Labels

Thursday 24 October 2019

ಇಲ್ಲೇ ವೈಕುಂಠ ಕಾಣಿರೊ - ಸಿರಿ ille vaikunta kaniro

ಇಲ್ಲೇ ವೈಕುಂಠ ಕಾಣಿರೊ - ಸಿರಿ |
ಇಲ್ಲೇ ವೈಕುಂಠ ಕಾಣಿರೊ - ಸಿರಿ |
ವಲ್ಲಭನಂಘ್ರಿಯ ನೆರೆನಂಬಿದವರಿಗೆ ಪ.
ನುಡಿಯೆರಡಾಗದೆ ಕಡುಕೋಪ ಮಾಡದೆ |
ಬಡತನ ಬಂದರು ಲೆಕ್ಕಿಸದೆ ||
ಬೆಡಗು ಹೆಣ್ಣುಗಳ ಕಡೆಗಣ್ಣೊಳು ನೋಡದೆ |
ಧೃಡಚಿತ್ತದಲಿ ಶ್ರೀ ಹರಿಯ ನಂಬಿದವರಿಗೆ 1
ಪಕ್ಷಪಾತವಿಲ್ಲದನ್ನದಾನಂಗಳನು - |
ಪೇಕ್ಷೆಯ ಮಾಡದೆ ಗುರುಹಿರಿಯರನು |
ಮೋಕ್ಷವ ಬಯಸುತ ಅನ್ಯಾಯವಳಿಯುತ |
ಲಕ್ಷ್ಮೀನಾರಾಯಣನ ಬಿಡದೆ ಧೇನಿಪರಿಗೆ 2
ಪರಹಿತವನು ಮಾಡಿ ಕೆರೆಬಾವಿಗಳ |
ಅರವಟಿಗೆಯ ಸಾಲಮರವ ಹಾಕಿ ||
ಸಿರಿಪುರದರಸು ಶ್ರೀ ಪುರಂದರವಿಠಲನ |
ಸ್ಥಿರಚಿತ್ತದಲಿ ಬಿಡದೆ ಸ್ಮರಿಸುತಲಿ ಹರಿಗೆ 3 ನೆರೆನಂಬಿದವರಿಗೆ ಪ.
ನುಡಿಯೆರಡಾಗದೆ ಕಡುಕೋಪ ಮಾಡದೆ |
ಬಡತನ ಬಂದರು ಲೆಕ್ಕಿಸದೆ ||
ಬೆಡಗು ಹೆಣ್ಣುಗಳ ಕಡೆಗಣ್ಣೊಳು ನೋಡದೆ |
ಧೃಡಚಿತ್ತದಲಿ ಶ್ರೀ ಹರಿಯ ನಂಬಿದವರಿಗೆ 1
ಪಕ್ಷಪಾತವಿಲ್ಲದನ್ನದಾನಂಗಳನು - |
ಪೇಕ್ಷೆಯ ಮಾಡದೆ ಗುರುಹಿರಿಯರನು |
ಮೋಕ್ಷವ ಬಯಸುತ ಅನ್ಯಾಯವಳಿಯುತ |
ಲಕ್ಷ್ಮೀನಾರಾಯಣನ ಬಿಡದೆ ಧೇನಿಪರಿಗೆ 2
ಪರಹಿತವನು ಮಾಡಿ ಕೆರೆಬಾವಿಗಳ |
ಅರವಟಿಗೆಯ ಸಾಲಮರವ ಹಾಕಿ ||
ಸಿರಿಪುರದರಸು ಶ್ರೀ ಪುರಂದರವಿಠಲನ |
ಸ್ಥಿರಚಿತ್ತದಲಿ ಬಿಡದೆ ಸ್ಮರಿಸುತಲಿ ಹರಿಗೆ 3

No comments:

Post a Comment