Labels

Showing posts with label Rama. Show all posts
Showing posts with label Rama. Show all posts

Tuesday, 14 January 2020

ಕರ್ಮಬಂಧನ ಛೇದನ, ರಘು ರಾಮನ ನಾಮ ನೀ ನೆನೆ ಮನವೇ karmabahandhana raghu ramana

ಕರ್ಮಬಂಧನ   ಛೇದನ, ರಘು
ರಾಮನ ನಾಮ ನೀ ನೆನೆ ಮನವೇ || ಪ||

ಮಂತ್ರವನರಿಯೆನು ತಂತ್ರವನರಿಯೆನು ಜಾಗ-
ದಂಟ್ರವನರಿಯೆಂದೆನಬೇಡ
ತಂತ್ರಸ್ವತಂತ್ರನ ಪರಮಪವಿತ್ರನ
ಅಂತರಂಗದಿ ನೀ ನೆನೆ ಮನವೇ ||

ಜಪವನು ಅರಿಯೆನು ತಪವ ನಾನರಿಯೆನು
ಉಪದೇಶನರಿಯನೆಂದೆಂಬೇಡ
ಅಪಾರಮಹಿಮೆಯ ಉಡುಪಿಯ ಕೃಷ್ಣನ
ಉಪಾಯದಿಂದಲಿ ನೆನೆ ಮನವೇ ||

ಅರ್ಚಿಸಲರಿಯನು  ಪೂಜಿಸಲರಿಯೆನು
ಮೆಚ್ಚಿಸಲರಿಯೆಂದೆನಬೇಡ
ಅಚ್ಯುತನಾನಂತ  ಮುಕುಂದನ ನಾಮವ
ಸ್ವಚ್ಚದಿಂದಲಿ ನೆನೆ ಮನವೇ ||

ಧ್ಯಾನವನರಿಯೆನು ಮೌನವನರಿಯೆನು
ಜನವನರಿಯೆನೆಂದೆನಬೇಡ
ಜಾನಕಿವಲ್ಲಭನ  ರಾಗುಣಾಥನ ಸದಾ
ಧ್ಯಾನದಲಿತ್ತು ನೀ ನೆನೆ ಮನವೇ ||

ವದನದಿ ನಾರಾಯಣನೆಂಬೋ ನಾಮವು
ಮುದದಿ ಮಾತನು ಬಿಡಬೇಡ
ಪದುಮನಾಬ ಶ್ರೀ ಪುರಂದರವಿಠಲನ
ಸದಾಕಲಾದಿ ನೀ ನೆನೆ ಮನವೇ ||

Wednesday, 1 January 2020

ರಾಮ ರಕ್ಷಿಸೋ ಸೀತಾರಾಮ rama rakshisho seetarama


ರಾಮ ರಕ್ಷಿಸೋ ಸೀತಾರಾಮ ಪಾಲಿಸೋ ಪ
ಕಾಮನ ಪಿತನಿಸ್ಸೀಮ ಸಾಹಸಗುಣಧಾಮ ಮ-
ಹಾತ್ಮ ಸುಧಾಮ ರಮಣನೆ ಅ.ಪ
ದಶರಥ ಪ್ರಥಮ ಪುತ್ರ ತ್ರ್ರಿದಶ ಸ್ತುತಿಗೆ ಪಾತ್ರ
ಕುಶÀಲವರು ನಿನ್ನ ಹಸು ಮಕ್ಕಳು ಪೂರ್ಣ
ಶಶಿಮುಖಿ ಸೀತೆ ನಿನ್ನ ವಶವಾದವಳು 1
ಕೋಸಲಾಧಿಪನೊ ಹೇ ದೇವ ನೀ
ಕೌಸಲ್ಯ ಜಠರಜನೊ ಶೇಷನ ಪೂರ್ವಜ
ನಾಶರಹಿತ ಅಶೇಷ ಮುನಿಗಣಕೆ ತೋಷಪೂರಿತನಾದಿ 2
ದುಷ್ಟರ ಸಂಹಾರ ಮಾಡಿದಿ ನೀ
ಶಿಷ್ಟರ ಉದ್ಧಾರ ಸೃಷ್ಟಿಯೊಳಗೆ ಲೇಶ
ಕಷ್ಟವಿಲ್ಲದೆ ನೀನು ಸುಷ್ಟು ಮಾಡಿ ಅಖಿಳೇಷ್ಟ ಪ್ರದನಾದಿ 3
ದೀನರಕ್ಷಕ ನೀನು ಮಹಾತ್ರಾಣಿ ಇಂದ್ರನ
ಸೂನು ವಾನರಾಧಿಪಹನು
ಮನಮಾತನು ಮಾನಿಸಿದಿಯೊ ನೀನು 4
ದೇವಶ್ರೇಷ್ಠ ನೀನು ಉದ್ಧರಿಸಿದಿ
ಮಾವ ಜನಕನನ್ನು ಕಾವಲಾಗಿರು ಯನಗಾವಾಗ್ಯನು
ಶ್ರೀವತ್ಸಾಂಕಿತ ವೆಂಕಟಪತಿಯೆ 5


ನೋಡಿರಯ್ಯ ಶ್ರೀರಾಮನ ಮೂರ್ತಿಯ nodirayya shriramana


ನೋಡಿರಯ್ಯ ಶ್ರೀರಾಮನ ಮೂರ್ತಿಯ
ಪಾಡಿರೊ ಮಹಿಮೆಯನು ಪ
ಅಗಣಿತ ಮಹಿಮನು ತ್ರಿಗುಣ ವರ್ಜಿತನು
ಸುಗುಣೇಂದ್ರತೀರ್ಥರಿಂದ ಬಗೆಬಗೆ ಪೂಜೆಗೊಂಬ 1
ಸಂಜೀವವನು ತಂದ ಅಂಜನಸುತನಯ್ಯ
ನಂಜನಗೂಡೊಳಿಪ್ಪ ಕಂಜಾಕ್ಷಕರುಣಿಯ 2
ವಾರಿಜ ಭವಪಿತ ಮಾರುತ ಗತಿಪ್ರಿಯ
ವಾರಿಧಿಬಂಧಕ ಶ್ರೀರಮಾಧವನನ್ನು ಮಂಗಳ ಪುರದೊಳು
ಮಂಗಳವಾರದಿ ಮಂಗಳದಿ ಮೆರೆದನಂಗನಪಿತನನ್ನು 3
ವರ ರಾಘವೇಂದ್ರರ ಕರುಣಾಗ್ರೇಸರ ಶ್ರೀವತ್ಸಾಂಕಿತನಾದ
ಅರವಿದೂರನನ್ನು 4


ಚರಣಕಮಲವನು ತೋರೋ charana kamalavanu toro


ಚರಣಕಮಲವನು ತೋರೋ ಪ
ಮನವೆಂಬ ಮನೆಯನು ನಿರ್ಮಲಗೊಳಿಸು
ತನುಮನಧನದಾಶೆಯ ನೀ ಬಿಡಿಸೊ 1
ಆರು ಮಂದಿಯು ಯನ್ನ ಗಾರುಮಾಡುವರು
ಪಾರಗಾಣಿಸು ಬೇಗ ಶ್ರೀ ರಾಮದೇವ 2
ದಶರxಸುತ ನೀನು ಶಶಿಮುಖಕಾಂತನು
ಶಶಿಧರನುತನೀ ಅಪಮಸಾಹಸನೊ 3
ಮೂರಾವತ್ಸೇಗಳಲ್ಯು ದೂರಾಪೋಗದೆ ನೀ
ಕಾರುಣ್ಯದಿಂದ ಯೆನ್ನ ಶೇರಿರು ಹರುಷದಿ 4
ಸಿರಿವತ್ಸಾಂಕಿತ ನೀನು ತರಣಿಸುತನ ಸರವ
ಕರಕರೆ ಬಿಡಿಸಲು ಸುರರ ವೃಂದವ ಬಿಟ್ಟು 5


Friday, 27 December 2019

ತೂಗೀ ಲಾಲನೆ ಲಾಲಿಸಿದೆಯಾ tuhi laalane laalisidiya

ತೂಗೀ ಲಾಲನೆ ಲಾಲಿಸಿದೆಯಾ ರಾಮ | ತೊಟ್ಟಿಲೊಳ್ಮಲಗಿಹನಾಗಾರಿ ವಾಹನ ನರಜನ ಪ್ರೇಮಾ | ಹರಿ ಸಾರ್ವಭೌಮ ಪ
ಯೋಗಿ ಮಧ್ವಮತದಾಗಮ ವಂದಿತಭಾಗವತಾಗ್ರಣಿ ಶ್ರೀಗುರುಗಳ ಕೈ ಅ.ಪ.
ಪ್ರಳಯ ಕಾಲದಲಿ ಹರಿ ನೀನಂದು | ಶ್ರೀ ಭೂ ದುರ್ಗಾತ್ಮಕಜಲದಾಲದೆಲೆಯಲಿ ತೊಟ್ಟಿಲಲಂದೂ | ಕತ್ತಲೆಯೊಳಗಂದೂಎಲ್ಲಾ ಜೀವರ ಪೊಕ್ಕಳ ಎಡಬಲ ತಂದೂ | ದೀನ ಜನರ ಬಂಧೂ ||ಥಳಥಳ ಪೊಳೆಯುವ ಮಣಿಯ ತೊಟ್ಟಿಲೊಳುಲಲನೆ ಸಹಿತ ಎಡಬಲ ವೈಭೋಗದಿ 1
ಗೋಕುಲದೊಳೊ ಗೋಪಿಯರಿಂದ ತೂಗಿಸಿಕೊಂಡುಸಾಕಾಗಲಿಲ್ಲೇ ಎಲೊ ಮುಕುಂದ | ಕೌಸಲ್ಯಾದೇವಿಯುಬೇಕೆಂದು ಮುದ್ದಿಸಿ ಮೋಹದಲಿಂದಾ | ಆದ ಕಾರಣದಿಂದಾ ||ಏಕ ಮನಸಿನಲಿ ಈ ಪರಮುನಿಪಗೆಬೇಕೆಂದೊಲಿದು ಪರಾಕನು ಕೊಳ್ಳುತ 2
ಶ್ರುತಿ ಗೀತೆಯಿಂದ ಸುಂದರವಾದ | ಅಂಭ್ರಣಿ ಸೂಕ್ತದಲಿಸ್ತುತಿಸೀದುದೆಲ್ಲವು ಅತ್ಯಗಾಧಾ | ಅದಕಿಂತ ಇವರಲಿಅತಿಶಯವೇನೊ ಪೇಳಲಿ ಮೋದ | ಸತ್ಯಬೋಧಾರ್ಯರ ||ಮತಿಗೆ ನೀ ಮರುಳಾದೆ ಮಧುಸೂದನನೆ ಪತಿತ ಪಾವನನೆ ವ್ಯಾಸ ವಿಠಲ ನೀನೇ 3

Wednesday, 25 December 2019

ಆನಂದ ಆನಂದ ಪ್ರದವೋದಾಶರಧಿ aanand aanand pradavosharadhi

ಆನಂದ ಆನಂದ ಪ್ರದವೋದಾಶರಧಿ ಧ್ಯಾನಾ ಪ
ಭಕ್ತಿಯುಕ್ತನಾಗಿ ಮನದಿ ನಿತ್ಯಪಾಡೋ ರಾಮಚರಣ ಅ.ಪ
ಕಾಲನಪುರ ಭಯವಿಲ್ಲವೋ | ವಾಲ್ಮೀಕಿಯು ಸಾಕ್ಷಿ ಇದಕೆ
ಬಾಲಧ್ರುವನು ವನದಿ ಭಜಿಸಿ
ಮೇಲುನಭದಿ ಮೆರೆವಾ ನೋಡೋ 1
ಶ್ರೀರಾಮನಾಮದಿಂದ ಮಾರುತಿಯು ಬ್ರಹ್ಮನೆ ನಿಪ
ಮಾರಹರನು ತನ್ನ ಸತಿಯಾ ಸೇರಿ ಸತತ ಭಜಿಪ ಕೇಳೋ 2
ಹಿಂದೆ ಮಾಡಿದ ನಿನ್ನ ದುರಿತವೃಂದವೆಲ್ಲ | ಛೇದಿಸುವದು
ಒಂದೆ ಭಾವದಿಂದ ಶಾಮಸುಂದರನ ನಾಮ ಪಾಡೋ 3

Saturday, 21 December 2019

ನಮೋ ನಮೋ ರಾಮ ಕಳುಹಿಸಿದನಮ್ಮಾ namo namo rama

ನಮೋ ನಮೋ ರಾಮ ಕಳುಹಿಸಿದನಮ್ಮಾ |ಮಮ ಸ್ವಾಮಿ ಬದುಕಿಹನೆ ಪೇಳೋ ತಮ್ಮ ಪ
ವಾಸುದೇವನು ಜಗದ ಸೃಜಿಸುವನು ಕೆಡಿಸುವನು |ನಾಶವೆಲ್ಲಿಹದು ರಘುವರ್ಯಗಮ್ಮಾ ||ವಾಸವಾಗಿರೆ ವನದಿ ಮೃಗ ತರಲು ಪೋಗಿ ಜಗ- |ದೀಶ ನುಡಿದನು ಕಡೆಯ ಮಾತು ತಮ್ಮ 1
ಖಳ ಮಾಯೆಯಲಿ ಬರಲು ರಾಘವನು ಸಂಹರಿಸೆ |ನೆಲಕುರುಳಿ ಕೂಗಿದನು ಅವನೇ ಅಮ್ಮಾ ||ಬಲುವಿಂದ ಲಕ್ಷ್ಮಣನ ಬೈದು ಅಟ್ಟಿದೆ ನಾನು |ಜಲಜಾಕ್ಷನೋರ್ವನಿಹನೇನೋ ತಮ್ಮ 2
ಅನುಜಯುಕ್ತದಿ ದೇವ ಕಪಿದಂಡು ನೆರಹಿಹನು |ಹನುಮಂತ ನಾ ರಾಮದೂತನಮ್ಮಾ ||ಇನಿತು ಸತ್ಯವೊ ಅನೃತವೊ ನಂಬಿಗ್ಯಾಗದು |ಮನದ ಅನುಮಾನ ಬಿಡುವಂತೆ ಮಾಡೋ ತಮ್ಮ 3
ಸಿರಿಕಾಂತ ಶ್ರೀಮಂತ ಕರುಣದಲಿ ಕೊಟ್ಟಿಹನು |ಗುರುತಿನುಂಗುರವನಿದು ನೋಡಿರಮ್ಮಾ ||ಪರಮಾತ್ಮನಿಗೆ ದೂತನಹುದು ಶುಭ ವಾರ್ತೆಗಳೆ |ಇರುವನೆಲ್ಲೆದು ವಿಸ್ತರಿಸೆಲೊ ತಮ್ಮಾ 4
ಕಾನನದೆ ಚರಿಸುತ ರವಿಸುತಗೊಲಿದು ಶುಕ್ರಜನ |ಹಾನಿ ಮಾಡಿದನಲ್ಲೇ ಇರುವನಮ್ಮಾ ||ಜಾನಕಿಯೆಂದೆನ್ನನು ನಿತ್ಯದಲಿ ನೆನೆಸಿ |ಏನು ಮಾಡುವನೊ ಪೇಳುವದೋ ತಮ್ಮ 5
ನಿನ್ನಗಲಿ ವ್ಯಾಕುಲದಿ ನರರಂತೆ ಕೇಶವನು |ಅನ್ನ ಉದಕವನೆಲ್ಲಾ ಜರಿದನಮ್ಮಾ ||ಪನ್ನಗಾರಿ ಧ್ವಜನು ದನುಜರ ಗೆಲಿದು |ಯನ್ನ ಕೂಡುವದು ನಾ ಕಾಣೆ ತಮ್ಮ 6
ತಾಯೆ ರಾವಣನಳಿದು ನಾನೊಯ್ವೆ ನಿನ್ನೀಗ |ನೋಯಿಸದೆ ಹರಿಗೀಡು ಆವನಮ್ಮಾ ||ನಾಯಕನು ನೀಂ ಭೃತ್ಯರೊಳು ತ್ವರಿತ ಬಹುದೆಂದು |ಕಾಯಜ ಪಿತನಿಗೆ ಬಿನ್ನೈಸೊ ತಮ್ಮ 7
ಪೋಗಿ ಬರುವೆನು ನಿಮ್ಮ ಗುರುತು ಏನಿದೆ ಕೊಟ್ಟು |ಬೇಗನಪ್ಪಣೆಯೆನಗೆ ಈವದಮ್ಮಾ ||ನಾಗಶಯನಗೆ ರಾಗಟೆಯನಿತ್ತು ಪದಕೆ ತಲೆ |ಬಾಗಿರುವಳೇಳದಲೆಯೆನ್ನೋ ತಮ್ಮ 8
ನಳಿನಮುಖಿಯೆ ನಮೋ ನಮೋ ದಯೆಯಿರಲಿ ಸ್ವಲ್ಪ ದಿನ |ದೊಳಗೆ ಬರುವೆವು ಚಿಂತೆ ಬೇಡವಮ್ಮ ||ಭಳಿ ಭಳಿರೆ ಪ್ರಾಣೇಶ ವಿಠ್ಠಲನ ಪೂರ್ಣ ದಯೆ |ಗಳಿಸಿ ಅಜಪಟ್ಟವನು ಆಳೋ ತಮ್ಮ 9

ಸುಮ್ಮನೆ ದೊರಕುವುದೇ ಶ್ರೀರಾಮನ summane dorakuvudu

ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮವು |
ಜನ್ಮಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ಪ.

ಕಂತುಪಿತನ ಮೂರುತಿಯ ತನ್ನಂತರಂಗದೊಳಿಟ್ಟು |
ಚಿಂತೆ ಎಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ 1
ಭಕ್ತಿರಸದಲಿ ತನ್ನ ಚಿತ್ತಪರವಶನಾಗಿ |
ಅಚ್ಯುತನ ನಾಮವನು ಬಚ್ಚಿಟ್ಟು ಕೊಂಡವಗಲ್ಲದೆ 2
ತನ್ನೊಳಗೆ ಇದ್ದ ಮೂರುತಿಯ ಕಣ್ಣೊಳಗೆ ತಂದರೆ |
ಆನಂದ ಪೂರ್ಣ ಪುರಂದರವಿಠಲನ ನೋಡಿದವಗಲ್ಲದೆ 3

Tuesday, 17 December 2019

ರಾಮಕೃಷ್ಣರು ಮನೆಗೆ ಬಂದರು ramakrishnaru manege

ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೊ |
ಕಾಮಧೇನು ಬಂದಂತಾಯಿತು ಸುಖವ ಸುರಿಯಿರೊ ಪ
ಮಕರಕುಂಡಲ ನೀಲಮುತ್ತಿನ ಚೌಕಳಿ ಇಡುತಲಿ |
ಸುಕುಮಾರ ಸುಂದರವಾದ ಉಡುಗೆಯುಡತಲಿ ||
ಮುಖದ ಕಮಲ ಮುಗುಳನಗೆಯ ಸುಖವ ಕೊಡುತಲಿ |
ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ 1
ಚೆಂಡು-ಬೊಗರಿ-ಚಿಣ್ಣಿಕೋಲು-ಗಜುಗವಾಡುತ |
ದುಂಡುಮಲ್ಲಿಗೆ ತುಂಬಿ ಕೊಳಲನೂದಿ ಪಾಡುತ ||
ಮಿಂಡೆವೆಂಗಳ ಮುದ್ದು ಮೊಗದ ಸೊಗವ ನೋಡುತ |
ಭಂಡುಮಾಡಿ ಭಾಮೆಯರೊಡನೆ ಸರಸವಾಡುತ2
ಪೊಕ್ಕುಳಲ್ಲಿ ಅಜನ ಪಡೆದ ದೇವದೇವನು |
ಚಿಕ್ಕ ಉಂಗುಟದಿ ಗಂಗೆಯ ಪಡೆದನಾತನು ||
ಮಕ್ಕಳ ಮಾಣಿಕ್ಯ ಪುರಂದರವಿಠಲ ರಾಯನು |
ಭಕ್ತ ಜನರಿಗೊಲಿದ ನೀನು ಮುಕ್ತಿದಾತನು 3

ರಾಮ ರಾಮ ರಾಮ ರಾಮ ರಾಮವೆನ್ನಿರೊ rama 3 Ramanenniro

ರಾಮ ರಾಮ ರಾಮ ರಾಮ ರಾಮವೆನ್ನಿರೊ |
ರಾಮ ರಾಮವೆಂಬ ನಾಮ ಮನದಿ ನೆನೆಯಿರೊ ಪ.
ಇಂದ್ರಿಯಂಗಳೆಲ್ಲ ಕೂಡಿ ಬಂದು ತನ್ನ ಮುಸುಕಿದಾಗ |
ಸಿಂಧು ಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು 1
ಭರದಿ ಯಮನ ಭಟರು ಬಂದು ಹೊರಡು ಎಂದು ಮುಟ್ಟಲು |
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ 2
ಕಾಸಶ್ವಾಸದಲ್ಲಿ ಸಿಲುಕಿ ದೋಷ ಬಲಿದು ಪೋಗುವಾಗ |
ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ 3
ಶೃಂಗಾರವಾದ ದೇಹ ತಂಗಿಬಿಟ್ಟು ಪೋಗುವಾಗ |
ಕಂಗಳಿಗಾತ್ಮಾ ಸೇರಿದಾಗ ರಂಗನ ಧ್ಯಾನ ದೊರಕದಯ್ಯ 4
ಕಷ್ಟಜನ್ಮದಲ್ಲಿ ಬಂದು ದುಷ್ಟಕರ್ಮಗಳನು ಮಾಡಿ |
ಬಿಟ್ಟು ಹೋಗುವಾಗ ಪುರಂದರವಿಠಲನ ನೆನೆಮನವೆ 5

ರಾಮ ನಾಮಾಮೃತವ rama naamamrutava

ರಾಮ ನಾಮಾಮೃತವ ಕೊಂಬವರೆಲ್ಲ |ಪ್ರೇಮದಿಂದಚ್ಯುತ ಪೇಟೆಗೆ ಬನ್ನಿರೆ ಪಒಮ್ಮನವೆರಸಿ ಬನ್ನಿ |ನಿಮ್ಮ ಮನಕೆ ಬಂದಂತಳೆದು ಕೊಳ್ಳಿ ||ರಾಮಟಿಂಕೆಯ ಸಲಿಸಿ ಶ್ರೀ ಕೃಷ್ಣನೆಂಬ |ಧರ್ಮದ ಸಂತೆ ನೆರೆದಿದೆ ಬನ್ನಿ 1
ಉಂಟು ನಾಲ್ಕು ಕುದುರೆಗಳು |ಎಂಟಾನೆಯ ಬಿರುಬಲೆಯಲ್ಲಿ ಕಟ್ಟಬಹುದು ||ಸಾಲವರ್ಣದ ಪಟ್ಟಿಯು ಏಳಿರೆ |ಏಳುಲೋಕವು ಬಲ್ಲದು 2
ಬೆಲೆಯಿಲ್ಲದ ಮುತ್ತುಂಟು |ಏಳೇಳ್ಪುಟಿಯ ಹೊಳೆವಪರಂಜಿಯ ಚಿನ್ನವುಂಟು ||ಥಳಥಳಿಸುವ ನೀಲಿಯ ಕೊಂಬುವರೆಲ್ಲ |ನಳಿನನಾಭನ ಸನ್ನಿಧಿಗೆ ಬನ್ನಿ 3
ಎರಡು ಕಾಶಿಯಲಳೆವ ಕೊಳಗವು |ಪಿರಿದುದೊಂದು ಕಿರಿದೊಂದು ಉಂಟಲ್ಲಿಗೆ ||ಗರಳವವೊರಿಸಲು ರತ್ನವು |ಮರುತಾಶ್ರಯನ ಸನ್ನಿಧಿಗೆ 4
ಆರಂಗಡಿಯ ಸುಟ್ಟು |ಸೂರೆಮಾಡಿ ಏಳು ಎಂಟು ಹಟ್ಟಕೊರವನೊ...ದುದು ||ಸಾರಿಸಿ ನವವಿಧ ಶುಚಿಯ ಹೇಳಿದ |ಸರ್ವಾತ್ಮಗೆ ಸೌದೆಯ 5
ಸುಂಕಿಗರೈವರಿಗೆ ಹರುಷದಿಂದ |ಪಂಕಜನಾಭನ ಚೀಲ ತೋರಿ ||ಶಂಕೆಯಿಲ್ಲದೆ ನಡೆವ ಅವರನೆಲ್ಲ |ವಂಚಿಸಿ ಎದೆಯ ಟೊಣೆದು ಹೋಗುವಾ 6
ಇಂದೊಂದು ಸರಶಿಗೆ ಬಹಳ ಲಾಭ | ತಾತಂದು ಕುಳಿತುಂಬುದಕೆ ಉಂಟು ||ತಂದೆ ಪುರಂದರವಿಠಲ ರಾಯ |ಗಂಧವಾಯಿತು ಬೇಹಾರವು 7

ರಾಮ ಗೋವಿಂದ ಸೀತಾ rama govind seeta

ರಾಮ ಗೋವಿಂದ ಸೀತಾ - ರಾಮ ಗೋವಿಂದ ಪ.
ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕ
ಭಕ್ತಿಯಹುದೆ ಭಕ್ತಜನರ ಸಲಹದನಕ
ಮುಕ್ತಿಯಹುದೆ ಭಾವಶುದ್ದಿ ಇಲ್ಲದನಕ
ಚಿತ್ತಶುಧ್ಧಿ ಆತ್ಮನಿಜವು ತಿಳಿಯದನಕ 1
ಓದಲೇಕೊ ಮನದಿ e್ಞÁನವಿಲ್ಲದನಕ
ಭೇದವೇಕೊ ಗತಿಯು ಗಮನ ತಿಳಿಯದನಕ
ಕಾದಲೇಕೊ ಭುಜದಿ ಶಕ್ತಿಯಿಲ್ಲದನಕ
ವಾದವೇಕೊ ಶ್ರುತಿ - ಶಾಸ್ತ್ರ ತಿಳಿಯದನಕ 2
ನಳನವಿದ್ದರೇನು ತುಂಬಿಯೊದಗದನಕ
ದಳವು ಇದ್ದರೇನು ಧೈರ್ಯಕೊಡದನಕ
ಲಲನೆಯಿದ್ದರೇನು ಪುತ್ರರಿಲ್ಲದನಕ
ಚೆಲುವನಾದರೇನು ವಿದ್ಯೆ ಕಲಿಯದನಕ 3
ಮನವಿದ್ದೇಕೊ ಶುಕ - ಪಿಕವಿಲ್ಲದನಕ
ತನುವಿದ್ದೇಕೊ ಪರಹಿತಕೆ ಬಾರದನಕ
ಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕ
ಧನವಿದ್ದರೇನು ದಾನ - ಧರ್ಮಕ್ಕೊದಗದನಕ 4
ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊ
ಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊ
ಸಿರಿ ಪುರಂದರವಿಠಲನಿರಲು ಭಯವು ಏತಕೊ
ಹರಿಯ ಒಲಿದ ಮನುಜನಿಗೆ ದೈನ್ಯವೇತಕೊ 5

ರಾಮ ಎನ್ನುವ ಎರಡು ಅಕ್ಷರದ rama ennuva eradu aksharada

ರಾಮ ಎನ್ನುವ ಎರಡು ಅಕ್ಷರದ ಮಹಿಮೆಯನು |ಪಾಮರರು ತಾವೇನ ಬಲ್ಲರಯ್ಯ ಪರಾಯೆಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿಗತವಾದ ಅತಿಪಾಪವನ್ನುಮಾಯವನು ಮಾಡಿ ಮಹಾರಾಯ ಮುಕ್ತಿಯ ಕೊಡುವದಾಯವನು ವಾಲ್ಮೀಕಿ ಮುನಿರಾಯ ಬಲ್ಲ 1
ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳುಒತ್ತಿ ಒಳ ಪೊಗದಂತೆಯೆ ಕವಾಟವಾಗಿಚಿತ್ತ ಕಾಯಗಳ ಸುಪವಿತ್ರ ಮಾಡುವ ಪರಿಯಭಕ್ತವರ ಹನುಮಂತ ತಾನೊಬ್ಬ ಬಲ್ಲ 2
ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದುಪರಮ ವೇದಗಳೆಲ್ಲ ಪೊಗಳುತಿಹವುಸಿರಿಯರಸ ಶ್ರೀಪುರಂದರ ವಿಠಲ ರಾಮನನುವರ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ 3

ಯಮನೆಲ್ಲೊ ಕಾಣೆನೆಂದು Yamanello kaanenendu

ಯಮನೆಲ್ಲೊ ಕಾಣೆನೆಂದು ಹೇಳಬೇಡ |
ಯಮನೇ ಶ್ರೀರಾಮನು ಸಂದೇಹ ಬೇಡ ಪ
ನಂಬಿದ ವಿಭೀಷಣಗೆ ರಾಮನಾದ |
ನಂಬದಿದ್ದ ರಾವಣಗೆ ಯಮನೇ ಆದ 1
ನಂಬಿದ ಅರ್ಜುನನಿಗೆ ಬಂಟನಾದ |
ನಂಬಿದಿದ್ದ ಕೌರವನಿಗೆ ಕಂಟಕನಾದ 2
ನಂಬಿದ ಉಗ್ರಸೇನಗೆ ಮಿತ್ರನಾದ
ನಂಬದಿದ್ದ ಕಂಸನಿಗೆ ಶತ್ರುವಾದ 3
ನಂಬಿದ ಪ್ರಹ್ಲಾದಗೆ ಹರಿಯಾದ |
ನಂಬದಿದ್ದ ಹಿರಣ್ಯಕಗೆ ಅರಿಯಾದ4
ನಂಬಿದವರ ಸಲಹುವ ನಮ್ಮ ದೊರೆಯು |
ಅಂಬುಜಾಕ್ಷ ಪುರಂದರವಿಠಲ ಹರಿಯು 5

ಆತನೆಯನ್ನ ತಾತನು aataneyanna tatanu

ಆತನೆಯನ್ನ ತಾತನು
ರಘುನಾಥನಾಗಿ ತ್ರೇತಾಯುಗದಲಿ
ಮೆರೆದಾತನೆಯನ್ನ ತಾತನು ಪ
ತಂದಿನ ಅಗಲಿದ ಕಂದ ಕಾನನದೊಳು
ಬಂದು ಅಂಗುಟ ಊರಿನಿಂದುತ್ವರಾ
ಇಂದಿರೇಶ ಭವಬಂಧ ಮೋಚಕ ಪೊರೆಯಂದೆನೆ
ಧೃವನಿಗೆ ಚಿರಪದವಿ ಕೊಟ್ಟಾತನೆಯನ್ನ ತಾತನು 1
ದುರುಳತನಪರಿಹರಿಸ ಬೇಕೆನೆ
ನರನರಸಿ ದ್ರೌಪದಿ ಮಾನವ ಪರಮಕರುಣಿ
ಮುರಹರನೆ ತಡಿಯದಲೆ ಪೊರೆಯನೆ
ತರುಣಿಯ ಮೊರೆ ಕೇಳಿದಂಥಾತನೆ 2
ಶಿರಿಗೋವಿಂದ ವಿಠಲ ವೇದ ವಂದಿತ
ಧರಣಿಜ ಪತಿ ಹರಿಪರನೆನ್ನುತ
ಪರಮ ಭಕುತಿಯಿಂದ ಸ್ಮರಿಸುವವರ
ಕರಪಿಡಿಯಲೋಸುಗ ತನ್ನ ಕರಚಾಚಿಕೊಂಡು ನಿಂತಾತನೆ 3

Monday, 16 December 2019

ಸುಂದರಾ ಶ್ರೀರಾಮ ಚಂದ್ರರಾ sundara shriramachandrara

ಸುಂದರಾ ಶ್ರೀರಾಮ ಚಂದ್ರರಾ | ಪಾದಾರವಿಂದಗಳೀಗೆ
ನಾ ವಂದಿಸುವೆ
ವಂದಿಸೂವೆ ಆನಂದಿಸೂವೆ | ಬಹು ಚಂದದಿಂದಲಿ
ನಲಿದಾಡುವೇ ಪ
ಉತ್ತರಾದಿಮಠದ ವಿಚಿತ್ರಗಳು | ಯನ್ನ ನೇತ್ರದಿಕಂಡು
ಪವಿತ್ರಳಾದೇ
ಶ್ರೀ ಸತ್ಯಧ್ಯಾನ ತೀರ್ಥರು ನಿತ್ಯ ಪೂಜಿಸೂವೋ
ಪರಮಾತ್ಮನ ಕಂಡು ಕೃತಾರ್ಥಳಾದೇ 1
ಮೂರ್ಜಗದೊಳಗೆಲ್ಲಾ ಪ್ರಜ್ವಲಿಸುವೊ | ವಜ್ರ
ಮಂಟಪ ವೈಭವನೋಡಿದೆ
ಮಧ್ಯದಲಿ ಮೂಲ ಸೀತಾ ರಾಮ ಕೂತದ್ದು
ನೋಡಿ ಉಧೃತಳಾದೇ 2
ಸತ್ಯಧ್ಯಾನರು ಎತ್ತಿ ಮಾಡುವಂಥ | ಮಂಗಳಾರ್ತಿಯನೆ ಕಂಡೆನೇ
ಮುತ್ತು ಮಾಣಿಕ್ಯದಾ ನವರತ್ನದಾ ಚಾಮರ ಎತ್ತಿ ಬೀಸುವ
ವಿಸ್ತರ ನೋಡಿದೆ3
ವುಂಡುವುಂಡು ಲೋಕದೊಳಗೆಲ್ಲ ಜನರು
ಕೊಂಡಾಡುವುದ ನಾ ಕೇಳಿದೆ
ಪಂಡಿತರೆಲ್ಲಾ ಹಿಂಡು ಹಿಂಡಾಗಿ ಅಖಂಡ ದಕ್ಷಿಣೆ
ಪಡೆವುದ ನೋಡಿದೆ 4
ಸತ್ಯಬೋಧರು ಸತ್ಯಸಂಧರು ಮೊದಲಾಗಿ
ಮುಟ್ಟಿಪೂಜಿಸಿದ ಮೂರ್ತಿಯು
ಮತ್ತೆ ಕುಬೇರನ ಅಳಕಾ ಪಟ್ಟಣವೇ ಪ್ರತ್ಯಕ್ಷ ಬಂದಿರುವುದಿಲ್ಲಿ 5
ಬೆಳ್ಳಿ ಭಂಗಾರದ ಮಿಳ್ಕೆ, ತಂಬಿಗಿ ಢಾಲಿಯನು ಕೈಯಲಿ
ಜನರು ಕೊಂಡೊಯ್ವರು
ಸುಳ್ಳಲ್ಲಿ ಈ ಮಾತು ಒಳ್ಳೇ ಜನರು ಕೇಳಿ ಬಲ್ಲಷ್ಟು ಪೇಳುವೆನು
ಭಾಳಿರುವುದು 6
ಧಿಟ್ಟ ಶ್ರೀರಾಮರ ದಯದಿಂದಲೀಗ
ಪ್ರತ್ಯಕ್ಷವೈಕುಂಠವೆನಿಪುದೂ
ದುಷ್ಟಜನರಸೂಯೆ ಬಟ್ಟರೆ ಯಮಪಟ್ಟಣದ
ದಾಯಪಿಡಿವರೂ 10
ದೋಷರಹಿತ ವೇದವ್ಯಾಸದೇವರ ಸಂಪುಟ ಲೇಸಾಗಿ
ನೋಡಿ ಸಂತುಷ್ಟಳಾದೇ
ಕಾಶಿಮೊದಲಾದ ಸುಕ್ಷೇತ್ರಗಳು ವಾಸವಾಗಿರುವುವು
ಈ ಮಠದಲಿ 11
ಮರುತನಧೀಷ್ಟಾನರಾಗಿ ಮಾಡುವರು ಈ ಪೂಜೆ
ಮತ್ಯಾರಿಗೀಡಿಲ್ಲನೋಡು
ಹೆಚ್ಚಿನ ಶಾಸ್ತ್ರ ವಿಚಾರ ಮಾಡುವರು
ಸೃಷ್ಟಿವೊಳಗಿನವರಿಗೀಡಿಲ್ಲನೋಡು 12
ವಾದಿಮತದ್ವಾದಿನೀ ಸೋಲಿಸುವರು | ಮಾಯಮತಿಗಳ
ಮಾಯಮಾಡುವರೂ
ನ್ಯಾಯ ವ್ಯಾಕರಣ ವೇದಾಂತ ಸಿದ್ದಾಂತಗಳನ್ನು ಬಾಯಿ
ಪಾಠದಿಬೋಧಿಸುವರೂ 13
ನರಸಿಂಹ ವಿಠಲನದಯದಿಂದಲೀ ನರಲೋಕ
ಸುರಲೋಕ ಪೂಜ್ಯರಿವರೂ
ವರ ಪೀಠದಲಿ ಕುಳಿತು ಮೆರೆಯುವರು | ಜಗದ್ಗುರು
ಶಿರೋಮಣಿಯೆಂದು ಕರೆಸಿಕೊಳ್ಳುವರೂ 14

ರಘುನಾಯಕ ನಿನ್ನ ರಾತ್ರಿ ಹಗಲು rghunayaka ninna

ರಘುನಾಯಕ ನಿನ್ನ ರಾತ್ರಿ ಹಗಲು ನೆನೆವೆ
ರಾಘವಾ ಕೈಪಿಡಿದು ಸಲಹನ್ನನು ಪ
ಸೀತಾ ಮನೋಹರಾ | ಶ್ರೀ ರಾಮಚಂದಿರಾ
ಪಾತಕಾಮೃಗವಳಿದು | ಪರಮಧೀರಾ 1
ಶಬರಿ ಫಲಗಳ ತಿಂದು | ಶಾಶ್ವತಾ ಫಲವಿತ್ತು
ಅಗಣಿತಾಗುಣಧಾಮ | ಆನಂದ ರಾಮ 2
ಸೇತು ಮಾರ್ಗದೊಳಿಂದ | ಆತ ರಾವಣನ ಕೊಂದ
ಸೀತೆಯನು ತಂದ ಪ್ರಖ್ಯಾತಮಹಿಮಾ 3
ಲೋಕದೊಳು ನೇಮ ನಿನ್ನ | ಪಾಪಹರ ನಾಮ
ವಾಲ್ಮೀಕಿ ಜಪಿಸಿದಾ ಶ್ರೀ ರಾಮನಾಮ 4
ಶ್ರೀ ಕಾಂತ ನರಸಿಂಹ ವಿಠಲಾ | ಸ್ವೀಕರಿಸೈಗಂಧವಾದೇವ 5

ನೋಡಿದೆನು ಭದ್ರಾಚಲವಾಸನ nodidanu bhadrachaladasana

ನೋಡಿದೆನು ಭದ್ರಾಚಲವಾಸನ | ನೋಡಿದೆನು ಜಗದೀಶನಾ
ನೋಡಿದೆನು ಶ್ರೀ ಸೀತಾರಮಣನ | ನೋಡಿದೆನು ಸರ್ವೇಶನಾ ಪ
ಅಂಗನೇಯರ ಕೂಡಿ ನಾನು ಮಂಗಳಗಿರಿನೋಡಿದೆ
ಮಂಗಳಾಂಗಾ ನಾರಸಿಂಹಗೆ ತಂದು ಪಾನಕ ನೀಡಿದೆ 1
ಸಜ್ಜನರಿಂದ ಕೂಡಿ ನಾನು ಬೆಜ್ಜವಾಡವ ನೋಡಿದೆ
ಮೂರ್ಜಗ ಪಾವನಿಯ ಕೃಷ್ಣೆಯ ಮಜ್ಜನವು ನಾ ಮಾಡಿದೆ 2
ಮಾಧವನ ದಯದಿಂದ ನಾನು ಗೋದಸ್ನಾನವು ಮಾಡಿದೆ
ಮೋದದಿಂದಲಿ ಬಂದು ವಿಮಾನರಾಮನ ನೋಡಿದೆ 3
ನೇಮದಿಂದಲಿ ಬಂದು ನಾನಾ ರಾಮದಾಸನ ನೋಡಿದೆ
ವಾಮಭಾಗದಿ ಕುಳಿತ ಲಕ್ಷ್ಮಣ ಸ್ವಾಮಿ ದರುನ ಮಾಡಿದೆ 4
ಸಪ್ತಋಷಿಗಳು ದಶರಥಾದಿ ಉತ್ತಮರ ನಾ ನೋಡಿದೆ
ಸುತ್ತು ಮುತ್ತು ದೇವತೆಗಳನಾ ಮತ್ತೆ ಮತ್ತೆನಾ ನೋಡಿದೆ 5
ದೋಷದೂರ ಭದ್ರಾಚಲದಿವಾಸ ರಾಮಚಂದ್ರನ
ಸೋಸಿನಿಂದಲಿ ಬಂದು ನಾ ವಿಶೇಷ ದರುಶನ ಮಾಡಿದೆ 6
ಕಡುಹರುಷದಿಂದಲಿ ರಾಮನ ತೊಡೆಯಮ್ಯಾಲೆ ಒಪ್ಪಿದ
ಮಡದಿ ಸೀತಾದೇವಿಯನ್ನು ಸಡಗರದಿ ನಾ ನೋಡಿದೆ 7
ಇಷ್ಟದಿಂದಲಿ ಭಜನೆಗೊಳ್ಳುವ ಶ್ರೇಷ್ಠ ರಾಮನ ನೋಡಿದೆ
ಉಷ್ಣಕುಂಡದ ಸ್ನಾನವನ್ನು ಥಟ್ಟನೇ ನಾ ಮಾಡಿದೆ8
ಉನ್ನತವಾಗಿರುವ ಸುವರ್ಣಗೋಪುರ ನೋಡಿದೆ
ಮುನ್ನ ಮಗ್ನವಾಗಿರುವ ಅನ್ನ ಛತ್ರದ ನೋಡಿದೆ 9
ಪರ್ಣಶಾಲೆಯನ್ನು ನೋಡಿ ಪರಮ ಹರುಷವ ತಾಳಿದೆ
ನಿರ್ಮಲ ಚರಿತ್ರ ರಾಮನ ವರ್ಣಿಸಲಳವಲ್ಲವೆ 10
ಲಕ್ಷ್ಮೀವಲ್ಲಭ ರಾಮನ ಪ್ರತ್ಯಕ್ಷಮದಿವೆಯ ನೋಡಿದೆ
ಮುತ್ತು ಮಾಣಿಕ್ಯ ದಹಾರವು ನವರತ್ನದಾಕಿರೀಟವನು
ನಾ ನೋಡಿದೆ 11
ಚಂದ ಚಂದಾ ಜನರು ಎಲ್ಲಾ ಆನಂದದಿಂದಲಿ
ತಂದು ತಂದು ಹಾಕುವಂತಹ ಚಂದವನು ನೋಡಿದೆ 12
ಇಂತಹ ರಾಮನವಮಿ ಉತ್ಸವ ಲೋಕದಲಿ ನಡೆವುದು
ಹತ್ತುವದನ ಶೇಷನಿಗೂ ಸಹಾ ತಪ್ಪದೇ ಎಣಿಸಲಾಗದು 13
ನಮ್ಮವಾಯು ಸುತನ ಪಾದಕೆ ಸುಮ್ಮನೇನಾನೆರಗಿದೆ
ಘನ್ನ ಮಹಿಮನ ಪ್ರಸನ್ನ ಸೀತಾರಾಮನನು ನಾ ನೋಡಿದೆ 14
ತೇರನೇರಿ ಬರುವ ರಾಮನ ವೈಯಾರವನು ನಾ ನೋಡಿದೆ
ಮೇರು ನಂದನ ಭದ್ರಾಚಲದಿ ವಿಚಾರ ಮಾಳ್ಪುದ ನೋಡಿದೆ 15
ಪ್ರಹ್ಲಾದವರದ ನಾರಸಿಂಹ ವಿಠಲನ
ಎಲ್ಲ ಉತ್ಸವ ನೋಡಿ ಮನಕೆ ಆಹ್ಲಾದವನೆ ನಾ ಪಾಡಿದೆ 16

Friday, 13 December 2019

ಅಯ್ಯಯ್ಯ! ಕೈಕೆ ಮುನಿದರೆ ayyayya kaike munidare

ಅಯ್ಯಯ್ಯ! ಕೈಕೆ ಮುನಿದರೆ ಏನವ್ವ ! |
ದೀವೌಕಸರನಾಳುವ ನಿನ್ನ ಅದ್ವೈತತನವು |
ಅಚಿಂತ್ಯ ಶಕ್ತಿ ಹೋಹುದೆ ಪ್ರಭುವೆ |
ಅಯ್ಯ ಮಂಥರೆ ಜರಿದರೆ ಪಂತಿದೇರ ನಾಳುವ |
ನಿನ್ನ ಲೋಕತಿಂತಿಣಿಯ ಗೆಲುವ ಶೀಲ ಬಹುದೆ |
ವಿಭುವೆ ಅಯ್ಯ ತಂದೆಯಿಲ್ಲದಿರೆ |
ತರುಲತೆಗೆ ಪಶು ಪಕ್ಷಿಗೆ ಚೇತನ ವೃಂದಕೆ |
ಮುಕುತಿಯನಿತ್ತ ಮಹಿಮೆ ಹೋಹುದೆ ಅಯ್ಯ |
ಆರುಮುನಿದರೆ ಆರು ಜರೆದರೆ ಆರೊಲ್ಲದಿದ್ದರೆ |
ಹೀನವುಂಟೆ? ತಾರಕ ಬ್ರಹ್ಮದ್ವಿರೂಪನೆ ನಿನಗೆ ಅಯ್ಯ |
ಜಾನಕಿ ವಲ್ಲಭ ಲಕ್ಷಣಾಗ್ರಜ ಹನುಮನನಾಳ್ದ |
ರಾಮ ರಾಯ ಪುರಂದರ ವಿಠಲ ಅಯ್ಯ 1
ಮುಟ್ಟತಾಳ
ತುಂಗ ವಕ್ಷ ತುರೀಯ ಮೂರುತಿಯ |
ರಥಾಂಗ ಪಾಣಿಯ ತಂಗಿ, ತಾರೆ |
ಪರಮ ಪುರುಷ ಹರಿಯ ತರಣಿ ತೇಜನ |
ಅಂಗನೆಯರ ಮನವ ಸೊರೆಗೊಂಬನ ತಂಗಿ, ತಾರೆ |
ತರಣಿತೇಜನ ತಂಗಲೇಕೆ ತಗರಲೇಕೆ |
ಸಾರಂಗದಾಮನೊಲೆದಿರನದೇಕೆ ತಂಗಿ, ತಾರೆ, ತರಣಿತೇಜನ |
ರಂಗೇಶ ಪುರಂದರ ವಿಠಲನ ಮಂಗಳಾಂಗ |
ಒಲೆದಿರನದೇಕೆ ತಂಗಿ, ತಾರೆ, ತರಣಿತೇಜನ 2
ರೂಪಕ ತಾಳ
ಅರಿದನೊಬ್ಬ ನಾಸಿಕವ ನಿನ್ನನುಜೆಯ |
ಪುರವನುರುಪಿ ದಾನವರ ಗೆದ್ದನೊಬ್ಬ |
ಶರನಿಧಿಯ ದಾಂಟಿದನೊಬ್ಬ |
ಸಿರಿ ಮುಡಿಯ ಮುಕುಟವ ಕಿತ್ತಿಟ್ಟನೊಬ್ಬ |
ಪುರಂದರವಿಠಲರಾಯನ ತೋಟಿ ಬೇಡ |
ಶರಣು ಪೊಕ್ಕು ಬದುಕುವ ಬಾರೆಲೊ ಅಣ್ಣಣ್ಣ | 3
ಆದಿ ತಾಳ (ಅಟ್ಟತಾಳ?)
ರಾಮರಾಮ ಎನುತ ಅಂಬುಧಿಯ ದಾಂಟಿದೆ |
ರಾಮ ರಾಮೆನುತ ಅಸುರರ ಗೆಲಿದೆ |
ರಾಮ ರಾಮ ಎನುತ ಭೂಮಿ ಸುತೆಯ ಪಾದವ ಕಂಡು |
ರಾಮ ರಾಮ ಎನುತ ರಾಮ ಪುರಂದರವಿಠಲನ |
ಉಂಗುರವಿತ್ತ ರಾಮನರ್ಧಾಂಗಿ ದೇವಿ ಚಿತ್ತೈಸು ಎನುತ 4
ಏಕತಾಳ
ರಾಮನೊಳು ಹನುಮನು ಸೇರುವನೆಂದರಿಯಿರೊ |
ರಾಮನಿಂದ ಹತವಾಯ್ತು ರಾವಣನ ಕಟಕವೆಂದರಿಯರೊ |
ರಾಮನ ಪ್ರಸಾದದ ದೊರೆಗಳ ಕೆಣಕದಿರಿರೊ |
ರಾಮಬಾಣಕಿದಿರಾಗದಿರಿರೊ, ದನುಜರೆಲ್ಲ |
ರಾಮ ನಿಮ್ಮ ರಾವಣನ ಶಿರವ ಚೆಂಡಾಡುವನು |
ರಾಮ ಪುರಂದರವಿಠಲನ ಪೊಂದಿ ಬದುಕಿರೊ 5
ಜತೆ
ಸಹಸ್ರ ನಾಮ ಸಮ ರಾಮನಾಮ |
ಮಹಾ ಮಹಿಮೆಯ ಪುರಂದರ ವಿಠಲ ರಾಮ ||

Saturday, 7 December 2019

ಅಸುರ ಬಾಧಿಸುತಿರಲು asura bhadisutiralu

ಅಸುರ ಬಾಧಿಸುತಿರಲು ಋಷಿಗಳು ಸ್ತುತಿ ಮಾಡೆ
ದಶರಥನ ಗರ್ಭದಲಿ ಜನಿಸಿ ಬಂದೆ 1
ಶಿಶುವಾಗಿ ಕೌಸಲೆಗೆ ಬಾಲಲೀಲೆಯ ತೋರ್ದು
ಕುಶಲದಿಂ ನಾಲ್ವರ ಕೂಡೆ ಬೆಳೆದೆ 2
ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದು
ವಸುಧೆಯೊಳು ಶಿಲೆಯನ್ನು ಸತಿಯ ಮಾಡಿ 3
ಮಿಥಿಲ ಪಟ್ಟಣಕೈದಿ ಮೃಡನ ಧನುವನೆ ಮುರಿದು
ಶಶಿಮುಖಿ ಜಾನಕಿಯ ಕರವ ಪಿಡಿದು 4
ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿ
ದಶರಥಗೆ ಏಕೀಭಾವವನೆ ತೋರಿ 5
ಪರಮ ಹರುಷದಲಿ ಸಾಕೇತನಗರಿಗೆ ಬಂದು
ಕಿರಿಯ ಮಾತೆಯ ಕಠಿಣ ನುಡಿ ಕೇಳಿ 6
ಚಿತ್ರಕೂಟಕೆ ಬಂದು ಕೃತ್ಯವೆಲ್ಲವ ನಡೆಸಿ
ಭ್ರಾತೃ ಭರತನಿಗೆ ಪಾದುಕೆಯನಿತ್ತು 7
ವನದೊಳಗೆ ಸಂಚರಿಸಿ ಘನ ಕಾರ್ಯಗಳ ಮಾಡಿ
ಹನುಮನ ಕಳುಹಿ ಮುದ್ರಿಕೆಯ ಕೊಡಲು 8
ಮಿತ್ರೆ ಜಾನಕಿಗರುಹಿ ರತ್ನ ಕೊಂಡು ಬರಲು
ಅತ್ಯಂತ ಹರುಷದಲಿ ಶರಧಿ ಕಟ್ಟಿ 9
ದುಷ್ಟ ರಾಕ್ಷಸ ಕುಲವ ಕುಟ್ಟಿ ಬೇರನೆ ಸವರಿ
ಸೃಷ್ಟಿಸುತೆ ಜಾನಕಿಯ ಅಗ್ನಿ ಹೊಗಿಸಿ 10
ಪಟ್ಟಣಕೆ ಬಂದು ಭರತನಿಗೆ ಪೇಳೆ
ಅಷ್ಟಗಂಗೆ ಉದಕವನೆ ತಂದು 11
ಅಷ್ಟಋಷಿಗಳು ಎಲ್ಲ ಕೂಡಿ ಕೊಂಡು
ಪಟ್ಟಾಭಿಷೇಕವನು ಮಾಡುತಿರಲಂದು 12
ಸೃಷ್ಟಿಯೊಳು ಜಗನ್ನಾಥವಿಠಲನಿಗೆ ಪುಷ್ಪ
ವೃಷ್ಟಿಗಳನ್ನು ಕರೆದರಾಗ13
__&&