Labels

Showing posts with label Parvati. Show all posts
Showing posts with label Parvati. Show all posts

Tuesday, 7 April 2020

ಜಲದ ನೀಲ ಗಾತ್ರ ಏತರ ಚೆಲುವ jalada neela gaatra


ಜಲದ ನೀಲ ಗಾತ್ರ ಏತರ ಚೆಲುವ ರುಕ್ಮಿಣಿ ಬಿಳಿಯ ಜಡೆಯ ಮೈಯ ಜೋಗಿಗೊಲೆದ ಪಾರ್ವತಿ \\ಪ.\\
ಉದಕದೊಳಗೆ ವಾಸವೇಕೆ ಸದನವಿಲ್ಲವೆಸುದತಿ ಸುಡುವ ಕಾಡಿಗಿಂತ ಲೇಸು ಅಲ್ಲವೆ \\1\\
ಶೃಂಗಿಯ ಬೆನ್ನಿಲೆತ್ತಿದವನ ಸೊಗಸು ನೋಡಿದೆಗಂಗೆಯ ಶಿರದಿ ಪೊತ್ತವನ ಗುರುವ ಕೇಳಿದೆ \\2\\
ವಸುಧೆ ನೆಗಹಿ ಬೇರೆ ಮೆಲುವ ಅಶನವಿಲ್ಲವೆಹಸಿದು ವಿಷವ ಕುಡಿದ ಎಂತು ಸ್ವಾದವಲ್ಲವೆ \\3\\
ಕರುಳ ಕೊರಳ ಸರವು ಏಕೆ ಸರವು ದೊರಕದೆಕೊರಳ ರುಂಡಮಾಲೆ ಏಕೆ ಕಾಂಚನವಿಲ್ಲದೆ \\4\\
ಧರಣಿ ಮೂರಡಿ ಬೇಡಲಿಕ್ಕೆ ದೊರೆಯು ಅಲ್ಲವೆನರಕಪಾಲ ಪಿಡಿವ ಜಗದ ಕರ್ತೃವಲ್ಲವೆ \\5\\
ಮಾತೆಶಿರವ ಅಳಿದವನ ಮಾಲೆ ಕೇಳಿದೆಯಾತಾತನಾಚಿ ಸುತನ ಕೊಂದು ನೀತಿ ನೋಡಿದೆಯಾ \\6\\
ಕೋತಿಗಳನು ಕೂಡಲಿಕ್ಕೆ ಜಾತಿ ತನ್ನದೆಭೂತಗಣಗಳಾಳುವುದಕೆ ಭೀತಿ ಇಲ್ಲವೆ \\7\\
ಹತ್ತಿರಿದ್ದ ವಾಜಿಬಿಟ್ಟು ಹದ್ದನೇರ್ವರೆಎತ್ತಿನ ಬೆನ್ನ ನೇರಿದವರು ಉತ್ತಮರಾಹರೆ \\8\\
ಸುತ್ತಲಿದ್ದಬಾಲೆಯರೊಳು ಬತ್ತಲಿರುವರೆ ಶಾಪ ಹತ್ತಲಿಲ್ಲವೆ \\9\\
ಹರಿಹರರೊಳು ಭೇದವೇನು ಹೇಳೆ ರುಕ್ಮಿಣಿ ಪುರಂದರವಿಠಲ ತಾನೆ ಬಲ್ಲ ಕೇಳೆ ಪಾರ್ವತಿ \\10\\


Wednesday, 8 January 2020

ಶಾಂಭವಿ ನಿನ್ನ ಪಾದಾರವಿಂದದಿಂದೆಕಾಂಬುವೆ shambhavi ninna


ಶಾಂಭವಿ ನಿನ್ನ ಪಾದಾರವಿಂದದಿಂದೆಕಾಂಬುವೆ ಕರಣೇಂದ್ರಿಯ ವ್ಯಾಪಕ ತಾಯಿ ತಂದೆ ಪ
ಅಷ್ಟದಳದ ಕಮಲ ಮಧ್ಯದಲ್ಲೀ | ಸ್ಪಷ್ಟ ತೋರುವವೆರಡೂ ದಳದಲ್ಲೀ |ಮುಟ್ಟಿ ನೋಡುವರು ಮಹಾತ್ಮರು ಅಲ್ಲೀ | ಬಟ್ಟ ಬಯಲಿನ ಹಾದಿ ಬೆಳಗಿಲ್ಲೀ 1
ಭೃಕುಟದಾಚಿಯಲಿ ಹತ್ತಂಗುಲ ಸ್ಥಾನಾ |ತ್ರಿಕೂಟ ಶ್ರೀಹಾಟ ಗೋಲ್ಹಾಟ ಕಾರಣಾ |ಜೌಟ ಪೀಠದಿಂದ ಧ್ಯಾನಾ | ಪ್ರಕಟವಾಗುವಳು ಭ್ರಮರ ಗುಂಫಾ ಸ್ಥಾನಾ 2
ಏಕಾಕಾರೀ ಬ್ರಹ್ಮಾಂಡ ಪಿಂಡ ಮೀರಿ | ಓಂಕಾರ ನಾದ ಬಿಂದು ಕಲಾಧಾರಿ | ಲೋಕೋದ್ಧಾರಕ ಶಕ್ತಿ ಅವತಾರೀ | ಶಾಕಂಬರಿ ಶಂಕರಗೆ ಶಂಕರೀ ಶಾಂಭವಿ ನಿನ್ನ ಪಾದಾರವಿಂದದಿಂದೆ 3


ಶಕ್ತೀ ನಿಜ ಶಕ್ತೀ ಪಾರ್ವತಿಗೆ ಮಂಗಳಾ shakti nija shakti parvati


ಶಕ್ತೀ ನಿಜ ಶಕ್ತೀ ಪಾರ್ವತಿಗೆ ಮಂಗಳಾ ||ಭುಕ್ತಿ ಮುಕ್ತಿ ಈವ ಅಲಿಪ್ತಿಗೆ ಮಂಗಳಾ 1
ಅಂಬಾ ಸ್ವಯಂಬೆ ಜಗದಂಬೆಗೆ ಮಂಗಲಾ |ಬಿಂಬಾಧರೀ ಇಂದು ಬಿಂಬಿಗೆ ಮಂಗಳಾ 2
ಭಕ್ತರ ಪ್ರೇಮ ಓಂಕಾರಿಗೆ ಮಂಗಳಾ |ರಕ್ತಾಕ್ಷಿಯುಕ್ತ ಶ್ರೀಗಿರಿಜೆಗೆ ಮಂಗಳಾ 3


ಮಂಗಳಾ ತ್ರಿಪುರ ಸುಂದರಿಗೆ | ಮಂಗಳಾ ಶಾಕಂಬರಿಗೆಮಂಗಳಾ ಬಾದಾಮಿ mangala Banashankari


ಮಂಗಳಾ ತ್ರಿಪುರ ಸುಂದರಿಗೆ | ಮಂಗಳಾ ಶಾಕಂಬರಿಗೆಮಂಗಳಾ ಬಾದಾಮಿ ಬನಶಂಕರಿಗೆ ಜಯತು ಹಾ ಪ
ಭೂಧರ ಭೂಷಿಗೆ ಜಯತು | ಭೂಧರ ವೈರಿಗೆ ಜಯತು |ಭೂಧರ ವೈರಿ ವಾಹನನ ಸಂಹರಳಿಗೆ ||ಜಯ 1
ಹರಿಮಿತ್ರಿ ಲೋಚನೆ ಜಗತ್ | ಹರಿಗಾತ್ರ ಸೂಚನೀ ಜಯ || ಹರಿಪುತ್ರ ಕೋಟಿ ಲಾವಣ್ಯ ಸುಲೋಚನೆ || ಜಯ 2
ಪಾಹಿ ಪರಾತ್ ಪರೇ ||ಜಯ|| ಪಾಹಿ ಪರಮಪರೆ | ಜಯ | ಪಾಹಿ ಪರಮ ಪರಮೇಶ್ವರೀ ಪುರಹರೀ ||ಜಯ|| ತ್ರಾಹಿ ತ್ರಾಹಿ ತ್ರ್ಯಂಬಕೇ | ಜಯ | ತ್ರಾಹಿ ತ್ರೈಲೋಕ್ಯಾಂಬಿಕೆ | ಜಯ | ತ್ರಾಹಿ ತ್ರಾಹಿ ತ್ರಿಪುರಿ ಶ್ರೀ ಮೂಕಾಂಬಿಕೆ ಜಯತು 3
ಕುಲಸ್ವಾಮೀ ಸ್ವಾಮಿನೀ | ಜಯ | ಕುಲ ಕೋಟಿಯೇ ಕಲ್ಯಾಣೀ | ಜಯ | ಕುಲರಹಿತ ಕುಲೀ ಶಾಂಕರೀಶಂಕರ ರಾಣೀ ಜಯತು 4


ಮಂಗಲಂ ತ್ರಿಪುರ ಸುಂದರಿ mangalam tripura sundari


ಮಂಗಲಂ ತ್ರಿಪುರ ಸುಂದರಿ ಬನ ಶಂಕರಿಗೆ | ಮಂಗಲಂ ಸನ್ನಿಧಿಯ ಕೌಮಾರಿಗೆ |ಮಂಗಲಂ ಭ್ರಮರಾಂಬದೇವಿ ಚೌಡೇಶ್ವರಿಗೆ |ಮಂಗಲಂ ಶ್ರೀ ಲಕ್ಷ್ಮೀ ಮಹಾ ಮಾಯಿಗೆ | ಮಂಗಲಂ ಜಯ ಪ
ಕಮಲದಳ ನಯನಿಗೆ ಕಮಠಾವಲೋಚನೆಗೆ ವಿಮಳ ವರವೀವ ಚೂಡಿ ದರ ಕೊರಳಿಗೆ | ದ್ಯುಮಣಿ ಶಶಿ ಕಿರಣದ ಶ್ರವಣ ಭೂಷಣಿಗೆ ಭ್ರಮರಾರಿ ನಾಸಿಕದ ಮಣಿ ಮೌಕ್ತಿಗೆ ಮಂಗಲಂ ಜಯ ಶುಭ ಮಂಗಲಂ 1
ಓಂಕಾರ ವದನಿಗೆ ವೇದಾಂತ ರದನಿಗೆ |ಪಂಕ ವಿರಹಿತದ ಚಿದ್ರಸ ಜಿವ್ಹೆಗೆ |ಅಂಕದಲಿ ಬ್ರಹ್ಮ ಪೀಯೂಷ ರಸ ಸುರಿವ ರುಣದಂಕುರಿಪಪವಳ ಮಣಿ ರುಚಿಯ ಧರಿಗೆ ಮಂಗಳ2
ಕನಕ ಕಲಶ ತೋಳಿಗೆ ಕಲಶ ಕುಚಯುಗಳಿಗೆ | ಚಿನಕ ಪೂರ್ವಣ್ಯ ಕಂಚುಕದ ರುಚಿಗೆ ಸನಕಾದಿಗಳ ತಲೆಯ ಮೇಲಿಡುವ ಹಸ್ತಯುಗ ವನಜೆ ಶ್ರೀದೇವಿಯಂಗುಲಿಯ ನಖಕೆ ಮಂಗಳ 3
ಹಸ್ತದಾಭರಣಿಗೆ ಕೊರಳ ಭೂಷಣಿಗೆ ನಿಜ ನಿತ್ಯ ಮಂಗಳಿಗೆ ಹಾಟಕ ವರ್ಣಿಗೆ | ರತ್ನ ಬೈತಲಿಗೆ ವಜ್ರಾಣಿ ಪಾರಂಗಣಿಗೆ ನಿಜ | ಮುತ್ತಿನ ಬೊಟ್ಟು ಕುಂಕುಮದ ಫಣಿಗೆ ಮಂಗಳ 4
ಮರಗು ಮಲ್ಲಿಗೆ ಮುಡಿಗೆ ದುಂಡ ದಂಡಿಯ ತಲೆಗೆ ಕೊರಳ ಹಾರವ ತುದಿಯ ಕಾಲಿಂದಿಗೆ | ಪರಿಕ್ರಮದ ತಾಂಬೂಲ ವದನ ನಸು ನಗೆ ಮೊಗದ ಪರಿಮಳದ ಘನಸಾರತನುಲೇಪಿಗೆ | ಮಂಗಳ5
ಪರಬ್ರಹ್ಮರೂಪಿಗೆ ಪರಾತ್‍ಪರ ಶಂಕರಿಗೆ ನಿರುಪಮಾನಂದ ಶ್ರೀ ಮಹಾಲಕ್ಷ್ಮಿಗೆ | ಶಿರಸ ಪೂಜೆಯ ಅರಳು ಮಲ್ಲಿಗೆಯು ಕೃಪೆಯಿಂದ ಜರಿದು ಉದರಿದವು ಗಿರಿದ್ವಾರದಲ್ಲಿ ||ಮಂಗಳ 6


ಬ್ರಹ್ಮಾದಿಕರನು brahmadhikaranu


ಬ್ರಹ್ಮಾದಿಕರನು ಪರಬ್ರಹ್ಮದಿಚ್ಛಿಲಿ ಪಡೆದಳಮ್ಮ ಪರಂಜ್ಯೋತಿ ಪರಬ್ರಹ್ಮಿಣೀ ಪ
ವಾಣಿ ಕಲ್ಯಾಣಿ ಫಣಿ ವೇಣಿ | ರುದ್ರಾಣಿ ಶರ್ವಾಣಿ ಸುವಾಣಿ ಗೀರ್ವಾಣಿ ವರದೆ | ಗಾಣಿತ್ರಿನಯನ ಅಜನ ರಾಣಿ ಶಂಕರ ಪ್ರಾಣಿ ಪುಸ್ತಕಪಾಣಿ ನಾರಾಯಣೀ 1
ಅಂಬೆ ಲೋಕಾಂಬೆ ಭ್ರಮರಾಂಬೆ ಮೂಕಾಂಬೆ ಹರಡಿಂಬೆ ಪ್ರತಿಬಿಂಬೆ ಕುಚಕುಂಭೆ ಸಾಂಬೆ |ರಂಭೆ ಹೇರಂಬೆ ಶರಣೆಂಬೆ ವರಗೊಂಬೆ ಭಕ್ತರ ಬೊಂಬೆ ಹೊಳೆವ ಗೊಂಬೆ 2
ಕಾಳೆ ಹಿಮ ಬಾಳೆ ಭೂ ಪಾಳೆ ಕುಸುಮಾಳೆ ವನಮಾಳೆ ಕಂದರ ಮೌಳೆ ಕುಟಿಲ ಕುರುಳೆ | ಕೇಳಿನಿನ್ನಯ ಲೀಲೆ ಕಾಲಿಗೆರಗುವರಘವ ಮೂಲಕೆತ್ತೆತ್ತಿ ಬಿಸುಟುವ ಕೃಪಾಳೆ 3
ಬೇಕೆಂಬೊ ಬಯಕಿತ್ತು ಸಾಕು ಸಾಕೆನಿಸುವರು ಲೋಕದೊಳಗ್ಯಾರುಂಟು ನಿನ್ನ ಬಿಟ್ಟು |ಏಕೆ ವಿವೇಕೆ ಎನ್ನೀ ಕುಟಿಲ ಗುಣ ನೋಡ ಬೇಕೆಕ್ಷಮೆ ಮಾಡಿದರೆ ಮೈಯುಳಿಯುವದು 4
ಕಾಯಜನ ಮಾತೆ ಸಿತಕಾಯನರ್ಧಾಂಗಿ ಜಗಕಾರ್ಯನಿರ್ಮಿಸುವ ನರರುದಿಸಿ ಮೂರು || ಕಾಯಡಗಿ ಹೋದನಿಷ್ಕಾಯ ಪರಶಕ್ತ್ಯೆನ್ನ ಕಾಯ್ದುಕೊಳ್ಳೆಲೆ ತಾಯಿ ಸ್ತ್ರೀಯರನ್ನೆ 5
ಸಾರಿದರ ಹೊರೆವ ಸಂಸಾರದೊಳು ಮುಳುಗಿದರೆ ತಾರಿಸುವ ತವಕದಿಂ ತರುಳೆ ತರುಣೀ | ಸೇರಿಸುತ ತಿರುಗಿ ತನು ಬಾರದ್ಹಾದಿಗೆ ಒಯ್ದು ತಾರಿಸುವ ಸ್ಥಿರದಿ ನೀ ತೋಯಜಾಕ್ಷಿ 6
ಕುಸುಮ ಸರ್ಪಾದಿಗಳು ಕುಸುಮಗಂಧಿಯ ಪದಕೆಕುಸುಮ ವೃಷ್ಟಿಗವು ದೇವಿಯ ಸುಕೃತಿಗಳೂ | ಕುಸುಮದೊಳು ಕರಕಂಜ ಕುಸುಮದೊಳುವರವಿಡಿದ ಕುಸುಮಶರ ರಿಪು ಶಂಕರನ ಶಂಕರೀ 7


Thursday, 26 December 2019

ರಾಜತಾದ್ರಿ ನಿಲಯನ rajataadri nilayana

ರಾಜತಾದ್ರಿ ನಿಲಯನ | ರಜನೀಶ ಧರನತೋರೆ ಪಾರ್ವತಿಯೆ ಪ
ಪಂಚಾನನ ಶಂಕರನ | ಶ್ರೀ ಹರಿಮಂಚಪದವ ಪಡೆದವನಪಂಚಬಾಣ ಮದಹರನ ಉರುವಿರಂಚಿ ಕುವರ ದೂರ್ವಾಸ ಶುಕನ ತೋರೆ ಪಾರ್ವತಿಯೆ 1
ನಂದಿಸುಶ್ಯಂದನ ಶಿವನ ಗರಳಕಂಧರ ತ್ರಿಪುರಾಂತಕನಮಂದಾಕಿನಿಧರ ಭವನ ಸುರವೃಂದ ವಿನುತ ನಗಚಾಪಭವನ ತೋರೆ ಪಾರ್ವತಿಯೆ 2
ಸಾಮಜ ಚರ್ಮಾಂಬರನ | ಶುಭಕಾಮಿತ ಫಲದಾಯಕನವಾಮದೇವ ಮುನಿಸುತನ | ಶ್ರೀವರಶಾಮಸುಂದರನ ಸುಖನ ತೋರೆ ಪಾರ್ವತಿಯೆ 3

Monday, 16 December 2019

ಶಶಿವದನೇರೆಲ್ಲ ದಿವಸಿವ್ರತವ shashivadaneralla divasi vrata

ಶಶಿವದನೇರೆಲ್ಲ ದಿವಸಿವ್ರತವ ಮಾಡಿರೇ
ಶಶಿಧರನ ಮಡದಿಯಾ ಭಜಿಸಿ ಪಾಡಿರೇ ಪ
ಕತ್ಲೆರಾಯನ ಪತ್ನಿಯೂ | ಸುಪುತ್ರನ್ನ ಪಡೆಯಲೂ
ಇತ್ತಳು ವಸ್ತ್ರಗಳನ್ನು ಚೆಂದದಿ ದ್ವಿಜರಿಗೆ ಕೊಡಲೂ
ಪಡೆದಳು ಪುತ್ರನಾ ಬುಧರು ಕಾಳಿಂಗ ನೆಂದು ಕರೆದರು
ಪರಿ ಪರಿವಿಧದಿಂದ ರಾಜರು ಹರುಷಗರೆದರೂ 1
ಗಿರಿಕಾನನದಿ ಚಲಿಸಿ | ಮೃಗವ ಸಂಹರಿಸೀ
ಬಾಲಕನೂ | ಬರುತಿರಲು ಬಾಲಕನು ವ್ಯಾಘ್ರದ ದನಿಕೇಳಿ
ಮೂರ್ಛೆಗೈದು ಮೃತನಾದನು 2
ಮೃತನಾದ ಸುತಗೆ | ಸತಿಯ ಕೊಡಬೇಕೆಂದು ಸಾರಿಸಿದ
ಸತತ ದ್ರವ್ಯಗಳ ಕೊಡುವೆನೆಂದು ಸಾರಿಸಿದ
ಸತತ ದ್ರವ್ಯ ಕೊಡುವೆನೆಂದು ಮಾತ ನಾಡಿದೆ ದ್ವಿಜನಸುತನ
ಸತಿಯ ತ್ಯಜಿಸಿ ಹೋಗಿರಲು ನಿಜಸುತಗೆ ಭಗಿನಿಯ
ಕೊಡುವೆನೆಂದು ನುಡಿದಾನು 3
ಬೆಳ್ಳಿ ಬಂಗಾರ ಸಹಿತ ನಮಗೆ ಇರುವೋದೂ
ಕನ್ನಿಕೆಗೆ ಮಾಂಗಲ್ಯ ಬಂಧನ
ಮಾಡಿಹೋದಾರು 4
ರಾಜನು ಹೋಗುವಾಗ | ಸೊಸಿಯಮನೆಗೇಳೆಂದನು
ಪತಿಯ ಬಿಟ್ಟು ಹ್ಯಾಂಗೆ ಮನೆಗೆ ಬರುವೋದೆಂದಳು
ಪತಿಯ ಬಿಟ್ಟು ಬಂದರೆ ಪತಿವ್ರತವು ಇರುವೋದೆ
ಹಿತವು ಬಯಸಿ ಬಂದರೆ ಸದ್ಗತಿಯು ದೊರೆವುದೇ 5
ಒಂದು ದಿನ ಸುಂದರಿ ಬಂದವರ ಕೇಳಿದಳು
ಮಂದಗಮನೆ ಇಂದು ದಿವಸಿ ವ್ರತವು ಅಂದರು
ಹಿಂದೆ ಗೌರಿಪೂಜಿಸಿದೆ ಮುಂದೆ ವ್ರತವನು
ಬಂಧು ಬಳಗೆ ಇಲ್ಲದಲೆ ಮಾಡುವುದೇನು 6
ನಾರುಬತ್ತಿ ನೀರು ಎಣ್ಣೆ ಗೌರಿಗೆ ಮಾಡಿದಳು
ಅಪಾರ ಸದಿಗೆ ಮುರಿದುಗೌರಿ ಪೂಜಿಸಿದಳು
ಹರತಾ ಭಂಡಾರ ಒಡೆದು ಹರುಷಗರೆದನು
ವರ ಕಾಳಿಂಗ ಕ್ಷಣ ದೊಳೆದ್ದು ಮಾತಾಡಿದನು
ಪತಿಯಸಹಿತಾಗಿ ತಮ್ಮ ಗೃಹಕೆ ಬಂದರು
ಸತತ ನಾರಸಿಂಹನ ಸ್ಮರಣೆ ಮಾಡಿದರು 7

Saturday, 14 December 2019

ಇಂದುವದನೆ ಪಾರ್ವತಿಯೆ induvadane parvatiye

ಇಂದುವದನೆ ಪಾರ್ವತಿಯೆ ನಾ ಇಲ್ಲಿಗೆ
ಬಂದೆನು ಬಾಗಿಲು ತೆಗೆಯೆ ಜಾಣೆ
ಬಂದೆನು ಬಾಗಿಲು ತೆಗೆಯೆ ||

ಬಂದವರ್ಯಾರೀ ವ್ಯಾಳ್ಯದಿ ಬಾಗಿಲು
ಬಂದು ತೆಗೆಯೊರ್ಯಾರಿಲ್ಲ ಈಗ
ಬಂದು ತೆಗೆಯೊರ್ಯಾರಿಲ್ಲ ||

ಅಂಗನಾಮಣಿ ಕೇಳೆ ಗಂಗಾಧರೆನಿಸಿದ
ಚಂದ್ರಶೇಖರ ನಾ ಬಂದೀನೆ ಜಾಣೆ
ಚಂದ್ರಶೇಖರ ನಾ ಬಂದೀನೆ ||

ಸಿಂಧುರಾಜನ ಸತಿಸುತರನ್ಹೊತ್ತಿಲ್ಲಿಗೆ
ಬಂದ ಕಾರಣವೇನು ನೀನು ಅವ
ರಿಂದ ಕಾರಣ ಮತ್ತೇನು ||

ಕುಸುಮಲೋಚನೆ ಕೇಳೆ ಪಶುಪತಿ ನಾ ಬಂದೆ
ಕುಶಲದಿ ಬಾಗಿಲು ತೆಗೆಯೆ ಜಾಣೆ
ಕುಶಲದಿ ಬಾಗಿಲು ತೆಗೆಯೆ ||

ಪಶುಗಳಿಗೆಲ್ಲ ಪತಿಯಾದರೆ ನಿನ ಕೊಂಬು
ಹಸನಾಗಿ ತೋರಿಸೊ ಎನಗೆ ಕೊಂಬು
ಹಸನಾಗಿ ತೋರಿಸೊ ಎನಗೆ ||

ಸರ್ವಶರೀರದಲ್ಲೆತ್ತಿಕೊಂಡಿರುವಂಥ
ಶ್ರೇಷ್ಠ ಶಿವನು ನಾ ಬಂದೀನೆ ಜಾಣೆ
ಶ್ರೇಷ್ಠ ಶಿವನು ನಾ ಬಂದೀನೆ ||

ಸರ್ವ ಸೇರಿರುವಂಥ ಹುತ್ತ ನೀನಾದರೆ
ಇತ್ತ ಬರುವೋದುಚಿತಲ್ಲ ಪೋಗೊ
ಇತ್ತ ಬರುವೋದುಚಿತಲ್ಲ ||

ಕಾಂತೆ ಪಾರ್ವತಿ ನೀಲಕಂಠ ನಾ ಬಂದೀನಿ
ಸಂತೋಷದಿ ಬಾಗಿಲು ತೆಗೆಯೆ
ಸಂತೋಷದಿ ಬಾಗಿಲು ತೆಗೆಯೆ ||

ಕಂಠದೊಳಗೆ ಕಪ್ಪಿದ್ದರೆ ನೀ ನವಿ-
ಲಂತೆ ಕುಣಿದು ತೋರಿಸೆನಗೆ ನವಿ-
ಲಂತೆ ಕುಣಿದು ತೋರಿಸೆನಗೆ ||

ಫಾಲಾಕ್ಷ ನಾ ರುಂಡಮಾಲೆ ಧರಿಸಿದಂಥ
ಶೂಲಿಯು ನಾನು ಬಂದೀನೆ ತ್ರಿ-
ಶೂಲಿಯು ನಾ ಬಂದೀನೆ||

ಮೂರು ಶೂಲೆಗಳ್ಯಾವ್ಯಾವ ಕಡೆಯಲುಂಟು
ಭಾಳ ಬಲ್ಲವರಲ್ಲೆ ಪೋಗಯ್ಯ ನೀ
ಭಾಳ ಬಲ್ಲವರಲ್ಲೆ ಪೋಗಯ್ಯ ||

ಪ್ರಾಣದೊ(ದ್ವ)ಲ್ಲಭೆ ಕೇಳೆ ಸ್ಥಾಣು ನಾ ಬಂದೀನಿ
ಜಾಣೆ ನೀ ಬಾಗಿಲು ತೆಗೆಯೆ ಒಳ್ಳೆ
ಜಾಣೆ ನೀ ಬಾಗಿಲು ತೆಗೆಯೆ ||

ಸ್ಥಾಣು ನೀನಾದರೆ ವೇಣುಮದ್ದಲೆ ಮಾಡೊ
ಜಾಣರ ಮನೆಗೆ ನೀ ಪೋಗಯ್ಯ ಒಳ್ಳೆ
ಜಾಣರ ಮನೆಗೆ ನೀ ಪೋಗಯ್ಯ ||

ಶಂಬರಾರಿಯ ಸಂಹರಿಸಿದ ಗಜ ಚ-
ರ್ಮಾಂಬರಧಾರನು ನಾನೇ ಚ-
ರ್ಮಾಂಬರಧಾರನು ನಾನೇ ||

ಕಾಮನ ವೈರಿ ಭಸ್ಮಾಂಗವ ಧರಿಸಿz À
ಸಾಮಜ ವಸನವ ನೋಡಿ ಇರ-
ಲಾರೆನು ನಿನ್ನೊಡಗೂಡಿ||

ಭೂತಗಣಂಗಳ ನಾಥನಾಗಿರುವೊ ಪ್ರ-
ಖ್ಯಾತನು ನಾನು ಬಂದೀನೆ ಸದ್ಯೋ-
ಜಾತನು ನಾನು ಬಂದೀನೆ ||

ಭೂತಗಣವ ಕೂಡಿ ಯಾತಕೆ ಬರುವುದು
ಭೀತಿ ಬಡುವೆ ಮುಂಚೆ ಸಾಗೋ ನಾ
ಭೀತಿ ಬಡುವೆ ಮುಂಚೆ ಸಾಗೋ||

ಮಾತಿಗೆ ಮಾತನಾಡುವೋರೆ ಪಾರ್ವತಿ ಕೇಳೆ
ಮೂಕನಂತಿರುವೆನೆ ನಾನು ಇನ್ನು
ಮೂಕನಂತಿರುವೆನೆ ನಾನು ||

ಮೂಕನಂತಿರುವುದ್ವಿವೇಕ ಭೀಮೇಶಕೃಷ್ಣ-
ನ್ನ ಕಾರುಣಕೆ ಪಾತ್ರಳೇನೋ ನಿನಗೆ
ನಾ ಕೈಯ ಮುಗಿವೆ ಬಾ ನೀನು||

Friday, 6 December 2019

ಪಾರ್ವತಿ ದಕ್ಷಕುಮಾರಿ ನಿನ್ನ parvati daksha kumari ninna

ಪಾರ್ವತಿ ದಕ್ಷಕುಮಾರಿ ನಿನ್ನ | ಸಾರ್ವೆ ಸಂತತ ಕುಜನಾರೀ ||ಆಹಾ||
ದೂರ್ವಾಸನರ್ಧಾಂಗಿ ಸರ್ವಜೆÕ ಯನ್ನಯ ||
ಚಾರ್ವಾಕ ಮತಿ ಕೀಳಿ ತೋರ್ವದು ಸುಪಥವ ||pa||
ದುರ್ಗೆ ಭವಾನಿ ರುದ್ರಾಣಿ ಗೌರಿ | ಸ್ವರ್ಗಜಿನಾರಾಧ್ಯ-ಮಾನಿ ||
ಸೇರೆದುರ್ಗುಣದವರ ಸುಜ್ಞಾನಿ | ಭಕ್ತವರ್ಗ ಪೋಷಕ ಶುಕ-ವಾಣೀ ||ಆಹಾ||
ನಿರ್ಗುಣರಾದುತ್ತಮರ್ಗೆವೊಲಿವ ಅಪ |ವರ್ಗದ ನಾಳೆ ನರರ್ಗೆ ಮಣಿಸದಿರೆ ||1||
ಚಂಡಿ ಕಾತ್ಯಾಯಿನಿ ಉಮ್ಮಾ ನಾಲ್ಕು | ಮಂಡೆಯವನಸೊಸೆ | ಯಮ್ಮಾ |
ನಾಡೆಕಂಡು ಭಜಿಪೆನಿತ್ಯನಿಮ್ಮ |ಪಾದಪುಂಡರೀಕದ್ವಯವಮ್ಮಾ ||ಆಹಾ||
ಉಂಡು ವಿಷವ ನಿನ್ನಗಂಡಬಳಲಿ ಕೈ |ಕೊಂಡೌಷಧ ತಂಡ ತಂಡದಲೆನಗೀಯೆ ||2||
ಪಾವಕನೊಳು ಪೊಕ್ಕ ಪತಿವ್ರತೆ | ಯಾವಾಗ ಮಾನಿಸತ್ಕಥೆ |
ಯಲ್ಲಿಭಾವನೆ ಕೊಡೆಪ್ರತಿಪ್ರತಿ | ಜಾವ ಜಾವಕೆ ಷಣ್ಮುಖಮಾತೆ ||ಆಹಾ||
ಕೋವಿದರೊಡತಿ ಕೇಳಾವಾಗ ವೈರಾಗ್ಯ |ವೀವದು ದುರಾಪೇಕ್ಷೆ ನಾವೊಲ್ಲೆನೆಂದೆಂದೂ ||3||
ಬೇಡಿದಭೀಷ್ಟವ ಕೊಡುವೆ | ದಯ ಮಾಡಿ ಭಕ್ತರಕರಪಿಡಿವೆ |
ದೋಷಕಾಡುಳಿಯದಂತೆ ಸುಡುವೆ | ನಿನ | ಗೀಡೆ ಮಹದ್ಭಯಕಡಿವೆ ||ಆಹಾ||
ರೊಢೀಶ ಶಿವನೆಂದು ಆಡಿಸದಿರು ಬುದ್ಧಿ |ಗೇಡಿ ದಾನವರಂತೆ ನೀಡು ಶ್ರೀಹರಿ ಸೇವೆ ||4||
ಮೇಶ ಪ್ರಾಣೇಶ ವಿಠ್ಠಲನೆ | ಜಗದೀಶನೆಂಬುವ ದಿವ್ಯ-ಜ್ಞಾನೆ | ಕೊಟ್ಟು |
ಪೋಷಿಪುದೆನ್ನ ಸುಜಾಣೆ | ನೀನುದಾಸಿಸೆ ನಾನಾರಕಾಣೆ ||ಆಹಾ||
ಈಶೆ ಪಂಚ ಮಹಾದೋಷಿ ಬಿಡದೆ ನಿತ್ಯಾ |ಈ ಶರೀರದೊಳಿಹ್ಯಘಾಸಿಮಾಡುವನನ್ನು||5||

ನಾರಿ ಗೌರಿ ಕೌಮಾರಿ nari gouri koumari

ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ
ವಾರಿಯನು ಧರಿಸುವ ನಾರಿ ಗೌರಿ ಕೌಮಾರಿ||pa||
ಬಾಣ ಕುಂಭನೆಂಬೊ ದಾನವರೀರ್ವರು
ಕ್ಷೋಣಿಯೊಳು ಬಂದಲ್ಲಿ ತಪವ ಮಾಡಿ
ಕಮಲ ಗರ್ಭನವೊಲಿಸಿ ವೇಗದಲಿ
ಏನು ವರ ಬೇಡೆನಲು ನಗುತಲವನು ಸುರಿದನು ||1||
ಜಗಕ್ಕೊಡಿಯನಾವಾತ ಆತನ ತನು
ಸಂಬಂಧಿಗಳೆಮ್ಮ ಕೊಲ್ಲಲ್ಲಿ ಉಳಿದವರ
ಬಗಿಯದಂತೆ ವರವನು ಪಾಲಿಸೆನಲು
ನಗುತ ಲೋಕೇಶ ದುರುಳರಿಗೆ ಸಲೆ ಇತ್ತಾ ||2||
ಚತುರ್ದಶ ಲೋಕವನು ಗೆದ್ದು ತ್ರಿದಶರಾ
ಮಿತಿಯಿಲ್ಲದೆ ಮಾನಭಂಗ ಮಾಡಿ
ಪತಿತರು ಈ ತೆರದಲಿರುತಿರಲು ವಿಬುಧರು
ಚತುರ ಮುಖಗೆ ಮೊರೆಯಿಡಲು ಹರಿಗೆ ಬಿನ್ನೈಸಿ||3||
ತಿಳಿದು ಕುಂಡಲನೊಲಿದು ದ್ವಾಪಾರಾಂತ್ಯದಲಿ
ಖಳ ಕಂಸನೆಂಬುವನು ಪುಟ್ಟಿ ತನ್ನ
ಬಲದಲಿ ತನ್ನ ಅನುಜೆಯರ ಶರೆಯುಯಿಟ್ಟು
ಬಳಲಿಸುವವಳಿಗೊಲಿದು ಅವತಾರ ಮಾಳ್ಪ ಯುದಕುಲದಲಿ ||4||
ಎನ್ನ ಕೂಡಲೀ ದುರ್ಗಿ ಜನಿಸಿ ಬರಲು ಅವ
ಳನ್ನ ಕೊಲ್ಲುವೆನೆಂದು ಕಂಸ ಮುನಿಯೆ
ತನ್ನ ಶಕ್ತಿಯಿಂದಾ ಗಗನಕ್ಕೆ ಪಾರಿ ಬರಲು
ಘನ್ನ ಘಾತುಕರನ್ನ ಮಡುಹಿ ಬಿಡುವಳೆನಲು ||5||
ಇಂತು ಪೇಳಲಿ ಅಜನು ಸಂತೋಷದಿರಲಿತ್ತ
ದಂತಿ ಗಮನಳು ಉದುಭವಿಸಿ ಬಂದು
ಪಿಂತೆ ಮಾಡಿದ ತಪಸು ಸಿದ್ಧಿಸಿತು ಎನಗೆನುತ
ಅಂತಕರಾಗಿದ್ದ ಖೂಳರ ಸದೆ ಬಡಿದು ||6||
ಹರಿಕೃಪೆಯಿಂದ ದಕ್ಷಿಣ ಶರಧಿಯಲಿ ನಿಲ್ಲಲು
ಪರಮ ಮುನಿ ಅಗಸ್ತ್ಯ ಪೂಜಿಸಿದನು
ಶರರಾಜ ಬಂದು ಮದುವೆನೈದಲು
ಪರಮೇಷ್ಠಿ ಹರನ ಸಹಿತಲಿ ನಡೆತಂದಾ ||7||
ಬರಲಾಕ್ಷಣದಲ್ಲಿ ಕಲಿಯುಗ ಪ್ರಾಪುತವಾಗೆ
ಮರಳೆನಿಂದರು ವರ ಸುಧೇಂದ್ರವೆಂಬೊ
ಪುರದಲ್ಲಿ ಪೂಜೆಗೊಳ್ಳುತಲ್ಲಿರಲು ಇತ್ತ ಸುಂ
ದರ ಕನ್ಯಾಮಣಿಯಾಗಿ ದಶದಿಶಿಗೆ ಪೊಳೆಯುತಿರೆ||8||
ಅಂದಾರಭ್ಯನಾಗಿ ಕನ್ಯಾಕುಮಾರಿ ಎನಿಸಿ
ಬಂದು ನವತೀರ್ಥದಲಿ ಯಾತ್ರೆ ಜನರು
ಮಿಂದಾಗಲೆ ಮನದಂತೆ ಭಕುತಿಯನಿತ್ತು
ಪೊಂದಿಸುವೆ ವಿಜಯವಿಠ್ಠಲನ ಪಾದದಲ್ಲಿ||9||

ಅಂಬಾ ನೀ ಹೂವ ಪಾಲಿಸೆ amba nee huva palise

ಅಂಬಾ ನೀ ಹೂವ ಪಾಲಿಸೆ ವರ ನೀಡೆ ಶ್ರೀ ಜಗ-
ದಂಬಾ ನೀ ಹೂವ ಪಾಲಿಸೆ
ಅಂಬಾ ನೀ ಹೂವ ಪಾಲಿಸೆ ಶಂಭು ಶಂಕರನ ರಾಣಿ
ರಂಭೆ ಪಾರ್ವತಿ ನಿನ್ನ ಪಾದಾಂಬುಜಕ್ಕೆರಗುವೆ ||pa||
ಬಳೆಯು ಕರಿಯಮಣಿ ಕೊರಳÀ ಮಂಗಳ ಸೂತ್ರ
ಸ್ಥಿರವಾಗಿಯಿರುವಂತೆ ಸರ್ವ ಸಂಪತ್ತು ನೀಡಂಬಾ ||1||
ಮಕ್ಕಳು ಮನೆ ಭಾಗ್ಯ ತೊಟ್ಟಿಲು ತೂಗುವಂತೆ
ಮೃಷ್ಟಾನ್ನ ದಾನ ಮಾಡಲಿಷ್ಟಾರ್ಥದ್ವರಗಳ ಅಂಬಾ||2||
ರುದ್ರನ ಸತಿಯಳೆ ಬುದ್ಧ್ಯಾತ್ಮಳೆನಿಸುವಿ
ಭದ್ರೆ ನಿನ್ನಯ ಮುಡಿಯಲ್ಲಿದ್ದ ಮಲ್ಲಿಗೆಯ ನೀಡಂಬಾ ||3||
ಇಂತು ಬೇಡುವೆ ನಿನ್ನ ಸಂಪಿಗೆ ಮುಡಿಮ್ಯಾಲಿ-
ದ್ದಂಥ ಕುಸುಮದೊಳು ಶಾವಂತಿಗೆ ಸರವ ||4|
ಭೀಮೇಶಕೃಷ್ಣನ ನಿಜ ಪಾದಭಜಕಳೆ ನೀ
ದಯದಿಂದ ಧರ್ಮ ಕಾಮ್ಯಾರ್ಥದ್ವರಗಳ ||5||

ಗೌರಿ ದೇವಿಗೆ ಸಖಿ ತಾರೆ ಆರುತಿ gouri devige sakhi aaruti

ಗೌರಿ ದೇವಿಗೆ ಸಖಿ ತಾರೆ ಆರುತಿ||pa||
ಮುನಿಜನ ವಂದಿತೆ ಮನದಭಿ ಮಾನಿಯೆ |
ಗಣಪತಿ ಷಣ್ಮುಖ ಜನನಿ ದೇವಿಗೆ ||1||
ಶಂಕರಿ ಭಕ್ತಸುಶಂಕರಿ ದೈತ್ಯ ಭ
ಯಂಕಾರಿಯಾದ ಶಶಾಂಕ ಮುಖಿಗೆ ||2||
ಶಾಮಸುಂದರನಾಮ ಪತಿ ಸಹ
ನೇಮದಿ ಪಠಿಸುವ ಹೈಮಾವತಿಗೆ ||3||

ಪಾಲಿಸೆ ಅಂಬೆ ಗುಣಗಣೆ ಗೌರಿ palise ambe gunagane gouri

ಪಾಲಿಸೆ ಅಂಬೆ ಗುಣಗಣೆ ಗೌರಿ ||pa||
ಕಾಮಿತ ಫಲ ಪರಿಪೂರ್ಣಳೆ
ಚಿಂತಾಮಣಿಗುಣಪೂರ್ಣಳೆ ||1||
ಮಂಗಳ ಮೂರ್ತಿಯ ಜನನಿ
ಮಂಗಳಪ್ರದ ಸುರ ಕಾಮಿನಿ ||2||
ನರಸಿಂಹವಿಠ್ಠಲದಾಸಿ
ಸರಸಿಜಮುಖಿ ಮೃದುಹಾಸಿ||3||

ಕರುಣಿಸು ವರಗೌರಿ karunisu varagouri

ಕರುಣಿಸು ವರಗೌರಿ ಭರದಿಂದ ವರವನ್ನೂ
ಶರಣಾಪ್ತ ಬೇಡುವೆ ನಿನ್ನಾ ||
ಪಾರ್ವತೀ ತಾಯೇ ಪಾಮರರಿಗೆ ಪರಮಪಾವನ್ನೆ
ಪರಿಪಾಲಿಸುತ್ತ ವರವಿತ್ತು ನೀ ಕಾಪಾಡೆ ||1||
ಪತಿಪಾದ ಸೇವಾ ಸತತದೊಳಿತ್ತು ಸತಿಗೆ ಮಾಗಲ್ಯ
ನಿರತವೀಯೆ ತಾಯೆ ಸಕಲಕೆ ಶ್ರೀ ಗೌರಿ||2||
ಪಾದ ಸೋಸಿಲಿ ಭಜಿಪೆ
ವರವೀಯೆ ತಾಯೆ ಶಂಕರಿ ಕಾಯೆ ದೇಹಿಮೆ ||3||

ಆರತಿಯನೆತ್ತಿರೆ ನಾರೇರೆಲ್ಲರು aaratiettire naariyarellaru

ಆರತಿಯನೆತ್ತಿರೆ ನಾರೇರೆಲ್ಲರು||pa||
ಕಾರುಣ್ಯ ಪಾಂಗಳಿಗೆ ಗೌರಿದೇವಿಗೆ||a.pa||
ದೇವರಾಜ ಸೇವ್ಯಮಾನ ಪಾವನಾಂಘ್ರಿಗೆ
ಜೀವಕೋಟಿಗನ್ನವಿತ್ತು ಕಾವ ದೇವಿಗೆ ||1||
ಸರ್ವ ಸೌಭಾಗ್ಯವೀವ ಶರ್ವಜಾಯೆಗೆ
ಪರ್ವತೇಶ ತನಯಳಿಗೆ ಗರ್ವರಹಿತೆಗೆ ||2||
ರಕ್ಷೌಘ ಧ್ವಂಸಿನಿಗೆ ದಕ್ಷ ಕನ್ಯೆಗೆ
ಲಕ್ಷ್ಮೀಕಾಂತನ ಭಗಿನಿ ಲಕ್ಷಣಾಂಗಿಗೆ ||3||

ಬಾರೆ ಗೌರಿ ಪೂಜಿಸುವೆನು baare gouri pujisuvenu

ಬಾರೆ ಗೌರಿ ಪೂಜಿಸುವೆನು ಸಾರಸಾಂಬಕಿ
ಸಾರುವೆ ಸಂಸಾರದಿ ಸುಖದೋರೆ ವಿಧುಮುಖಿ ||pa||
ಕುಂದ ಮಲ್ಲಿಗೆ ಜಾಜಿ ಕುಸುಮ ಗಂಧ ಪರಿಮಳ
ಚಂದದಿ ಸಮರ್ಪಿಸುವೆನು ಪುಷ್ಪಫಲಗಳ||
ಮಂಗಳೆಂದು ಪಾಡುತ ಬೆಳಗುವೆನು ಆರುತಿ
ಮಂಗಳಗೌರಿಯೆ ಕೊಡು ಸೌಭಾಗ್ಯ ಸಂತತಿ||
ಮಂಗಳ ಪ್ರದಾತೆ ಗಿರಿಸಂಭೂತೆ ಸುರನುತೆ
ಮಂಗಳಾಂಗಿ ಕುರು ಕರುಣಾಮಯಿ ನಮೋಸ್ತುತೆ ||
ಪತ್ಯಂತರ್ಗತ ಹರಿಯಸೇವೆ ನಿತ್ಯ ಮಾಡಿಸೆ
ಪುತ್ರ ಪೌತ್ರಾದಿ ಸಂಪದವಿತ್ತು ರಕ್ಷಿಸೆ ||
ರತಿಯ ಪತಿಯ ಪಿತಗೆ ಸದಾಪ್ರತಿಮೆಯೆನಿಸುವ
ಅತಿಥಿಗಳನು ಸೇವಿಸುವ ಸುಮತಿಯ ಕೊಡು ಜವ||
ಸಡಗರದಿ ನಿಮ್ಮಡಿಯ ಶೇವೆ ಬಿಡುದೆ ಮಾಡುವೆ
ಮೃಡನ ರಾಣಿ ಕೊಡುವರಗಳ ಗಡನೆ ಬೇಡುವೆ ||
ಶರಣು ಜನರ ಪೊರೆವ ಕಾರ್ಪರ ನಾರಸಿಂಹನ
ಚರಣ ಕಮಲಯುಗದಿ ಭಕುತಿ ಇರಲಿ ಅನುದಿನಾ ||

ಆರೋಗಣೆ ಮಾಡಮ್ಮ ಮಂಗಳಗೌರಿ aarogane maadamma mangalagouri

ಆರೋಗಣೆ ಮಾಡಮ್ಮ ಮಂಗಳಗೌರಿ
ಬೇಡಿಕೊಂಬೆನೆ ನಿನಗೆ ಬೇಡಿದಡಿಗೆ ಎಡೆ
ಮಾಡಿ ತಂದಿಟ್ಟಿಹೆ ಜೋಡಿಸಿ ನಿನಗೆ
ಕೈ ಮುಗಿವೆನೆ ಮಹಾತಾಯೆ ||pa||
ನಂದಿವಾಹನನರ್ಧಾಂಗಿಯ ಪೂಜಿಸಿ
ಗಂಧಕುಂಕುಮದಿಂದ
ತಂದು ಕಸ್ತೂರಿ ಕಮಲದ ಪುಷ್ಪಗಳುಡಿ
ತುಂಬಿ ನೈವೇದ್ಯವ ತಂದಿರಿಸುವೆ ತಾಯೆ ||
ಅಚ್ಚ ಮುತ್ತಿನ ಹರಿವಾಣದಿ ಮಾಲತಿ
ಬಟ್ಟ್ಟಿವಿ ಗೌಲಿಗಳು
ಅಷ್ಟಗುಳ್ಳವು ಶಾವಿಗೆ ಪರಡಿ ಪಾಯಸ
ಭಕ್ಷ ಎಣ್ಣೋರಿಗೆ ಭಾರಿಬಟ್ಟಲು ತುಪ್ಪ ||
ಮಂಡಿಗೆ ಚೂರ್ಮವು ಬುಂದ್ಯ ಬೀಸೋರಿಗೆ
ದುಂಡುಗುಳ್ಳೋರಿಗೆಯು
ಚೆಂದವಾಗಿದ್ದ ಚಕ್ಕುಲಿ ಕರ್ಜಿಕಾಯ್ಗಳು
ಅಂದವಾದ ಕಾಯಿರಸ ಶಾಖ ಪಾಕವು ||
ಸಣ್ಣ ಅಕ್ಕಿಯ ಶಾಲ್ಯಾನ್ನಕೊಪ್ಪುವ ತವ್ವೆ
ಇನ್ನು ದಧ್ಯನ್ನಗಳು
ಸನ್ಮತವಾಗಿದ್ದ ಶಾವಿಗೆಫೇಣಿ ಸಕ್ಕರೆ
ರುಬ್ಬಿದ ಆಂಬೊಡೆ ರುಚಿಯಾದ ಕಲಸನ್ನ ||
ಘೃತ ಸೀಕರ್ಣೆ ಕಾಯ್ಹಾಲು
ಹೊಯ್ಗಡುವನಿಟ್ಟು
ಸಾರು ಸಾಂಬಾರ ಚಟ್ಟಣಿ ಕೋಸಂಬರಿ
ನೀರೆ ನಿನಗೆ ಪನ್ನೀರು ತಂದಿರಿಸುವೆ ||
ದೇವಿ ನಿನ್ನ ಮನೋಭಾವ ತಿಳಿದು ನಾ
ಭೀಮೇಶಕೃಷ್ಣನಿಗೆ
ಬ್ಯಾಗ ಸಮರ್ಪಣೆ ಮಾಡಲು ಮಹಾದೇವ
ಸ್ವಾದ ಸವಿದಾಸುಖದಿಂದಡ್ವಿಳ್ಯವ ಕೊಳ್ಳೆ ||

ಹಿಮಾಚಲೆಂದ್ರನ ಕುಮಾರಿ ಶಂಕರಿ himachalendrana kumari

ಹಿಮಾಚಲೆಂದ್ರನ  ಕುಮಾರಿ ಶಂಕರಿ |
ಉಮಾಂಬೆ ಬಾರಮ್ಮಾ || ಪ ||
ಕುಮಾರಿ ಶಕ್ರಾದ್ರಿ ಸಮಸ್ತ ಸುರಗಣ |
ಸಮರ್ಪಿತಾಂಗಿಯೇ  ನಮೋ ನಮೋ ಎಂಬೆ || ಆ. ಪ. ||

ರಾಕ್ಷಸ ದೈತ್ಯ ನೀ ದಾಕ್ಷಾಯಣಿ ತವ |
ದಕ್ಷನ ಪದ ತನಯೇ | ಲಕ್ಷ್ಮೀಕಾಂತನ  |
ಅವರೋಕ್ಷದಿ ಕಾಣುವ |
ಸೂಕ್ಷ್ಮದಿ  ಎನ್ನನು ರಕ್ಷಿಸ ಬೇಕಮ್ಮಾ || 1 ||

ವಿದ್ಯಾಭಿಮಾನಿಯೇ ಸದ್ಯೋಜಾತನ ರಾಣಿ |
ಪದ್ಮಾಸನದಿ ಕುಳಿತು | ವಿದ್ಯಾ ಬುದ್ಧಿಯನಿಟ್ಟು |
ಸದ್ಭಕ್ತಳನ್ನ  ಮಾಡಿ ಶುದ್ಧಾತ್ಮಲೆನ್ನ
ಉದ್ಧಾರ ಮಾಡಮ್ಮ  || 2 ||

ಆರೋಗಣೆಯ ಮಾಡು aaroganeya maad ambuja nayane

ಆರೋಗಣೆಯ ಮಾಡು ಅಂಬುಜನಯನೇ ಸಾಮವೇದಸದನೇ|
ಮಾರಜನನಿಯೇ ಮಧುಸೂದನಪ್ರಿಯೇ ಕಾಮಿತಫಲದಾಯೇ ಗೌರಿಯೇ||
ಶುಭ್ರಸ್ನಾನವ ಮಾಡಿ ಸುಮತಿಯರು ಮುದದಿಂದ ಶುಭ್ರವಸ್ತ್ರವನುಡಿಸಿ ಗೌರಿಗೆ
ತಿದ್ದಿ ತಿಲಕವನಿಟ್ಟು ತೀವ್ರದಿ ಗೌರಿಯ ವಜ್ರಮಾಣಿಕ್ಯದ ಪೀಠದಲ್ಲಿ ಕುಳಿಸ್ವರೋ ||1||
ಹಪ್ಪಳ ಅತ್ತಿರಸ ಒಪ್ಪುಳ್ಳ ಲಡ್ಡಿಗೆ ಚಕ್ಕುಲಿ ಕರಚಿಯಕಾಯ್ಗಳು
ಸಕ್ಕರೆ ಫೇಣಿ ಕೆನೆಮೊಸರು ಮಧು ಕ್ಷೀರ ಮೀಸಲಾದ ಅಡಿಗೆ ಸುವಾಸಿನಿಯರು ಬಡಿಸುವರು||2||
ಅತಿಹಿತದಿಂದಲಿ ಮಾಡಿದ ಅಡಿಗೆಯ ದಳಿಯ ತಪ್ಪದೆ ಬಡಿಸುವರು
ಪುಡಿಎಣ್ಣೋರಿಗೆ ಶೀಕಿಯದ ಉಂಡೆಗಳು ಆದಿಕೊಲ್ಹಾಪುರದ ದೇವಿ ಮಹಾಲಕ್ಷ್ಮೀಗೆ||3||
ಮೀಸಲು ಮಂಡಿಗೆ ಸೂಸಲ ಕಡುಬು ದೋಸೆ ಎಣ್ಣೋರಿಗೆ ನವನೀತ
ಕಾಸಿದ ತುಪ್ಪ ಕೆನೆಮೊಸರು ಮಧು ಕ್ಷೀರ ಭೀಮೇಶಕೃಷ್ಣನ ರಾಣಿ ಭುಂಜಿಸು ಬೇಗ||4||