Labels

Saturday, 19 October 2019

ಅe್ಞÁನಿಗಳ ಕೂಡ ajnanigalu kuda

ಅe್ಞÁನಿಗಳ ಕೂಡ ಅಧಿಕ ಸ್ನೇಹಕ್ಕಿಂತ
ಸುe್ಞÁನಿಗಳ ಕೂಡ ಜಗಳವೇ ಲೇಸು ಪ.
ಡಂಭಕರ ಮನೆಯಪಮಾನದೂಟಕ್ಕಿಂತ
ತುಂಬಿದ ಪಟ್ಟಣದಿ ತಿರಿದುಂಬುವುದೆ ಲೇಸು |
ಹಂಬಲಿಸಿ ಹಾಳು ಹರಟೆ ಹೊಡೆವುದಕಿಂತ
ನಂಬಿ ಹರಿದಾಸರೊಳಾಡುವುದೆ ಲೇಸು 1
ಒಡಲ ಹಂಗಿಸುವರ ಮನೆಯ ಓಗರಕಿಂತ
ಕುಡಿನೀರ ಕುಡಿದುಕೊಂಡಿಹುದೆ ಲೇಸು |
ಬಿಡದೆ ಕಡಿದಾಡುವರ ನೆರೆಯಲಿಹುದಕಿಂತ
ಅಡವಿಯೊಳe್ಞÁತವಾಸವೇ ಲೇಸು 2
ಮಸೆದು ಮತ್ಸರಿಸುವನ ಬಳಿಯಲಿಹುದಕಿಂತ
ಹಸನಾದ ಹಾಳುಗುಡಿಗಳೆ ಲೇಸು |
ಬಿಸಜಾಕ್ಷ ಪುರಂದರವಿಠಲನ ನೆನೆನೆನೆದು
ವಸುಧೆಯೊಳು ಚಿರಕಾಲವಿರುವುದೆ ಲೇಸು 3

1 comment:

  1. I don't know why desperately people changing Ankita namas, this song was written by kanakadasaru not purandaradasaru. Why many websites showing wrong result?

    ReplyDelete