Labels

Showing posts with label Asuri. Show all posts
Showing posts with label Asuri. Show all posts

Monday, 4 November 2019

ರಾಘವೇಂದ್ರ ನಿನ್ನ ಸೇವೆಯೀವುದಯ್ಯ raghavendra ninna seveyivudayya

ರಾಘವೇಂದ್ರ ನಿನ್ನ ಸೇವೆಯೀವುದಯ್ಯ ಪ
ಸಾಗರಗಂಭೀರ ಧರ್ಮಸೂತ್ರಧಾರ
ತ್ಯಾಗಶೀಲ ಧೀರ ಸತ್ವೋಪಕಾರ ಅ.ಪ
ಮೂಲರಾಮ ಪೂಜಾ ಲೋಲ ರಾಘವೇಂದ್ರ
ಬಾಲಗೋಪಬಾಲ ಧ್ಯಾನತತ್ಪರಾ
ಕಾಲಮೇಘಶ್ಯಾಮ ವರದಾತಧೀರ
ಪಾಲಿಪುದಯ್ಯ ಮಾಂಗಿರೀಶ ಪ್ರಿಯ 1

ರಾಘವೇಂದ್ರ ಜಯತು ಗುರುವರಗೌತಮ raghavendra jayatu guru raya

ರಾಘವೇಂದ್ರ ಜಯತು ಗುರುವರಗೌತಮ ಗೋತ್ರಜ ಪ
ರಾಗರಹಿತಾಂತರಂಗ ಭಕ್ತಾವಳಿ ಸಂಗ ಶೃಂಗ ಅ.ಪ
ಗಂಭೀರ ಗುಣಾಭರಣ ಕರುಣಾರುಣ ತೇಜಸಾ
ಅಂಬಾಸುತ ಪರಿಪೂಜಿತ ಪಾದವ ತೋರೈ ವಂದಿಪೆ 1
ನಿರುತನಿನ್ನ ಪಾದಪದ್ಮವ ನಮಿಸುವಂಥ ಮನವ ಕೊಡೈ
ಪರಮವೈದಿಕನ ಅರಿಯುವ ಶಕ್ತಿಯ ನೀಡು ರಾಘವೇಂದ್ರ2
ತರಳ ಸರಳ ಮೃದುವಚನಪೂರಣ ಸಾಧು ಪೂರ್ಣಸದನ
ಶರಣಸುಜನ ವಾಂಚಿತಾರ್ಥದಾತ ಮಾಂಗಿರೀಶ ಪ್ರೀತ3