ರಾಜ ರಾಜ ಮಹಾರಾಜ ಶ್ರೀಧವಾ ಗೋವಿಂದರಾಜ ಅಚರಾಚರ ಸಬೀಜ ಪ
ಆದಿಯುಗದಿ ಮತ್ಸ್ಯ ಕೂರ್ಮ- |ನಾದಿ ವರಾಹ ನರಸಿಂಹ- | ನಾದಿ ಹಿರಣ್ಯ ಕಶ್ಯಪನ | ಛೇದ ಮಾಡಿ ರಕ್ತ ಕುಡಿದಿ 1
ದ್ವಿತೀಯ ಯುಗದಿ ವಾಮನ ದ್ವಿತೀಯ ಉದರದಲಿ ಬಂದು | ಮಥಿಸಿ ಬಲಿಯ ಕ್ರೋಧದಿಂದ | ಸುತಳಕ್ಕೊತ್ತಿ ಬಿಟ್ಟೆಯಾ 2ಪರಶುರಾಮ ರೇಣುಕಿಯ | ವರ ಸುಪುತ್ರನಾಗಿಜನಿಸಿ | ವೀರಸದಿಂದ ಕ್ಷತ್ರಿ (ಯರ) ನಿರಸ ಮಾಡಿ ಬಿಟ್ಟಿ 3
ರಾಮಚಂದ್ರ ದಾಶರಥಿಯ | ಶ್ಯಾಮ ನೀಲ ಮೇಘ ವರ್ಣ | ಸ್ತೋಮ ರಾವಣನ ಉದ್ದಾಮನವರ ವಂಶ ತರಿದಿ 4
ದ್ವಿತೀಯ ದ್ವಾಪರದಲ್ಲಿ | ಮಥಿಸಿ ಕಂಸ ಪೂತನೆಯ | ಕಾತರ ಮಾಡಿ ಕೌರವನು | ಪಥಕೆ ಹೊಂದಿಸಿ ಬಿಟ್ಟ ಕೃಷ್ಣ 5
ಕಲಿಯುಗ ಬರಲು ಬೌದ್ಧನಾಗಿ | ಛಲ ದ್ವೇಷ ಖಲ ಜನರ ಕಲಹ ಹೆಚ್ಚಲಾಗುತಿರೆ | ಕಲ್ಕಿ ಹಯಗ್ರೀವನಾದಾ 6
ಮೂರು ತಾಪದಿಂದ ಬೆಂದ | ಘೋರ ದುರಿತ ಭವದ ಮೂಲ ಬೇರ ಕಿತ್ತಿ ಬಿಸುಟಿದ ಶ್ರೀಶಪಾಲ ಶಂಕರೇಶ 7
No comments:
Post a Comment