Labels

Tuesday 22 October 2019

ಆವ ಕುಲವಾದರೇನು Aava Kulavadarenu

ಆವ ಕುಲವಾದರೇನು ಪ.
ಭಾವದ ಎಲ್ಲಾನ ತಿಳದವನಿಗೆ ಮತ್ತೇ ಅಪ
ಅಸುಡೊಂಕು ಕಬ್ದು ಇರಲು - ಅದರೊಳಗಿದ್ದ
ರಸ ತಾನು ಡೊಂಕೇನಲೊ - ಮರುಳೆ
ವಿಷಯಭಾವನೆ ಬಿಟ್ಟು ನೀ ಹೋಗಿ ಗುರುಗಳ
ಹಸನಾಗಿ ಕೇಳು ಕಾಣೋ - ಮನುಜಾ 1
ನಾನಾವರ್ಣದ ಆಕಳ - ಕ್ಷೀರದಲಿ
ನಾನಾವರ್ಣಗಳಹುದೆ - ಮನುಜಾ
ಹೀನ ಭಾವನೆಗಳನಿಂದಿಟ್ಟು ನೀ ಪೋಗಿ
e್ಞÁನಿಗಳ ಕೇಳು ಕಾಣೋ - ಮನುಜಾ 2
ಶರಧಿಯೊಳ ತೆರೆನೊರೆಗಳಾ - ಪರಿಯಂತೆ
ಶರೀರವಲ್ಲದೆ ಬೇರಿಹುದೇ ?
ವರಪುರಂದರವಿಠಲನ ಸ್ಮರಿಸುತಿರಲು ನಿನಗೆ
ಸಿರಿಯನು ಮುಕುತಿಯಹುದು - ಮನುಜಾ 3

No comments:

Post a Comment