Labels

Monday 28 October 2019

ಇವನ ಹಿಡಿದುಕೊಂಡು ivana hididukondu

ಇವನ ಹಿಡಿದುಕೊಂಡು ಹೋಗಲೊ ಜೋಗಿ |
ಇವ ನಮ್ಮ ಮಾತು ಕೇಳದೆ ಪುಂಡನಾದನು ಪ
ಆಡುಲಾಡುತ ಬಂದು ಮಡುವಿನೊಳ್ ಮುಳುಗಿದ |
ಬೇಡವೆಂದರೆ ಬೆಟ್ಟ ಬೆನ್ನಲಿ ನೆಗಹಿದ ||
ಓಡುತೋಡುತ ಬಂದು ದಾಡೆಯಿಂದ ಸೀಳ್ವ |
ನೋಡ ಹೋದರೆ ಕಣ್ಣ ತರೆದಂಜಿಸುವ 1
ಹುಲ್ಲಲಿ ಬ್ರಾಹ್ಮಣನ ಕಣ್ಣು ಕುಕ್ಕಿದ ಬುದ್ಧಿ ||
ಅಲ್ಲವೆಂದರೆ ಕೊಡಲಿಯ ಪಿಡಿದೆತ್ತಿದ ||
ಬಿಲ್ಲನು ಎಡದ ಕೈಯಿಂದಲಿ ಎತ್ತಿದ |
ಬಲ್ಲಿದ ಮಾವನ ಶಿರವನರಿದು ಬಂದ 2
ಬತ್ತಲೆ ಕುದುರೆಯ ಹತ್ತಬೇಡೆಂದರೆ |
ಹತ್ತುವ ಶ್ರೀಕೃಷ್ಣ ಚೆಂದದಿಂದ ||
ಭಕ್ತವತ್ಸಲ ನಮ್ಮ ಪುರಂದರವಿಠಲನ |
ಅತ್ತ ಹಿಡಿದು ಕೊಂಡು ಹೋಗಯ್ಯ ಜೋಗಿ 3

No comments:

Post a Comment