Labels

Wednesday 15 January 2020

ಧರ್ಮಕ್ಕೆ ಕೈಬಾರದೀ ಕಾಲ dharmakke kai baaradi kaala


ಧರ್ಮಕ್ಕೆ ಕೈಬಾರದೀ ಕಾಲ - ಪಾಪಕರ್ಮಕ್ಕೆ ಮನ ಬಾಹುದೀ ಕಲಿಕಾಲ ಪ.
ದಂಡದೋಷಕೆ ಉಂಟು ಪುಂಡುಪೋಕರಿಗುಂಟು | ಹೆಂಡಿರು - ಮಕ್ಕಳಿಗಿಲ್ಲವೀ ಕಲಿಗಾಲ ||
ಭಂಡೆಯರಿಗುಂಟು ದಿಂಡೆಯರಿಗುಂಟು - ಬೇಡಿ ಕೊಂಡಿವರಿಗಿಲ್ಲವು ಈ ಕಲಿಕಾಲ 1
ಒತ್ತೆಸೂಳೆಗುಂಟು ಮತ್ತೆ ಹಾದರಕುಂಟು | ಹೆತ್ತತಾಯಿಗಿಲ್ಲ ಈ ಕಲಿಕಾಲ ||
ತೊತ್ತೆಯರಿಗೆ ಉಂಟು ಅರ್ತಿಕಾರ್ತಿಗಿಲ್ಲ | ಉತ್ತಮರಿಗೆ ಇಲ್ಲವೀ ಕಲಿಕಾಲ 2
ಹುಸಿದಿಟವಾಯಿತು ರಸ - ಕಸವಾಯಿತು | ಮಸಿ ಮಾಣಿಕವಾಯಿತೀ ಕಾಲ ||
ವಸುಧೆಯೊಳಗೆ ನಮ್ಮ ಪುರಂದರವಿಠಲನ | ಬೆಸಸಿ ಪೂಜಿಪರ್ಗಿಲ್ಲ ಈ ಕಲಿಕಾಲ 3


No comments:

Post a Comment