ಪೂಜೆಯ ಮಾಡುವೆನೊ ಸದ್ಗುರುವಿನ | ಪೂಜೆಯ ಮಾಡುವೆನು || ಮಾಜದೆ ತನು ಮನ ಧನವೆಲ್ಲ ಅರ್ಪಿಸಿ | ಪೂಜೆಯ ಮಾಡುವೆನು ಪ
ಗಣಪತಿ ಹರಿಹರರಾ ನಿಜಶಕ್ತಿ ದಿನಪತಿ ನಿಜಭಾಸವು | ತನುವೆಂಬ ಅಷ್ಟಕಂಬದ ಮನೆಯೊಳು ನಾಲ್ಕುಗುಣದ ಚೌಕಿಯನಿಡುವೆ 1
ವೃತ್ತಿ ಉದಾಸೀನಕೆ ನಿರ್ಗುಣವಾದ ಸುತ್ತ ರೇಖೆಯ ಬರೆದು | ಚಿತ್ತವೆಂಬಷ್ಟದಳದ ಕಮಲದೊಳಿಷ್ಟಮೂರ್ತಿಯ ಧ್ಯಾನಿಸುವೆ 2
ವೇದಾದಿ ಕಾರಣದಿ ಉಪನಿಷದಾದಿ ಅರ್ಥದಿ ಶಿರಸಾಮೇದಿನಿ ಮೊದಲಾದ ತತ್ತ್ವಭೂಷಣದಿಂದ ಆದಿನಾಥನ ಪೂಜೆಯ 3
ಪ್ರವೃತ್ತಿ ಸ್ಥಾನದಲ್ಲಿ ಫಣಿಯಲ್ಲಿ ನಿವೃತ್ತಿ ವಿಭೂತಿಯು ನಿರ್ವಂಚನೆಯಾದ ಆಚಮನ ಕೊಡುವೆನು ಸರ್ವಾತ್ಮ ಗುರುಮೂರ್ತಿಗೆ 4
ಭಕ್ತಿಯ ಜಲದಿಂದಲಿ ಸದ್ಗುರುವಿನ ನಿತ್ಯ ಚರಣ ತೊಳೆದು |ಮುಕ್ತಿಯ ಪಾವನ ಮಾಡುವ ಗುರುಪಾದ ತೀರ್ಥವಂದಿಸಿಕೊಂಬುವೆ 5
ಸದ್ವಾಸನೆ ಗಂಧವ ಶ್ರೀಗುರುವಿಗೆ ಚಿದ್ ವೃತ್ತಿಯಕ್ಷತೆಯು | ಸದ್ಭಾವದಿಂದಲಿ ತೋರುವ ಪರಿಮಳ ಮದ್ಗುರುವಿನ ತನುವಿಗೆ6
ಮೂರು ಮಾತ್ರೆಯ ಹೊಸೆದು | ನಿರ್ಗುಣವಾದ ಧಾರವ ಶಿವಸೂತ್ರಕ್ಕೆ | ತೋರುವ ವಿಶ್ವಚರಾಚರ ಪುಷ್ಪದ ಹಾರ ಕೊರಳಿಗೆ ಹಾಕುವೆ 7
ನಾನೆಂಬ ಧೂಪ ಸುಟ್ಟು ಸದ್ಗುರುವಿಗೆ e್ಞÁನದೇಕಾರತಿಯು |ಬೋನ ನೈವೇದ್ಯ ಜೀವದ ಭಾವವರ್ಪಿಸಿ e್ಞÁನ ಕರೋದ್ವರ್ತಿಯ 8
ವಾಚ್ಯಾರ್ಥ ತಂಬೂಲವಾ ಸದ್ಗುರುವಿಗೆ |ಲಕ್ಷ್ಯಾರ್ಥವೆ ದಕ್ಷಿಣಾ ಲಕ್ಷ್ಯಾತೀತಗೆ ಮಂಗಳಾರತಿಬೆಳಗುವೆ ಅಕ್ಷಯ ಮಂತ್ರಪುಷ್ಪ 9ಸಂತ ಸನಕಾದಿಕರೂ ಸುರರೆಲ್ಲ ಅಂತರಿಕ್ಷದಿ ಬಂದರು | ತಂತಿ ಮದ್ದಳಿ ತಾಳ ಗೀತ ಶಂಖದ ವಾದ್ಯ ತಿಂತಿಣಿಯಲಿ ಕುಣಿಯುತ 10
ಅದ್ವೈತ ಸಾಷ್ಟಾಂಗವಾ ಸದ್ಗುರುವಿಗೆ | ಚಿದ್ಬೋಧದಿಎರಗಲು ಶುದ್ಧಿ ಸಿದ್ಧಿಗಳೆಂಬ ಚರ್ಯವ ತೋರುವಮುದ್ರೆ ಶ್ರೀ ಗುರುಗಿಟ್ಟೆನು11
No comments:
Post a Comment