Labels

Tuesday 22 October 2019

ಇಂಥಾತನು ಗುರುವಾದದ್ದು intatanu guruvadaddu

ಇಂಥಾತನು ಗುರುವಾದದ್ದು ನಮಗೆ ಇ-
ನ್ನೆಂಥಾ ಪುಣ್ಯದ ಫಲವೊ. ಪ
ಚಿಂತೆಯಿಲ್ಲದೆ ಅತಿ ಸುಲಭದಿಂದಲಿ ಶ್ರೀ
ಕಾಂತನ ಕಾಣಲಿಕ್ಕಾಯಿತುಪಾಯ ಅ.ಪ
ತಾನು ಇಲ್ಲದೆ ಈ ಜಗದೊಳು ಹರಿಯಿಪ್ಪ
ಸ್ಥಾನವಿಲ್ಲವೆಂದು ಸಾರಿದ
ಹೀನ ದೈವಗಳ ನಂಬಿದ ಜನರಿಗೆ ತನ್ನ
ಙÁ್ಞನದಿಂದಲಿ ಹರಿಯ ತೋರಿದ ||
ನಾನಾ ಜೀವಿಗಳ ಒಳಗೆ ಹೊರಗೆ ಇದ್ದು
ತಾನೇ ಮುಖ್ಯನಾಗಿ ಮೀರಿದ |
ಶ್ರೀನಾರಾಯಣನೆಂದು ಪೇಳುವರಿಗೆ ತನ್ನ
ಧ್ಯಾನದಿಂದಲಿ ಮುಕ್ತಿಮಾರ್ಗವ ತೋರಿದ 1
ಪನ್ನಗಪತಿ-ಗರುಡ-ರುದ್ರ-ಇಂದ್ರಾದ್ಯರಿಗೆ
ಉನ್ನತ ಗುರುವಾಗಿ ಮೀರಿದ |
ಘನ್ನವಾದ ಶ್ರುತಿತತಿಗಳಿಂದಲಿ ಜೀವ
ಭಿನ್ನನು ಎಂತೆಂದು ತೋರಿದ ||
ಹೊನ್ನು ಹೆಣ್ಣು ಮಣ್ಣಿನಾಶೆಯಿಲ್ಲದೆ ಅವಿ-
ಚ್ಛಿನ್ನ ಭಕುತಿಯಿಂದ ಮೆರೆದ |
ಚೆನ್ನಾಗಿ ಭಕುತಿ ವೈರಾಗ್ಯಗಳಿಂದಲಿ |
ತನ್ನ ನಂಬಿದ ಭಕುತರ ಪೊರೆದ 2
ಈರೇಳು ಲೋಕಂಗಳಿಗೆ ತಾನೇ ಮುಖ್ಯ ಆ-
ಧಾರವೆಂಬುದ ಕಲಿಸಿದ |
ಭಾರಣೆಯಿಂದಲೊಪ್ಪುತ ಬಲು ಹರುಷದಿ
ಭಾರತಿಯನು ಒಲಿಸಿದ
ಮೂರೇಳು ದುರ್ಭಾಷ್ಯಗಳ ಕಾನನವ ಕು-
ಕಾರದಂತೆ ಕಡಿದಿಳಿಸಿದ
ಸೇರಿ ಶ್ರೀಪುರಂದರ ವಿಠಲನಂಘ್ರಿಗಳಧೀರ ಪೂರ್ಣಪ್ರಙÁ್ಞಚಾರ್ಯರೆಂದೆನಿಸಿದ 3

No comments:

Post a Comment