Labels

Tuesday 22 October 2019

ಇಂದು ನಾನೇನು indu naanenu

ಇಂದು ನಾನೇನು ಸುಕೃತವ ಮಾಡಿದೆನೊಇಂದಿರೆಯರಸು ವೆಂಕಟ ಬಂದ ಮನೆಗೆ ಪನೊಸಲ ತಿದ್ದಿದ ಬೊಟ್ಟಿನೆಸೆವ ಕಸ್ತೂರಿಯುಎಸಳು ಕಂಗಳ ಢಾಳ ಹೊಸ ಪರಿಯ ನೋಟ ||ಎಸೆವ ಅಮೃತ ಸಾರ ರಸ ಸವಿ ಮಾತು ಕುಸುಮದ ಸೊಬಗ ವೆಂಕಟ ಬಂದ ಮನೆಗೆ 1
ಹಾರ ಕೇಯೂರ ಹೊನ್ನುಂಗುರದ ಬೆರಳುಹಾರದ ನಡುವೆ ಹಾಕಿದುವೇಳು ಪದಕ ||ತೋರ ಮುತ್ತಿನ ಕಂಠಮಾಲೆ ಮಾಣಿಕ ಶೋನೇರಿ ಗಿರಿವಾಸ ವೆಂಕಟ ಬಂದ ಮನೆಗೆ 2
ಬಿಗಿದು ಸುತ್ತಿದ ನೀಲ ಬಿಡುಮುತ್ತಿನ ಒಂಟಿಮುಗುಳು ಬಿರಿದಂದದ ನಗೆ ದಂತಪಂಕ್ತಿ ||ಝಗಿಪ ಪೀತಾಂಬರ ಉಡೆಯ ಕಠಾರಿ ಪ-ನ್ನಗಗಿರಿವಾಸ ವೆಂಕಟ ಬಂದ ಮನೆಗೆ 3
ಬಾಲಚಂದ್ರನ ಪೋಲ್ವ ಕಪೋಲ ಕುಂಡಲವುನೀಲ ಮಾಣಿಕ್ಯದಾಭರಣವನಿಟ್ಟು ||ಕಾಲ ಪೆಂಡೆಯವು ರತುನದ ಹಾವುಗೆಯುಮೇಲುಗಿರಿವಾಸ ವೆಂಕಟ ಬಂದ ಮನೆಗೆ 4
ಕರಯುಗಲದಲಿ-ಶಂಖ-ಚಕ್ರವ ಪಿಡಿದುಎರಡೇಳು ಭುವನ ತನ್ನುದರದೊಳಿಟ್ಟು ||ಗರುಡನ ಹೆಗಲೇರಿ ಜಗವ ಪಾಲಿಸುವಪುರಂದರ ವಿಠಲ ವೆಂಕಟ ಬಂದ ಮನೆಗ 5

No comments:

Post a Comment