Labels

Tuesday 29 October 2019

ಉದರವೈರಾಗ್ಯವಿದು udara vairagyavidu

ಉದರವೈರಾಗ್ಯವಿದು - ನಮ್ಮ - |
ಪದುಮನಾಭನಲ್ಲಿ ಲೇಶಭಕುತಿ ಇಲ್ಲ ಪ.
ಉದಯಕಾಲದಲೆದ್ದು ಗಡಗಡ ನಡುಗುತ |
ನದಿಯಲಿ ಮಿಂದೆನೆಂದು ಹಿಗ್ಗುತಲಿ ||
ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು |
ಬದಿಯಲಿದ್ದವರಿಗಾಶ್ಚರ್ಯದೋರುವುದು 1
ಕರದಲಿ ಜಪಮಣಿ ಬಾಯಲಿ ಮಂತ್ರವು |
ಅರಿವೆಯ ಮುಸುಕನು ಮೋರೆಗೆ ಹಾರೆ ||
ಪರಸತಿಯರ ರೂಪ ಮನದಲಿ ಗುಣಿಸುತ |
ಪರಮವೈರಾಗ್ಯಶಾಲಿಯೆನಿಸುವುದು 2
ಕಂಚುಗಾರನಾ ಬಿಡಾರದಿಂದಲಿ |
ಕಂಚು ಹಿತ್ತಾಳೆಯ ಪ್ರತಿಮೆಯ ನೆರಹಿ ||
ಮಿಂಚಬೇಕೆಂದು ಬಹುಜ್ಯೋತಿಗಳನೆ ಹಚ್ಚಿ
ವಂಚಕತನದಲಿ ಪೂಜೆಯ ಮಾಳ್ಪುದು 3
ಬೂಟಕತನದಲಿ ಬಹಳ ಭಕುತಿ ಮಾಡಿ |
ಸಾಟಿಯಿಲ್ಲವು - ಎನಗೆಂದೆನಿಸಿ ||
ನಾಟಕ ಸ್ತ್ರೀಯಂತೆ ಬಯಲಡಂಬವ ತೋರಿ |
ಊಟಕೆ ಸಾಧನೆ ಮಾಡಿಕೊಂಬುದಿದು 4
ನಾನು ಎಂಬುದ ಬಿಟ್ಟು e್ಞÁನಿಗಳೊಡನಾಡಿ |
ಏನಾದುದು ಹರಿ ಪ್ರೇರಣೆಯೆಂದು |
ಶ್ರೀ ನಿಧಿ ಪುರಂದರವಿಠಲರಾಯನನು |
ಕಾಣದೆ ಮಾಡಿದ ಕಾರ್ಯಗಳೆಲ್ಲ 5

No comments:

Post a Comment