Labels

Wednesday, 8 January 2020

ಬ್ರಹ್ಮಾದಿಕರನು brahmadhikaranu


ಬ್ರಹ್ಮಾದಿಕರನು ಪರಬ್ರಹ್ಮದಿಚ್ಛಿಲಿ ಪಡೆದಳಮ್ಮ ಪರಂಜ್ಯೋತಿ ಪರಬ್ರಹ್ಮಿಣೀ ಪ
ವಾಣಿ ಕಲ್ಯಾಣಿ ಫಣಿ ವೇಣಿ | ರುದ್ರಾಣಿ ಶರ್ವಾಣಿ ಸುವಾಣಿ ಗೀರ್ವಾಣಿ ವರದೆ | ಗಾಣಿತ್ರಿನಯನ ಅಜನ ರಾಣಿ ಶಂಕರ ಪ್ರಾಣಿ ಪುಸ್ತಕಪಾಣಿ ನಾರಾಯಣೀ 1
ಅಂಬೆ ಲೋಕಾಂಬೆ ಭ್ರಮರಾಂಬೆ ಮೂಕಾಂಬೆ ಹರಡಿಂಬೆ ಪ್ರತಿಬಿಂಬೆ ಕುಚಕುಂಭೆ ಸಾಂಬೆ |ರಂಭೆ ಹೇರಂಬೆ ಶರಣೆಂಬೆ ವರಗೊಂಬೆ ಭಕ್ತರ ಬೊಂಬೆ ಹೊಳೆವ ಗೊಂಬೆ 2
ಕಾಳೆ ಹಿಮ ಬಾಳೆ ಭೂ ಪಾಳೆ ಕುಸುಮಾಳೆ ವನಮಾಳೆ ಕಂದರ ಮೌಳೆ ಕುಟಿಲ ಕುರುಳೆ | ಕೇಳಿನಿನ್ನಯ ಲೀಲೆ ಕಾಲಿಗೆರಗುವರಘವ ಮೂಲಕೆತ್ತೆತ್ತಿ ಬಿಸುಟುವ ಕೃಪಾಳೆ 3
ಬೇಕೆಂಬೊ ಬಯಕಿತ್ತು ಸಾಕು ಸಾಕೆನಿಸುವರು ಲೋಕದೊಳಗ್ಯಾರುಂಟು ನಿನ್ನ ಬಿಟ್ಟು |ಏಕೆ ವಿವೇಕೆ ಎನ್ನೀ ಕುಟಿಲ ಗುಣ ನೋಡ ಬೇಕೆಕ್ಷಮೆ ಮಾಡಿದರೆ ಮೈಯುಳಿಯುವದು 4
ಕಾಯಜನ ಮಾತೆ ಸಿತಕಾಯನರ್ಧಾಂಗಿ ಜಗಕಾರ್ಯನಿರ್ಮಿಸುವ ನರರುದಿಸಿ ಮೂರು || ಕಾಯಡಗಿ ಹೋದನಿಷ್ಕಾಯ ಪರಶಕ್ತ್ಯೆನ್ನ ಕಾಯ್ದುಕೊಳ್ಳೆಲೆ ತಾಯಿ ಸ್ತ್ರೀಯರನ್ನೆ 5
ಸಾರಿದರ ಹೊರೆವ ಸಂಸಾರದೊಳು ಮುಳುಗಿದರೆ ತಾರಿಸುವ ತವಕದಿಂ ತರುಳೆ ತರುಣೀ | ಸೇರಿಸುತ ತಿರುಗಿ ತನು ಬಾರದ್ಹಾದಿಗೆ ಒಯ್ದು ತಾರಿಸುವ ಸ್ಥಿರದಿ ನೀ ತೋಯಜಾಕ್ಷಿ 6
ಕುಸುಮ ಸರ್ಪಾದಿಗಳು ಕುಸುಮಗಂಧಿಯ ಪದಕೆಕುಸುಮ ವೃಷ್ಟಿಗವು ದೇವಿಯ ಸುಕೃತಿಗಳೂ | ಕುಸುಮದೊಳು ಕರಕಂಜ ಕುಸುಮದೊಳುವರವಿಡಿದ ಕುಸುಮಶರ ರಿಪು ಶಂಕರನ ಶಂಕರೀ 7


No comments:

Post a Comment