Labels

Wednesday 15 January 2020

ದಣಿಯ ನೋಡಿದೆನೋ ವೆಂಕಟನ daniya nodidenu


ದಣಿಯ ನೋಡಿದೆನೋ ವೆಂಕಟನ ಮನ
ದಣಿಯೆ ನೋಡಿದೆ ಶಿಖಾಮಣಿಯ ನಿರ್ಮಲನಪ
ಕೇಸಕ್ಕಿ ಅನ್ನ ಉಂಬುವನ ದುಡ್ಡು
ಕಾಸು ಬಿಡದೆ ಹೊನ್ನುಗಳಿಸಿಕೊಂಬುವನ ||
ದೋಸೆ ಅನ್ನವ ಮಾರಿಸುವನ
ತನ್ನ ದಾಸರ ಮೇಳದಿ ಕುಣಿದಾಡುತಿಹನ1
ಗಂಟಿನೊಲ್ಲಿಯ ಹೊದ್ದಿಹನ-ಹೊರ
ಹೊಂಟು ಹೋಗಿ ಬೇಟೆಯಾಡುತಲಿಹನ ||
ಗಂಟೆ ನಾದಕೆ ಒಲಿಯುವನ ಭೂವೈ-
ಕುಂಠವಿದೆಂದು ಹಸ್ತವ ತೋರಿದವನ2
ಬೆಟ್ಟದೊಳಗೆ ಇದುತಿಹನ ಮನ
ಮುಟ್ಟೆ ಭಜಿಪ ಭಕುತರಿಗೊಲಿದವನ ||
ಕೊಟ್ಟ ವರವ ತಪ್ಪದವನ ಈ
ಸೃಷ್ಟಿಗಧಿಕ ಪುರಂದರ ವಿಠಲನ3


No comments:

Post a Comment