Labels

Saturday, 19 October 2019

ಅಗಲಿ ಸೈರಿಸಲಾರದೀ Agali sairasalaradimana

ಅಗಲಿ ಸೈರಿಸಲಾರದೀ ಮನ |
ಅಗಲದಿಪ್ಪುದೆ ಜೀವನ ||
ಪೊಗರೊಗೆವ ನಗೆಮೊಗದ ಸೊಬಗಿನ |
ಸುಗುಣಸಿರಿ ಗೋಪಾಲನ ಪ
ಮುನ್ನ ಸಂಸ್ಕøತಿಪಾಶದೊಳು ಬಿದ್ದನ್ಯಥಾರಕ್ಷಕರ ಕಾಣದೆ |
ಬನ್ನಬಡುತಿಹ ಜನರನೀಕ್ಷಿಸಿ ಪೂರ್ಣ ಕರುಣಕಟಾಕ್ಷದಿ ||
ತನ್ನ ನಾಮದ ಸುಧೆಯನುಣ್ಣಿಸಿ ತನ್ನ ಭಜನೆಯ
ಸುಖವ ತೋರಿಸಿ |
ತನ್ನ ದಾಸರ ಮಾಡಿ ಕೊಂಡಿಹ ಚೆನ್ನಸಿರಿಗೋಪಾಲನ1
ಶೀಲಗುಣ ಕಥನಗಳನರಸದೆ ಕೀಳು ಚಾರಿತ್ರ್ಯಗಳ ಬಗೆಯದೆ |
ಲೋಲಚಿತ್ತದಿ ಮಾಡುತಿಹ ಅಘಜಾಲ ಕೋಟಿಗಳೆಣಿಸದೆ ||
ಕಾಲದಿಂ ಬಹುನಂಬಿದವರನು ಲೀಲೆಯಿಂದಭಿಮಾನಿಸುತ-ಪರಿ-|
ಪಾಲಿಸುತ್ತಿಹ ಮಂಗಳಾತ್ಮಕ ಶೀಲ ಕಂಠಮೂರ್ತಿಯ 2
ಭಕ್ತಿ ಕರ್ಮಜ್ಞಾನ ಯೋಗ ವಿರಕ್ತಿಯೆಂಬುದನೇನು ಕಾಣದೆ |
ಮತ್ತೆ ಕೇವಲ ಮೂಢ ಭಾವದ ಚಿತ್ತದಲಿ ನೆರೆ ನಂಬಿದ ||
ಆರ್ತರನು ಅಬಲರ ಅನಾಥರಜ ಮೃತುೈಮುಖದಿಂದವರ
ತಾನೊಲಿ-|
ದೆತ್ತಿ ಸಲಹುತಲಿಪ್ಪ ಸೊಬಗಿನ ಕೀರ್ತಿವಂತ ಮಹಾತ್ಮನ3
ಕರುಣದಿಂದೆಳಗಂದಿ ಕರುವಿನ ಮೊರೆಯ ಲಾಲಿಸಿ ಬಿಡದೆ ತೃಪ್ತಿಯ |
ಕರೆದು ಮಾಡುವ ಪರಿಯೆ ತನ್ನಯ ಸ್ಮರಿಸುತಿಹ ಕಡುದೀನರ ||
ಹೊರಗೆ ಶಿಕ್ಷಿಸಿ ಒಳಗೆ ರಕ್ಷಿಸಿ ಪಿರಿದು ತನ್ನಯ ನಿಜನವರಿಗೆ |
ತೆರುವ ಕರುಣಾಳುಗಳ ದೇವನ ಶರಣಜನ ಮಂದಾರನ4
ನೇಮದಲಿ ನಂಬಿದರ್ಗೆ ಸೂಚಿಸಿ ಕಾಮವಾಸನೆಗಳನು ಖಂಡಿಸಿ |
ಪಾಮರರ ಪಂಡಿತರ ಮಾಡಿ ಮಹಾಮಹಿಮೆಗಳ ತಿಳಿಸುತ ||
ರಾಮರಮಣಿಯ ಸಹಿತ ಸಾಲಿಗ್ರಾಮದಲಿ ನೆರೆ ನೆಲಸಿ ಭಕುತರ |
ಪ್ರೇಮದಿಂದಲಿ ಪೊರೆಯುತಿಹ ಸುಖಧಾಮ ಪುರಂದರವಿಠಲನ 5

No comments:

Post a Comment