ಮರೆಯದಿರು ಮರೆಯದಿರು ಗುರುರಾಯನ |ಲೋಕ ಪರಿಪಾಲಿಸುವ ಗುರು ಸಾರ್ವಭೌಮನ್ನ ಪ
ಪರಮೇಶ್ವರನು ತಾನೆ ಪರಮ ಪ್ರೇಮದಿಂದ ಗುರು ರೂಪವನುಧರಿಸಿ ಧರೆಗೆ ಬಂದು, ತ್ವರದಿಂದ ಮಾನವರ ಮರವೆಯನುಪರಿಹರಿಸಿ | ಸ್ಥಿರ ಮುಕ್ತಿ ಸುಖವಿತ್ತು ಪೊರೆವ ಗುರುವರನ 1
ಕರುಣದಿಂ ಜನರ ರಕ್ಷಿಸುವ ಸದ್ಗುರುವರನ | ಶರಣು ಪೊಕ್ಕರೆಕೃಪಾ ಸುಧೆಗರೆವನ | ನಿರುತದಲಿ ಭಕುತರಿಗೆ | ನಿರತಿಶಯಸೌಖ್ಯವನು ಸರಿದಂತೆ ವರವಿತ್ತು | ಮೆರೆವ ದೇಶಿಕನ 2
ಕುವರ ಬಾರೆಂದಭಯ ಕರವ ಶಿರದಲ್ಲಿರಿಸಿ | ನೆರೆ ಸುಬೋಧೆಯಗೈದು ನರಭಾವ ಕಳೆದು | ಮರಣ ಭಯ ಹರಸಿ | ಬಹು ಹರುಷದಿಂದಿರು ಎಂದ ಚಿರ ಸಿಂಧುಗಿಯವಾಸ | ಗುರು ಶಂಕರನ ಪಾದ 3
No comments:
Post a Comment