Labels

Tuesday, 7 January 2020

ಜೀವನ ಕಳೆಗಳು ಮುಳುಗುವ jeevana kalegalu mugiyuva tanaka


ಜೀವನ ಕಳೆಗಳು ಮುಳುಗುವ ತನಕ ಜೀವನ್ಮುಕ್ತನು ತಾನಲ್ಲ || ಜೀವನ ಕಳೆ ತಾನೇ ತಾನಾದರೆ | ಜ್ಯೋತಿರ್ಮಯವೀ ಜಗವೆಲ್ಲ ಪ
ಎಲ್ಲ ಪ್ರಪಂಚವು ಸೋಗಿನ ಪರಿಯಲಿ |ಪಸರಿಸಿ ತೋರುವದೆಲ್ಲಾ ||ಬೆಲ್ಲದ ಮೂಲವು ಕಬ್ಬಿನ ರಸವನು |ಅನುಭವ ಯೋಗಿಯೆ ತಾ ಬಲ್ಲಾ 1
ಮುತ್ತಿನ ಆಕೃತಿ ಬೇರೆ ಬೇರಾದರೆ |ತೇಜವೆ ತತ್ತ್ವಗಳೆಲ್ಲಾ ||ಮುತ್ತಿನ ಮೂಲವು ಸ್ವಾತಿ ಬಿಂದುವು |ಸಿಂಧುವಾದವನೆ ತಾ ಬಲ್ಲಾ 2
ಸುಮನ ಪರಾಗವು ಬೇರೆ ಬೇರಾದರೆ |ಘಮ ಘಮ ಮಕರಂದೆಲ್ಲಾ |ಸುಮನ ಪರಾಗವು ಭೃಂಗಾವಳಿ ಸುಖಸದ್ಗುರು ಶಂಕರ ತಾ ಬಲ್ಲಾ 3


No comments:

Post a Comment