Labels

Monday 21 October 2019

ಆರು ಒಲಿದರೇನು ನಮಗಿನ್ನಾರು Aaru olidarenu namaginnaru

ಆರು ಒಲಿದರೇನು ನಮಗಿನ್ನಾರು ಮುನಿದರೇನು
ಕ್ಷೀರಸಾಗರ ಶೇಷಶಯನನ ಒಲುಮೆಯುಳ್ಳ ಹರಿದಾಸರಿಗೆ ಪ.
ಪಡೆದ ತಾಯಿ - ತಂದೆ ನಮ್ಮೊಳು ಅಹಿತವ ಮಾಡಿದರೇನು
ಮಡದಿ ಮಕ್ಕಳು ನೆಂಟರಿಷ್ಟರು ಮುನಿಸು ಮಾಡಿದರೇನು
ಒಡೆನೆ ತಿರುಗುವ ಗೆಳೆಯರು ನಮ್ಮೊಳು ವೈರವ ಬೆಳಸಿದರೇನು
ಕಡಲ ಶಯನನ ಕರುಣಾಂಬುಧಿಯ ಒಲುಮೆಯುಳ್ಳ ಹರಿದಾಸರಿಗೆ 1
ಊರನಾಳುವ ದೊರೆಗಳು ನಮ್ಮನು ಹೊರಗೆ ನೂಕಿದರೇನು
ಮಾರಿಯ ಹಿಂಡು ಮುಸಲರ ದಂಡು ಮೈಗೆ ಮುತ್ತಿದರೇನು ||
ಅರಣ್ಯದಿ ಹರಿದಾಡುವ ಮೃಗಗಳು ಅಡ್ಡಗಟ್ಟಿದರೇನು
ವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ 2
ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕ್ರೀಮಿಕೀಟಂಗಳು ಚರ್ಮಕೆ ಮುತ್ತಿದರೇನು ||
ಭಾನು ಮಂಗಳ ಬುಧ ಶುಕ್ರಂಗಳ ಬಲುವು ತಪ್ಪಿದರೇನುಮಾಣದೆ ಭಜಿಸುವ ಪುರಂದರವಿಠಲನಒಲುಮೆಯುಳ್ಳ ಹರಿದಾಸರಿಗೆ 3

No comments:

Post a Comment