Labels

Wednesday, 15 January 2020

ಧರ್ಮವೇ ಜಯವೆಂಬ ದಿವ್ಯ ಮಂತ್ರ dharmave jayavemba


ಧರ್ಮವೇ ಜಯವೆಂಬ ದಿವ್ಯ ಮಂತ್ರ | ಮರ್ಮಗಳನೆತ್ತಿದರೆ ಒಳಿತಲಾ ಕೇಳಿ ಪ.
ವಿಷವನುಣಿಸಿದಗೆ ಷಡುರಸವನುಣಿಸಲುಬೇಕು | ದ್ವೇಷಮಾಡುವನ ಪೋಷಿಸಲು ಬೇಕು ||
ಹಸಿದು ಮನೆ ಕೊಂಬವನ ಹಾಡಿಹರಸಲುಬೇಕು | ಅಸು ಹೀರಿದನ ಹೆಸರ ಮಗನಿಗಿಡಬೇಕು 1
ಹಿಂದೆ ನಿಂದಿಸುವರನು ವಂದಿಸುತಲಿರಬೇಕು | ಬಂಧಿಸಿದವನ ಕೂಡ ಬೆರೆಯಬೇಕು ||
ನಿಂದ ನಿಲುವಿಗೆ ಸೇರದವನ ಪೊಗಳಲುಬೇಕು | ಕೊಂದವನ ಗೆಳತನವ ಮಾಡಬೇಕಯ್ಯ 2
ಕೊಂಡೊಯ್ದು ಕೆಡಿಸುವನ ಕೊಂಡಾಡುತಿರಬೇಕು | ಕಂಡರಾಗದವರ ತಾ ಕರಿಯಬೇಕು ||
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ಅಖಂಡ ಮಹಿಮೆಯನರಿತು ನೆನೆಯಬೇಕಯ್ಯ 3


2 comments:

  1. Dharma is great. Can you feel the essence of this song? It's too difficult to follow this Dharma. How can we oppose Muslims who invaded us, burnt our temples and scriptures, raped our women, killed mercilessly?

    ReplyDelete
  2. Dharma is great. Can you feel the essence of this song? It's too difficult to follow this Dharma. How can we oppose Muslims who invaded us, burnt our temples and scriptures, raped our women, killed mercilessly?

    ReplyDelete