Labels

Wednesday, 8 January 2020

ಬ್ರಹ್ಮಾಂಡದೊಳಗಿದ್ದ brahmandadolagidda


ಬ್ರಹ್ಮಾಂಡದೊಳಗಿದ್ದ ಚರ್ಯೆಯ ತಂದು | ಪಿಂಡಾಂಡದೊಳಗೆಲ್ಲ ತೋರಬೇಕೆಂದು | ಪುಂಡಲೀಕನ ಭಕ್ತಿಗೆ ತಾನೆ ಬಂದು |ಪಾಂಡುರಂಗ ನಾಮ ರೂಪದಿ ನಿಂದೂ ಜೋ ಜೋ || ಜೋ ಜೋ ಜೋ ಶ್ರೀ ಗಂಗಾಧರನೆ ಜೋ ಜೋ ಜೋ ಶ್ರೀ ವತ್ಸಧರನೇ ಜೋ ಜೋ ಜೋ ಶ್ರೀ ಶಶಿಧರನೇ |ಜೋ ಜೋ ಜೋ ಶ್ರೀ ದತ್ತಾತ್ರೇಯನೇ ಜೋ ಜೋ ಜೋ 1
ತನ್ನ ವಾಯು ಸಾಧು ಸಂತರೊಳಾಡಿ | ತನ್ನ ಸ್ಫುರಣಿ ಮಾಯಗಳಿತವೆ ಕೂಡಿ | ತನ್ನ ಸ್ವಸುಖವೆ ಬೋಧರಿಯೆತ್ತಿ ನೋಡಿ |ತನ್ನಿಂದುತ್ಪತ್ತಿ ಸ್ಥಿತಿ ಲಯವು ತೋರಡಗಿ | ಜೋ ಜೋ 2
ನಿತ್ಯ ಶುದ್ಧ ಬುದ್ಧ ಸರ್ವಾಂತರಾತ್ಮಾ | ಸತ್ಯ ಶಾಶ್ವತ ಸಾಧು ದಯ ಸಾರ್ವಭೌಮಾ | ಪ್ರತ್ಯಾತ್ಮ ಪರಮಾತ್ಮ ಐಕ್ಯಮೇಕಾತ್ಮಾ |ನಿತ್ಯ ಅಪರೋಕ್ಷ ನಿರ್ಗುಣ ನಿಜ ಧಾಮಾ ಜೋ ಜೋ 3
ಕಾಶೀ ನಿವಾಸಿ ವಿಶ್ವೇಶ ವೃಷಾತ್ಮಾ | ನಾಸಿಕ ತ್ರ್ಯಂಬಕ ನೀನೆ ಮಹಾತ್ಮಾ | ವಾಸುದೇವನ ಪ್ರಾಣ ಪ್ರಿಯ ಪರಮಾತ್ಮಾ | ಕ್ಲೇಶ ಭಕ್ತರಿಗಾಗಿ ವಾಸಿಸುವಾತ್ಮಾ ಜೋ ಜೋ4


No comments:

Post a Comment