Labels

Wednesday 15 January 2020

ದೇಹವೇಕೆ ನಮಗೆ ದೇಹ - ದೇಹ dehaveke namage deha deha


ದೇಹವೇಕೆ ನಮಗೆ ದೇಹ - ದೇಹ ಸಂಬಂಧಗಳೇಕೆ |
ಆಹುದೇನೊ ಹೋಹುದೆನೊ ಇದರಿಂದ ಹರಿಯೆ ಪ.
ಮೆಚ್ಚಿ ಕಟ್ಟಿದ ಚೆಲುವ ಮಾಳಿಗೆ ಮನೆ ಏಕೆ | ಮುಚ್ಚಿ ಹೂಳಿದ ಹೊನ್ನು ಹಣವೇತಕೆ |
ಪಚ್ಚೆ ಮಾಣಿಕ ವಜ್ರ ವೈಡೂರ್ಯವೇತಕೆ | ಅಚ್ಯುತನ ದಾಸರಲಿ ಭಕ್ತಿ ಇಲ್ಲದ ಬಳಿಕ 1
ಹೆಂಡಿರು ಮಕ್ಕಳು ಏಕೆ - ಹಣ ಹೊನ್ನು ಎನಲೇಕೆ | ಕಂಡ ವೇದ ಶಾಸ್ತ್ರಗಳನೋದಲೇಕೆ - ಭೂ ||
ಮಂಡಲಾಧಿಪತ್ಯವೇಕೆ - ಮೇಲೆ ಸೌಂದರ್ಯವೇಕೆ | ಪುಂಡರೀಕಾಕ್ಷನ ದಾಸನಲಿ ಭಕ್ತಿಯಿಲ್ಲದ ಬಳಿಕ 2
ಮಂದಾಕಿನಿ ಮೊದಲಾದ ತೀರ್ಥಯಾತ್ರೆಗಳೇಕೆ | ಚೆಂದುಳ್ಳ ವಿಹಿತ ಕರ್ಮಗಳೇತಕೆ |
ಇಂದಿರೇಶ ನಮ್ಮ ಪುರಂದರವಿಠಲನ | ಪೊಂದಿ ಭಜಿಸಿದವನ ಇಂದ್ರಿಯಂಗಳೇಕೆ 3


No comments:

Post a Comment