Labels

Thursday 24 October 2019

ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ illiralare allige pogalare

ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ |
ಫುಲ್ಲನಾಭನೆ ನೀನಿದ್ದಲ್ಲಿ ಇರಿಸೆನ್ನ ಪ
ಮರಳಿ ಮರಳಿ ಜನ್ಮ ಮರಣವನೊಲ್ಲೆ |
ದುರುತ ಕೋಟಲೆಯ ಸಂಸಾರವನೊಲ್ಲೆ ||
ತುರುಕಾದು ಕೊಳಲನೂದುವ ಮುರಮರ್ದನ |
ಚರಣಕಮಲಗಳ ಸ್ಮರಣೆಯೊಳಿರಿಸೆನ್ನ 1
ಬಂದು ಸಂಸಾರದ ಬೇನೆಯೊಳಗೆ ಬಿದ್ದು |
ನೊಂದೆನು ಕಡುಮೋಹದಿಂದ ನಾ ಬೆಂದು ||
ನಂದಗೋಪನ ಕಂದ ವೃಂದಾವನಪ್ರಿಯ |
ಎಂದೆಂದು ತವಪಾದ ಸ್ಮರಣೆಯೊಳಿರಿಸೆನ್ನ 2
ಪುತ್ರ-ಪೌತ್ರರು ಬಂಧು-ಮಿತ್ರ ಬಾಂಧವರೆಂದು |
ಕತ್ತಲೆಯೊಳು ಕಡುನೊಂದೆನಯ್ಯ ||
ಸತ್ಯಮೂರುತಿ ಶ್ರೀ ಉಡುಪಿಯ ಶ್ರೀ ಕೃಷ್ಣ |
ಭಕ್ತವತ್ಸಲ ಶ್ರೀಪುರಂದರವಿಠಲ 3
____

No comments:

Post a Comment