Labels

Showing posts with label madhveshvittala. Show all posts
Showing posts with label madhveshvittala. Show all posts

Tuesday, 10 December 2019

ಕೂಸಿನ ಕಂಡೀರಾ ಸುಪ್ರಹ್ಲಾದನ ಕಂಡೀರಾ kusina kandeera supralhadana kandira

ಕೂಸಿನ ಕಂಡೀರಾ – ಸುಪ್ರಹ್ಲಾದನ ಕಂಡೀರಾ            || ಪ ||
ರಾಕ್ಷಸ ಕುಲದಲಿ ಜನಿಸಿತು ಕೂಸು
ರಾಧಾಕೃಷ್ಣನ ಭಜಿಸಿತು ಕೂಸು
ರಾಗದ್ವೇಷಗಳ ಬಿಟ್ಟಿತು ಕೂಸು
ರಾಮನ ಪಾದವ ನೆನೆಯುವ ಕೂಸು            || ೧ ||
ಘನಹರಿ ಕಂಭದಿ ತೋರಿತು ಕೂಸು
ಗಳಿಸಿತು ಕೃಷ್ಣನ ಪ್ರೇಮವ ಕೂಸು
ಘನಮಂತ್ರಾಲಯದಿ ವಾಸಿಪ ಕೂಸು
ವೇಣುಗೋಪಾಲನ ಪ್ರೀತಿಯ ಕೂಸು                || ೨ ||
ಪ್ರಸಿಧ್ಧ ವ್ಯಾಸರಾಯರೆಂಬೊ ಕೂಸು
ಪ್ರವೀಣ ವಿದ್ಯೆಯೊಳೆನಿಸಿದ ಕೂಸು
ಪ್ರಹ್ಲಾದನೆಂಬೊ ಆಹ್ಲಾದ ಕೂಸು
ಪ್ರಸನ್ನ ಮಧ್ವೇಶವಿಠ್ಠಲನ ಕೂಸು            || ೩ ||

ರಾಘವೇಂದ್ರ ತೀರ್ಥನೀತ ರಾಜಿಸುವಾತ raghavendra teerthneeta raajisuvata

ರಾಘವೇಂದ್ರ ತೀರ್ಥನೀತ ರಾಜಿಸುವಾತ                  || ಪ ||
ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ            || ಅ ||
ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ – ಬಹಳ
ಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾ
ಪುಣ್ಯವಂತರಿಂದ ಬಹು ಪೂಜೆಗೊಂಬಾತ – ನಮಗೆ
ಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ                 || ೧ ||
ಕಾಮಕ್ರೋಧಾದಿಗಳನೆ ಕಾಲಲೊದ್ದಾತ – ಈತ
ವ್ಯೋಮಕೇಶನಂತೆ ನಾಲ್ಕು ವೇದ ಪ್ರಖ್ಯಾತಾ
ಭೂಮಿಯೊಳು ದುರ್ವಾದಿಗಳನೆ ಭೂರಿ ಗೆದ್ದಾತ – ಪ್ರೌಢ
ಶ್ರೀಮಧ್ವಯೋಗೀಂದ್ರತೀರ್ಥ ಶಿಷ್ಯನೆಂಬಾತಾ            || ೨ ||
ಸಿಧ್ಧವಿದ್ಯೆಗಳಲಿ ಬಹು ಪ್ರಸಿಧ್ಧನಾದಾತಾ – ನಮ್ಮ
ಮಧ್ವಶಾಸ್ತ್ರಗಳನೆ ಮಾಡಿಕೊಟ್ಟಾತ
ಮಧ್ವೇಶವಿಠ್ಠಲನ ಧ್ಯಾನದಲಿದ್ದಾತ – ತುಂಗ
ಭದ್ರತೀರದಲ್ಲಿ ತಾನು ವಾಸವಾದಾತ                || ೩ ||