Labels

Monday, 21 October 2019

ಆಡಿದನೋಕುಳಿಯ Aadidanokaliya

ಆಡಿದನೋಕುಳಿಯ ನಮ್ಮ ರಂಗ !
ಆಡಿದನೋಕುಳಿಯ ಪ.
ಕುಂದದ ಕಸ್ತುರಿಯ-ಅಳಿ-|
ಗಂಧದ ಓಕುಳಿಯ ||
ಬಂದರು ಹೊರಗಿನ ನಾರಿಯರಾಡುತ|
ಚೆಂದದ ಜೀಕುಳಿಯ 1
ಪÀಟ್ಟಿ ಮಂಚದ ಮೇಲೆ-ನಮ್ಮ ರಂಗ |
ಇಟ್ಟ ಮುತ್ತಿನ ಹಾರ
ಬಟ್ಟ ಕುಚಕೆ ಕಣ್ಣಿಟ್ಟು ಒಗೆದನು |
ಕುಟ್ಟಿದನೋಕುಳಿಯ 2
ಆರು ಹತ್ತು ಸಾವಿರ-ಗೋಪ |
ನಾರಿಯರನು ಕೂಡಿ ||
ಮಾರನಯ್ಯ ಶ್ರೀಪುರಂದರವಿಠಲ |
ಹಾರಿಸಿ ಜೀಕುಳಿಯ 3

No comments:

Post a Comment