Labels

Wednesday, 8 January 2020

ಮಾಡೋ ಸುವಿಚಾರ ಸಾಧನಾ maado suvichara saadhana


ಮಾಡೋ ಸುವಿಚಾರ ಸಾಧನಾ | ಹವಣಿಕಿಯಲಿ ನಿನ್ನ ಮಾಡೊ ಪ
ಮಾಡಿ ನಿನ್ನ ಕಡಿ ಮೋಹ ಬೇಡಿ ಘನಗೂಡಿನಲ್ಲಿ ಒಡಗೂಡಿ ಸರ್ಕನೆ | ಮಾಡೊ ಅ. ಪ.
ಶ್ರುತಿ ತತಿಯ ಪೇಳಿಹ ವಚನ ಸತತ ಮಾಡೊ ನೀ ಮಥನದನಾ | ಇತರ ಭಾವನತಿಗಳೆದು |ಶಾಂತಿ ನಿಜ ಸ್ಥಿತಿಯ ತಾಳಿ ಸದ್ಗತಿ ಪಡೆಯೊ ನೀ ಮಾಡೊ 1
ಪರಿ ಪರಿಯ ಜನ್ಮಂಗಳನು | ಧರಿಸಿ ಬಟ್ಟಿ ಬಹುಕ್ಲೇಶವನು ಪರಿಹರಿಸಿಗುರುವರನ ಕರುಣದಿಂದರಿತುಕೊಳ್ಳೊ ನಿನ್ನರಿವು ನೋಡಿ ನೀ ಮಾಡೊ 2
ಸ್ಥೂಲ ಸೂಕ್ಷ್ಮ ಕಾರಣದುದಯಾ | ಮೂಲ ಉನ್ಮನಿ ಕೀಲ ಸಾಕ್ಷಿಯನುಕೂಲ ಶಂಕರನ ಲೀಲೆ ನೋಡಿ ನೀ ಮಾಡೊ 3


No comments:

Post a Comment