Labels

Sunday, 20 October 2019

ಅಮ್ಮ ನಿಮ್ಮ ಮನೆಗಳಲ್ಲಿ amma ninna manegalli

ಅಮ್ಮ ನಿಮ್ಮ ಮನೆಗಳಲ್ಲಿ |ನಮ್ಮ ಕೃಷ್ಣನ ಕಾಣಿರೇನೆ? ಪಸುಮ್ಮನೆ ಸುರಸಜ್ಜನರ ಸಂಘ |ಗಮ್ಮನೆ ಮರುಳ ಮಾಡಿದನಮ್ಮ ಅ.ಪಕುಂಕುಮ - ಕಸ್ತೂರಿ ಕಿರುತಿರು ನಾಮವ |ಶಂಖ - ಚಕ್ರಗಳ ಧರಿಸಿದನ ||ಬಿಂಕದಲ್ಲಿ ಕೊಳಲೂದುವ ಹಾಡುವ-ನಮ್ಮ-ಪಂಕಜನಾಭನ ಕಾಣಿರೇನೆ? 1
ಕಾಶಿ ಪಿತಾಂಬರ ಕೈಯಲಿ ಕೊಳಲು |ಪೂಸಿದ ಶ್ರೀಗಂಧ ಮೈಯಲಿ ||ಲೇಸಾದ ಪುಷ್ವಮಾಲಿಕೆ ಹಾಕಿದ-ನಮ್ಮ-|ವಾಸುದೇವ ಹರಿ ಬಂದ ಕಾಣಿರೇನೆ? 2
ಕರದಲಿ ಕಂಕಣ ಬೆರಳಲಿ ಉಂಗುರ |ಕೊರಳಲಿ ಹಾಕಿದ ಹುಲಿಯುಗರಮ್ಮ ||ಅರಳೆಲೆ ಕನಕಕುಂಡಲ ಕಾಲಲಂದಿಗೆ-ನಮ್ಮ-|ಉರಗಶಯನ ಬಂದ ಕಾಣಿರೇನೆ? 3
ಹದಿನಾರು ಸಾವಿರ ಗೋಪಸ್ತ್ರೀಯರ ಕೂಡಿ |ಚದುರಂಗ-ಪಗಡೆಯನಾಡಿದನ ||ಮದನಮೋಹನರೂಪ ಎದೆಯಲ್ಲಿ ಕೌಸ್ತುಭ-ನಮ್ಮ |ಮಧುಸೂದನ ಬಂದ ಕಾಣಿರೇನೆ? 4
ತೆತ್ತೀಸಕೋಟಿ ದೇವತೆಗಳು ಕೂಡಿ |ಹತ್ತವತಾರವ ಧರಿಸಿದನ ||ಸತ್ಯಭಾಮೆಯ ಅರಸ ಶ್ರೀ ಪುರಂದರವಿಠಲ |ನಿತ್ಯೋತ್ಸವ ಬಂದ ಕಾಣಿರೇನೆ? 5
______

No comments:

Post a Comment