Labels

Thursday 31 October 2019

ನೀನೆ ಬಲ್ಲಿದನೋ ರಂಗಾನಿನ್ನ neene ballidano ranga

ನೀನೆ ಬಲ್ಲಿದನೋ ರಂಗಾನಿನ್ನ ದಾಸರು ಬಲ್ಲಿದರೋ ಪ
ನಾನಾ ತೆರದಿ ನಿಧಾನಿಸಿ ನೋಡಲುನೀನೆ ಭಕ್ತರಾಧೀನನಾದ ಮ್ಯಾಲೆ ಅ.ಪ
ಪರಮ ಪುರುಷ ಪರಬೊಮ್ಮನೆಂದೆನುತಲಿನಿರುತದಿ ಶ್ರುತಿಯು ಕೊಂಡಾಡಲು ನಿನ್ನನುನರ ಧರ್ಮಜನರ ಮನೆಯ ಒಳಗೆ ನಿಂ-ದ್ಹರುಷದಿಂದ ಕರೆದಲ್ಲಿ ಪೋದ ಮ್ಯಾಲೆ 1
ಖ್ಯಾತಿಯಿಂದ ಪುರುಹೂತ ಸಹಿತ ಸುರ-ವ್ರತವು ನಿನ್ನನು ವಾಲೈಸುತಿರೆಭೂತಳದೊಳು ಸಂಪ್ರೀತಿಯಿಂದಪಾರ್ಥನ ರಥಕೆ ನೀ ಸೂತನಾದ ಮ್ಯಾಲೆ 2
ಜಲಜಭವಾಂಡದೊಡೆಯನೆಂದೆನಿಸುವಬಲು ಬಲು ದೊಡ್ಡವನಹುದಾದಡೆಒಲಿದು ಸದ್ಗತಿಯೀವೆ ಅನುದಿನದಲಿ ನೀಬಲಿಯ ಮನೆಯ ಬಾಗಿಲ ಕಾಯ್ದ ಮ್ಯಾಲೆ 3
ಧುರದೊಳು ಪಣೆಯನೆಚ್ಚೊಡೆದ ಭೀಷ್ಮನಮರಳಿಪುದೆನುತಲಿ ಚಕ್ರವ ಪಿಡಿಯಲುಹರಿ ನಿನ್ನ ಕರುಣದ ಜೋಡÀು ತೊಟ್ಟರಲವ -ನಿರವ ಕಂಡು ಸುಮ್ಮನೆ ತಿರುಗಿದ ಮ್ಯಾಲೆ 4
ತರಳನು ಕರೆಯಲು ಒಡೆದು ಕಂಬದಿ ಬಂದುನರಮೃಗ ವೇಷದಿ ಭಕುತರ ತೆತ್ತಿಗನಾದೆಕರುಣದಿ ಸಲಹೋ ಶ್ರೀರಂಗವಿಠಲ ನಿನ್ನಸ್ಮರಿಪರ ಮನದಲಿ ಸೆರೆಯ ಸಿಕ್ಕಿದ ಮ್ಯಾಲೆ 5

ನಿನ್ನ ಮಗನ ಲೀಲೆಯ ninna magana leeleyu

ನಿನ್ನ ಮಗನ ಲೀಲೆಯ ತಾಳಲಾರೆವೆ ನಾವುತರಳನ ದುಡುಕು ಹೇಳಬಾರದೆ ಗೋಪಾಲಕೃಷ್ಣಗೆಬುದ್ಧಿ ಅಮ್ಮ ಪ
ಇಂದು ಚೆನ್ನಾಯಿತು ತಿಳಿದವನಲ್ಲವೆನೀ ಕೇಳೇ ಯಶೋದೆ ಅ.ಪ.
ಬಾಲಕನೆಂದು ಲಾಲಿಸಿ ಕರೆದರೆಮೂಲೆ ಮನೆಯೊಳಗೆ ಪೊಕ್ಕು ಪಾಲು ಬೆಣ್ಣೆ ಮೊಸರೆಲ್ಲವ ಮೆದ್ದುಕೋಲಲ್ಲಿ ನೀರ ಕೊಡವ ಒಡೆದನೇಅಸಲ ವರ್ಣನವ ದಿಟ್ಟ ನಿತ್ಯಾ ಇವನ ಹೋರಾಟಹೆಬ್ಬಾಲೆಯರಲ್ಲಿ ನೋಟ ಬಹಳ ಬಗೆಯಲಿಪಿಡಿದೇವೆಂದರೆ ಮೇಲಿಯಂಜಲುಗಳವೋಡಿದಾಅಮ್ಮ ಇದು ಚೆನ್ನಾಯಿತು 1
ಮತ್ತೆ ಭಾಮಿನಿಯರೆಲ್ಲರು ಕೂಡಿಮಡುವಿನಲಿ ಜಲಕ್ರೀಡೆಯಾಡಲುಚಿತ್ತಚೋರ ಸೀರೆಗಳನೆಲ್ಲವ-ನೆತ್ತಿಕೊಂಡು ಮರವನೇರಿದನವ್ವಾಬೆತ್ತಲೆ ಭಾಮೆಯರೆಲ್ಲ ಬೇಡಿದರೆ ಕೊಡನಲ್ಲಈ ಯುಕ್ತಿಗಳೇ ಬಹುಬಲ್ಲಹತ್ತಿಲಿ ಬಂದು ಕರವೆತ್ತಿ ಮುಗಿದರೆವಸ್ತ್ರಗಳೆಲ್ಲವ ಕೊಡುವೆನೆಂದನೇ ಅಮ್ಮ 2
ಸದ್ದು ಮಾಡದೆ ಸರುಹೊತ್ತಿನಲಿ ನಾವುನಿದ್ದೆಗಣ್ಣಿನಲಿ ನಾವಿರಲುಮುದ್ದುಕೃಷ್ಣ ನಮ್ಮನೆಯವರಂತೆಮುದದಿಂದೆನ್ನ ಕೂಡಿದನವ್ವಾಎದ್ದು ನೋಡಿದೆವಲ್ಲ ಅಹ ಏನೇ ನಮ್ಮವರಲ್ಲಬುದ್ಧಿ ಮೋಸ ಬಂತಲ್ಲಪೊದ್ದು ಸಲ್ಲಿಸಿದೀ ಜಾರ ನೀನೆಂದರೆಪರಿಹಾಸ್ಯವ ಮಾಡಿದ ರಂಗವಿಠಲನ ಅಮ್ಮ3

ನಿನ್ನ ಪೂಜೆಯೊ ninna pujeyo

ನಿನ್ನ ಪೂಜೆಯೊ-ರಾಮ ಪ
ನಿನ್ನ ಪೂಜೆ ಹೊರತಿಲ್ಲಎನ್ನ ವ್ಯಾಪಾರವೆಲ್ಲ
ಸ್ನಾನ ಸಂಧ್ಯಾವಂದನ ಹೋಮ ಮೌನ ಜಪ ಸದ್ಗ್ರಂಥ ವ್ಯಾ-ಖ್ಯಾನ ಯಜ್ಞಸಾಧನ ಸಂಪಾದನ ಅಧ್ಯಯನನಾನಾ ರಸ ನೈವೇದ್ಯ ಭೋಜನ ತಾಂಬೂಲಚರ್ವಣಮಾನಿನಿ ಮೊದಲಾದ ಸ್ಯಂದನ ಗಾನದ ಭೋಗಗಳೆಲ್ಲ1
ಸರ್ವೇಂದ್ರಿಯಗಳಲಿಹ ಶರ್ವಾದಿ ದೇವರ್ಕಳಿಗೆಸರ್ವಚೇಷ್ಟಾಪ್ರದನಾದ ಪ್ರಾಣಗೆ ನಿರ್ವಾಹಕನಾಗಿಸರ್ವ ಜೀವರ ಕೈಯಿಂದ ಸರ್ವe್ಞÁನ ಕರ್ಮಗಳನುಸರ್ವದಾ ಮಾಡಿಸಿ ಅವರ ಸರ್ವಶುಭಭೋಕ್ತನಹೆ 2
ಅಂಗಾಂಗಗಳಲ್ಲಿ ಸುರರು ಕಂಗಳಲ್ಲಿ ಭಾಗ್ಯಲಕ್ಷ್ಮಿಉಂಗುಷ್ಠದಿ ಲೋಕಪಾವನೆ ಗಂಗಾದೇವಿಯುಹಿಂಗದೆ ನಿನ್ನಲ್ಲಿರಲು ತುಂಗಗುಣ ಪರಿಪೂರ್ಣರಂಗವಿಠಲ ನೆಲೆಯಾಗಿ ಮಂಗಳಾಂಗನೆ ಮನ್ನಿಸುವೆಯೊ3

ನಾರಾಯಣ ನಿನ್ನ ನಂಬಿದೆ naarayana ninna nambide

ನಾರಾಯಣ ನಿನ್ನ ನಂಬಿದೆ ಲಕ್ಷ್ಮೀ-ನಾರಾಯಣ ನಿನ್ಹೊರತು ಪೊರೆವ ದೈವವೆಲ್ಲಿದೆ ಪ
ನಾ ಮೀರಿ ದುಷ್ಕರ್ಮವ ಮಾಡಿದೆಅಪಾರಮಹಿಮ ದಯಾನಿಧೇ ಅ.ಪ
ನಾನಾ ಯೋನಿಗಳಿಂದ ಬಂದೆನೋಮಾನತಾಳಲಾರದೆ ಬಲು ನೊಂದೆನೋದೀನರಕ್ಷಕ ಎನ್ನ ಗತಿ ಮುಂದೇನೋಮಾನದಿಂದಲಿ ಪಾಲಿಸುವಂಥ ದೊರೆ ನೀನೋ1
ದಾಸರ ಮನ ಉಲ್ಲಾಸನೆಶ್ರೀಶ ಆಶ್ರಿತ ಜನರ ಪೋಷನೆಸಾಸಿರ ಅನಂತಮಹಿಮನೆಕ್ಲೇಶನಾಶ ಮಾಡಿಸೋ ಶ್ರೀನಿವಾಸನೆ 2
ರಂಗನಗರ ಉತ್ತುಂಗನೆಗಂಗಾಜನಕ ಗರುಡತುರಂಗನೆ ಉ-ತ್ತುಂಗ ಗುಣಗಳಂತರಂಗನೆ ಅ-ನಂಗನ ಪೆತ್ತ ರಂಗವಿಠಲನೆ 3

ನಾನೇ ಸಜ್ಜನನಾದಡೆ naane sajjananade

ನಾನೇ ಸಜ್ಜನನಾದಡೆ ಇಂಥ ಹೀನ ವಿಷಯಗಳಿಗೆರಗುವೆನೇನಯ್ಯ ಪ.
ನಿರುತದಿ ಪರರ ನಿಂದಿಸುತಿಹೆನೆಗುರುಹಿರಿಯರು ಸಜ್ಜನರೆನ್ನದೆಹರಿ ಪರದೈವವೆಂದರಿತು ಭಜಿಸದೆಪರರ ವಡವೆಗಳ ಬಯಸುವೆನೇನಯ್ಯ 1
ಚಿತ್ತವ ಪುರುಷೋತ್ತಮನ ಮನದಲ್ಲಿಡದೆಉತ್ತಮರಾದವರೊಡನಾಡದೆತತ್ವ ವಿಚಾರವ ಮಾಡದೆ ನಾನು ನ್ಮತ್ತರ ಸಂಗವ ಮಾಡುವೆನೇನಯ್ಯ 2
ಹೇಯ ಶರೀರವ ಪೋಷಿಸಿಕೊಂಡುಪಾಯವ ಚಿಂತಿಸಿ ಬಳಲುವೆನುರಾಯರ ಶರಣರ ಸಲಹುವರಂಗವಿಠಲನ ಬಿಡುವೆನೇನಯ್ಯ 3

ದೃಷ್ಟಿ ತಾಕೀತೋ Drishti takito

ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋಸೃಷ್ಟಿಯ ನಾರಿಯರೆಲ್ಲ ಕಣ್ಣಿಟ್ಟು ಹೀರುವರೋ ನಿನ್ನ ಪ
ಪುಟ್ಟ ಪದಕಮಲದಿ ಮೆಟ್ಟಿ ರತುನ ಪಾದುಕಾಇಟ್ಟ ಕಿರುಗೆಜ್ಜೆ ಪೆಂಡ್ಯೆ ದಿಟ್ಟತನದಿಘಟ್ಟಿ ಸಾಸಿರ ಬಾಳುವ ಪಟ್ಟೆಯನೆ ಬಿಗಿದುಟ್ಟು ಮೇಗಿಲ್ಲದ ಬೆಲೆಯಾದ ಪಟ್ಟದುಡುದಾರವಿಟ್ಟು 1
ಸಿರಿಯಿರುವ ಉರದಲ್ಲಿ ಪರಿಮಳ ಗಂಧವ ಪೂಸಿಪರಿಪರಿ ಪದಕ ಮುತ್ತು ಸರ ವೈಜಯಂತಿಕೊರಳ ಕೌಸ್ತುಭದ ಕಾಂತಿ ನಿರುಪಮ ಶ್ರೀವತ್ಸಲಾಂಛನ ಸರಿಗೆ ತಾಳಿ ಪದಕವು ಸೇರಿದ ಮುತ್ತಿನ ಜಲ್ಲೆ 2
ಉಗುರ ಗೋರಂಟಿ ಛಾಯಾ ಚಿಗುರು ಪೋಲುವ ಬೆರಳುಬಗೆಬಗೆ ರತುನಂಗಳ ನಗಗಳನಿಟ್ಟುನಗವನೆತ್ತಿದ ಭುಜಕೆ ಬಿಗಿದ ಬಾಹುಪುರಿ ಕೆಂಪುನಿಗಿನಿಗಿಗುಟ್ಟುವ ಕಾಂತಿ ನಗುತಿದೆ ಬಾಲಭಾನುವ 3
ಎಳಮಾವಿನ ಸೊಬಗಿನ ತಳಿರುಪೋಲುವ ಕೆಂದುಟಿಸುಳಿಪಲ್ಲು ಮಂದಹಾಸವು ನಳಿನದಳಾಕ್ಷಥಳಿಥಳಿಪ ಕುಂಡಲವು ಪೊಳೆವ ನಾಸಿಕ ಲಲಾಟಚೆಲುವ ಪುಬ್ಬು ಕಸ್ತೂರಿಯ ತಿಲಕ ಒಪ್ಪುವ ಮುಖದಿ 4
ಕೋಟಿ ಹೊನ್ನು ಬಾಳುವ ಕಿರೀಟವಿಟ್ಟು ಕಡೆಗಣ್ಣನೋಟದಿಂದ ತರುಣೇರ ಪೋಟಿ ಮಾಡುತಚಾಟು ಮಾತುಗಳಾಡುತ ಪೊಟ್ಟನಂತೆ ತಿರುಗಿದರೆನೀಟಲ್ಲವೋ ನಿನಗದು ಪಾಟಲಾಧರನೆ ಕೇಳು 5
ಬಿಂಕದಿಂದ ಎರಡು ಕರದಿ ಶಂಖ ಚಕ್ರವ ಪಿಡಿದುಅಂಕಿತ ವೇಣುನೂದುತ ಶಂಕೆ ಇಲ್ಲದೆ ಮಂಕು ಮಾಡುತ ಬಾಲೇರ ಪಂಕಜಾಕ್ಷ ಸುಳಿದರೆÉಮಂಕುಗಾರನೆಂದು ನಿನ್ನ ಅಂಕಿತ ಮಾಡುವರಲ್ಲೋ 6
ಮಂಗಳಮೂರುತಿ ಮುಂಚೆ ಶೃಂಗಾರಗಳನೆ ಮಾಡಿಪೊಂಗೊಳಲನೂದುತ ಶ್ರೀರಂಗ ಸುಳಿದರೆಹೆಂಗಳ ರಂಭೇರೊಂದಾಗಿ ಕಂಗಳಿಡಲು ಉನ್ನಂತರಂಗವಿಠಲಗಲದಿರೋ ಹಿಂಗದೆ ನರಸಿಂಗನೇ 7

ತೆರಳೆ ನೀ ಮಧುರೆಗೆ terale nee madhurege

ತೆರಳೆ ನೀ ಮಧುರೆಗೆ ಗೋಕುಲದಲಿ ನಾವುಇರಲಾರೆ ಇರಲಾರೆವೋ ಗೋಪಾಲ ಪ
ತರಳತನದಿ ನೀ ಆಡಿದ ಆಟಗಳ ಸ್ಮರಿಸಿಸ್ಮರಿಸಿ ನಾವು ಮರುಗುವುದೆಲೋ ದೇವಅ.ಪ.
ವ್ರಜದ ಒಳಗೆ ನೀನು ಇದ್ದದ್ದು ಕೇಳಿಭರದಿ ಪೂತನಿಯ ಕಳುಹಿ ಕೊಟ್ಟರೆತೊಡೆಯ ಒಳಗೆ ಇಟ್ಟು ಸ್ತನಕೊಡುತಿರಲವಳಹುಲಿಯಂತೆ ಹೀರಿ ಹಿಪ್ಪೆಯಮಾಡಿದೆಯೊ ದೇವ ತೃಣದ ಅಸುರನ ಕೊರಳಮಿಸುಗುತ್ತ ಅವನ ಕೆಡಹಿದಿಭರದಿ ಬಂಡಿಯ ಒದ್ದು ಶಕಟನ ಪುಡಿಯಮಾಡಿದ ಪರಮ ಪುರುಷನೆ 1
ಕೊಲ್ಲಕಂಸನು ಭಾಳ ಯೋಚಿಸಿ ಮನದಿಕೊಲ್ಲಬೇಕೆಂದೆನುತ ಸೂಚಿಸೆಬಿಲ್ಲನೆ ಮುರಿದು ಆ ನಲ್ಲೆಯ ಕರಪಿಡಿದುಒಳ್ಳೆ ಪುರಕೆ ಹೋಗಿ ಎಲ್ಲ ಕಾರ್ಯವ ನಡೆಸಿಮೆಲ್ಲನೆ ಏಕಾಂತ ಗೃಹದಲ್ಲಿಸೊಲ್ಲ ಕೇಳುತ ಅವನನು ಕೋಪಿಸೆಅಲ್ಲಿಯನುಜನ ತರಿದು ಅವನಕೊಲ್ಲ ಕಳುಹಿದ ಕಠಿನ ಹೃದಯನೆ2
ಎಲ್ಲ ಹಿಂದಿನ ಸುದ್ದಿ ಬಲ್ಲೆವೊ ನಾವುಇಲ್ಲಿ ಮರೆತೀಯೆಂದು ತಿಳಿದೆವೋಬಲ್ಲ ಅಕ್ರೂರನು ಬಂದು ಇಲ್ಲಿಗೆ ನಮ್ಮಇಲ್ಲದ ಮಾತ ಕೇಳಿ ಮೆಲ್ಲನೆ ಕರೆದೊಯ್ದಅಲ್ಲಿ ರಥವನೆ ಕಾಣುತ ಎದೆಝಲ್ಲೆನಿಸಿ ನಡುಗಿದೆವೊಪುಲ್ಲನಾಭನೆ e್ಞÁನ ಭಕುತಿ ನ-ಮ್ಮೆಲ್ಲರಿಗೆ ನೀನಿತ್ತು ಪೋಗೆಲೊ 3
ಹೆಂಡತಿಯ ಕೂಡಿ ಕದನ ಮಾಡಿಮುಂದೆ ಮೂವರು ತೆರಳಿದಿರಿಬಂದು ಋಷಿಯಾಶ್ರಮದಿ ನಿಂತು ಗ್ರಾಸವ ಬೇಡೆಮಂದಗಮನೆ ನೋಡಿ ಚೆಂದಾಯಿ -ತೆಂದೆ ತಂದು ಕಲಶೋದಕವ ಚೆಲ್ಲಲುಕಂದರುಗಳು ನೀವಾದಿರೊ ತಂದ ಹಲಸಿನ ದೊನ್ನೆ ಪಾಲನುಚೆಂದದಿಂದಲಿ ಕುಡಿದ ದೇವನೆ4
ಮಂದಗಮನೇರಿಂದ ನಿಮಗೆ ಮತ್ತೆಒಂದುಪಕಾರವ ಕಾಣೆವೊಚೆಂದಾಗಿ ಮಾನದಿ ಮಂದಿರದಲಿ ಇರದೆಗಂಡರ ಬಿಟ್ಟು ನಿಮ್ಹಿಂದೆ ತಿರುಗಿದೆವೊಇಂದಿರೆಯು ಕಾರಣಗಳಲ್ಲವೊನಿಂಗೆ ನೀನೆ ಸ್ವರಮಣನಂಮಂಗಳಾಂಗನೆ ಮಾರಜನಕನೆರಂಗವಿಠಲನೆ ರಾಜೀವಾಕ್ಷನೆ5

ತುರುಗಾಯ ಬಂದ ಗೋಪಿಯ Turugayi banda gopi

ತುರುಗಾಯ ಬಂದ ಗೋಪಿಯ ಕಂದಆನಂದದಿಂದ ಪ
ಸುರನರ ತರು ಮೃಗ ಜಲಚರ ಮೋಹಿಸೆತರಳೇರ ಮನ ಸೂರೆಯಾಗೆ ಕೊಳಲಿನಿಂದ ಅ.ಪ.
ತಂದೆಯ ಕಂದನೆಂದು ಕೊಂಕುಳೊಳಿಟ್ಟುಕಂದನ ಕೆಳಗಿಟ್ಟುಅಂದಿಗೆ ಗೆಜ್ಜೆ ಕಿವಿಗಳಿಗಿಟ್ಟುಮುತ್ತಿನ ಬಟ್ಟುಹೊಂದಿಸಿ ಗಲ್ಲದಲ್ಲಿ ತಾನಿಟ್ಟುಕಸ್ತೂರಿಯ ಬಟ್ಟುಮುಂದಾಗಿ ಮೂಗಿನ ಮೇಲಳವಟ್ಟುಮನೆಬಾಗಿಲ ಬಿಟ್ಟುಕಂದರ್ಪನ ಶರದಿಂದ ನೊಂದು ಬಹುಕಂದಿ ಕುಂದುತಲಿಂದುವದನೆಯರುಇಂದಿರೇಶನಾನಂದದ ಗಾನಕೆಚಂದ್ರಮುಖಿಯರೊಂದಾಗುತ ಬರುತಿರೆ 1
ಮುರಳಿಯ ಸ್ವರಕೆ ಮೋಹಿತರಾಗೆಕರುಗಳನು ತಂದುಕರದಿಂದಲೆತ್ತಿ ತೊಟ್ಟಿಲೊಳಗೆಇರಿಸುತ್ತ ಹಾಲಬೆರಸುತ್ತ ಮಜ್ಜಿಗೆ ಮೊಸರಿನೊಳಗೆಪರಮಾತ್ಮನ ನೆನೆದುಹೊರಟರು ಬಿಸಿಲು ಚಳಿ ಮಳೆಯೊಳಗೆಮನೆಮನೆಯೊಳಗೆತರಳರ ಬೆದರಿಸಿ ಮಾರ್ಜಾಲಕೆ ಮೊಲೆತ್ವರಿತದಿ ಉಣಿಸುತ ಸರಿಸರಿಯೆನುತಲಿಪರಿಪರಿ ಭ್ರಾಂತರಾಗಿ ನೋಡುತಪುರಮಾರ್ಗಕೆ ಬರುವರು ನಿರುಕಿಸುತ 2
ಮದನ ಶತಕೋಟಿ ತೇಜನು ಬಂದಸ್ತ್ರೀರೆದುರಲಿ ನಿಂದಅಧರಾಮೃತ ಪಾನವ ಮಾಡಿರೆಂದಬಾಯಾರಿದಿರೆಂದಬದಿಯಲ್ಲಿ ಬಂದು ಕುಳ್ಳಿರಿಯೆಂದಅವರಿರವನೆ ನೋಡ್ದಚದುರೇರ ಮೋಹಕನೆ ನಾನೆಂದವಾದ್ಯದ ರವದಿಂದಸದಯನೆದುರ ರಂಭೆ ಊರ್ವಶಿ ಮೇನಕೆಒದಗಿ ನಾಟ್ಯಗಳ ಚದುರತನದಲಾಡೆಮಧುಸೂದನ ಭಕ್ತರ ಕಾಯ್ವುದಕೀವಿಧದೊಳಗಾಡಿದ ರಂಗವಿಠಲ ತಾ 3

ತಾ ತಾ ತಾ ತಾ ತಾ ರಂಗ ta ta ta ranga

ತಾ ತಾ ತಾ ತಾ ತಾ ರಂಗ ನಿನ್ನ ಪಾದಥೈ ಥೈ ಥೈ ಥೈ ಥೈ ಯೆಂದು ಕುಣಿಯುತ ಪ
ನಿಗಮವ ತಂದು ನಗವ ಬೆನ್ನಲಿ ಪೊತ್ತುಅಗೆದು ಬೇರು ತಿಂದು ಬಾಲನ ಸಲಹಿದೆ ಅಂದು 1
ಪೊಡವಿ ಈರಡಿ ಮಾಡಿ ಕೊಡಲಿ ಪಿಡಿದು ಮುನಿಮಡದಿಯ ಸಲಹಿದೆ ಎನ್ನೊಡೆಯ ಶ್ರೀಕೃಷ್ಣ 2
ಅಂಗನೆಯರ ವ್ರತಭಂಗವ ಮಾಡಿ(ದೆ)ತುಂಗ ಕುದುರೆಯೇರಿದ ರಂಗವಿಠಲನೆ3

ಗುಮ್ಮ ಬಂದನೆಲೊ Gumma bandanelo

ಗುಮ್ಮ ಬಂದನೆಲೊ ದುರ್ಜನ ಬೇಡಸುಮ್ಮನಿರೆಲೊ ರಂಗಯ್ಯ ಪ
ಉಟ್ಟ ಪುಲಿತೊವಲು ತೊಟ್ಟ ಮುತ್ತಿನಹಾರಇಟ್ಟ ಕಾಮಾಕ್ಷಿ ಕಪಾಲ ತ್ರಿಶೂಲಬಟ್ಟು ಹಣೆ ಮೆರೆಯೆ ಚರಣದಲಿ ಮೆಟ್ಟಿದ ಹಾವುಗೆಯದಿಟ್ಟ ಮೂರುತಿ ನಿಮ್ಮ ಚರಣಸೇವೆಗೆ ನಿತ್ಯ 1
ಕಡಗ ಕಂಕಣ ಬಾಹುಪುರಿ ಭುಜಕೀರ್ತಿಯುಉರದಲ್ಲಿ ಧರಿಸಿದ ರುಂಡಮಾಲೆಯು ತನ್ನಸಿರದ ಜಟಾಜೂಟೆಯು ತಾಂ ಧರಿಸಿದ ಉರಗನಾ-ಭರಣಗಳು ಪರಮ ಮೂರುತಿ ನಿಮ್ಮ ಚರಣಸೇವೆಗೆ ನಿತ್ಯ2
ಕಾಮನ ರೂಪಕ್ಕೆ ಜರಿವಾ ಚೆನ್ನಿಗನಾಗಿಕೋಮಲಾಂಗೇರು ಭಿಕ್ಷವ ನೀಡಲು ಪ್ರೇಮದಿಂದವರಿಗೆಲ್ಲಮುಕ್ತಿಯನೀವ ಸೋಮಶೇಖರನ ಚೆಲ್ವರಾಮನಾ ಭಾವ ಮೃದುವಾಕ್ಯವಿದು ಮುದ್ದು 3
ಕೋಟಿ ಸೂರ್ಯರ ಕಾಂತಿ ನೇಟಾದ ತನುವಿನಪೂಸಿದ ಭಸ್ಮವು ನೊಸಲ ಮುಕ್ಕಣ್ಣಿನ ನೋಟದಕಿಡಿಯುದುರೆ ಭೂತಗಣಂಗಳು ಕುಟಕಿಚ್ಛಕ ಬೆದರೆನಾಟ್ಯವನಾಡುತ ನಗುತ ಮೋಹನ ಮುದ್ದು 4
ಅಂಜೆ ಕಾಣಮ್ಮ ನಾ ಅಗಲಿದು ಜೋಗಿಜಂಗಮ ವೇಷವು ಕೈಕೊಂಡು ಮಲೆಯಾಳಕೊಂಗ ಗುಜ್ಜರ ಭಾಷೆಯ ಭಾಷಿಸುತಲಿರಂಗವಿಠಲನೆ ಚೆಲ್ವ ಮಂಗಳ ಮೂರತಿ
ನಿಮ್ಮ ಚರಣ ಸೇವೆಗೆ ನಿತ್ಯಾ5

ಕೇಳಿದ್ಯಾ ಕೌತಕವನ್ನು kelidya koutakavannu

ಕೇಳಿದ್ಯಾ ಕೌತಕವನ್ನು ಕೇಳಿದ್ಯಾಪ
ಕೇಳಿದ್ಯಾ ಕೌತಕವನ್ನು ನಾಕೇಳಿದೆ ನಿನಗಿಂತ ಮುನ್ನ ಆಹಾಚಾಳಿಕಾರ ಕೃಷ್ಣ ಪೇಳದೆ ಮಧುರೆಗೆಕೋಳಿ ಕೂಗದ ಮುನ್ನ ನಾಳೆ ಪಯಣವಂತೆಅ.ಪ.
ಕರೆಯ ಬಂದಿಹನಂತೆ ಕ್ರೂರ ತಮ್ಮಕಿರಿಯಯ್ಯನಂತೆ ಅಕ್ರೂರ ಪುರಹೊರವಳಯದಿ ಬಿಟ್ಟು ತೇರ ಆಹಾಹಿರಿಯನೆಂದು ಕಾಲಿಗೆರಗಲು ರಾಮಕೃ-ಷ್ಣನ ಠಕ್ಕಿಸಿಕೊಂಡುಮರುಳುಮಾಡಿದ ಬುದ್ಧಿ 1
ಸೋದರ ಮಾವನ ಮನೆಗೆ ಬೆಳ-ಗಾದರೆ ನಾಳಿನ ಉದಯ ಪರ-ಮಾದರವಂತೆ ತ್ವರೆಯ ಅಲ್ಲಿ ತೋರಿದ ಮನಕೆ ನಾರಿಯ ಆಹಾಸಾದಿಮಲ್ಲ ಮೊದಲಾದ ಬಿಲ್ಲಹಬ್ಬಸಾಧಿಸಿಕೊಂಡು ಬರುವೆನೆಂದು ಸುದ್ದಿ 2
ಹುಟ್ಟಿದ ಸ್ಥಳವಂತೆ ಮಧುರೆ ಕಂಸ-ನಟ್ಟುಳಿಗಾರದೆ ಬೆದರಿ ತಂ-ದಿಟ್ಟ ತನ್ನ ತಂದೆ ಚದುರೆ ತೋರಿಕೊಟ್ಟಳು ಭಯವನ್ನು ಬೆದರಿ ಆಹಾಎಷ್ಟು ಹೇಳಲಿ ರಂಗವಿಠಲನು ಮಾವನಭೆಟ್ಟಿಗಾಗಿ ಒಡಂಬಟ್ಟು ಪೋಗುವ ಸುದ್ದಿ3

ಕೀರ್ತಿಸಿ ಜನರೆಲ್ಲ keertisi janarella

ಕೀರ್ತಿಸಿ ಜನರೆಲ್ಲ ಹರಿಯ ಗುಣ ಪ
ಕೀರ್ತಿಸಿ ಜನರು ಕೃತಾರ್ಥರಾಗಿರೊ ಅ.ಪ
ಆವನು ವನದೊಳಗೆ ನಿತ್ಯದಿಬಾಹ ಜನರ ಬಡಿದುಜೀವನ ಮಾಳ್ಪ ಕಿರಾತನು ಕೀರ್ತಿಸೆತಾ ಒಲಿದಾತನ ಕೋವಿದನೆನಿಸಿದ 1
ಆವನ ಪಾದರಜ ಸೋಕಲುಆ ವನಿತೆಯ ಜಡಭಾವವ ತೊಲಗಿಸಿ ಆ ವನಿತೆಯನುಪಾವನ ಮಾಡಿದ ದೇವಾಧಿದೇವನ 2
ಅಂದು ಶಬರಿ ತಾನು ಪ್ರೇಮದಿತಿಂದ ಫಲವ ಕೊಡಲುಕುಂದು ನೋಡದೆ ಆನಂದದೆ ಗ್ರಹಿಸಿಕುಂದದ ಪದವಿಯನಂದು ಕೊಟ್ಟವನ3
ದÀುಷ್ಟ ರಾವಣ ತಾನು ಸುರರಿಗೆಕಷ್ಟಬಡಿಸುತಿರಲುಪುಟ್ಟಿ ಭವನದೊಳು ಕುಟ್ಟಿ ಖಳರ ಸುರ-ರಿಷ್ಟವ ಸಲಿಸಿದ ಸೃಷ್ಟಿಗೊಡೆಯನ 4
ತನ್ನ ನಂಬಿದ ಜನರ ಮತ್ತೆ ತಾ-ನನ್ಯರಿಗೊಪ್ಪಿಸದೆಮುನ್ನಿನಘವ ಕಳೆದಿನ್ನು ಕಾಪಾಡುವಘನ್ನ ಮಹಿಮ ಶ್ರೀರಂಗವಿಠಲನ 5

ಕಂತುಪಿತನೆ ನಿನ್ನ kantupitane ninna

ಕಂತುಪಿತನೆ ನಿನ್ನ ಎಂತು ವರ್ಣಿಪೆ ಲಕ್ಷ್ಮೀ -ಕಾಂತ ಪಾಲಿಸೆನ್ನನು ನಿರಂತರದಲಿ ಪ
ಕುಂತಿಪುತ್ರಗೆ ನೀನತ್ಯಂತ ಸಾರಥಿತ್ವವ ಮಾಡಿನಿಂತು ದುರ್ಯೋಧನನ ಶಿರವ ಅಂತಕನಿಗೊಪ್ಪಸಿದ ಧೀರ ಅ.ಪ
ಸುಂದರವದನ ನಿನ್ನ ಕಂದ ಭಜಿಸಲು ಮುದದಿಂದ ಕಂಬದೊಳ್ಬಂದೆ ಮಂದರೋದ್ಧರಸಿಂಧುಶಾಯಿ ರಕ್ಕಸನ ಕೊಂದು ಕರುಳ ಮಾಲೆಯನ್ನುಚೆಂದದಿಂ ಕಂಧರದೊಳ್ಧರಿಸಿದಾನಂದಮೂರ್ತಿ ಇಂದಿರೇಶ1
ಜಂಭವೈರಿ ಮುಖ್ಯ ಸುರ ಕದಂಬ ಪೂಜಿತಾಂಘ್ರಿಯುಗಳನಂಬಿದ ಭಕ್ತರ ಕಾಯ್ವ ಅಂಬುಜನೇತ್ರಅಂಬರೀಷ ದ್ವಾದಶಿ ವ್ರತವ ಸಂಭ್ರಮದಿ ಮಾಡುತಿರೆಡೊಂಬಿಯಿಂ ದೂರ್ವಾಸ ಶಪಿಸೆ ಬೆಂಬಿಡದೆ ಚಕ್ರದಿ ಸಲಹಿದ2
ಗಂಗೆಯ ಜನಕ ನಿನ್ನ ಅಂಗನೆ ದ್ರೌಪದಿದೇವಿಭಂಗಬಿಡಿಸೆಂದು ಕೂಗೆ ಮಂಗಳಾಂಗನೆಸಾಂಗದಿಂದ ವಸ್ತ್ರಂಗಳ ಹಿಂಗದೆ ಪಾಲಿಸಿದಂಥರಂಗವಿಠಲ ಪಾಲಿಸೀಗ ತುಂಗ ವಿಕ್ರಮ ಎನ್ನ ಮಾತ 3

ಕಂಜನೇತ್ರೇ ಶುಭ ಮಂಜುಳಗಾತ್ರ್ರೆಕುಂಜರದಂತೆ kanjanetre

ಕಂಜನೇತ್ರೇ ಶುಭ ಮಂಜುಳಗಾತ್ರ್ರೆಕುಂಜರದಂತೆ ಗಮನೆ ನಿರಂಜನಾಂಗಿ ಪ
ಧರೆಯ ಮ್ಯಾಲೆ ಹಿರಿಯಳು ನಾ-ನಿರಲು ಲಜ್ಜೆ ತೊರೆದು ನೀನುಸರಸವಾಡೋದೆ ಮುರಹರನಕರೆದು ಭಾಮಿನಿ ಸುಗುಣೆ ಕಾಮಿನಿ 1
ಪತಿಯ ಪ್ರೀತಿ ಎನ್ನ ಮ್ಯಾಲೆಅತಿಶಯದಿ ಇರಲು ಜ್ಯೇಷ್ಠಸತಿಯಳೇನೇ ನೀನು ನೋಡುಮತಿಯ ರುಕ್ಮಿಣಿ ಸುಪದ್ಮಗಂಧಿನಿ2
ಒಂದು ಕಾಲದಲ್ಲಿ ದಾಸಿ-ಯಿಂದ ಪತಿಯು ಸರಸವಾಡಲುಬಂದಳೇನೇ ಅರಸಿ ಸಮ-ಳೆಂದು ಭಾಮಿನಿ ಸುಗುಣೆ ಕಾಮಿನಿ 3
ದಾಸಿ ಸಮಳು ನಾನು ಅಲ್ಲ ದೋಷ ಮಾತನಾಡಬೇಡಶ್ರೀಶನ ದಯರಾಶಿ ಇರಲುದಾಸಿಯೆ ರುಗ್ಮಿಣಿ ಸುಪದ್ಮಗಂಧಿನಿ 4
ಸಾರೆ ಕೃತ್ಯವಾರೆ ಹೂಡಿದ್ವಾರಾವತಿಯಿಂದ ಎನ್ನಸಾರೆ ಬಂದ ಪ್ರೀತಿಯು ಅ-ಪಾರೆ ಭಾಮಿನಿ ಸುಗುಣೆ ಕಾಮಿನಿ5
ಕಡಲಶಾಯಿ ತಡೆದರಿನ್ನುದಿಡುಗು ದೇಹ ಬಿಡುವೆನೆಂಬೊನುಡಿಯ ಕೇಳಿ ಪಿಡಿದನೆಬಿಡದೆ ರುಗ್ಮಿಣಿ ಸುಪದ್ಮಗಂಧಿನಿ 6
ಮಂದರಧರನು ಪ್ರೀತಿ-ಯಿಂದ ನಿನ್ನ ಪಡೆದನೇನೆಒಂದು ಮಣಿಯ ಕಾರಣದಿಬಂದೆ ಭಾಮಿನಿ ಸುಗುಣೆ ಕಾಮಿನಿ7
ಸುಮ್ಮನೆ ಬಂದವಳಿಗೆಬ್ರಹ್ಮ-ಲಗ್ನದಿ ಬಂದೆನಗೆಸಾಮ್ಯವೇನೆ ಯಾಕೆ ನಿನಗೆಹೆಮ್ಮೆ ರುಗ್ಮಿಣಿ ಸುಪದ್ಮಗಂಧಿನಿ. 8
ಮಾನಾದಿ ಭಕ್ತಿಯು ಕನ್ಯಾ-ದಾನವು ಲೋಕದೊಳಗುಂಟುಏನು ನಿನ್ನ ತಾತ ಕೊಟ್ಟದೀನ ಭಾಮಿನಿ ಸುಗುಣೆ ಕಾಮಿನಿ 9
ಎನ್ನ ಹಂಗದೆಂದುಪ್ರಸನ್ನ ಕೇಳಿ ಶತಧನ್ವನಬೆನ್ನಟ್ಟಿ ಕೊಂದನೇ ನೀ-ಚೆನ್ನ ರುಗ್ಮಿಣಿ ಸುಪದ್ಮ ಗಂಧಿನಿ 10
ವೀರ ಅರಸರ ಸ್ವಭಾವಚೋರರ ಕೊಲ್ಲಬೇಕೆಂಬೋಸಾರ ಪ್ರೀತಿಯದರಿಂದತೋರಿ ಭಾಮಿನಿ ಸುಗುಣೆ ಕಾಮಿನಿ11
ಇಂದ್ರಾದಿ ದೇವತೆಗಳೊಳುಸಾಂದ್ರಯುದ್ಧವನ್ನೆ ಮಾಡಿವೀಂದ್ರ ಎನಗೆ ಪಾರಿಜಾತತಂದ ರುಗ್ಮಿಣಿ ಸುಪದ್ಮಗಂಧಿನಿ12
ವರದ ರಂಗ ಕರದೊಳೆನ್ನಸುರಪುಷ್ಪವಿರಲು ನಿನ್ನ ತ್ವರೆ ಕ್ಲೇಶ ನೋಡಿ ತಂದತರುವ ಭಾಮಿನಿ ಸುಗುಣೆ ಕಾಮಿನಿ13
ನಿಜಳೆಂದು ರಂಗನು ಎನ್ನವಿಜಯಯಾತ್ರೆಯಲ್ಲಿ ತನ್ನಭುಜಗಳಿಂದಾಲಂಗಿಸಿದಸುಜನೆ ರುಗ್ಮಿಣಿ ಸುಪದ್ಮಗಂಧಿನಿ 14
ಅರಸರ ಸ್ವಭಾವ ತಮ್ಮಅರಸೇರ ಮನೆಯೊಳಗಿಟ್ಟುಸರಸ ದಾಸೇರಿಂದ್ಹೋಗೋದುಸ್ಮರಿಸೆ ಭಾಮಿನಿ ಸುಗುಣೆ ಕಾಮಿನಿ 15
ಸಾರವಚನ ಕೇಳಿ ಭಾಮೆಮೋರೆ ಕೆಳಗೆ ಮಾಡುತಿರಲುನಾರಿ ರುಕ್ಮಿಣಿ ಭಾಮೆಯರನ್ನುವೀರ ಕರೆದನು ತಾ ಸೇರಿ ಮೆರೆದನು16
ಮಂಗಳಾಂಗ ಮಹಿಮ ಕೇಶವಾ-ಲಿಂಗಿಸಿದ ಭೈಷ್ಮಿಯನ್ನುತುಂಗಗುಣ ಗೋಪೀರಮಣರಂಗವಿಠಲನು ಅನಂಗಜನಕನು 17

ಒಲ್ಲೆನವ್ವಾ ಲಕುಮಿಯ ನಲ್ಲ ollrnavva lakumiya nalla

ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆತನುಹೊರೆಯನೊಲ್ಲೆನವ್ವಾ ಪ
ಹಾರ ಕೊರಳಿಗೆ ಭಾರ ಹುವ್ವಿನಭಾರ ಸೈರಿಸಲಾರೆನೆಮಾರನಯ್ಯನು ಬಾರದಿದ್ದರೆಮಾರನಂಬಿಗೆ ಗುರಿಯ ಮಾಡಿ 1
ಎಲ್ಲ ದೇವರ ವಲ್ಲಭನೆಂದುಒಲಿದ ಮನ ನಿಲ್ಲದೆನಿಲ್ಲದೆ ರಂಗ ಪೋದ ಮಧುರೆಗೆಬಿಲ್ಲ ಹಬ್ಬದ ನೆವನ ಮಾಡಿ 2
ಮಂದಾನಿಲನ ಸಹಿಸಲಾಗದುನೊಂದೆ ಶುಕಪಿಕ ರವಗಳಿಂದಚಂದ್ರಕಿರಣದಿ ಬೆಂದೆ ಇನ್ನೀವೃಂದಾವನವೇಕನನಗಲಿ 3
ಮುನ್ನ ಆಡಿದ ಮಾತ ಮರೆತುಎನ್ನ ಮನದೊಳಗೀಡಾಡಿವನ್ನಜಾಕ್ಷನು ಬಾರ ಪುರದವನ್ನಿತೆಯರನು ಮೆಚ್ಚಿ ಪೋದ 4
ಪೊಂಗೊಳಲ ಧ್ವನಿಗೆ ಸಿಲುಕಿಭಂಗಗೆಟ್ಟೆನಂಗಜನಿಂದಲಿಪೆಂಗಳಿಗುಚಿತವಲ್ಲ ಇದುರಂಗವಿಠಲನ ತೋರದಿದ್ದಡೆ 5

ಒಲಿದೆ ಯಾತಕಮ್ಮಾ ಲಕುಮಿವಾಸುದೇವಗೆ olide yatakamma_shripadarajaru

ಒಲಿದೆ ಯಾತಕಮ್ಮಾ ಲಕುಮಿವಾಸುದೇವಗೆ ಪ
ಶುದ್ಧ ನೀಲವರ್ಣದ ಮೈಯಕಪ್ಪಿನವನಿಗೆ ಹ್ಯಾಗೆ ಅ.ಪ.
ಹುಟ್ಟಿದ ಮನೆಗಳ ಬಿಟ್ಟು ಕಳ್ಳ-ದಿಟ್ಟತನದಿ ಗೋಕುಲದಲ್ಲಿ ಬೆಳೆದ ಚಟ್ಟಿ ಸಹಿತ ಹಾಲು ಕುಡಿದ- ಅಲ್ಲಿದಿಟ್ಟ ಕಾಳಿಂಗನ ಹೆಡೆಯ ತುಳಿದವನಿಗೆ 1
ಗೊಲ್ಲರ ಮನೆಗಳ ಪೊಕ್ಕು- ಅಲ್ಲಿಗುಲ್ಲು ಮಾಡದೆ ಮೊಸರೆಲ್ಲ ಸವಿದಮೆಲ್ಲನೆ ಸವಿಮಾತನಾಡಿ-ಅಲ್ಲಿಎಲ್ಲ ಸಖಿಯರ ಅಭಿಮಾನಗೇಡಿಗೆ 2
ಮಾವನ ಮರ್ದಿಸಿದವಗೆ -ಅಲ್ಲಿಸೋಳ ಸಾಸಿರ ಗೋಪೇಯರ ಮದುವೆ ಆದವಗೆಹಾವಿನ ಮ್ಯಾಲೊರಗಿದವಗೆಕಾವೇರಿ ತೀರದ ರಂಗವಿಠಲಗೆ 3

ಏಕೆ ದೂರುವಿರೇ ರಂಗಯ್ಯನಏಕೆ eke duruvire rangayyana

ಏಕೆ ದೂರುವಿರೇ ರಂಗಯ್ಯನಏಕೆ ದೂರುವಿರೇ ಪ
ಸಾಕು ನಿಮ್ಮ ದೂರ ಬಲ್ಲೆನುಈ ಕುವರನಾಕೃತ್ಯ ಮಾಳ್ಪನೆಅ.ಪ.
ದಟ್ಟಡಿಯಿಡಲರಿಯ ಗೋವತ್ಸವಬಿಟ್ಟು ಚಲಿಸಬಲ್ಲನೆಘಟ್ಟಿಯಾಗಿ ಗೊತ್ತಿನಲ್ಲಿಕಟ್ಟಿನೊಳು ಕಟ್ಟಿದ್ದ ಕರುಗಳಬಿಟ್ಟನೇ ಈ ಕೃಷ್ಣನ ಮೇ-ಲೆಷ್ಟು ಹೊಟ್ಟೆಕಿಚ್ಚೆ ನಿಮಗೆ 1
ಕೆನೆಹಾಲು ಬೆಣ್ಣೆಯನು ಇತ್ತರೆ ಆದಿನವೊಲ್ಲನು ಊಟವಮನೆಮನೆಗಳನು ಪೊಕ್ಕುಬೆಣ್ಣೆ ಪಾಲ್ಮೊಸರನ್ನು ತಿನ್ನುತವನಿತೆಯರ ಕೂಡಾಡಿದನೆಂ-ದೆನಲು ನಿಮಗೆ ನಾಚಿಕಿಲ್ಲವೆ 3

ಎಲ್ಲ್ಯಾಡಿ ಬಂದ್ಯೋ ನೀ ಹೇಳಯ್ಯನಿಲ್ಲು ನಿಲ್ಲು elladi bandyo2nillu nillu

ಎಲ್ಲ್ಯಾಡಿ ಬಂದ್ಯೋ ನೀ ಹೇಳಯ್ಯನಿಲ್ಲು ನಿಲ್ಲು ಗೋಪಾಲಕೃಷ್ಣಯ್ಯಾ ಪ
ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿಹೊಸಪರಿ ಸುದ್ದಿಯು ಹುಟ್ಟಿದೆಪುಸಿಯಲ್ಲ ಈ ಮಾತು ಮುಟ್ಟಿದೆ ನಿನ್ನ ನಸುನಗೆ ಕೀರ್ತಿ ಹೆಚ್ಚಿದೆ1
ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನಕೊರಳ ಪದಕವೆಲ್ಲಿ ನೀಗಿದೆಸರಕೆಲ್ಲ ಅವಳಲ್ಲಿ ಸಾಗಿದೆ ಆತರುಣಿ ಮಹಿಮೆ ಹೀಂಗಾಗಿದೆ 2
ಕಳ್ಳತನವ ಹೀಗೆ ಮಾಡಿದೆ ನಿನ್ನಸುಳ್ಳು ಕಡೆಗೆ ನಾ ನೋಡಿದೆಎಲ್ಲರಿಗೂ ಠಕ್ಕು ಮಾಡಿದೆಚೆಲುವ ರಂಗವಿಠಲ ನಗೆಗೀಡಾದೆ 3

Wednesday 30 October 2019

ರಾಘವೇಂದ್ರಂ ಭಜೇಹಂ raghavendra bhajeham

ರಾಘವೇಂದ್ರಂ ಭಜೇಹಂ ||ಶ್ರೀ|| ಪ
ಆಗಮಚಯ ವಿe್ಞÁನ ಸುಗೇಹಂ
ಶ್ರೀಗದಾಬ್ಜ ಚಕ್ರಾಂಕಿತ ದೇಹಂ ಅ.ಪ
ರಾಗ ಮೋಹನಾದಿ ರಹಿತಂ ಸುಚರಿತಂ
ಭೋಗಿರಾಟ್ ಶಯನ ಗುಣಮತಿ ಮಹಿತಂ
ಭಾಗವತೋತ್ತಮ ಮತಿ ಸುಮತಿಯುತಂ
ಯೋಗಿ ಜನಹಿತಂ ಶ್ರೀ ಗುರು ನಿರುತಂ 1
ಅತಿಪಾವನ ಕಾಷಾಯ ಸುವಸನಂ
ನತಜನೇಷ್ಟ ವಿಶ್ರಾಣನ ನಿಪುಣಂ
ಧೃತ ದಂಡ ಕಮಂಡಲ ಶುಭಪಾಣಿಂ
ಕೃತ ಹರಿಸುತಿ ಸಂಗೀತ ಸುವಾಣೀಂ 2
ನಿಜತಪಸಾ ಸಮುಜಾರ್ಜಿತ ತೇಜಂ
ಸುಜನಾವನ ಗುಣಹಿತ ಸುರಭೂಜಂ
ವೃಜಿನ ಹರಣ ಕೃಷ್ಣ ವಿಜಯವಿಠ್ಠಲರೇಯಂ
ಅಜಿನಾಸನ ಸುಸ್ಥಿರ ಯತಿರಾಜಂ3

ರಾಘವೇಂದ್ರ ಪಾವನ ಕಾಯ raghavendra pavana kaya

ರಾಘವೇಂದ್ರ ಪಾವನ ಕಾಯ ರಾಘವೇಂದ್ರ
ರಾಘವೇಂದ್ರ ದುರಿತೌಫ ಪರಿಹರಿಸಿ
ರಾಘವೇಷನ ಪಾದಮೌಘ ನುತಿಪ ಗುರು ಪ
ಶರಣು ಪೊಕ್ಕೆನು ಇಂದು ಕಿರಣಪೊಲುವ ಪಾದ
ಸ್ಮರಣೆ ಪಾಲಿಸುವುದು ಕರುಣದಿಂದಲಿ ಇಂದು 1
ವ್ಯಾಕುಲ ಹರಿಸಿ ಕಾಮಕ್ರೋಧ ಓಡಿಸಿ
ಸಾಕುವುದು ಎನ್ನನೇಕ ಮಹಿಮ ಗುರು2

ಸಿರಿವಿಜಯವಿಠ್ಠಲ ಪರದೈವವೆ ಯೆಂದು
ಸ್ಥಿರವಾಗಿ ಸ್ಥಾಪಿಸಿ ಮೆರೆದ ನಿರ್ಮಳಕಾಯ 3

ರಾಘವೇಂದ್ರ ಗುರುರಾಯ ರಮಣೀಯ raghavendra gururaya ramaneeya kaya

ರಾಘವೇಂದ್ರ ಗುರುರಾಯ ರಮಣೀಯ ಕಾಯ
ರಾಘವೇಂದ್ರ ಪಾದಾಂಬುಜ ಭೃಂಗ ಭವ ಭಯ ಭಂಗ ಪ
ನೋಡಿದೆ ನಿಮ್ಮ ಮಹಿಮೆಯ ಹಾಡಿ ಪಾಡುವೆನೊ ನಿತ್ಯ
ಆಡಿ ಕೊಂಡಾಡಲು ಬಲು ಗೂಢವಾಗಿದೆ
ನಾಡಿನೊಳಗೆ ವೊಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನು
ಮೂಢ ಬುದ್ಧಿಯನು ಬಿಡಿಸು ಕೂಡಿಸು ಸಜ್ಜನರೊಳಗೆ 1
ನಾಮಾಭಿವಿಡಿದು ಉಮಾಪತಿ ಪರಿಯಂತ
ಈ ಮನ ಎರಗಲಿ ಯಾಮ ಯಾಮಕೆ
ಕಾಮಿಪೆ ಇದನೆ ಗುರುವೆ ವಾಮದಕ್ಷಣ ಮಾರ್ಗ
ನೇಮ ತಪ್ಪುದಂತೆ ತಿಳಿಸಿ ಭ್ರಾಮ ಬುದ್ಧಿಯ ಓಡಿಸುವುದು 2
ಚಿಂತಾಮಣಿ ಕಂಡ ಮೇಲೆ ಭ್ರಾಂತಿಗೊಳಿಪÀ ವಿಷಯ
ಚಿಂತಿಸಿ ಬೇಡುವುದು ಲೋಕಾಂತದ ಸುಖವು
ಇಂತು ಬಾಗಿ ನಿಂತು ಕೇಳುವಂತೆ ಮಾಡದಿರು ಕರುಣಿ
ಸಂತತ ನಿನ್ನ ಪಾದಕ್ರಾಂತನಾಗಿ ತುತಿಸುವೆ 3
ಸಾರಿಸಾರಿಗೆ ಈ ಚಿತ್ರ ತಾರತಮ್ಯವ ವಿಚಾರಗೈದು ನಲಿದಾಡಿ
ಮೇರೆ ಇಲ್ಲದೆ ಕೋಶ ಇಂದಿರೇಶನ್ನ ಹೃ
ದ್ವಾರಿಜದೊಳು ನಿಲಿಸಿ
ಆರಾಧನೆ ಮಾಡುವ ವೈಕಾರಿಕ ಭಾಗ್ಯವೆ ಬರಲಿ 4
ನಮೋ ನಮೋ ಯತಿರಾಜ ಮಮತೆ ರಹಿತ ಅನುಪಮ ಚರಿತಾ
ಚಾರುಹಾಸನೆನಿಪ ನಿನ್ನ ಹೆಮ್ಮೆಯಿಂದಲಿಪ್ಪ
ಪರಬೊಮ್ಮ ವಿಜಯವಿಠಲ ನಾ
ತುಮ್ಮದೊಳಚಿನಪ e್ಞÁನೋತ್ತುಮ ತುಂಗಭದ್ರವಾಸ 5

ಎಂಥ ಪುಣ್ಯವೆ ನಿನ್ನದೆಂಥ entha punyave ninnadentha

ಎಂಥ ಪುಣ್ಯವೆ ನಿನ್ನದೆಂಥ ಭಾಗ್ಯವೆ ಗೋಪಿ |
ಇಂಥ ಮಗನ ಕಾಣೆವೆ ಪ
ಚಿಂತಿಸಿದರೂ ದೊರಕ ಚೆಲುವ ರಾಜಗೋಪಾಲ |
ಇಂತೀ ಮಾತುಗಳೆಲ್ಲವು - ಹುಸಿಯಲ್ಲವು ಅ.ಪ
ಸರಸಿಜನಾಭನ ಸುಮ್ಮನೆ ಕೊಂಡಾಡೆ |
ದುರಿತವೆಲ್ಲವು ಪೋಪುದೆ ||
ಸರಸದಿಂದಲಿ ಒಮ್ಮೆ ಸವಿಮಾತನಾಡಿದರೆ |
ಪರಿತೋಷ ಕೈಗೂಡುವುದೆ-ಯಶೋದೆ 1
ಊರ ಒಳಗೆ ನಿಮ್ಮ ಅಂಜಿಕೆ ನೆರೆಹೊರೆ |
ದೂರಿಕೊಂಬುವರಲ್ಲವೆ? ||
ಅರಣ್ಯದಲಿ ನಾವು ಆಡಿದ ಆಟವು |
ಆರಿಗಾದರೂ ಉಂಟೇನೆ-ಇಂದುವದನೇ? 2
ನಿನ್ನ ಮಗನ ಕರೆಯೆ ಎನ್ನ ಪ್ರಾಣದೊಡೆಯ |
ಪುಣ್ಯದ ಫಲವು ಕಾಣೆ ||
ಚೆನ್ನ ಶ್ರೀ ಪುರಂದರ ವಿಠಲರಾಯನ |
ನಿನ್ನಾಣೆ ಬಿಡಲಾರೆವೆ-ಪುಸಿಯಲ್ಲವೆ 3

ಎಂಥ ಚೆಲುವೆಗೆ ಮಗಳನು entha cheluvege magalanu

ಎಂಥ ಚೆಲುವೆಗೆ ಮಗಳನು ಕೊಟ್ಟನು
ಗಿರಿರಾಜನು ನೋಡಮ್ಮಮ್ಮ |
ಕಂತು ಹರಶಿವ ಚೆಲುವನೆನ್ನುತ ಮೆಚ್ಚಿದನೇ ನೋಡಮ್ಮಮ್ಮ ಪ
ಮನೆಯೆಂಬುದು ಸ್ಮಶಾನವು ನೋಡೇ
ಗಜಚರ್ಮಾಂಬರವಮ್ಮಮ್ಮ |
ಹಣವೊಂದೆಂಬುದು ಕೈಯೊಳಗಿಲ್ಲವು
ಕಪ್ಪರವಿದೆ ನೋಡಮ್ಮಮ್ಮ 1
ಮೋರೆಗಳೈದು-ಮೂರು ಕಣ್ಣಗಳು
ವಿಪರೀತವ ನೋಡಮ್ಮಮ್ಮ
ಘೋರವಾದ ರುಂಡಮಾಲೆ ಉರಗ
ಭೂಷಣವನು ನೋಡಮ್ಮಮ್ಮ2
ಭೂತ ಪ್ರೇತ-ಪಿಶಾಚಿಗಳೆಲ್ಲಾ ಪರಿವಾರವು ನೋಡಮ್ಮಮ್ಮ |
ಈತನ ನಾಮವು ಒಂದೇ ಮಂಗಳಕರವು
ಹರನ ನೋಡಮ್ಮಮ್ಮ 3
ತಲೆಯೆಂಬುದು ನೋಡಿದರೆ ಜಡೆಯು
ಹೊಳೆಯುತಿದೆ ನೋಡಮ್ಮಮ್ಮ
ಹಲವು ಕಾಲದ ತಪಸಿ ರುದ್ರನ
ಮೈಬೂದಿಯು ನೋಡಮ್ಮಮ್ಮ 4
ನಂದಿವಾಹನನ ನೀಲಕಂಠನ ನಿರ್ಗುಣನನು ನೋಡಮ್ಮಮ್ಮ |
ಇಂದಿರೆರಮಣನ ಪುರಂದರವಿಠಲನ
ಹೊಂದಿದವನ ನೋಡಮ್ಮಮ್ಮ 5

ಎಂಥ ಗಾಡಿಕಾರನೆ-ಕೃಷ್ಣಯ್ಯ entha gaadikarane krishnayya

ಎಂಥ ಗಾಡಿಕಾರನೆ-ಕೃಷ್ಣಯ್ಯ ಇ - |
ನ್ನೆಂಥ ಗಾಡಿಕಾರನೆ? ಪ
ಕಂತುಪಿತನು ಬೇಲಾಪುರದ ಚೆನ್ನಿಗರಾಯ ಅ.ಪ
ಹಿಂಡು ಕೂಡಿರುವ ಮಕ್ಕಳನೆಲ್ಲ ಬಡಿವರೆ ಲಂಡನೇನೆ-ಅಮ್ಮ |
ಉಂಡು ಹಾಲು ಬೆಣ್ಣೆ ಬೆಕ್ಕಿಗಿಕ್ಕುವರೆ ಪ್ರಚಂಡನೇನೆ? 1

ಹೆಚ್ಚು ಹೇಳುವುದೇನು ಬಿಚ್ಚಿ ಉರೋಜವ ತೋರುವನೆ-ಅಮ್ಮ |
ಮುಚ್ಚು ಮರೆಯೇತಕೆ ಮನೆಮನೆಗಳಲಿ ಪೋಗುವನೆ 2
ವಸುಧೆಯೊಳಗೆ ನಂದಗೋಕುಲದೊಳಗೆ ತಾ ಬಂದ ಕಾಣೆ-ಅಮ್ಮ |
ಹಸು ಮಗನಾದ ನೀ ಪುರಂದರವಿಠಲರಾಯ ಕಾಣೆ 3

ಎಂತು ನಿನ್ನ ಪೂಜೆ ಮಾಡಿ entu ninna puje maadi

ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ ಪ
ಚಿಂತಾಯತನೆ ನಿನ್ನ ನಾಮ ಎನಗೊಂದು ಕೋಟಿ ಅ.ಪ
ಪವಿತ್ರೋದಕದಿ ಪಾದ ತೊಳೆವೆನೆಂತೆಂದರೆ |
ಪಾವನೆಯಾದ ಗಂಗೆ ಪಾದೋದ್ಭವೆ ||
ನವಕುಸುಮವ ಸಮರ್ಪಿಸುವೆನೆಂದರೆ ಉದು
ಭವಿಸಿಹನು ಅಜ ನಿನ್ನ ಪೊಕ್ಕುಳ ಹೂವಿನಲಿ 1
ದೀಪವನು ಬೆಳಗುವೆನೆ ನಿನ್ನ ಕಂಗಳು ಸಪ್ತ
ದ್ವೀಪಂಗಳೆಲ್ಲವನು ಬೆಳೆಗುತಿಹವೋ ||
ಆಪೋಶನವನಾದರೀವೆನೆಂತೆಂಬೆನೆ
ಆಪೋಶನವಾಯ್ತು ಏಳು ಅಂಬುಧಿಯು 2
ಕಾಣಿಕೆಯಿತ್ತಾದರೂ ಕೈ ಮುಗಿವೆನೆಂದರೆ
ರಾಣಿವಾಸವು ಸಿರಿದೇವಿ ನಿನಗೆ ||
ಮಾಣದೆ ಮನದೊಳು ನಿನ್ನ ನಾಮಸ್ಮರಣೆ
ಧ್ಯಾನವನು ದಯೆ ಮಾಡೋ ಪುರಂದರವಿಠಲ 3

ಎಂತಹುದೊ ನಿನ್ನ ಭಕುತಿ entahado ninna bhakti

ಎಂತಹುದೊ ನಿನ್ನ ಭಕುತಿ ? |
ಸಂತತ ನಿನ್ನ ದಾಸರ ಸಂಗವಿರದೆನಗೆ ಪ.
ವೃಣವನಾಶಿಪ ಕುರುಡು ನೊಣ ಮೊಸರ ಕಂಡಂತೆ |
ಧನಿಕರ ಮನೆಗೆ ಕ್ಷಣಕ್ಷಣಕ್ಕೆ ಪೋಗಿ ||
ತನುಬಾಗಿ ತುಟಿಯೊಣಗಿ ಅಣಕನುಡಿ ಕೇಳ್ವ - ಕೃ - |
ಪಣ ಮನಕೆ ಎಂತಹದು ನಿನ್ನಯ ಭಕುತಿ1
ಅಡಿಯಾಡಿ ಮುಖಬಾಡಿ ನುಡಿಯಡಗಿ ಬಡವನೆಂದು |
ಒಡಲ ತೋರಿಸಿದೆನೊ ಕಡುದೈನ್ಯದಿ ||
ಒಡೆಯ ನೀನಹುದೆಂದು ಮಡದಿ - ಮಕ್ಕಳಿಗೆ ಹೆಸ - |
ರಿಡುವ ಅವರಡಿಗೆ ಎರಗುವನ ಮನಕೆ 2
ಹೋಗಿಬಾರೈ ಎಂದು ಅತಿಗಳೆದರು ತಲೆ - |
ಬಾಗಿ ನಿಂತು ಅಲ್ಲಿ ಮೌನವಾಗಿ ||
ಓಗರತೆ ಮನೆಮನೆ ತಪ್ಪದೆ ತಿರುಗುವ |
ಜೋಗಿಯ ಕೈಯಕೋಡಗದಂಥ ಮನಕೆ 3
ಅವನ ತೋರಿ ಬೆಟಿಕಿರಿಯ ಬಾಲವ ಬೀಸಿ |
ಕುನ್ನಿ ಸುಳಿದಾಡಿ ಕಾಲ್ಗೆರಗುವ ತರದಿ ||
ಹೆಣ್ಣಿನಾಶೆಗೆ ಬಾಯಬಿಡುವ ಸ್ತ್ರೈಣನ ಪರಿ - |
ಘನ್ನವಯ್ಯ ಘನ್ನವಯ್ಯ ಬನ್ನಬಡುವ ಕುನ್ನಿಮನಕೆ 4
ವಟುವಾಗಿ ಬಲಿಯ ದಾನವನು ಬೇಡಹೋದ |
ಕಟು ಕಷ್ಟಗಳನೆಲ್ಲ ನೀನೆ ಬಲ್ಲೆ ||
ವಟಪತ್ರಶಾಯಿ ಶ್ರೀಫಣಿ ವರದ ಪುರಂದರ - |
ವಿಠಲ ನಿನ್ನ ದಾಸರ ಸಂಗಸುಖವಿರದೆ 5

ಎಂತಹ ಸಣ್ಣವನೆ entava sannavane

ಎಂತಹ ಸಣ್ಣವನೆ-ನಿನ್ನ ಮಗನಂತಹರೆಲ್ಲಿಲ್ಲವೆ |
ಹೊಂತಕಾರಿ ಬಲವಂತರಿಗಧಿಕನು ಪ
ತರಳನಂತಿಪ್ಪನು ತರಳೆಯರೊಡನಾಡುವ |
ಕಿರುಬೆರಳುಗುರಲಿ ಗಿರಿಯನೆತ್ತಿದವ 1
ಕಾಳಿಯ ಸರ್ಪನ ಕಾಲಲ್ಲಿ ತುಳಿದವ |
ಪಲಾಯನ ಮಾಡಿ ಕಾಲಯವನನ ಸುಟ್ಟ 2
ಕಿಚ್ಚು ಪಾನವ ಮಾಡಿ ಅಚ್ಚರಿ ತೋರಿದ |
ರಚ್ಚೆ ಮಾಡುವಿರೆಂದು ಮುಚ್ಚಿಕೊಂಬುವಿಯಲ್ಲೆ 3
ಬಾಯಿ ತೆರೆದನಲ್ಲೆ ನೀನಂಜುವಂದದಿ |
ಆಯಮಳಾರ್ಜುನರಾಯಾಸ ಬಿಡಿಸಿದ 4
ದಿಟ್ಟತನದಿ ಮೊಲೆಗೊಟ್ಟವಳನು ಕೊಂದ |
ಪುಟ್ಟ ಪುರಂದರವಿಠಲರಾಯನು 5

ಋಣವೆಂಬ ಸೂತಕವು runaemba sutakavu

ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ |
ಗುಣನಿಧಿಯೆ ನೀ ಎನ್ನ ಕಡಹಾಯಿಸಯ್ಯ ಪ
ಒಡಲಿನಾಸಗೆ ಪರರ ಕಡೆಯಿಂದ ಧನವನ್ನು |
ತಡೆಯದಲೆ ತಂದು ಸಂತೋಷ ಪಡುವೆ ||
ಕೊಡುವ ವೇಳೆಗೆ ಅವರ ಬಿರುನುಡಿಗಳನು ಕೇಳ್ವ |
ಕಡು ಪಾಪವನ್ನು ನೀ ಕಡೆಹಾಯಿಸಯ್ಯ 1
ಕೊಟ್ಟ ದೊರೆಗಳು ಬಂದು ನಿಷ್ಠುರದ ಮಾತಾಡಿ |
ಎಷ್ಟು ಬೈಯ್ವರೊ ತಮ್ಮ ಮನದಣಿಯಲು ||
ದಿಟ್ಟತನವಿಲ್ಲದಲೆ ಕಳೆಯಗುಂದಿದೆನಯ್ಯ |
ಸೃಷ್ಟಿಗೊಡೆಯನೆ ಎನ್ನ ಕಷ್ಟ ಪರಿಹರಿಸೊ 2
ಆಳಿದೊಡೆಯನ ಮಾತ ಕೇಳಿ ನಡೆಯಲು ಬಹುದು |
ಉಳಿಗವ ಮಾಡಿ ಮನದಣಿಯ ಬಹುದು ||
ಕಾಳೆಗವ ಪೊಕ್ಕು ಕಡಿದಾಡಿ ಜಯಿಸಲು ಬಹುದು |
ಪೇಳಲಳವಲ್ಲ ಋಣದವಗೊಂದು ಸೊಲ್ಲ 3
ಹರಿವ ಹಾವನು ಹಿಡಿದು ತಲೆಗೆ ಸುತ್ತಲು ಬಹುದು |
ಮುರಿವ ಮಾಳಿಗೆಯ ಕೈಯೊಳು ನಿಲಿಸ ಬಹುದು ||
ಉರಿವ ಉರಿಯೊಳು ಹೊಕ್ಕು ಹೊರ ಹೊರಟು ಬರಬಹುದು |
(ಬೆರೆದು) ಸೇರಲು ಬಹುದು ವೈರಿಗಳ ಮನೆಯ 4
ಹೆತ್ತ ಸೂತಕ ಹತ್ತುದಿನಕೆ ಪರಿಹಾರವು |
ಮೃತ್ಯು ಸೂತಕವು ಹನ್ನೆರಡು ದಿನವು ||
ಮತ್ತೆ ಋಣಸೂತಕವು ಜನ್ಮಜನ್ಮಾಂತರದಿ |
ಹತ್ತಿಕೊಂಡಿಹುದು ಎತ್ತಲು ಹೋಗಗೊಡದೆ 5
ಅವರ ದ್ರವ್ಯವ ದಾನ-ಧರ್ಮವನು ಮಾಡಿದರೆ |
ಅವರಿಗಲ್ಲದೆ ಪುಣ್ಯ ಇವರಿಗುಂಟೆ ||
ಅವರ ದ್ರವ್ಯದಿ ತೀರ್ಥ-ಯಾತ್ರೆಯನು ಮಾಡಿದರೆ |
ಅವರ ಮನೆಬಾಡಿಗೆಯ ಎತ್ತಿನಂದದಲಿ 6
ಬಂಧುಗಳ ಮುಂದೆನ್ನ ಬಹುಮಾನಗಳು ಹೋಗಿ |
ಕಂದಿ ಕುಂದಿದೆನಯ್ಯ ಕರುಣಾನಿಧೆ ||
ಇಂದಿರಾರಮಣ ಶ್ರೀ ಪುರಂದರವಿಠಲನೆ |
ಇಂದೆನ್ನ ಋಣದಿಂದ ಕಡೆ ಹಾಯಿಸಯ್ಯ 7

ಊರಿಗೆ ಕೊರಳೊಳು ವನಮಾಲೆ Urige koralalu vanamale

ಊರಿಗೆ ಕೊರಳೊಳು ವನಮಾಲೆ ಧರಿಸಿದನೆ - ಕಿರು - |ಬಂದರೆ ದಾಸಯ್ಯ - ನಮ್ಮ |
ಕೇರಿಗೆ ಬಾ ಕಂಡೆ ದಾಸಯ್ಯ ಪ
ಕೇರಿಗೆ ಬಂದರೆ ದಾಸಯ್ಯ - ಗೊಲ್ಲ - |
ಕೇರಿಗೆ ಬಾ ಕಂಡೆ ದಾಸಯ್ಯ ಅ.ಪ
ಬೆರಳಲಿ ಗಿರಿಯನೆತ್ತಿದನೆ ||
ಇರುಳು - ಹಗಲು ಪೊಂಗೊಳಲೂದುವ ದಾಸಯ್ಯ ||ಇಲ್ಲದಲಿ ಹಿರಣ್ಯನ |
ಮರಣವ ಮಾಡಿದ ದಾಸಯ್ಯ 1
ಮುಂಗೈ ಮುರಾರಿ ದಾಸಯ್ಯ - ಚೆಲುವ |
ಹಾಂಗೆ ಹೋಗದಿ4
ಸಿಟ್ಟು ಮಾಡಬೇಡ ದಾಸಯ್ಯ - ತಾಳು - |
ರೊಟ್ಟಿ ಸುಡುವನಕ ದಾಸಯ್ಯ - ತಂ - |
ಬಿಟ್ಟನಾದರು ಮೆಲ್ಲೊ ದಾಸಯ್ಯ - ಪುರಂದರ - |
ವಿಠಲನೆಂಬ ದಾಸಯ್ಯ * 5

ಊಟಕ್ಕೆ ಬಂದೆವು ನಾವು ನಿನ್ನ utake bandevu naavu ninna

ಊಟಕ್ಕೆ ಬಂದೆವು ನಾವು ನಿನ್ನ -
ಕೋಟಲೆಗಳ ಬಿಟ್ಟು ಅಡಿಗೆ ಮಾಡಮ್ಮ ಪ.
ಕತ್ತಲಕ್ಕುತಲಿವೆ ಕಣ್ಣು - ಬಲು -
ಬತ್ತಿ ಬರುತಲಿವೆ ಕೈಕಾಲ ಜುಮ್ಮ ||
ಹೊತ್ತು ಹೋಗಿಸಬೇಡವಮ್ಮ - ಒಂದು -
ತುತ್ತನಾದರು ಮಾಡಿ ಇಕ್ಕುವುದು ಧರ್ಮ 1
ಒಡಲೊಳಗುಸಿರಿಲ್ಲವಮ್ಮ - ಗಳಿಗೆ -
ತಡವಾದರೀ ಪ್ರಾಣ ಉಳಿವುದಿಲ್ಲಮ್ಮ ||
ನುಡಿಯು ಚಿತ್ತಕೆ ಬರಲಮ್ಮ - ಒಂದು -
ಪಿಡಿ ಅಕ್ಕಿ ಅನ್ನದಿ ಕೀರ್ತಿ ಪಡೆಯಮ್ಮ........... 2
ಹೊನ್ನರಾಶಿಗಳನು ಸುರಿಯೆ - ಕೋಟಿ -
ಕನ್ನೆ ಧರಿತಿಯ ಧಾರೆಯನೆರೆಯೆ ||
ಅನ್ನದಾನಕೆ ಇನ್ನು ಸರಿಯೆ - ನಮ್ಮ -
ಚೆನ್ನ ಪುರಂದರವಿಠಲನೊಳ್ ಬೆರೆಯೆ.

ಉಪ್ಪವಡಿಸಯ್ಯ ಹರಿಯೇ uppavadisayya hariye

ಉಪ್ಪವಡಿಸಯ್ಯ ಹರಿಯೇ
ಏಳೈ ಹೃಷಿಕೇಶ ಏಳು ರವಿ - ಶಶಿ ನಯನ ಪ.
ಏಳು ಪಶುಗಳ ಕಾಯ್ದು ಪಾಲಿಸಿದೆ ಗೋಕುಲವ
ಏಳು ಸುರವಂದಿತನೆ ಏಳು ಭೂಸತಿರಮಣ
ಉಪ್ಪವಡಿಸಯ್ಯ ಹರಿಯೇ ಅಪ
ಪಚ್ಚೆ ಮುಡಿವಾಳಗಳು ಅಚ್ಚ ಸೇವಂತಿಗೆಯು
ಬಿಚ್ಚು ಮಲ್ಲಿಗೆ ಜಾಜಿ ಸಂಪಿಗೆಯು ಪುನ್ನಾಗ
ಅಚ್ಚರಿಯ ಬಕುಲ ಕೆಂಜಾಜಿ ಕೇತಕಿ ಕುಸುಮ ಗುಚ್ಛಗಳ ಪಿಡಿದುಕೊಂಡು ||
ಅಚ್ಚ ಜಾಣೆಯರು ಶ್ರೀಗಂಧ ಕಸ್ತೂರಿ ಪುನುಗು
ಬಿಚ್ಚು ಬಿಳಿಯೆಲೆಯಡಿಕೆ ಪಿಡಿದು ನಿಂತಿಹರಯ್ಯ
ಮುಚ್ಚುತಿವೆ ತಾರೆಗಳು ಹೆಚ್ಚುತಿವೆ ರವಿಕಿರಣ ಅಚ್ಯುತನೆ
ಉಪ್ಪವಡಿಸೊ 1
ಚೆನ್ನೆಯರು ಚದುರೆಯರು ಸುಗುಣಸಂಪನ್ನೆಯರು
ಪನ್ನೀರು ತುಂಬಿರ್ದ ಪೊನ್ನ ತಂಬಿಗೆಗಳನು
ರನ್ನಗನ್ನಡಿಯನ್ನು ಪಿಡಿದು ನಿಂತಿರುವರೈ ಪನ್ನಂಗಶಯನ ಏಳೈ ||
ಮನ್ನಣೆಯ ನಾರದರು ಮೊದಲಾದ ಮುನಿನಿಕರ
ನಿನ್ನ ಮಹಿಮೆಗಳನ್ನು ಪಾಡಿ ನಲಿಯುವರಯ್ಯ
ಇನ್ನು ಏಳೇಳು ಉದಯದ ಸಮಯ ಸಿರಿಯರಸ
ಚೆನ್ನಿಗನೆ ಉಪ್ಪವಡಿಸೊ 2
ದೇವ ದುಂದುಭಿ ಮೊಳಗೆ ದೇವಕನ್ನೆಯರೆಲ್ಲ
ದೇವಾಂಗ ವಸ್ತ್ರವನು ಪಿಡಿದು ನಿಂತಿಹರಯ್ಯ
ದೇವ ದೇವೇಶ ನಿಮ್ಮೋಲಗದ ಸಂಭ್ರಮಕೆ ದೇವತೆಗಳೆಲ್ಲ ಕರೆದು ||
ದೇವ ಪ್ರಹ್ಲಾದ ಬಲಿ ಮುಖ್ಯರನು ಕಾಯ್ದವನೆ
ದೇವ ಬ್ರಹ್ಮನ ಪಡೆದ ದೇವಗಂಗೆಯ ಪಿತನೆ
ದೇವ ದೇವೋತ್ತಮನೆ ದೇವಾಧಿದೇವ ಪುರಂದರವಿಠಲ
ಉಪ್ಪವಡಿಸೊ 3