ಲಾ
ವಾದಿಗಳ ಮತವಳಿದ ಮಧ್ವ ಸಿದ್ಧಾಂತದ
ಹಾದಿಗೆ ಹೋಗಲಿಲ್ಲ
ಶೋಧಿಸಿದ ಚಿನ್ನಕೆ ಸಮರಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ
ವೇದ ಬಾಹಿರನಾಗಿ ಅಪಸವ್ಯ ಮನನಾಗಿ
ಓದಿಕೊಂಡೆನೋ ಇದೆಲ್ಲ ಸುಳ್ಳ 5
ಉತ್ತಮ ಬ್ರಾಹ್ಮಣರ ವೃತ್ತಿಗಳನೆ ತೆಗಸಿ ಬ್ರ
ಹ್ಮಹತ್ಯಗಾರನು ಎನಿಸಿದೆ
ಮತ್ತೆ ಮದುವೆ ಮುಂಜಿ ಸಮಯಕ್ಕೆ ನಾ ಪೋಗಿ
ಸತ್ತ ಸುದ್ದಿಯ ಪೇಳಿದೆ
ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ
ಕುತ್ತಿಗೆಯ ನಾ ಕೊಯ್ಸಿದೆ
ಹತ್ತು ಜನರೆನ್ಹೆಣಕೆ ನಿತ್ಯ ಕಲ್ಲೊಡೆಯುತಿರೆ
ಮೃತ್ಯು ದೇವತೆಯೆನಿಸಿದೆ ಬಿಡದೇ 6
ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವವರೆನಗೆ
ಗತಿಯೇನು ಪೇಳೊ ಕೊನೆಗೆ
ಸತತ ತವ ಧ್ಯಾನದಲಿ ರತನಾಗಿ ಇರುವ ಸ
ನ್ಮತಿಯ ಪಾಲಿಸಯ್ಯ ಎನಗೆ
ಪತಿತಪಾವನನೆಂಬ ಬಿರಿದು ಅವನಿಯ ಮೇಲೆ
ಶ್ರುತಿ ಸಾರುತಿದೆಯೋ ಹೀಗೆ
ಶಿತಕಂಠನುತ ಜಗನ್ನಾಥವಿಠ್ಠಲ ನಿನಗೆ
ನುತಿಸದೆ ಬೆಂಡಾದೆ ಕಾಯೋ ಹರಿಯೆ 7


ಇದು ನಿನಗೆ ಧರ್ಮವೇ ಇಂದಿರೇಶ idu ninage dharmave


ಇದು ನಿನಗೆ ಧರ್ಮವೇ ಇಂದಿರೇಶ
ಬದಿಗ ನೀನಾಗಿದ್ದು ಭೀತಿ ಪಡಿಸುವುದು ಪ
ನಿನ್ನ ಗುಣಗಳ ತುತಿಸಿ ನಿನ್ನನ್ನೇ ಹಾರೈಸಿ
ನಿನ್ನವರ ಪ್ರೀತಿಯನು ಸಂಪಾದಿಸಿ
ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ
ಮಾನ್ನವರನ ಈ ಪರಿಯ ಬನ್ನಬಡಿಸುವುದು 1
ದುರುಳನಲ್ಲವೊ ನಿನ್ನ ಚರಣ ಸೇವಕರವನೊ
ಪರಿಪಾಲಿಸುವುದು ನಿನ್ನ ಪರಮ ಧರ್ಮ
ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ
ಶರಣ ರಕ್ಷಕನೆಂಬೊ ಬಿರಿದು ಸುಳ್ಳಾಗುತಿದೆ 2
ಶೋಕನಾಶಕ ವಿಗತಶೋಕನೆಂಬೋ ನಾಮ
ನಾ ಕೇಳಿ ಮೊರೆಹೊಕ್ಕೆ ಲೋಕಬಂಧು ನಿ
ರಾಕರಿಸದೆಮ್ಮ ನೀ ಸಾಕಬೇಕನುದಿನವು
ವಾಕು ಮನ್ನಿಪುದು ಲೋಕೈಕ ರಕ್ಷಾಮಣಿಯೆ 3
ಗುಣವೆ ನಿನಗಿದು ಬರಿದೆ ದಣಿಸುವುದು ಶರಣರನು
ಪ್ರಣತಾರ್ತಿಹರ ವಿಭೀಷಣ ಪಾಲಕ
ಕ್ಷಣಕನಂತಪರಾಧವೆಣಿಸುವರೆ ಕಡೆಯುಂಟೆ
ಮಣಿದು ಬಿನ್ನಹ ಮಾಳ್ಪೆ ದನುಜದಲ್ಲಣನೆ 4
ನಮೋ ನಮೋ ಬ್ರಹ್ಮಣ್ಯ ದೇವರ ದೇವ
ನಮೋ ನಮೋ ಧನ್ವಂತ್ರಿ ದುರಿತ ಹಂತ್ರೀ
ನಮೋ ನಮೋ ಕಾರುಣ್ಯ ಶೀಲ ಸಜ್ಜನ ಪಾಲಾ
ನಮೋ ನಮೋ ಜಗನ್ನಾಥವಿಠಲ ವಿಖ್ಯಾತ 5


ಫಲವಿದು ಬಾಳ್ದ್ದುದಕೆ phalavidu baldudake


ಫಲವಿದು ಬಾಳ್ದ್ದುದಕೆ ಪÀ
ಸಿರಿ ನಿಲಯನ ಗುಣಗಳ ತಿಳಿದು ಭಜಿಸುವುದೆ ಅ.ಪ.
ಸ್ವೋಚಿತ ಕರ್ಮಗಳಾಚರಿಸುತ ಬಹು
ನೀಚರಲ್ಲಿಗೆ ಪೋಗಿ ಯೊಚಿಸದೆ
ಖೇಚರವಾಹ ಚರಾಚರ ಬಂಧಕ
ಮೋಚಕನಹುದೆಂದ್ಯೋಚಿಸುತಿಪ್ಪುದೆ 1
ನಿಚ್ಚ ಸುಭಕುತಿಯಲಚ್ಯುತನಂಘ್ರಿಗ
ಳರ್ಚಿಸಿ ಮೆಚ್ಚಿಸುತೆಚ್ಚರದಿ
ತುಚ್ಚ ವಿಷಯಗಳ ಇಚ್ಛಿಸದೆ ಯ
ದೃಚ್ಛಾಲಾಭದಿಂ ಪ್ರೋಚ್ಚನಾಗುವುದೆ 2
ಮನೋವಾಕ್ಕಾಯದನುಭವಿಸುವ ದಿನ
ದಿನದಿ ವಿಷಯ ಸಾಧನಗಳಿಗೂ
ಅನಿಶಾಂತರ್ಗತ ವನರುಹದಳ ಲೋ
ಚನಗರ್ಪಿಸಿ ದಾಸನು ನಾನೆಂಬುದೇ 3
ವಾಸವ ಮುಖ ವಿಬುಧಾಸುರ ನಿಚಯಕೆ
ವಾಸುದೇವನೆ ಶುಭಾಶುಭದ
ಈ ಸಮಸ್ತ ಜಗಕೀಶ ಕೇಶವಾ
ನೀಶ ಜೀವರೆಂಬ ಸುe್ಞÁನವೆ 4
ಪಂಚ ಭೇದಯುತ ಪ್ರಪಂಚವು ಸತ್ಯ ವಿ
ರಿಂಚಿ ಭವ ಮುಖ ಬಲಿ ವಂಚಕಗೆ
ಸಂಚಲ ಪ್ರತಿಮೆ ಅಚಂಚಲ ಪ್ರಕೃತಿಯು
ಸಂಚಿಂತಿಸಿ ಮುದ ಲಾಂಭಿತನಹುದೆ 5
ಪಂಚ ಋತುಗಳಲಿ ಪಂಚಾಗ್ನಿಗಳಲಿ
ಪಂಚ ಪಂಚರೂಪವ ತಿಳಿದು
ಪಂಚ ಸುಸಂಸ್ಕಾರಾಂಚಿತನಾಗಿ ದ್ವಿ
ಪಂಚ ಕರಣದಲಿ ಪಂಚಕನರಿವುದೆ 6
ಹೃದಯದಿ ರೂಪವು ವದನದಿ ನಾಮವು
ಉದರದಿ ನೈವೇದ್ಯವು ಶಿರದಿ
ಪದ ಜಲ ನಿರ್ಮಾಲ್ಯವನೆ ಧರಿಸಿ ಕೋ
ವಿದರ ಸದನ ಹೆಗ್ಗದವ ಕಾಯುವುದೆ 7
ಪಾತ್ರರ ಸಂಗಡ ಯಾತ್ರೆ ಚರಿಸುತ ವಿ
ಧಾತೃ ಪಿತನ ಗುಣ ಸ್ತೋತ್ರಗಳಾ
ಶ್ರೋತ್ರದಿ ಸವಿದು ವಿಚಿತ್ರಾನಂದದಿ
ಗಾತ್ರವ ಮರೆದು ಪರತ್ರವ ಪಡೆವುದೆ 8
ಹಂಸ ಮೊದಲು ಹದಿನೆಂಟು ರೂಪಗಳ
ಸಂಸ್ಥಾನವ ತಿಳಿದನುದಿನದಿ
ಸಂಸೇವಿಸುವ ಮಹಾಪುರುಷರ ಪದ
ಪಾಂಸುವ ಧರಿಸಿ ಅಸಂಶಯನಪ್ಪುದೆ 9
ವರ ಗಾಯಿತ್ರೀ ನಾಮಕ ಹರಿಗೀ
ರೆರಡಂಘ್ರಿಗಳ ವಿವರವ ತಿಳಿದು
ತರುವಾಯದಿ ಷಡ್ವಿಧ ರೂಪವ ಸಾ
ದರದಲಿ ಅನುದಿನ ಧ್ಯಾನಿಸುತಿಪ್ಪುದೆ 10
ಬಿಗಿದ ಕಂಠದಿಂ ದೃಗ್ಭಾಷ್ಪಗಳಿಂ
ನಗೆ ಮೊಗದಿಂ ರೋಮಗಳೊಗೆದು
ಮಿಗೆ ಸಂತೋಷದಿಂ ನೆಗೆದಾಡುತ ನಾ
ಲ್ಮೊಗನಯ್ಯನ ಗುಣ ಪೊಗಳಿ ಹಿಗ್ಗುವುದೆ 11
ಗೃಹಕರ್ಮವ ಬ್ಯಾಸರದಲೆ ಪರಮೋ
ತ್ಸಹದಲಿ ಮಾಡುತ ಮೂಜಗದ
ಮಹಿತನ ಸೇವೆ ಇದೆ ಎನುತಲಿ ಮೋದದಿ
ಅಹರಹರ್ಮನದಿ ಸಮರ್ಪಿಸುತಿಪ್ಪುದೆ12
ಕ್ಲೇಶಾನಂದಗಳೀಶಾಧೀನ ಸ
ಮಾಸಮ ಬ್ರಹ್ಮ ಸದಾಶಿವರೂ
ಈಶಿತವ್ಯರು ಪರೇಶನಲ್ಲದೆ
ಶ್ವಾಸ ಬಿಡುವ ಶಕ್ತಿ ಲೇಸಿಲ್ಲೆಂಬುದೆ 13
ಏಕೋತ್ತರ ಪಂಚಾಶದ್ವರ್ಣಗ
ಳೇಕಾತ್ಮನ ನಾಮಂಗಳಿವು
ಮಾಕಮಾಲಾಸನ ಮೊದಲದಮರರು
ಸಾಕಲ್ಯದಿಯಿವರರಿಯರೆಂಬುದೆ 14
ಒಂದು ರೂಪದೊಳನಂತ ರೂಪವು
ಪೊಂದಿಪ್ಪವು ಗುಣಗಳಾ ಸಹಿತ
ಹಿಂದೆ ಇಂದು ಮುಂದೆಂದಿಗು ಗೋ
ವಿಂದಗೆ ಸರಿಮಿಗಿಲಿಲ್ಲೆಂತೆಂಬುದೆ 15
ಮೇದಿನಿ ಪರಮಾಣಂಬು ಕಣಂಗಳ
ನೈದಬಹುದು ಪರಿಗಣನೆಯನು
ಮಾಧವನಾನಂದಾದಿ ಗುಣಂಗಳ
ನಾದಿ ಕಾಲದಲಿ ಅಗಣಿತವೆಂಬುದೆ 16
ಹರಿಕಥೆ ಪರಮಾದರದಲಿ ಕೇಳುತ
ಮರೆದು ತನುವ ಸುಖ ಸುರಿವುತಲೀ
ಉರುಗಾಯನ ಸಂದರುಶನ ಹಾರೈ
ಸಿರುಳು ಹಗಲು ಜರಿ ಜರಿದು ಬಾಳ್ವುದೆ 17
ಆ ಪರಮಾತ್ಮಗೆ ರೂಪದ್ವಯವು ಪ
ರಾಪರ ತತ್ತ್ವ ಗಳಿದರೊಳಗೆ
ಸ್ತ್ರಿ ಪುಂ ಭೇದದಿ ಈ ಪದ್ಮಜಾಂಡವ
ವ್ಯಾಪಿಸಿಹನೆಂದೀಪರಿ ತಿಳಿವುದೆ 18
ವಿಷಯೇಂದ್ರಿಯಗಳಲಿ ತದಭಿಮಾನಿ ಸುಮ
ನಸರೊಳು ನಿಂದು ನಿಯಾಮಿಸುತಾ
ಶ್ವಸನಾಂತರ್ಗತ ವಾಸುದೇವ ತಾ
ವಿಷಯಂಗಳ ಭೋಗಿಸುವನೆಂದರಿವುದೆ 19
ಮೂಜಗದೊಳಗಿಹ ಭೂ ಜಲ ಖೇಚರ
ಈ ಜೀವರೊಳೊ ಮಹೌಜಸನ
ಸೋಜಿಗ ಬಹುವಿಧ ನೈಜ ವಿಭೂತಿಯ
ಪೂಜಿಸುತನುದಿನ ರಾಜಿಸುತಿಪ್ಪುದೆ 20
ಗುಣಕಾಲಾಹ್ವಯ ಆಗಮಾರ್ಣವ ಕುಂ
ಭಿಣಿ ಪರಮಾಣ್ವಾಂಬುಧಿಗಳಲಿ
ವನಗಿರಿ ನದಿ ಮೊದಲಾದದರೊಳಗಿಂ
ಧನಗತ ಪಾವಕನಂತಿಹನೆಂಬುದೆ 21
ಅನಳಾಂಗಾರನೊಳಿದ್ದೋಪಾದಿಯ
ಲನಿರುದ್ಧನು ಚೇತನರೊಳಗೆ
ಕ್ಷಣ ಬಿಟ್ಟಗಲದೆ ಏಕೋ ನಾರಾ
ಯಣ ಶ್ರುತಿ ಪ್ರತಿಪಾದ್ಯನು ಇಹನೆಂಬುದೆ 22
ಪಕ್ಷಗಳಕ್ಷಿಗಳಗಲದಲಿಪ್ಪಂ
ತ್ಯಕ್ಷರ ಪುರುಷನಪೇಕ್ಷೆಯಲಿ
ಕುಕ್ಷಿಯೊಳಬ್ಜಜ ತ್ರ್ಯಕ್ಷಾದ್ಯಮರರ
ಈಕ್ಷಿಸಿ ಕರುಣದಿ ರಕ್ಷಿಪನೆಂಬುದೆ 23
ಕಾರಣ ಕಾರ್ಯಾಂತರ್ಗತ ಅಂಶವ
ತಾರಾವೇಶಾಹಿತ ಸಹಜಾ
ಪ್ರೇರಕ ಪ್ರೇರ್ಯಾಂಹ್ವಯ ಸರ್ವತ್ರ ವಿ
ಕಾರವಿಲ್ಲದಲೆ ತೋರುವನೆಂಬುದೆ 24
ಪ್ರತಿದಿವಸ ಶ್ರುತಿಸ್ಮøತಿಗಳಿಂದ ಸಂ
ಸ್ತುತಿಸುತ ಲಕ್ಷ್ಮೀ ಪತಿಗುಣವ
ಕೃತಿಪತಿ ಸೃಷ್ಟಿ ಸ್ಥಿತಿಲಯ ಕಾರಣ
ಇತರ ಸರ್ವ ದೇವತೆಗಳಿಗಿನಿತಿಲ್ಲೆಂಬುದೆ25
ಪವನ ಮತಾನುಗರವ ನಾನಹುದೆಂ
ದವನಿಯೊಳಗೆ ಸತ್ಕವಿ ಜನರ
ಭವನಂಗಳಲಿ ಸಂಚರಿಸುತ ಸುಕಥಾ
ಶ್ರವಣವ ಮಾಡುತ ಪ್ರವರನಾಗುವುದೆ26
ಪನ್ನಗಾಚಲ ಸನ್ನಿವಾಸ ಪಾ
ವನ್ನಚರಿತ ಸದ್ಗುಣಭರಿತಾ
ಜನ್ಯಜನಕ ಲಾವಣ್ಯೇಕನಿಧಿ ಜ
ಗನ್ನಾಥವಿಠಲಾನಾನ್ಯಪನೆಂಬುದೆ 27


ಪ್ರಣವ ಪ್ರತಿಪಾದ್ಯ pranava pratipadya


ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ ಪ
ಪ್ರಣತಕಾಮದನೆ ಪ್ರಾರ್ಥಿಸುವೆ ಪ್ರಭುವೆಂದು ಅ.ಪ.
ಸಕಲ ಜೀವ ಜಡಾತ್ಮಕ ಜಗತ್ತಿನೊಳಗಿದ್ದು
ಅಕಳಂಕ ನಾಮರೂಪದಲಿ ಕರೆಸಿ
ಪ್ರಕಟನಾಗದಲೆ ಮಾಡಿಸಿ ಸರ್ವ ವ್ಯಾಪಾರ
ಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ 1
ಏನೆಂಬೆ ನಿನ್ನ ಮಹಿಮೆಗೆ ರಮಾಪತಿ ನಿನ್ನ
ಧೀನರಲ್ಲದೆ ತತ್ವಮಾನಿ ಸುರರು
ದಾನವಾಂತಕನೆ ವಿe್ಞÁಪನೆಯ ಕೈಕೊಂಡು
ದೀನರುದ್ಧರಿಸುವುದು ದಯದಿಂದ ನಿರುತಾ 2
ಸರ್ವ ಸ್ವತಂತ್ರ ನೀನಾದ ಕಾರಣ ಬ್ರಹ್ಮ
ಶರ್ವಾದಿಸುರರು ಪ್ರಾರ್ಥಿಸುತಿಪ್ಪರು
ದುರ್ವಿಭಾವ್ಯನೆ ಸುರಗಮೃತ ಪಾನವ ಗೈಸಿ
ಗರ್ವಿಸಿದ ದಾನವರ ಗಣವ ಸಂಹರಿಪೆ 3
ಬುಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳ
ಗಿದ್ದು ಬಹುವಿಧ ಚೇಷ್ಟೆಗಳನೆ ಮಾಡಿ
ಬದ್ಧರನ ಮಾಳ್ಪೆ ಭವದೊಳಗೆ ಜೀವರನ ಅನಿ
ರುದ್ಧರೆಂದೆನಿಪೆ ಎಲ್ಲರೊಳು ವ್ಯಾಪಕನಾಗಿ 4
ದಾಶರಥಿ ನೀನೆ ಗತಿಯೆಂದು ಮೊರೆಹೊಕ್ಕೆ ವಿ
ಭೀಷಣಗೆ ಲಂಕಾಧಿಪತ್ಯವಿತ್ತೇ
ವಾಸವಾನುಜ ಜಗನ್ನಾಥ ವಿಠ್ಠಲ ಭಕ್ತ
ಪೋಷಕನು ನೀನಹುದು ಕಲ್ಪ ಕಲ್ಪಗಳಲ್ಲಿ 5


ನೋಡಿದೆ ವಿಠಲನ ನೋಡಿದೆ nodide vittalana nodide

ನೋಡಿದೆ ವಿಠಲನ ನೋಡಿದೆ ಪ
ನೋಡಿದೆನು ಕಂಗಳಲಿ ತನುವೀ
ಡಾಡಿದೆನು ಚರಣಾಬ್ಜದಲಿ ಕೊಂ
ಡಾಡಿದೆನು ವದನದಲಿ ವರಗಳ
ಬೇಡಿದೆನು ಮನದಣಿಯ ವಿಠಲನ ಅ.ಪ.
ಇಂದಿರಾವಲ್ಲಭನ ತಾವರೆ
ಗಂದನಂಜಿಸಿ ತಪತÀಪಾವೆಂ
ತೆಂದು ಪೇಳ್ದನ ಯುವತಿ ವೇಷದಿ
ಕಂದು ಗೊರಳನ ಸ್ತುತಿಸಿದನ ಪು
ರಂದರಾನುಜನಾಗಿ ದಿವಿಯೊಳು
ಕುಂದದರ್ಚನೆಗೊಂಬ ಸನಕ ಸ
ನಂದನಾದಿ ಮುನೀಂದ್ರ ಹೃದಯ ಸು
ಮಂದಿರನ ಮಮ ಕುಲದ ಸ್ವಾಮಿಯ 1
ಯಾತುಧಾನರ ಭಾರ ತಾಳದೆ
ಭೂತರುಣಿ ಗೋರೂಪಳಾಗಿ ಸ
ನಾತನನ ತುತಿಸಲ್ಕೆ ಶೇಷ ಫ
ಣಾತ ಪತ್ರನು ನಂದಗೋಪ ನಿ
ಕೇತನದಲವತರಿಸಿ ವೃಷ ಬಕ
ಪೂತನಾದ್ಯರ ಸದೆದು ಬಹುವಿಧ
ಚೇತನರಿಗೆ ಗತಿನೀಡಲೋಸುಗ
ಜಾತಿಕರ್ಮಗಳೊಹಿಸಿ ಮೆರೆದನ 2
ತನ್ನತಾಯ್ತಂದೆಗಳ ಹೃದಯವೆ
ಪನ್ನಗಾರಿಧ್ವಜಗೆ ಸದನವೆಂ
ದುನ್ನತ ಭಕುತಿ ಭರದಿ ಅರ್ಚಿಪ
ಧನ್ಯಪುರುಷನ ಕಂಡು ನಾರದ
ಬಿನ್ನಯಿಸಿ ತುತಿಸಲ್ಕೆ ಕೇಳಿ ಪ್ರ
ಪನ್ನ ವತ್ಸಲ ಬಿರಿದು ಮೆರೆಯಲು
ಜೊನ್ನೊಡಲು ಭಾಗದಿ ನೆಲೆಸಿದ ಜ
ಗನ್ನಾಥ ವಿಠ್ಠಲನ ಮೂರ್ತಿಯ 3


ಮಧ್ವಾಂತರ್ಗತ ವೇದವ್ಯಾಸ madhawantargata vedavyasa


ಮಧ್ವಾಂತರ್ಗತ ವೇದವ್ಯಾಸ ಮಮ
ಹೃದ್ವನರುಹ ಸನ್ನಿವಾಸ ಪ
ಸದ್ವಿದ್ಯಾ ಕೊಡು ಶ್ರೀ ಕೃಷ್ಣ ದ್ವೈಪಾಯನ ಚಿದ
ಚಿದ್ವಿಲಕ್ಷಣ ತ್ವತ್ಪಾದ ದ್ವಯಾಬ್ಜವ ತೋರೊ ಅ
ಬಾದರಾಯಣ ಬಹುರೂಪಾ ಸನ
ಕಾದಿ ಸನ್ನುತ ಧರ್ಮಯೂಪಾ
ವೇದೋದ್ಧಾರ ದನಾದಿ ಕರ್ತ ಪೂರ್ಣ
ಬೋಧ ಸದ್ಗುರುವರಾರಾಧಿತ ಪದಯುಗ
ಮೇದಿನಿಯೊಳಾನೋರ್ವ ಪಾಮ
ರಾಧಮನು ಕೈ ಪಿಡಿ ಕರುಣ ಮ
ಹೋದಧೇ ಕಮನೀಯ ಕಾಯ ಪ್ರ
ಬೋಧ ಮುದ್ರಾಭಯ ಕರಾಂಬುಜ1
ಹರಿತೋಪ ಲಾಭ ಶರೀರಾ ಪರಾ
ಶರ ಮುನಿವರ ಸುಕುಮಾರ
ಪರಮ ಪುರುಷಕಾರ್ತಸ್ವರಗರ್ಭ ಪ್ರಮುಖ ನಿ
ರ್ಜರಗಣಮುನಿನುತ ವರಪಾದಪಂಕೇಜ
ಕುರುಕುಲದಿ ಧೃತರಾಷ್ಟ್ರ ಪಾಂಡು ವಿ
ದುರರ ಪಡೆದೈವರಿಗೊಲಿದು ಸಂ
ಹರಿಸಿ ದುರ್ಯೋಧನನ ಭಾರತ
ವಿರಚಿಸಿದ ಸುಂದರ ಕವೀಂದ್ರ 2
ಜಾತರೂಪ ಜಟಾ ಜೂಟ ಶ್ರೀ ನೀಕೇತನ ತಿಲಕ ಲಲಾಟ
ಪೀತ ಕೃಷ್ಣಾಜಿನ ಶ್ವೇತ ಶ್ರೀಯಜ್ಞೋಪ
ವೀತ ಮೇಖಲ ದಂಡಾನ್ವಿತ ಕಮಂಡಲ
ಭೂತಭಾವನ ಭೂತಿಕೃತ್ಸದ್ಭೂತಿದಾಯಕ ಶ್ರೀ ಜಗ
ನ್ನಾಥ ವಿಠಲನೆ ನಿನ್ನ ಮಹಿಮೆಯ
ನಾ ತುತಿಸಬಲ್ಲೆನೆ ಸುಖಾತ್ಮ 3


ವಾದಿರಾಜ ಗುರು ನೀ ದಯಮಾಡದೆ vaadiraja guru nee dayamaadade


ವಾದಿರಾಜ ಗುರು ನೀ ದಯಮಾಡದೆ
ಈ ದುರಿತಗಳ ಕಳೆದಾದರಿಪರಾರೊ ಪ
ದೈಶಿಕಾರ್ಯ ವಾಗೀಶಕುವರ ತವ
ದಾಸಸಮೂಹವ ನೀ ಸಲಹೋ ಸದಾ 1
ನೀ ಗತಿಯೆಂದನುರಾಗದಿ ನಂಬಿದೆ
ಭೋಗಪತೀಶನ ರೋಗವ ಕಳೆದೆ 2
ಜನ್ಮಾಧಿವಾಧ್ಯುನ್ಮಾದ ಭ್ರಮ
ನಿಮ್ಮ ಮೊರೆ ಹೊಕ್ಕ ಮೇಲಿನ್ನರಲುಂಟೆ 3
ಭೂಮಿಪರುಪಟಳಕಾ ಮಹಿನಾಥನು
ತಾ ಮೈಮರೆದಿರೆ ನೀ ಮುದವಿತ್ತೆ 4
ಮೋದಮುನಿಮತ ಪಯೋದಧಿ ಪೂರ್ಣ
ವಿಧೋದಯ ಶರಣರ ಕಾದುಕೊ ಧೊರಿಯೆ 5
ಕಲಿಬಾಧೆಯು ವೆಗ್ಗಳವಾಗಿದೆ ಕಾಯೊ
ಇಳೆಯೊಳು ಯತಿಕುಲತಿಲಕ ಕೃಪಾಳೊ 6
ನಿನ್ನೊಶನಾದ ಜಗನ್ನಾಥ ವಿಠಲನ
ಉನ್ನಾಹದಲಿ ತೋರೆನ್ನ ಮನದಲಿ 7


ಬಲು ರಮ್ಯವಾಗಿದೆ ಹರಿಯ ಮಂಚ balu ramyavaagide hariya mancha


ಬಲು ರಮ್ಯವಾಗಿದೆ ಹರಿಯ ಮಂಚ ಪ
ಎಲರುಣಿಕುಲ ರಾಜ ರಾಜೇಶ್ವರನ ಮಂಚಅ.ಪ.
ಪವನತನಯನ ಮಂಚ ಪಾವನತರ ಮಂಚ
ಭುವನತ್ರಯನ ಪೊತ್ತ ಭಾರಿಮಂಚ
ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ
ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ 1
ನೀಲಾಂಬರವನುಟ್ಟು ನಳನಳಿಸುವ ಮಂಚ
ನಾಲಗೆ ಎರಡುಳ್ಳ ನೈಜಮಂಚ
ನಾಲ್ವತ್ತು ಕಲ್ಪದಿ ತಪವ ಮಡಿದ ಮಂಚ
ತಾಲ ಮುಸಲ ಹಲವ ಪಿಡಿದಿರುವ ಮಂಚ 2
ರಾಮನನುಜನಾಗಿ ರಣವ ಜಯಿಸಿದ ಮಂಚ
ತಾಮಸ ರುದ್ರನನು ಪಡೆದ ಮಂಚ
ಭಿಮಾವರಜನೊಳು ಆವೇಶಿಸಿದ ಮಂಚ
ಜೀಮೂತ ಮಂಡಲವ ತಡೆಗಟ್ಟಿದ ಮಂಚ 3
ಜೀವನಾಮಕನೆನಿಸಿ ವ್ಯಾಪ್ತನಾದ ಹರಿಯ
ಸೇವಿಸಿ ಸುಖಿಸುವ ದಿವ್ಯ ಮಂಚ
ಸಾವಿರ ಮುಖದಿಂದ ತುತ್ತಿಸಿ ಹಿಗ್ಗುವ ಮಂಚ
ದೇವಕೀಜಠರದಿ ಜನಿಸಿದ ಮಂಚ4

ವಾರುಣೀ ದೇವಿ ವರನೆನಿಸಿದ ಮಂಚ
ಸಾರುವ ಭಕುತರ ಸಲಹೊ ಮಂಚ
ಕಾರುಣ್ಯನಿಧಿ ಜಗನ್ನಾಥ ವಿಠಲನ ವಿ
ಹಾರಕ್ಕೆ ಯೋಗ್ಯವಾದ ವಿಮಲ ಶೇಷ ಮಂಚ5


ನೀಲಲೋಹಿತ ಡಮರುಗ ತ್ರಿಶೂಲ neela lohita damaruga


ನೀಲಲೋಹಿತ ಡಮರುಗ ತ್ರಿಶೂಲ ಶೋಭಿತ \\ಪ\\
ಫಾಲನಯನ ಶುಂಡಾಲ ಚರ್ಮ ಸುದುಕೂಲ ಮೃಡ ಸತತ ಪಾಲಿಸು ಕರುಣದಿ \\ಅ.ಪ.\\
ನಂದಿವಾಹನ ನಮಿಪೆ ಖಳ ವೃಂದ ಮೋಹನ
ಅಂಧಕರಿಪು ಶಿಖಿ ಸ್ಯಂದನ ಜನಕ ಸನಂದನಾದಿ ಮುನಿ ವಂದಿತ ಪದಯುಗ \\1\\
ಸೋಮಶೇಖರ ಗಿರಿಜಾಸು ತ್ರಾಮ ಲೇಖರಾ
ಸ್ತೋಮವಿನುತ ಭವ ಭೀಮ ಭಯಾಂತಕ ಕಾಮರಹಿತ ಗುಣಧಾಮ ದಯಾನಿಧೆ\\ 2\\
ನಾಗಭೂಷಣ ವಿಮಲ ಸರಾಗ ಭಾಷಣ

ಭೋಗಿಶಯನ ಜಗನ್ನಾಥ ವಿಠಲನ ಯೋಗದಿ ಒಲಿಸುವ ಭಾಗವತರೊಳಿಡೊ \\3\\

ನಾ ಧನ್ಯನಾದೆನಿಂದು ಸತ್ಯ ಬೋಧರಾಯರ ದಿವ್ಯ naa dhanyanadenindu


ನಾ ಧನ್ಯನಾದೆನಿಂದು  ಸತ್ಯ ಬೋಧರಾಯರ ದಿವ್ಯ 
ಪಾದಕಮಲವ ಕಂಡು ಪ
ಹಿಂಗಿದವಖಿಳದೋಷಂಗಳು ಸನ್ಮುನಿಗಳವ
ರಂಘ್ರಿ ಸಂದರುಶನದೀ
ಗಂಗಾದಿತೀರ್ಥ ಭುಜಂಗಾದಿ ಮೊದಲಾದ
ತುಂಗ ತೀರ್ಥಯಾತ್ರೆ ಫಲ ಸಮನಿಸಿತು1
ಆವ ಮುನಿಗಳೋ ಮತ್ತಾವ ದೇವತೆಗಳೋ
ಆವಾವಬಲ್ಲ ಮತ್ತಾವಾಗಲೂ
ಸೇವಿಸುವರ ಕೃಪಾವಲೋಕನದಿಂದ
ಪಾವನ ಮಾಡಲು ಕೋವಿದಾರ್ಯರ ಕಂಡು 2
ಸೀತಾರಮಣ ಜಗನ್ನಾಥ ವಿಠ್ಠಲರೇಯಾ
ಭೂತಳದೊಳಗೀ ಮಹಾತ್ಮರನಾ
ಪ್ರೀತಿಯಂ ಸೃಜಿಸಿದನಾಥ ಜನರನ ಪು
ನೀತರ ಮಾಡಲು ಆತ ತಕ್ಷಣದಿ 3


ದಾಸರಾಯ ಪುರಂದರ ದಾಸರಾಯ raasaayanik purandara dasaraya

ದಾಸರಾಯ ಪುರಂದರ ದಾಸರಾಯ ಪ
ದಾಸರಾಯ ಪ್ರತಿವಾಸರದಲಿ ಶ್ರೀನಿ
ವಾಸನ್ನ ತೋರೋ ದಯಾಸಾಂದ್ರ ಅ.ಪ.
ವರದನಾಮಕ ಭೂಸುರನ ಮಡದಿ ಬ
ಸಿರಲಿ ಜನಿಸಿ ಬಂದು ಮೆರೆದೆ ಧರಣಿಯೊಳು 1
ಕುಲಿಶಧರಾಹ್ವಯ ಪೊಳಲೊಳು ಮಡದಿ ಮ
ಕ್ಕಳ ಕೂಡಿ ಸುಖದಿ ಕೆಲ ಕಾಲದಲಿದ್ಯೊ 2
ವ್ಯಾಸರಾಯರಲಿ ಭಾಸುರ ಮಂತ್ರೋ ಪ
ದೇಶವ ಕೊಂಡು ರಮೇಶನ ಒಲಿಸಿದ್ಯೊ 3
ಮನೆ ಧನ ಧಾನ್ಯ ವಾಹನ ವಸ್ತುಗಳನೆಲ್ಲ
ತೃಣಕೆ ಬಗೆದು ಕೃಷ್ಣಾರ್ಪಣವೆಂದೆ ಬುಧರಿಗೆ 4
ಪ್ರಾಕೃತ ಭಾಷೆಯೊಳ್ ನೀ ಕೃತಿ ಪೇಳಿ ಆ
ಪ್ರಾಕೃತ ಹರಿಯಿಂದ ಸ್ವೀಕೃತ ನೀನಾದ್ಯೊ 5
ತೀರ್ಥಕ್ಷೇತ್ರಗಳ ಮೂರ್ತಿ ಮಹಿಮೆಗಳ
ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ6
ಪಾತಕ ವನಧಿ ಪೋತನೆನಿಪ ಜಗ
ನ್ನಾಥ ವಿಠ್ಠಲನ ಸುಪ್ರೀತಿಯಿಂದೊಲಿಸಿದೆ 7

Thursday 16 January 2020

ಬಣ್ಣಿಸಿ ಗೋಪಿ ಹರಸಿದಳು bannisis gopi harisidalu

ಬಣ್ಣಿಸಿ ಗೋಪಿ ಹರಸಿದಳು
ಎಣ್ಣೆಯನೊತ್ತುತ ಯದುಕುಲ ತಿಲಕಗೆ
ಆಯುಷ್ಯವಂತನಾಗು ಅತಿ ಬಲ್ಲಿದನಾಗು
ಮಾಯದ ಖಳರ ಮರ್ದನನಾಗು
ರಾಯರ ಪಾಲಿಸು ರಕ್ಕಸರ ಸೋಲಿಸು
ವಾಯುಸುತಗೆ ನೀನೊಡೆಯನಾಗೆನುತ
ಧೀರನು ನೀನಾಗು ದಯಾಂಬುಧಿಯಾಗು
ಆ ರುಕ್ಮಿಣಿಗೆ ನೀನರಸನಾಗು
ಮಾರನ ಪಿತನಾಗು ಮಧುಸೂದನನಾಗು
ದ್ವಾರಾವತಿಗೆ ನೀ ಧೊರೆಯಾಗೆನುತ
ಆನಂದ ನೀನಾಗು ಅಚ್ಯುತ ನೀನಾಗು
ದಾನವಾಂತಕನಾಗು ದಯವಾಗು
ಶ್ರೀನಿವಾಸನಾಗು ಶ್ರೀನಿಧಿ ನೀನಾಗು
ಜ್ಞಾನಿ ಪುರಂದರವಿಠಲನಾಗೆನುತ

ಕೃಷ್ಣ ಬಾರೊ ಕೃಷ್ಣ ಬಾರೋ krishna baaro krishna baaro

ಕೃಷ್ಣ ಬಾರೊ ಕೃಷ್ಣ ಬಾರೋ
ಕೃಷ್ಣಯ್ಯ ನೀ ಬಾರಯ್ಯ                             ||ಪ||
ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ           ||ಅ||
ಮನ್ಮಥಜನಕನೆ ಬೇಗನೆ ಬಾರೊ
ಕಮಲಾಪತಿ ನೀ ಬಾರೊ
ಅಮಿತಪರಾಕ್ರಮ ಶಂಕರ ಬಾರೊ
ಕಮನೀಯ ಗಾತ್ರನೆ ಬಾರಯ್ಯ ದೊರೆಯೆ       ।।೧।।
ಸುರುಳು ಕೇಶಗಳ ಒಲಿವ ಅಂದ
ಭರದ ಕಸ್ತೂರಿ ತಿಲಕದ ಚಂದ
ಶಿರದಿ ಒಪ್ಪುವ ನವಿಲುಕಣ್ಗಳಿಂದ
ತರತರದ ಆಭರಣಗಳ ಧರಿಸಿ ನೀ ಬಾರೊ      ।।೨।।
ಹಾಲುಬೆಣ್ಣೆಗಳ ಕೈಯಲಿ ಕೊಡುವೆ
ಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆ
ಜಾಲ ಮಾಡದೆ ಬಾರಯ್ಯ ಮರಿಯೆ
ಬಾಲ ಎನ್ನ ತಂದೆ ಪುರಂದರವಿಠಲ                ।।೩।।

ಆಡಿದನೋ ರಂಗ ಅದ್ಭುತದಿಂದಲಿ aadidano ranga adbhutadindali

ಆಡಿದನೋ ರಂಗ ಅದ್ಭುತದಿಂದಲಿ
ಕಾಳಿಂಗನ ಫಣೆಯಲಿ                                      ||ಪ||
ಪಾಡಿದವರಿಗೆ ಬೇಡಿದ ವರಗಳ
ನೀಡುತಲಿ ದಯ ಮಾಡುತಲಿ
ನಲಿದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ                 ||ಅ.ಪ||
ಅಂಬುರುಹೋದ್ಭವ ಅಖಿಳ ಸುರರು ಕೂಡಿ
ಅಂಬರದಲಿ ನಿಂತು ಅವರ ಸ್ತುತಿಸೆ
ರಂಭೆ ಊರ್ವಶಿ ರಮಣಿಯರೆಲ್ಲರು
ಚಂದದಿಂ ಭರತನಾಟ್ಯವ ನಟಿಸೆ
ಝಂತಟ ತಕಧಿಮಿ ತಧಿಗಿಣಿ ತೋಂ ಎಂದು
ಝಂಪೆ ತಾಳದಿ ತುಂಬುರುನೊಪ್ಪಿಸೆ
ಧಾ ಮ ಪ ಧ ಸ ರೀ ಎಂದು ಧ್ವನಿಯಿಂದ ನಾರದ
ತುಂಬುರು ಗಾನವ ಮಾಡಲು ನಂದಿಯು ಮದ್ದಲೆ
ಚೆಂದದಿ ಹಾಕಲು                                              ||೧||
ಫಣವ ಮೆಟ್ಟಿ ಬಾಲವ ಕೈಯಲಿ ಪಿಡಿದು
ಫಳಫಳಿಸುತ್ತ ನಾಟ್ಯವನಾಡೆ
ಚಂದ್ರಮಂಡಲದಂತೆ ಪೊಳೆಯುವ
ಮುಖದೊಳು ಚಲಿಸುವ ನೀಲಕೇಶಗಳಾಡೆ
ಕಾಲಲಂದುಗೆ ಗೆಜ್ಜೆ ಘಲು ಘಲು ಘಲುರೆನುತ
ಉಡಿಗೆಜ್ಜೆ ಘಂಟೆಗಳಾಡೆ
ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ
ಪುಟ್ಟ ಪಾದವ ಇಟ್ಟು ಶ್ರೀ ಕೃಷ್ಣನು
ಮೆಟ್ಟಿದನು ತಕ ಧಿಮಿ ತಧಿಕೆನುತ                         ||೨||
ಸುರರು ಪುಷ್ಪದ ವೃಷ್ಟಿಯ ಕರೆಯಲು
ಸುದತಿಯರೆಲ್ಲರು ಪಾಡಲು
ನಾಗಕನ್ನಿಕೆಯರು ನಾಥನ ಬೇಡಲು
ನಾನಾ ವಿಧದಿ ಸ್ತುತಿ ಮಾಡಲು
ರಕ್ಕಸರೆಲ್ಲರು ಕಕ್ಕಸವನೆ ಕಂಡು
ದಿಕ್ಕು ದಿಕ್ಕುಗಳಿಗೆ ಓಡಲು
ಚಿಕ್ಕವನಿವನಲ್ಲ ಪುರಂದರವಿಠ್ಠಲ
ವೆಂಕಟರಮಣ ಬೇಗ ಯಶೋದೆ
ಬಿಂಕದೊಳೆತ್ತಿ ಮುದ್ದಾಡೆ ಶ್ರೀ ಕೃಷ್ಣನ                   ||೩||

ಕಂಡು ಕಂಡು ನೀ ಎನ್ನ kandu kandu nee ennna kai

ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ           ।।ಪ॥
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ                 ।।ಅ.ಪ॥
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈ ನೀರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ                 ।।೧।।
ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದ ಭವದಿ ಕಡುನೊಂದೆ ನಾನು
ಸನಕಾದಿ ಮುನಿವಂದ್ಯ ವನಜಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ                    ।।೨।।
ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ
ಭಕ್ತರಾಧೀನನಾಗಿರಬೇಡವೆ
ಮುಕ್ತಿದಾಯಕ ದೇವ ಪುರಂದರವಿಠಲನೆ
ಶಕ್ತ  ನೀನಹುದೆಂದು ನಂಬಿದೆನೊ ಶ್ರೀಕೃಷ್ಣಾ             ।।೩।।

ಬಂದನೇನೆ ರಂಗ ಬಂದನೇನೆ bandanene ranga

ಬಂದನೇನೆ ರಂಗ ಬಂದನೇನೆ                                   ।।ಪ।।
ಎನ್ನ ತಂದೆ ಬಾಲಕೃಷ್ಣ ನವನೀತಚೋರ                      ।।ಅ.ಪ।।
ಘಿಲುಘಿಲುಘಿಲುರೆಂಬ ಪೊನ್ನಂದುಗೆ ಗೆಜ್ಜೆ
ಹೊಳೆಹೊಳೆಯುವ ಪಾದವನೂರುತ
ನಲಿನಲಿದಾಡುವ ಉಂಗುರ ಅರಳೆಲೆ
ಥಳಥಳಥಳ ಹೊಳೆಯುತ ಶ್ರೀಕೃಷ್ಣ                              ।।೧।।
ಕಿಣಿಕಿಣಿಕಿಣಿರೆಂಬ ಕರದ ಕಂಕಣ ಬಳೆ
ಝಣಝಣಝಣರೆಂಬ ನಡುವಿನ ಗಂಟೆ
ಧಣಧಣಧಣರೆಂಬ ಪಾದದ ತೊಡವಿನ
ಮಿಣಿಮಿಣಿ ಕುಣಿದಾಡುತ ಶ್ರೀಕೃಷ್ಣ                                 ।।೨।।
ಹಿಡಿಹಿಡಿ ಹಿಡಿಯೆಂದು ಪುರಂದರವಿಠಲನ
ದುಡುದುಡುದುಡು ದುಡನೇ ಓಡುತ
ನಡೆನಡೆ ನಡೆಯೆಂದು ಮೆಲ್ಲನೆ ಪಿಡಿಯಲು
ಬಿಡಿಬಿಡಿಬಿಡಿ ದಮ್ಮಯ್ಯ ಎನ್ನುತ                                   ।।೩।।

ಹಣ್ಣು ಬಂದಿದೆ ಕೊಳ್ಳಿರಿ ನೀವೀಗ hannu bandide kolliri

ಹಣ್ಣು ಬಂದಿದೆ ಕೊಳ್ಳಿರಿ ನೀವೀಗ
ಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯಹಣ್ಣು        ||ಪ||
ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು
ಭವರೋಗಗಳನೆಲ್ಲ ಕಳೆವ ಹಣ್ಣು
ನವನೀತ ಚೋರನೆಂಬ ಯಮನ ಅಂಜಿಪ ಹಣ್ಣು
ಅವನಿಯೊಳು ಶ್ರೀರಾಮನೆಂಬೊ ಹಣ್ಣು                 ||೧||
ಕೊಳೆತು ಹೋಗುವುದಲ್ಲ ಹುಳಿತು ಹೋಗುವುದಲ್ಲ
ಕಳೆದು ಬಿಸಾಡಿಸಿ ಕೊಳ್ಳುವುದಲ್ಲ
ಅಳೆದು ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೊದಲ್ಲ
ಒಳಿತಾದ ಹರಿಯೆಂಬೊ ಮಾವಿನಹಣ್ಣು                ||೨||
ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ
ಕಷ್ಟದಿ ಹಣಕೊಟ್ಟು ಕೊಂಬುವುದಲ್ಲ
ಸೃಷ್ಟಿಯೊಳಗೆ ನಮ್ಮ ಪುರಂದರವಿಠಲ
ಕೃಷ್ಣರಾಯನೆಂಬೊ ಶ್ರೇಷ್ಠವಾದ ಹಣ್ಣು                ||೩||

ಕೇಳಲೊಲ್ಲನೆ ಎನ್ನ ಮಾತನು ರಂಗ kelalollene enna maatanu krishna

ಕೇಳಲೊಲ್ಲನೆ ಎನ್ನ ಮಾತನು ರಂಗ   ॥ಪ॥
ಕಾಳಿಯಮರ್ದನ ಕೃಷ್ಣಗೆ
ಪೇಳೆ ಗೋಪ್ಯಮ್ಮ ಬುದ್ಧಿ        ॥ಅ.ಪ॥
ಬಿಟ್ಟ ಕಂಗಳ ಮುಚ್ಚಲೊಲ್ಲನೆ ಬೇಗ
ಬೆಟ್ಟಕ್ಕೆ ಬೆನ್ನೊಡ್ಡಿ ನಿಂತನೆ
ಸಿಟ್ಟಿಸಿ ಕೋರೆ ಹಲ್ಲ ತೋರ್ದನೆ ಅತಿ
ಗಟ್ಟಿ ಉಕ್ಕಿನ ಕಂಭವನೊಡೆದು ಬಂದನೆ ॥೧॥
ಮೂರಡಿ ಭೂಮಿಯ ಬೇಡಿದನೆ ಅರಸರ
ಬೇರ ಕಡಿಯೆ ಕೊಡಲಿ ತಂದನೆ
ನಾರ ಸೀರೆಯನಿಟ್ಟುಕೊಂಡನೆ ಬೇಗ
ಚೋರತನದಿ ಹರವಿ ಹಾಲ ಕುಡಿದನಮ್ಮ  ॥೨॥
ಬತ್ತಲೆ ನಾರಿಯರನಪ್ಪಿದ ಬೇಗ
ಉತ್ತಮ ಅಶ್ವವ ಹತ್ತಿದ
ಹತ್ತವತಾರವ ತಾಳಿದ ನಮ್ಮ
ದಿಟ್ಟ ಮೂರುತಿ ಪುರಂದರ ವಿಠಲ   ॥೩॥

ಹೇಳಿದರೆ ನಮ್ಮ ಮೇಲೆ ಯಾಕಮ್ಮ helidare namma mele yaakamma

ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥ
ಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ||
ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆ
ಬಣ್ಣಿಸಿ ಕಸ್ತೂರಿ ತಿಲಕವನಿಟ್ಟು
ಚಿಣ್ಣಿಕೋಲು ಚೆಂಡು ಬುಗುರಿ ಕೈಯಲಿಟ್ಟು, ಪೊಸ
ಬೆಣ್ಣೆಯ ಮೆಲ್ಲು ಹೋಗೆಂದು ಕಳುಹಿಬಿಟ್ಟು ||
ಕರೆದು ಕೈಯಲ್ಲಿ ಚಿಟ್ಟೆಬೆಲ್ಲ ಕೊಟ್ಟು, ಚಿಕ್ಕ
ಹರಳುಕಲ್ಲುಗಳನ್ನೆ ಅರಿಸಿ ಕೊಟ್ಟು
ವಾರಿಗೆಯ ಪುಂಡರನ್ನು ಮಾಡಿಕೊಟ್ಟು, ಗೋಪಿ
ಊರನೆಲ್ಲ ಸುಲಿಯೆಂದು ಕಳುಹಿಕೊಟ್ಟು ||
ಹೋಗೆಂದು ರಂಗನ ಕಳುಹಿಕೊಟ್ಟು, ಗೋಪಿ
ಆಗ ಭೋಗಂಗಳೆಲ್ಲ ತುಂಬಿಕೊಟ್ಟು
ನಿಗಮಗೋಚರನೆಂಬ ಪೆಸರನಿಟ್ಟು, ಗೋಪಿ
ಪುರಂದರವಿಠಲನ್ನ ಬೆಳೆಸಿಬಿಟ್ಟು ||

ಜೋ ಜೋ ಯಶೋದೆಯ ನಂದ ಮುಕುಂದನೆ jo jo yashodeya kanda

ಜೋ ಜೋ ಯಶೋದೆಯ ನಂದ ಮುಕುಂದನೆ
ಜೋ ಜೋ ಕಂಸಕುಠಾರಿ
ಜೋ ಜೋ ಮುನಿಗಳ ಹೃದಯಮಂದಿರ
ಜೋ ಜೋ ಲಕುಮಿಯ ರಮಣ ||ಪ||
ಹೊಕ್ಕಳಹೂವಿನ ತಾವರೆಗಣ್ಣಿನ , ಇಕ್ಕಿದ್ದ ಮಕರಕುಂಡಲದ
ಜಕ್ಕರಿಸುವ ಕದಪಿನ ಸುಳಿಗುರುಳಿನ , ಚಿಕ್ಕ ಬಾಯ ಮುದ್ದುಮೊಗದ
ಸೊಕ್ಕಿದ ಮದಕರಿಯಂದದಿ ನೊಸಲಲಿ ಇಕ್ಕಿದ ಕಸ್ತೂರಿತಿಲಕ
ರಕ್ಕಸರೆದೆದಲ್ಲಣ ಮುರವೈರಿಯೆ ಮಕ್ಕಳ ಮಾಣಿಕ ಜೋ ಜೋ ||
ಕಣ್ಣು ಬೆಳಗು ಪಸರಿಸಿ ನೋಡುವ ಅರೆಗಣ್ಣ ಮುಚ್ಚಿ ನಸುನಗುತ
ಸಣ್ಣ ಬೆರಳು ಬಾಯೊಳು ಢವಳಿಸುತ ಪನ್ನಂಗಶಯನ ನಾಟಕದಿ
ನಿನ್ನ ಮಗನ ಮುದ್ದು ನೋಡೆನುತ ಗೋಪಿ ತನ್ನ ಪತಿಗೆ ತೋರಿದಳು
ಚಿನ್ನತನದ ಸೊಬಗಿನ ಖಣಿಯೇ ಹೊಸ ರನ್ನ ಮುತ್ತಿನ ಬೊಂಬೆ ಜೋ ಜೋ ||
ನಿಡಿತೋಳ್ಗಳ ಪಸರಿಸುತಲಿ ಗೋಪಿಯ ತೊಡೆ ಮೇಲೆ ಮಲಗಿ ಬಾಯ ತೆರೆಯೆ
ಒಡಲೊಳು ಚತುರ್ದಶಭುವನವಿರಲು ಕಂಡು ನಡುನಡುಗಿ ಕಣ್ಣ ಮುಚ್ಚಿದಳು
ತಡೆಯದೆ ಅಡಿಗಳನಿಡುತಲಿ ಬಂದು ಮಡದೇರ ಮುಖವ ನೋಡುತ ನಿಂದು
ಕಡುದಯಾಸಾಗರ ಬಿಡದೆ ರಕ್ಶಿಸು ಎನ ಸಲಹಬೇಕೆಂದು ಜೋ ಜೋ ||

ಏನು ಮಾಡಲೊ ಮಗನೆ ಯಾಕೆ enu maadale magane yaake

ಏನು ಮಾಡಲೊ ಮಗನೆ ಯಾಕೆ ಬೆಳಗಾಯಿತೊ ಏನು ಮಾಡಲೊ ಕೃಷ್ಣಯ್ಯ
ಏನು ಮಾಡಲಿ ಇನ್ನು ಮಾನಿನಿಯರು ಎನ್ನ
ಮಾನವ ಕಳೆಯುವರೊ ರಂಗಯ್ಯ
ಹಾಲು ಮೊಸರು ಬೆಣ್ಣೆ ಕದ್ದನೆಂಬುವರೊ
ಮೇಲಿನ ಕೆನೆಗಳ ಮೆದ್ದನೆಂಬುವರೊ
ಬಾಲಕರೆಲ್ಲರ ಬಡಿದನೆಂಬರೊ ಎಂಥ
ಕಾಳ ಹೆಂಗಸು ಇವನ ಹಡೆದಳೆಂಬುವರೊ
ಕಟ್ಟೆದ್ದ ಕರುಗಳ ಬಿಟ್ಟನೆಂತೆಂಬರೊ
ಮೆಟ್ಟೆ ಸರ್ಪನ ಮೇಲೆ ಕುಣಿದನೆಂಬುವರೊ
ಪುಟ್ಟ ಬಾಲೆಯರ ಮೋಹಿಸಿದನೆಂಬರೊ ಎಂಥ
ದುಷ್ಟ ಹೆಂಗಸು ಇವನ ಹಡೆದಳೆಂಬುವರೊ
ಗಂಗಾಜನಕ ನಿನ್ನ ಜಾರನೆಂತೆಂಬರೊ
ಶೃಂಗಾರಮುಖ ನಿನ್ನ ಬರಿದೆ ದೂರುವರೊ
ಮಂಗಳಮಹಿಮ ಶೀಪುರಂದರವಿಟ್ಠಲ
ಹಿಂಗದೆ ಎಮ್ಮನು ಸಲಹೆಂತೆಂಬರೊ

ಬಾರೋ ಬ್ರಹ್ಮಾದಿವಂದ್ಯಾ baaro brahmadivandhya

ಬಾರೋ ಬ್ರಹ್ಮಾದಿವಂದ್ಯಾ
ಬಾರೋ ವಸುದೇವ ಕಂದ

ಧಿಗಿಧಿಗಿ ನೀ ಕುಣಿದಾಡುತ ಬಾರೋ ದೀನರಕ್ಷಕನೇ
ಜಗದೀಶಾ ಕುಣಿದಾಡುತ ಬಾರೋ ಚೆನ್ನಕೇಶವನೇ

ಗೊಲ್ಲರ ಮನೆಗೆ ಪೋಗಲು ಬೇಡ ಗೋವಿಂದಾ ಕೇಳೋ
ಹಾಲು ಬೆಣ್ಣೆ ಮೊಸರಿಕ್ಕುವೆ ನೀನುಣ್ಣಬಾರೋ

ದೊಡ್ಡ ದೊಡ್ಡ ಮುತ್ತಿನ ಹಾರವ ಹಾಕಿ ನೋಡುವೆ ಬಾರೋ
ದೊಡ್ಡಪುರದ ದ್ವಾರಕಿವಾಸ ಪುರಂದರವಿಟ್ಠಲ

ಊಟಕ್ಕೆ ಬಂದೆವು ನಾವು ನಿಮ್ಮ utake bandevu

ಊಟಕ್ಕೆ ಬಂದೆವು ನಾವು ನಿಮ್ಮ
ಆಟ ಪಾಟವ ಬಿಟ್ಟು ಅಡುಗೆ ಮಾಡಮ್ಮ     ||ಪ||
ಕತ್ತಲಿಟ್ಟಾವಮ್ಮ ಕಣ್ಣು ಬಾಯಿ
ಬತ್ತಿ ಬರುತಲಿದೆ ಕೈಕಾಲು ಝುಮ್ಮ
ಹೊತ್ತ ಹೋಗಿಸಬೇಡವಮ್ಮ
ಒಂದು ತುತ್ತಾದರು ಇತ್ತು ಸಲಹು ನಮ್ಮಮ್ಮ    ।।೧।।
ಒಡಲೊಳಗೆ ಉಸಿರಿಲ್ಲ ಒಂದು
ಕ್ಷಣವಾದರೆ ಜೀವ ನಿಲ್ಲುವುದಿಲ್ಲ
ಮಡಿದರೆ ದೋಷ ತಟ್ಟುವುದು ಒಂದು
ಹಿಡಿ ಅಕ್ಕಿಯಿಂದಲೆ ಕೀರ್ತಿ ಬಾಹೋದು     ।।೨।।
ಹೊನ್ನರಾಶಿಯ ತಂದು ಸುರಿಯೆ ಕೋಟಿ
ಕನ್ನಿಕೆಯರ ತಂದು ಧಾರೆಯನೆರೆಯೆ
ಅನ್ನದಾನಕ್ಕಿನ್ನು ಸರಿಯೆ ಪ್ರ
ಸನ್ನ ಪುರಂದರ ವಿಠಲ ದೊರೆಯೆ            ।।೩।।

ಆಡ ಹೋದಲ್ಲೆ ಮಕ್ಕಳು aada hodalli makkalu

ಆಡ ಹೋದಲ್ಲೆ ಮಕ್ಕಳು
ಆಡಿಇ ಕೊಂಬುವರು ನೋಡಮ್ಮ ||ಪ||
ನೋಡಿ ನೋಡಿ ಎನ್ನ ಮುಖವ
ನೋಡಿ ಕಣ್ಣು ಮೀಟುವರಮ್ಮ ||ಅ.ಪ||
ದೇವಕಿ ಹೆತ್ತಳಂತೆ ವಸು-
ದೇವನೆಂಬವ ಪಿತನಂತೆ
ಕಾವಲಲ್ಲಿ ಹುಟ್ಟಿದೆನಂತೆ
ಮಾವಗಂಜಿಲ್ಲಿ ತಂದರಂತೆ ||
ವಿಷವು ತುಂಬಿದ ಮೊಲೆಯನುಂಡು
ಅಸುರೆಯ ನಾ ಕೊಂದೆನಂತೆ
ನಿಶಿಚರ ಶಕಟಾಸುರನ
ಶಿಶುಗಾಲಿಲೊರಸಿದೆನಂತೆ ||
ನೀನೆನ್ನ ಹಡೆದಿಲ್ಲವಂತೆ
ನಾ ನಿನ್ನ ಮಗನಲ್ಲವಂತೆ
ಧೇನು ಕಾಯುವರಿಲ್ಲವೆಂದು
ಸಾನುರಾಗದಿ ಸಲಹಿದೆಯಂತೆ ||
ಕಿಚ್ಚ ನಾ ಗಡ ನುಂಗಿದೆನಂತೆ
ವತ್ಸಾಸುರನ ಕೆಡಹಿದೆನಂತೆ
ಕಚ್ಚ ಬಂದ ಕಾಳಿಂಗನ
ಕೊಚ್ಚಲು ಮಡುವ ಧುಮುಕಿದೆನಂತೆ ||
ಹದ್ದು ಎನ್ನ ವಾಹನನಂತೆ
ಹಾವು ಎನ್ನ ಹಾಸಿಗೆಯಂತೆ
ಕದ್ದು ಬೆಣ್ಣೆಯ ನಾ ತಿಂದೆನಂತೆ
ಮುದ್ದು ಪುರಂದರ ವಿಠಲನಂತೆ ||

ಬವ್ವು ಬಂದಿತಲ್ಲ, ರಂಗಯ್ಯ bavvu bandittalla rangayya

ಬವ್ವು ಬಂದಿತಲ್ಲ, ರಂಗಯ್ಯ, ಬವ್ವು ಬಂದಿತಲ್ಲ ||ಪ||
ಬವ್ವು ನಿನ್ನ ಕಾಲು ಕಚ್ಚಿತೋ ಕೃಷ್ಣ ||ಅ||
ಸೆರಗು ಪಿಡಿದು ನೀ ಹೇಳದೆ ಮಲಗೊ
ತಿರುಗಿದರೆ ನೋಡು ಮತ್ತಿಲ್ಲೆ
ಬೂದಿಯ ಹಚ್ಚಿದೆ ಕೂದಲು ಬಿಚ್ಚಿದೆ
ಸ್ವಾದವ ಕಂಡು ಬಂದಿತಿಲ್ಲಿ ||
ಹಿಡಿದ ತ್ರಿಶೂಲ ಪಿಡಿದ ಕಪಾಲ
ಮುಕ್ಕಣ್ಣಲಿ ಕಿಡಿಯುದುರಿಸುತ
ಹಾವು ಕೊರಳಲಿಟ್ಟು ಹುಲಿಯ ಚರ್ಮವ ಹೊದ್ದು
ಸುತ್ತಲಿ ಬರುತಿದೆ ಬವ್ವುತನ ದಂಡು ||
ಕಪ್ಪುಗೊರಳ ಬವ್ವು ಒಪ್ಪುವ ಎತ್ತನೇರಿ
ತಪ್ಪದೆ ಬಂದೀತು ಬಿಡು ಮುನ್ನೆ
ಅಪ್ಪ ಕೃಷ್ಣರಾಯ ಪುರಂದರವಿಠಲನೆ
ಒಪ್ಪಿಸಿ ಕೊಡುವೆನು ಈಗಲೆ ನಿನ್ನ ||

ಕಂದನೇಕೆ ಮಲಗನೆ , ಕೇಳೆಲೆ ಸಖಿ kandaneke malagane sakhi

ಕಂದನೇಕೆ ಮಲಗನೆ , ಕೇಳೆಲೆ ಸಖಿ ||ಪ||
ಕಾಯಜಜನಕಗೇನಾಯಿತು ಇವಗೆ
ಯಾವಳ ದೃಷ್ಟಿ ತಾಗಿತೆ ||ಅ||
ಕಂದನೇಕೆ ಕಣ್ಣ ಮುಚ್ಚನೆ
ಇಂದು ನೀರದಡದಲ್ಲಿರುವನೆ , ಏ-
ನೆಂದರು ಮುಖವೆತ್ತಿ ನೋಡನೆ , ಗೋ-
ವಿಂದ ಬಾ ಎಂದರೆ ಬಾಯ ತೆರೆವನೆ ||
ತನಯನಾಗಿ ಧರೆ ಅಳೆದನೆ , ತನ್ನ
ಜನನಿಯ ಕಂಡರೆ ಸೇರನೆ
ಮುನಿಗಳಂತೆ ಮೌನ ಪಿಡಿದನೆ
ಘನ ಗೋವು ಕಾಯ್ವಾಗ ಗಾಳಿ ಸೋಕಿತೇನೆ ||
ಸುಮ್ಮನೇತಕೆ ವ್ರತ ಕೆಡಿಸಿದನೆ
ಹಮ್ಮಿನಿಂದಲಿ ಖಡ್ಗ ಪಿಡಿದನೆ
ಜನ್ಮಜನ್ಮಗಳಲ್ಲಿ ಬಿಡದಲಿರುವ ನೀ ಬಾರೊ
ಬೊಮ್ಮ ಶ್ರೀ ಪುರಂದರವಿಠಲ ||

ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ sahisalarane gopi ninna

ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ,
ಏನೆಂದು ಪೇಳಮ್ಮ ||ಪ ||
ವಾಸುದೇವನು ಬಂದು ಮೋಸದಿಂದಲಿ ಎನ್ನ
ವಾಸವ ಸೆಳಕೊಂಡು ಓಡಿ ಪೋದನಮ್ಮ ||ಅ ||
ದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ
ಸಾವಿರ ನುಂಗುವನೆ
ಭಾವಜನಯ್ಯ ಇದೇನೆಂದರೆ ನಿಮ್ಮ
ಕಾವ ದೇವರು ನಾ ಕೇಳಿಕೋ ಎಂಬನೆ ||
ಅಗ್ರೋದಕ ತಂದು ಜಗಲಿ ಮೇಲಿಟ್ಟರೆ
ವೆಗ್ಗಳದಲಿ ಕುಡಿವ
ಮಂಗಳಮಹಿಮನ ಮೀಸಲೆಂದರೆ ನಿಮ್ಮ
ಮಂಗಳಮಹಿಮನ ಅಪ್ಪ ನಾನೆಂಬನೆ ||
ಅಟ್ಟಡುಗೆಯನೆಲ್ಲ ಉಚ್ಚಿಷ್ಟ ಮಾಡಿ
ಅಷ್ಟು ತಾ ಬಳಿದುಂಬನೆ
ಕೃಷ್ಣದೇವರ ನೈವೇದ್ಯವೆಂದರೆ ನಿಮ್ಮ
ಇಷ್ಟ ದೇವರು ತೃಪ್ತನಾದನೆಂತೆಂಬನೆ ||
ಋತುವಾದ ಬಾಲೆಯರು ಪತಿಯೊಡೆಗೆ ಪೋಪಾಗ
ಪಥದೊಳಗಡಗಿರುವ
ಮತಿಗೆಟ್ಟ ಹೆಣ್ಣೆ ಸುಂಕವ ಕೊಡು ಎನುತಲಿ
ರತಿಯಿಂದ ಮಾನವ ಸೂರೆಗೊಂಬುವನೆ ||
ಅಚ್ಚ ಪಾಲ್ಮೊಸರು ನವನೀತವು ಮಜ್ಜಿಗೆ
ರಚ್ಚೆ ಮಾಡಿ ಕುಡಿವ
ಸ್ವಚ್ಛ ಶ್ರೀಪುರಂದರವಿಟ್ಠಲರಾಯನ
ಇಚ್ಛೆಯಿಂದಲಿ ನಿನ್ನ ಮನೆಗೆ ಕರೆದು ಕೊಳ್ಳೆ ||

ಗೋಕುಲದೊಳು ನಿನ್ನ ಮಗನ gokuladolu ninna magana

ಗೋಕುಲದೊಳು ನಿನ್ನ ಮಗನ ಹಾವಳಿ ಘನವಾಯಿತಮ್ಮ
ಜೋಕೆ ಮಾಡಿಕೊ ಇಂಥ ದುರುಳತನಕೆ ನಾವು ನಿಲ್ಲೆವಮ್ಮ ||ಪ||
ಬಾಲರ ಒಡಗೂಡಿ ಬಂದೆಮ್ಮ ಮನೆಗಳ ಪೊಗುವನಮ್ಮ , ಒರಳ
ಮೇಲೇರಿ ನೆಲುವಿನ ಮೇಲಿದ್ದ ಬೆಣ್ಣೆಯ ಮೆಲುವನಮ್ಮ
ಜಾಲವ ಮಾಡಿ ಎಲ್ಲರಿಗಿಂದ ತಾ ಮುನ್ನೆ ಜಾರ್ವನಮ್ಮ, ಗೋ-
ಪಾಲ ಬೇಡೆಂದು ಹೇಳಿದರೆ ಇವಗೆ ಬುದ್ಧಿ ಸಾಲದಮ್ಮ ||
ಗಂಡನುಳ್ಳವಳೆಂದು ಬೇಡಿಕೊಂಡರೆ ಮಾತ ಕೇಳನಮ್ಮ, ಈ
ಪುಂಡುಗಾರ ನಮ್ಮ ಪುರವನೆಲ್ಲ ಸೂರೆಗೊಂಡನಮ್ಮ
ಗಂಡರೆಲ್ಲರು ಇವನ ನೋಡಿ ತಮ್ಹೆಂಡಿರ ಬಿಡುವರಮ್ಮ, ಕಂಡ-
ಕಂಡ ವೇಳೆಯಲ್ಲಿ ಚಿಕ್ಕ ಚೆಲುವೆಯರ ಕೂಡ್ವನಮ್ಮ ||
ಮಾರಲೀಸನು ಹಾಲು ಮೊಸರ ಕಂಡರೆ ಬಿಟ್ಟು ಬಾರನಮ್ಮ , ತನ್ನ
ವಾರಿಗೆ ಸತಿಯರ ಒಲಿಸಿಕೊಂಬ ಮಾಯಗಾರನಮ್ಮ
ನಾರಿ ಕೇಳಿವನ ನಡತೆ ಯಾರಿಗೂ ಸರಿ ಬಾರದಮ್ಮ, ನಮ್ಮ
ಮಾರಜನಕ ಪುರಂದರವಿಠಲರಾಯ ಜಾರನಮ್ಮ ||

ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ baaramma ele muddu

ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ ||ಪ||
ನಿಮ್ಮ , ಬಾಲಕೃಷ್ಣಯ್ಯಗೆ ಬುದ್ಧಿ ಹೇಳಮ್ಮ
ಬಾಲಕರನು ಬಡೆವನಮ್ಮ
ಮುದ್ದು, ನೀಲವರ್ಣಗೆ ಬುದ್ಧಿ ಹೇಳಮ್ಮ ||ಅ||
ಸಣ್ಣವನಾಗಿ ತೋರುವನಮ್ಮ, ಪಾಲ್-
ಬೆಣ್ಣೆ ಮೊಸರು ಕದಿವನಮ್ಮ
ಕಣ್ಣಾರೆ ಕಂಡವು ಮಗ ನಿಮ್ಮ , ಮುದ್ದು
ಚಿಣ್ಣಗೆ ಬುದ್ಧಿಯ ಪೇಳಮ್ಮ ||
ಇಟ್ಟ ಕಸ್ತೂರಿ ನಾಮದವನಮ್ಮ, ಅವ
ಹೊಟ್ಟೆಯೊಳಿಡಬಲ್ಲನೀ ಜಗವಮ್ಮ
ದುಷ್ಟ ಹಾವನು ತುಳಿದವನಮ್ಮ, ಗೋಪಿ
ಗಟ್ಟ್ಯಾಗಿ ಬುದ್ಧಿಯ ಪೇಳಮ್ಮ ||
ಅರಳೆಲೆ ಮಾಗಾಯಿಯವನಮ್ಮ, ಹೊನ್ನ
ಬೆರಳ ರನ್ನದ ಮುದ್ರಿಕೆಯವನಮ್ಮ
ಇರುಳುಹಗಲು ನಮ್ಮ ಮರುಳು ಮಾಡಿ ಪೋದ
ತರಳಗೆ ಬುದ್ಧಿಯ ಪೇಳಮ್ಮ ||
ಮಾಯಾರೂಪಿಲಿ ಬರುವನಮ್ಮ, ಕದ್ದು
ಆವಿನ ಮೊಲೆ ಉಂಬುವನಮ್ಮ
ಮಾವನ ಕೊಂದನಿವನಮ್ಮ, ಚೆಲ್ವ
ದೇವರ ದೇವಗೆ ಬುದ್ಧಿ ಪೇಳಮ್ಮ ||
ಕಡಹದ ಮರನೇರಿದವನಮ್ಮ, ಬೆಟ್ಟ
ಕೊಡೆ ಮಾಡಿ ಹಿಡಿದು ಕಾಯ್ದವನಮ್ಮ
ಮಡದೇರಂದದಿ ರಮಿಸುವನಮ್ಮ, ಘುಡು
ಘುಡಿಸಿ ಕಂಬದಲೊಡೆವನಮ್ಮ ||
ಒಮ್ಮೆಗೆ ಈವರಿಗೊಲಿದವನಮ್ಮ, ಚೆಲ್ವ
ಬ್ರಹ್ಮದೇವರ ಪಡೆದವನಮ್ಮ
ನಮ್ಮೆಲ್ಲರ ಪೊರೆವ ಪುರಂದರ-ವಿಠಲಗೆ
ಘಮ್ಮನೆ ಬುದ್ಧಿಯ ಪೇಳಮ್ಮ ||

ನೋಡು ನೋಡು ನೋಡು ಕೃಷ್ಣ nodu nodu krishna

ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ
ಬೇಡಿಕೊಂಡರೆ ಬಾರ ಕೃಷ್ಣ, ಓಡಿ ಹೋಗುತಾನೆ ||ಪ||
ಕಂಡಕಂಡವರ ಮೇಲೆ ಕಣ್ಣ ಹಾಕುತಾನೆ
ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ
ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ
ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ ||೨||
ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ
ಶರಣು ಹೊಕ್ಕರೆಯು ತಾನೆ ಕೊಡಲಿ ಮಸೆಯುತಾನೆ
ಹರಿಯುವ ವಾನರರ ಕೂಡ ಹಾರಾಡುತಾನೆ
ಸಿರಿಕೃಷ್ಣ ಹಾಲು-ತುಪ್ಪ ಸೂರೆಮಾಡುತಾನೆ ||೩||
ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ
ನೀಲಗುದುರೆಯನೇರಿ ಹಾರಿಸಾಡುತಾನೆ
ಬಾಲಕರ ಕೂಡಿಕೊಂದು ಕುಣಿದಾಡುತಾನೆ
ಲೋಲಪುರಂದರವಿಠಲ ತಾನು ಕುಣಿಯುತಾನೆ||೪||

ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ boochi bandide

ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ ||ಪ||
ಚಾಚಿ ಕುಡಿದು ಸುಮ್ಮನೆ ನೀ ಪಾಚಿಕೊಳ್ಳೊ ಕೃಷ್ಣಯ್ಯ ||ಅ||
ನಾಲ್ಕು ಮುಖದ ಬೂಚಿಯೊಂದು
ಗೋಕುಲಕ್ಕೆ ಓಡಿ ಬಂದು
ಲೋಕರನ್ನು ಎಳೆದುಕೊಂಡು
ಕಾಕು ಮಾಡಿ ಒಯ್ಯುವುದಕೆ ||
ಮೂರು ಕಣ್ಣಿನ ಬೂಚಿಯೊಂದು
ಊರೂರ ಸುತ್ತಿ ಬಂದು
ದ್ವಾರದಲ್ಲಿ ನಿಂತಿದೆ ನೋಡೊ
ಪೋರರನ್ನು ಒಯ್ಯುವುದಕೆ ||
ಅಂಗವೆಲ್ಲ ಕಂಗಳುಳ್ಳ
ಶೃಂಗಾರ ಮುಖದ ಬೂಚಿ
ಬಂಗಾರದಂಥ ಮಕ್ಕಳನೆಲ್ಲ
ಕಂಗೆಡಿಸಿ ಒಯ್ಯುವುದಕೆ ||
ಆರು ಮುಖದ ಬೂಚಿಯೊಂದು
ಈರಾರು ಕಂಗಳದಕೆ
ವಾರು ವಾರು ಅಳುವ ಮಕ್ಕಳ
ದೂರ ಸೆಳೆದು ಒಯ್ಯುವುದಕೆ ||
ಮರದ ಮೇಲೆ ಇರುವುದೊಂದು
ಕರಾಳ ಮುಖದ ಬೂಚಿ
ತರಳರನ್ನು ಎಳೆದುಕೊಂಡು
ಪುರಂದರವಿಠಲಗೊಪ್ಪಿಸಲಿಕೆ ||

ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು kaayalaarenu krishna kandavara

ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು
ನಾಯಿಕುನ್ನಿಗಳಂತೆ ಪರರ ಪೀಡಿಸುತ ||ಪ||
ಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು
ಪದುಮನಾಭನ ಸ್ಮರಣೆ ಮೊದಲಿಲ್ಲದೆ
ಮುದದಿ ನಿನ್ನರ್ಚಿಸದೆ ನರರ ಸದನವ ಪೊಕ್ಕು
ಒದಗಿ ಸೇವೆಯ ಮಾಡಿ ಅವರ ಬಾಗಿಲನು ||
ಕಲ್ಲ ಕರಗಿಸಬಹುದು , ಹುರಿಗಡಲೆಯೊಳು ಅದರ
ತೈಲವನು ತೆಗೆದಾದರುಣಲುಬಹುದು
ಬಲ್ಲಿದವರ ಮನಸು ಮೆಚ್ಚಿಸಲರಿಯೆನೈ
ಹಲ್ಲು ಕಿರಿಯುತೆ ಹಂಬಲಿಸಿ ಬಾಯಿಬಿಡುತ ||
ಇಂತು ನಾನಾ ಚಿಂತೆಯಲಿ ನಿನ್ನ ನೆನೆಯದೆ
ಭ್ರಾಂತಿಯೆಂತೆಂಬ ಹೆಬ್ಬಲೆಯೊಳು ಸಿಲುಕಿ
ಅಂತ್ಯವನು ನಾ ಕಾಣೆ ಆದರಿಸುವವರಿಲ್ಲ
ಚಿಂತೆಯ ಬಿಡಿಸಯ್ಯ ಪುರಂದರವಿಠಲ ||

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ kanda bedavo mannu tinna bedavo

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ ||ಪ||
ಕಂದಾ ಬೇಡವೊ ಮಣ್ಣು ತಿನ್ನಲಿ ಬೇಡವೊ
ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ ||ಅ||
ಬೇಗನೆ ಏಳಯ್ಯ , ಮಣ್ಣಾಟ ಬಿಡೊ ನೀನು
ಜೋಗಿ ಬರುತಾನಲ್ಲಿ ಅಂಜಿಸುವುದಕೀಗ ||
ತಾಯಿ ಮಾತನು ಒತ್ತಿ ಕರದಲಿ ಮಣ್ಣೊತ್ತಿ
ಬಾಯಲಿ ಇಟ್ಟನು ಬಾಲಕೃಷ್ಣಯ್ಯನು ||
ಪೆಟ್ಟು ಕೊಡುವೆ ನಿನಗೆ , ಸಿಟ್ಟು ಬಹಳ ಇದೆ
ಮುಟ್ಟಬೇಡೊ ಮಣ್ಣು , ಬೆಣ್ಣೆ ತರುವೆನಯ್ಯ ||
ಅಮ್ಮಯ್ಯ ಕೇಳೆಲೆ , ಬಾಯಲಿ ಮಣ್ಣಿಲ್ಲ
ಗುಮ್ಮನ ಕರೆಬೇಡ , ಸುಮ್ಮನೆ ಇರುತೇನೆ ||
ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು
ಮಗುವಿನ ಬಾಯ ಶೋಧಿಸಿದಳು ಬೇಗನೆ ||
ಬಾಯಲಿ ಕಂಡಳು ಹದಿನಾಲ್ಕು ಲೋಕವ
ಕಾಯ ಮರೆತಳಯ್ಯ ಮರುಳಿಗೆ ವಶವಾಗಿ ||
ಮತ್ತು ಕಂಡಳು ಅವಳು ಗೋಕುಲವೆಲ್ಲವ
ಅತ್ತ ಕಂಡಳು ತನ್ನ ಕೃಷ್ಣನ ಬಗಲಲಿ ||
ಗೋಪ್ಯೇರ ಮನೆಗಳಲಿ ಗೋಪಾಲಕೃಷ್ಣನು
ಗೋಪ್ಯೇರ ಮನೆಗಳಂತೆ ದುಡುಕು ಮಾಡುತಲಿರ್ದ ||
ಬಾಲನು ಬೀದಿಯ ಮಣ್ಣೆತ್ತಿ ಉಣುತಿರ್ದ
ಬಾಲೆ ಗೋಪ್ಯಮ್ಮನು ಮಣ್ಣ ತೆಗೆತಿರ್ದಳು ||
ಕಂದನು ನೀನಲ್ಲ ಕಂದರ್ಪ ಜನಕನೆ
ಕಂದನೆ ನಿನ್ನ ಬಾಯ ಮುಚ್ಚಿಕೊಳ್ಳಯ್ಯ ಈಗ ||
ದೇವದಿದೇವನೆ ದೇವಕಿತನಯನೆ
ಭಾವಜನಯ್ಯನೆ ಬಾರಯ್ಯ ದೊರೆಯೆ ||
ಜಯಗಳಾಗಲಿ ನಮ್ಮ ಕೃಷ್ಣರಾಯಗೆ ಬಹಳ
ಜಯಗಳಾಗಲಿ ಅವನ ಭಕ್ತರ ವೃಂದಕೆ ||
ಲೀಲಾವಿನೋದನು ರುಕ್ಮಿಣೀಲೋಲನು
ಲೀಲೆ ತೋರಿದನಂದು ತಂದೆ ಪುರಂದರವಿಠಲ ||

ಹೇಗೆ ಮಾಡಲಿ ಮಗುವಿಗೆ hege maadali maguvige

ಹೇಗೆ ಮಾಡಲಿ ಮಗುವಿಗೆ ಏನಾಯಿತೆ , ಇದ-
ರಾಗಮವ ಬಲ್ಲವರು ತಿಳಿದು ಪೇಳಿ ||ಪ||
ಕಣ್ಣಮುಚ್ಚಲೊಲ್ಲನು ತೂಗಿ ಮಲಗಿಸಿದರೆ
ಬೆನ್ನ ಮೇಲಿನ ಬುಕಟಿ ಕಲ್ಲ ಅರಿಯಾಗಿದೆ ||
ರೋಗವಿದೇನು ದಾಡೆಯಲಿ ನೀರು ಇಳಿವುತದೆ
ಕೂಗುವ ಧ್ವನಿ ಒಮ್ಮೆ ಕುಂದಿದುದು ||
ಖಂಡ ಸಕ್ಕರೆ ಹಾಲು ಉಣಕೊಟ್ಟರೊಲ್ಲದೆ
ಮಣ್ಣು ಹೇಂಟೆ ಬೇಡಿದ ಕೈಯಾಗೆ ಏನು ಕೊಡಲಿ
ಮಂಡೆ ಜಡೆಕಟ್ಟಿತಿನ್ನೇನು ಮಾಡಲಿ ಇದಕೆ
ಹಿಂಡು ಸತಿಯರ ಸಂಗ ಘನವಾಯಿತು ||
ಮಾಲೆಯನು ತೆಗೆದು ಮೈಮುರಿದುಟ್ಟು ನಗುತಿದೆ
ಕಲಕಿತನದಲ್ಲಿ ಎಮ್ಮ ಕಾಡುತಾನೆ
ನೆಲೆಯ ಬಲ್ಲವರು ಕಾಣೆ ಧರೆಯೊಳಗೆ
ಚೆಲುವ ಶ್ರೀಪುರಂದರವಿಠಲ ಒಬ್ಬನೇ ಬಲ್ಲ ||

ಡಂಗುರವ ತೀಡಿ ಮೈಯೊಳು dangurava teedi maiyolu

ಡಂಗುರವ ತೀಡಿ ಮೈಯೊಳು ಗಂಧ ಪೂಸಿದ , ಸ್ವಾಮಿ, ಗಂಧ ಪೂಸಿದ ||೧||
ಪುಣುಗು ಜವ್ವಾಜಿ ಕಸ್ತೂರಿ ಹಚ್ಚಿದ , ಸ್ವಾಮಿ , ಕಸ್ತೂರಿ ಹಚ್ಚಿದ ||೨||
ನೊಸಲ ಮೇಲೆ ಮೃಗನಾಭಿ ತಿಲಕ ಧರಿಸಿದ , ಸ್ವಾಮಿ , ತಿಲಕ ಧರಿಸಿದ ||೩||
ಓರೆ ತುರುಬು ಓರೆ ಜಡೆಯ ಗೊಂಡೆ ಕಟ್ಟಿದ , ಸ್ವಾಮಿ , ಗೊಂಡೆ ಕಟ್ಟಿದ ||೪||
ಎಂಟು ಎಂಟು ಮುತ್ತ್ತಿನ ವಂಟಿ ಇಟ್ಟನೆ , ಸ್ವಾಮಿ ,ವಂಟಿ ಇಟ್ಟನೆ ||೫||
ಕಂಠದಲ್ಲಿ ಕೌಸ್ತುಭ ಆಭರಣವಿಟ್ಟನೆ , ಸ್ವಾಮಿ , ಆಭರಣವಿಟ್ಟನೆ ||೬||
ಪಾದದಲ್ಲಿ ಹೊನ್ನಂದುಗೆ ನೂಪುರವಿಟ್ಟನೆ , ಸ್ವಾಮಿ ಬಾಪುರಿ ಇಟ್ಟನೆ ||೭||
ಕಿರುಗೆಜ್ಜೆ ಪಾಡಗ ಪೆಂಡೆ ಕಾಲಲಿಟ್ಟನೆ , ಸ್ವಾಮಿ , ಕಾಲಲಿಟ್ಟನೆ ||೮||
ಅಂಗುಲಿಗೆ ತಕ್ಕಂಥ ಉಂಗುರವಿಟ್ಟನೆ , ಸ್ವಾಮಿ , ಹೊನ್ನುಂಗುರವಿಟ್ಟನೆ ||೯||
ತೋಳರಕ್ಷೆ ಮಣಿಹಸ್ತ ಕಡಗ ಇಟ್ಟನೆ , ಸ್ವಾಮಿ , ಕಡಗ ಇಟ್ಟನೆ ||೧೦||
ಹಾರಪದಕ ಹುಲಿಯುಗುರು ವೈಜಯಂತಿಯು , ಕೊರಳೊಳ್, ವೈಜಯಂತಿಯು ||೧೧||
ದುಂಡು ಮುತ್ತು ಕಟ್ಟಿ ಸರಿಗೆ ತಾಳಿ ಧರಿಸಿದ, ಸ್ವಾಮಿ, ತಾಳಿ ಧರಿಸಿದ ||೧೨||
ಬಂದಿ ಕಂಕಣ ಬಾಪುರಿ ವಂಕಿ ಇಟ್ಟನೆ , ಸ್ವಾಮಿ , ವಂಕಿ ಇಟ್ಟನೆ ||೧೩||
ಶೃಂಗಾರದ ಜರತರದ ಅಂಗಿ ತೊಟ್ಟನೆ , ಸ್ವಾಮಿ , ಅಂಗಿ ತೊಟ್ಟನೆ ||೧೪||
ಅಂಗದಲ್ಲಿ ಭಂಗಾರದ ಕವಚವಿಕ್ಕಿದ , ಸ್ವಾಮಿ , ಕವಚವಿಕ್ಕಿದ ||೧೫||
ದಿಟ್ಟ ವೆಂಕಟೇಶ ಬೇಟೆಯಾಡ ಹೊರಟನೆ , ಸ್ವಾಮಿ ಬೇಟೆ-ಯಾಡಹೊರಟನೆ ||೧೬||
ಪಟ್ಟವಾಳಿ ಶಾಮಿಯ ಕಸೆಯ ಬಿಗಿದನೆ , ಸ್ವಾಮಿ, ಕಸೆಯ ಬಿಗಿದನೆ ||೧೭||
ಹುಡಿಯ ಕಟ್ಟು ನಡುವಿಗೆ ಕಟ್ಠಾಣಿ ಹೊಗಿಸಿದ , ಸ್ವಾಮಿ, ಕಟ್ಠಾಣಿ ಹೊಗಿಸಿದ ||೧೮||
ಓರೆ ತುರುಬಿನ ನಾಯಕ ಬಾರದ್ಹೋದನೆ , ಸ್ವಾಮಿ ,ಬಾರದ್ಹೋದನೆ ||೧೯||
ಚೆಲುವ ಚೆನ್ನಿಗರಾಯನಾಗಿ ವನಕೆ ಹೊರಟನೆ , ಸ್ವಾಮಿ , ವನಕೆ ಹೊರಟನೆ ||೨೦||
ಜಗವೆಲ್ಲ ನೋಡುತಿರಲು ತೇಜಿಯೇರಿದ , ಸ್ವಾಮಿ ,ತೇಜಿಯೇರಿದ ||೨೧||
ತ್ರಿಜಗವನ್ನೆ ಪಾಲಿಸೆಂದು ತೇಜಿ ಹಿಡಿದನೆ , ಸ್ವಾಮಿ, ವಾಜಿ ಹಿಡಿದನೆ ||೨೨||
ಗಟ್ಟ ಬೆಟ್ಟವನ್ನೆ ಸುತ್ತಿ ಕಷ್ಟಬಟ್ಟನೆ ,ಸ್ವಾಮಿ , ಕಷ್ಟಬಟ್ಟನೆ || ೨೩||
ವೃಕ್ಷಮೂಲದಲ್ಲಿ ಮಿಂಚುತಿಹಳ ಕಂಡನೆ , ಸ್ವಾಮಿ , ಮಿಂಚುತಿಹಳ ಕಂಡನೆ ||೨೪||
ಸೋಲುಮುಡಿಯ ಸೋಗೆಗಣ್ಣ ಓರೆನೋಟವ , ಅವಳ , ಓರೆನೋಟವ ||೨೫||
ನೀಲವರ್ಣದ ಕೋಮಲಾಂಗಿ ಮೇಲೆ ಛಾಯವ , ಅವಳ , ಮೇಲೆ ಛಾಯವ ||೨೬||
ಎರಳೆಗಂಗಳಂತೆ ಕಣ್ಣ ತಿರುಗುತಿಹಳು , ಅವಳು , ಹೊಳೆಯುತಿಹಳು ||೨೭||
ಮೃಗವ ಕಂಡು ಶಿರವನೆತ್ತಿ ನೋಡುತಿಹಳು , ಅವಳು , ನೋಡುತಿಹಳು ||೨೮||
ಕುಂಜರಗಮನೆಯಂತೆ ತಿರುಗುತಿಹಳು , ಅವಳು , ಒಲೆವುತಿಹಳು ||೨೯||
ವನವ ಬಿಟ್ಟು ವನಕೆ ವನಕೆ ಹಾರುತಿಹಳು , ಅವಳು, ಹಾರುತಿಹಳು ||೩೦||
ಅವಳ ಕಂಡು ವೆಂಕಟೇಶ ಭ್ರಾಂತಿಬಟ್ಟನೆ , ಸ್ವಾಮಿ ಭ್ರಾಂತಿಗೊಂಡನೆ ||೩೧||
ಅಡ್ಡದಾರಿಯಲ್ಲಿ ಮೋರೆ ನೋಡುತಿಹನೆ , ಸ್ವಾಮಿ , ನೋಡುತಿಹನೆ ||೩೨||
ದಾರಿಗಡ್ಡ ನಿಂದಿರಲಾರು ಹೀನರಾವುತ , ಎಲೊ ,ಹೀನರಾವುತ ||೩೩||
ಪರನಾರಿಯರ ಕಂಡು ಮೋರೆ ಹೇಗೆ ಮಾಡುತಿ , ಎಲೊ ,ಹೇಗೆ ಮಾಡುತಿ ||೩೪||
ಹೀನನಲ್ಲವೆ ನಿನ್ನ ಹುಡುಕಬಂದೆನೆ, ನಿನ್ನ , ಹುಡುಕಬಂದೆನೆ ||೩೫||
ನಿನ್ನ ಗುರುಕುಚಗಳ ಕಂಡು ಭ್ರಾಂತಿಗೊಂಡೆನೆ, ನಾನು , ಭ್ರಾಂತಿಗೊಂಡೆನೆ ||೩೬||
ಲಂಡ ಪುಂಡರ ಮಾತ ಆಡದಿರೊ , ಎನ್ನ ಕೂ-ಡಾಡದಿರೊ ||೩೭||
ಕತ್ತಿ ಕಠಾರಿ ನಿನ್ನ ಸೇನೆಗಂಜೆನೋ , ನಾನು , ಸೇನೆಗಂಜೆನೋ ||೩೮||
ನಿನ್ನ ಬಿರುದ ಬಿಟ್ಟುಕೊಟ್ಟು ಬಾರೆ ಚುಂಚುಕಿ , ಬೇಗ , ಬಾರೆ ಚುಂಚುಕಿ ||೩೯||
ಬಾರೆ ಹೋಗೆ ಎನ್ನಲಿಕ್ಕೆ ಭಾಮೆಯೆ ನಾನು , ಎಲೊ , ಭಾಮೆಯೆ ನಾನು ||೪೦||
ನಿನ್ನ ಬಿಂಕ ಬಿಟ್ಟುಕೊಟ್ಟು ತಿರುಗೊ ರಾವುತ , ಅತ್ತ , ಸಾರೊ ರಾವುತ ||೪೧||
ನೀಲವೇಣಿ ಎನ್ನ ಕೂಡ ನಿಲ್ಲಲಾರೆಯೆ , ಎನ್ನೊಳ್ , ನಿಲ್ಲಲಾರೆಯೆ ||೪೨||
ನಿನ್ನ ಮುಖಪದ್ಮಗಳ ಕಂಡು ಭ್ರಾಂತಿಗೊಂಡೆನೆ , ನೀರೆ ,ಭ್ರಾಂತಿಗೊಂಡೆನೆ ||೪೩||
ಹೀನಮಾತಾಡದಿರೊ ಹೀನ ರಾವುತ , ಎಲೊ , ಹೀನ ರಾವುತ ||೪೪||
ವಾರಿಜಾಕ್ಷಿ ಎನ್ನ ಕೂಡೆ ವಾದವೇತಕೆ , ಎಲೆ , ವಾದವೇತಕೆ ||೪೫||
ಪ್ರೇಮದಿಂದ ಬಂದು ತೊಡೆಯ ಮೇಲೆ ಏರೆ ಚುಂಚುಕಿ , ಮೇಲೆ , ಏರೆ ಚುಂಚುಕಿ ||೪೬||
ತೊಡೆಯ ಮೇಲೆ ಏರಲಿಕ್ಕೆ ಮಡದಿಯೆ ನಾನು , ಎಲೊ , ಮಡದಿಯೆ ನಾನು||೪೭||
ಹೀನಮಾತಾಡದಿರೊ ಹುಡುಗ ರಾವುತ , ಎಲೊ , ತುಡುಗ ರಾವುತ ||೪೮||
ರಾಜ್ಯಭೂಮಿಗಳನು ಅಷ್ಟು ಕೊಡುವೆನು ನಾನು , ನಿನಗೆ , ಬಿಟ್ಟುಕೊಡುವೆನು ||೪೯||
ನಿನ್ನೊಡೆಯನೆಂದು ಪಾಲಿಸೆ ಚುಂಚುಕಿ , ಬೇಡಿ-ಕೊಂಬೆ ನಾಯಕಿ ||೫೦||
ರಾಜ್ಯಭೂಮಿಯಾಳಲಿಕ್ಕೆ ರಾಯನೇ ನಾನು , ಎಲೊ ,ರಾಯನೇ ನಾನು ||೫೧||
ದೊಡ್ಡ ಅಡವಿಬೆಟ್ಟದೊಳಗೆ ಆಹಾರವೇನೊ , ಎಲೊ , ಆಹಾರವೇನೊ ||೫೨||
ಆಲದಂತಿಹ ಹಣ್ಣು ಮುಟ್ಟಬಾರದ ಹಣ್ಣು , ಮುಟ್ಟ-ಬಾರದ ಹಣ್ಣು ||೫೩||
ಮುದ್ದು ಸುರಿವ ಹೂ , ಬಹಳ , ಮುದ್ದು ಸುರಿವ ಹೂ ||೫೪||
ಕರೆಯಬಾರದಾ ಹಣ್ಣು ಕೈಗೆ ನೀಕಾದ, ಹಣ್ಣು , ಕೈಗೆ ನೀಕಾದ ||೫೫||
ಎಷ್ಟು ಪೇಳ್ದರು ಕೇಳಲಿಲ್ಲ ಏನ ಮಾಡಲಿ , ಇ-ನ್ನೇನು ಮಾಡಲಿ ||೫೬||||
ಅಡವಿಯೊಳಗೆ ದಾರಿಲ್ಲೆಂದು ಜುಲ್ಮೆ ಮಾಡಿದ , ಸ್ವಾಮಿ , ಜುಲ್ಮೆ ಮಾಡಿದ ||೫೭||
ಸ್ವಾಮಿಪುಷ್ಕರಣಿಯ ತೀರದಲ್ಲಿ ವಾಸ ಮಾಡಿದ , ಸ್ವಾಮಿ , ವಾಸ ಮಾಡಿದ || ೫೮ ||
ವರಹವತಾರ ತಾನೆಂದು ಅರಸನಾದನೆ , ಸ್ವಾಮಿ , ಅರಸನಾದನೆ ||೫೯||
ಕೊಲ್ಲಾಪುರದಲ್ಲಿ ತನ್ನ ನಾರಿಯಿಟ್ಟನೆ , ಸ್ವಾಮಿ , ನಾರಿಯಿಟ್ಟನೆ ||೬೦||
ಬೆಟ್ಟ ನಡೆವರಿಲ್ಲೆಂದು ಕೃಷ್ಣ ನಡೆದನೆ , ಸ್ವಾಮಿ , ಕೃಷ್ಣ ನಡೆದನೆ ||೬೧||
ಸ್ವಾಮಿ ವೆಂಕಟೇಶ ತಾನು ಬೇಟೆಯಾಡಿದ , ಸ್ವಾಮಿ ,ಬೇಟೆಯಾಡಿದ ||೬೨||
ಅಪ್ಪ ವೆಂಕಟೇಶ ತಾನು ಒಪ್ಪದಿಂದಲೆ , ಗಿರಿಗೆ ಬಂದನೆ ||೬೩||
ಶ್ರೀಶ ಪುರಂದರವಿಠಲನೆಂದು ಹಾಗೆ ನಿಂದನೆ , ಸ್ವಾಮಿ , ಹಾಗೆ ನಿಂದನೆ ||೬೪||