Labels

Tuesday 22 October 2019

ಇನ್ನೇಕೆ ಯಮನ ಬಾಧೆಗಳು? Inneke yamana bhadegalu

ಇನ್ನೇಕೆ ಯಮನ ಬಾಧೆಗಳು? |ಎನ್ನ ಜಿಹ್ವೆಯೊಳಗೆ ಹರಿನಾಮವಿರಲು ಪಪತೀತ ಪಾವನನೆಂಬ ನಾಮ-ಸಕಲ |ಶ್ರುತಿತತಿಗಳಿಗೆಲ್ಲ ನಿಲುಕದೀ ನಾಮ ||ಕ್ರುತುಕೋಟಿ ಫಲ ಒಂದೇ ನಾಮ-ಸದ್ |ಗತಿಗೆ ಸಂಗಡ ಬಾಹೋದಲೆ ದಿವ್ಯನಾಮ1
ಮುನ್ನ ಪ್ರಹ್ಲಾದನೆ ಸಾಕ್ಷಿ - ನಮ್ಮ |ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ||ಚೆನ್ನ ಅಜಮಿಳನೊಬ್ಬ ಸಾಕ್ಷಿ ಆ |ಉನ್ನಂತ ಲೋಕವಾಳುವ ಧ್ರುವ ಸಾಕ್ಷಿ 2
ಹದಿನಾಲ್ಕು ಲೋಕವಾಳುವ - ನಮ್ಮ |ಮದನ ಜನಕನಾಗಿ ಮಹಿಮೆ ತೋರುವ ||ಪದುಮನಾಭನಾಗಿ ಮೆರೆವ- ನಮ್ಮ |ಪುರಂದರವಿಠಲನ ಹರುಷದಿ ಕರೆವ 3

No comments:

Post a Comment