Labels

Thursday 30 July 2020

ಹರನ ಕುಮಾರನ harana kumarana

ಶ್ರಾವಣ ಶುಕ್ರವಾರ  ಹಾಡು

ಹರನ ಕುಮಾರನ ಚರಣಕಮಲಗಳಿಗೆರಗಿ ಶಾರದೆಗೆ ವಂದಿಸುತ
ಶರಧಿಶಯನಗೆ ಸೆರಗೊಡ್ಡಿ ಬೇಡಿಕೊಂಬೆ ಶರಧಿಸುತೆಯ ಕಥೆಗೆ ವರವ

ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೇ ಇಕ್ಷುಚಾಪದವನ ಪಡೆದ
ಮೋಕ್ಷದಾಯಕಳೇ ಮಾ ಲಕ್ಷುಮಿ ಕರುಣಾ\ ಕಟಾಕ್ಷದಿ ನೋಡಬೇಕೆನ್ನ

ಶ್ರಾವಣಮಾಸದಿ ಮೊದಲ ಶುಕ್ರವಾರ  ಮಾಧವನರಸಿ ಮಾಲಕ್ಷ್ಮೀ ದೇವೇರ
ಮಹಿಮೆ ಕೊಂಡಾಡುವೋದೀ ಕಥೆ ಕಿವಿಗೊಟ್ಟು ಕೇಳೋದು ಜನರು

ಬಡವ ಬ್ರಾಹ್ಮಣನೊಂದು ಪಟ್ಟಣದೊಳಗಿದ್ದ ಮಡದಿ ಮಕ್ಕಳ ಸಹಿತಾಗಿ
ಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆ ಬಿಡದೊಂದು ಮನೆಯ ತಿರುಗುತಲಿ

ಸೊಸೆಯರು ನಾಲ್ಕು ಮಂದಿಯು ಗಂಡುಮಕ್ಕಳೂ ಹಸುಗೂಸುಗಳು ಮನೆತುಂಬಾ
ಅಶನ ವಸನವಿಲ್ಲ ಹಸಿದ ಮಕ್ಕಳಿಗೆ ಹಾಲು ಮೊಸರು ಅನ್ನವು ಮೊದಲಿಲ್ಲ

ಅತಿಗುಣವಂತರು ಗತಿಯಿಲ್ಲ ಗ್ರಾಸಕ್ಕೆ ಮಿತಭೋಜನವ ಮಾಡುವರು
ವ್ರತನೇಮ ನಿಷ್ಠೆ ನಿರುತ ದರಿದ್ರವನು ಶ್ರೀಪತಿ ಸತಿ ದಯದಿ ನೋಡಿದಳು

ಒಂದು ದಿನದಿ ಬಂದ ಮಂದಿ ಮಂದಿರದಲ್ಲಿ ಚೆಂದಾದ ಸುಣ್ಣ ಸಾರಣೆಯು
ರಂಗವಲ್ಲಿ ಚಿತ್ರ ಬಣ್ಣಕಾರಣೆ ಮನೆ ಮುಂದೆ ತೋರಣ ಕಟ್ಟುತಿರಲು

ಮನೆಮನೆಯಲ್ಲಿ ಮಾಲಕ್ಷ್ಮೀದೇವೇರ ಚಟ್ಟಿಗೆ ಬರೆವುದನು
ತಾ ಕಂಡು ಇದು ಏನು ನೋವಿ ಎನಗೆ ಹೇಳಬೇಕೆಂದು ಘನಭಕ್ತಿಯಿಂದ ಕೇಳಿದನು

ಕ್ಷೀರಸಾಗರದಲ್ಲಿ ಹುಟ್ಟಿದ ಮಾಲಕ್ಷ್ಮೀ ದೇವಿ ದೇವರ ಪಟ್ಟದರಸಿ
ಶ್ರಾವಣಮಾಸ ಸಂಪತ್ತು ಶುಕ್ರವಾರ  ನಾವು ಪೂಜೆಯ ಮಾಡಬೇಕು

ಎನಗೊಂದು ಚಟ್ಟಿಗೆ ಬರೆದುಕೊಟ್ಟರೆ ಎನ್ನ ಮನೆಯಲ್ಲಿ ಇಟ್ಟು ಪೂಜಿಪೆನು
ವಿನಯದಿಂದ ಹೇಳಿಕೊಂಡರೆ ಒಂದು ಚಟ್ಟಿಗೆ ಬರೆದುಕೊಟ್ಟರು ಬಲಗೈಲಿ

ಸಿರಿದೇವಿ ಚಟ್ಟಿಗೆ ಹಿಡಿದು ಗೋಪಾಳಕ್ಕೆ ಹೋದನು ಮನೆ ಮನೆಯಲ್ಲಿ
ಗೋಧಿ ಅಕ್ಕಿ ಬ್ಯಾಳಿ ಬೆಲ್ಲ ತುಪ್ಪವ ತಂದು ನೀಡೋರು ಹಿಡಿ ಹಿಡಿರೆಂದು

ಕ್ಯಾದಿಗೆ ಕುಸುಮ ಮಲ್ಲಿಗೆ ಪತ್ರಫಲಗಳು ಪೂಜಾ ಸಾಧನ ಪದಾರ್ಥಗಳು
ಆದಿಲಕ್ಷ್ಮಿ ದಯ ಆದ ಕಾರಣದಿಂದ ಆದರದಿಂದ ಕೊಡುವರು

ತಂದ ಪದಾರ್ಥ ತನ್ನ ಹೆಂಡತಿ ಕರೆದು ಮುಂದಿಟ್ಟು ವಾರ್ತೆಗಳ ಹೇಳಿದನು
ಇಂದಿರಾದೇವೇರ ಇಂದು ಪೂಜೆಯ ಮಾಡು ಆನಂದವ ಕೊಡುವಳು ನಮಗೆ

ಕಬ್ಬು ಬಿಲ್ಲು ಹಿಡಿವೋ ಕಾಮನ ಮಾತೆ ಮಾಲಕ್ಷ್ಮೀ ಉರ್ವಿಯೊಳು ಉತ್ತಮಳೀಕೆ
ಹಬ್ಬದೂಟಕೆ ಹೇಳಿ ಬಂದೆ ಬ್ರಾಹ್ಮಣಗೆ ಮತ್ತೊಬ್ಬ ಮುತ್ತೈದೆಗೆ ಹೇಳೆಂದ

ಚಿಕ್ಕ ಸೊಸೆ ಎಣ್ಣೆ ಕುಂಕುಮ ಕೈಯಲ್ಲಿ ತಕ್ಕೊಂಡು ನಡೆದಳು ಹಾದಿಯಲಿ
ಚೊಕ್ಕ ಚಿನ್ನದ ಗೊಂಬೆಯಂಥ ಮುತ್ತೈದೆ ತಾಗಕ್ಕನೆ ಬಂದು ಕೇಳಿದಳು

ಹುಡುಗೀ ನೀ ಎತ್ತ ಪೋಗುವಿಯೇ ನಿಮ್ಮ ಮನೆ ಎಲ್ಲೆ ಅಡಿಗೆ ಏನೇನು ಮಾಡುವರು
ಹಿಡಿದೆಣ್ಣೆ ಕುಂಕುಮ ಕೊಡುವುದು ಇನ್ಯಾರಿಗೆ ಕೊಡಬಾರದೇನೆ ನೀ ಎನಗೆ

ದಾರಾದರೇನಮ್ಮ ದಾರಿ ನೋಡದ ಮುಂಚೆ ನೀನೇ ಬಾ ನಮ್ಮ ಮಂದಿರಕೆ
ಹೇಳಿ ಮುತ್ತೈದೆಗೆ ಹಿಗ್ಗಿಲೆ ಬಂದು ಅತ್ತೆ ಮಾವನ ಮುಂದೆ ಅರುಹಿದಳು

ಮನೆಯ ಸಾರಿಸಿ ಸುಣ್ಣ ಕಾರಣೆ ರಂಗೋಲಿಯ ಬರೆದು ಬಾಗಿಲಿಗೆ ಬಣ್ಣವನು
ತಳಿರು ತೋರಣ ಕಟ್ಟಿ ಸರ್ವ ಸಂಭ್ರಮದಿಂದ ಎರೆದುಕೊಂಡರು ಎಲ್ಲರೂ ಬೇಗ

ಕಮಲ ಕ್ಯಾದಿಗೆ ಕಬ್ಬು ಕದಳಿ ಕಂಬವು ಬಾಳೆಗೊನೆ ಕಟ್ಟಿ ಚಿತ್ರ ಮಂಟಪವ
ಎಡಬಲದಲ್ಲಿ ನಾಲ್ಕು ನಂದಾದೀವಿಗೆ ಹಚ್ಚಿ ನಡುವೆ ಹಾಕಿ ಪದ್ಮ ಪೀಠಗಳ

ಚಟ್ಟಿಗೆಯೊಳಗೆ ಅಕ್ಕಿ ಐದು ಫಲವ ತುಂಬಿ ಮುತ್ತೈದೆಯರೆಲ್ಲಾ ನೆರೆದು ಕಟ್ಟಿದರು
ಕೊರಳ ಮಾಂಗಲ್ಯ ಮಾಲಕ್ಷ್ಮೀ ಪ್ರತಿಷ್ಠೆ ಮಾಡಿದರು ಸಂಭ್ರಮದಿ

ಅರಿಷಿಣ ಕುಂಕುಮ ಗಂಧ ಬುಕ್ಕಿಟ್ಟು ಗೆಜ್ಜೆವಸ್ತ್ರವು ಪಾರಿಜಾತ ಸಂಪಿಗೆಯು
ಮುಡಿಸಿ ಮಲ್ಲಿಗೆ ದಂಡೆ ಒಡೆಸಿ ತೆಂಗಿನಕಾಯಿ ಉಡಿ ತುಂಬಿ ಉತ್ತತ್ತಿ ಫಲಗಳು

ಭಕ್ಷ್ಯ ಶ್ಯಾವಿಗೆ ಪರಮಾನ್ನ ಚಿತ್ರಾನ್ನ ಸಣ್ಣಕ್ಕಿ ಶಾಲ್ಯಾನ್ನ ಸೂಪಗಳು
ಚಕ್ಕುಲಿ ಗಿಲಗಂಜಿ ಚೆಂದ ಚಿರೋಟಿ ಹಪ್ಪಳ ಸಂಡಿಗೆ ಆಂಬೋಡೆಗಳು

ಸಕ್ಕರೆ ಘೃತ ಕ್ಷೀರ ಸಕಲ ಪಕ್ವಾನ್ನ ಮಂಡಿಗೆ ಬೀಸೋರಿಗೆ ಗುಳ್ಳೋರಿಗೆಯು
ಚಂದ್ರನಂತೆ ಹೊಳೆವ ಶ್ಯಾವಿಗೆಯ ಫೇಣಿಯು ದಿವ್ಯ ಬುಂದ್ಯ ಬುರುಬುರಿ ಅನಾರಸವು

ಬೇಕಾದ ಬೇಸನ್ನು ಬಿಳಿಯಾದ ಅರಳಿನುಂಡೆ ಮೋತಿಚೂರು ಚೂರ್ಮಲಾಡು
ಸೇತು ಬಿಳುಪಿನ ಚಕ್ರದಂಥ ಜಿಲೇಬಿ ಸುಕಿಯದುಂಡೆ ಮುಖವಿಲಾಸಗಳು

ಹೋಳಿಗೆ ಎಣ್ಣೋರಿಗೆ ಹೊಯ್ಗಡವು ಗೇಹೂರಿ ಕಾಯಿಹಾಲು ಕರಿದ ಹೂರಣ ಕಡುಬು
ತೇಂತೋಳಿ ತಿರುವಿದ ಉದ್ದಿನಬೇಳೆ ಮೆಣಸು ಜೀರಿಗೆ ಇಂಗು ಹಾಕಿದ ಉಪ್ಪಿನ ಕಡುಬು

ಸಾರು ಸಾಂಬಾರ ಪಡುವಲಕಾಯಿ ಪಳದ್ಯ ಉಪ್ಪೇರಿ ಉಪ್ಪಿನಕಾಯಿರಸವು
ಖೀರು ಮಾಲತಿ ಗೌಲಿ ಪರಡಿ ಪರಮಾನ್ನ ಮುಕ್ ಸೌರಿ ಚಟ್ಟಣಿ ಕೋಸಂಬರಿಯು

ಹಾಗಲವು ಹೀರೆ ಸೌತೆ ಹಂದರದ ಅವರೆ ಚೌಳಿ ಬಾಳೆ ಬೆಂಡೆ ಕುಂಬಳವು
ಮಾಗಿದ ಹಲಸಿನ ಕಾಯಿ ಕಲಸಿ ಮೇಲೋಗರ ಗೆಣಸು ಗುಳ್ಳದಕಾಯಿ ಬಜ್ಜಿಗಳು

ಸಬ್ಜಿಭಾತು ಸೌತೆಭಾತು ಕೇಸರೀ ಭಾತು ಕೆನೆಕೆನೆ ಮೊಸರು ಒಗ್ಗರಣೆ
ಹಸಿ ಅಲ್ಲ ಬಿಸಿ ಹಾಲು ಹೊಸಬೆಣ್ಣೆ ಇಂಗುಪ್ಪು ಕಲಸಿ ಬಕಾಳ ಭಾತುಗಳು 

ಮುದ್ದು ಮಾಲಕ್ಷ್ಮೀ ನೈವೇದ್ಯ ಮಾಡಿದರು ಅನಿರುದ್ಧ ಮೂರುತಿ ಸಹಿತಾಗಿ
ಶುದ್ಧ ಸುಣ್ಣವು ಎಲೆ ಅಡಿಕೆ ಏಲಕ್ಕಿ ಪತ್ತರಿ ಕಾಯಿ ಕಾಚು ಲವಂಗ

ಹಚ್ಚಿಕೊಂಡರು ಎಲ್ಲ ಅರಿಷಿಣ ಗಂಧ ಕುಂಕುಮ ಎತ್ತಿ ಚಾಮರವ ಬೀಸುವರು
ಅಚ್ಯುತನ ಅರಸಿ ಅನುಗ್ರಹದಿ ನೋಡಿದಳು ಮೆಚ್ಚಿ ಮುಚ್ಚಿದ ಕಣ್ಣ ತೆಗೆದು

ಅಮರಾದಿ ಸುರರ ಒಡೆಯನ ರಾಣಿ ಲಕ್ಷ್ಮಿಗೆ ಸರ್ವವ ಸಮರ್ಪಣ ಮಾಡಿ
ನಮೋ ನಮೋ ಎಂದು ಕೈಮುಗಿದು ಮಂತ್ರಾಕ್ಷತೆ ಶಿರದಲ್ಲಿ ಹಾಕಿ ವರವ ಬೇಡುವರು

ಹಾಡುತ ಪಾಡುತ ಮಾಡುತಲಾರತಿ ಬೇಡುತ ಮುಡಿದ ಮಲ್ಲಿಗೆಯ
ನೋಡುತ ನಲಿನಲಿದಾಡುತ ತಾ ದಯಮಾಡುತ ಕೊಟ್ಟಳು ವರವ

ಹೊತ್ತು ಬಹಳವಾಯ್ತು ಮುತ್ತೈದೆ ಬರಲಿಲ್ಲ ಮತ್ತೇನು ಇದಕೆ ಉಪಾಯ
ಅಷ್ಟು ಅಡಿಗೆ ಎಲೆ ಬಡಿಸಿ ಕುಂಕುಮ ವೀಳ್ಯವಿಟ್ಟು ಪುಟ್ಟಿಯನು ಮುಚ್ಚಿದರು

ಗಂಡ ಹೆಂಡಿರು ಬಂದ ಬ್ರಾಹ್ಮಣರೊಡಗೂಡಿ ಉಂಡು ವೀಳ್ಯವನೆ ತಕ್ಕೊಂಡು
ಇಂದು ನಮಗೆ ಜಯಶುಭಕಾಲ ಬಂದಿತೀಗ ಎಂದು ಆನಂದ ಹೊಂದಿದರು

ಮರುದಿನ ಸಂಪತ್ತು ಶನಿವಾರ ಹಿಟ್ಟಿನ ಕಡುಬು ಅಂಬಲಿ ಪರಮಾನ್ನ ತಿಳಿ ತಿಳಿದೆಣ್ಣೆ
ಹಿಂಡಿಯ ಪಲ್ಯ ಗೌರೀಪೂಜೆಯ ಮಾಡಿ ಇಟ್ಟರು ನೈವೇದ್ಯವನು

ಎರಡನೇ ಶುಕ್ಕುರುವಾರ ಮುತ್ತೈದೆಗೆ ಧೃಢವಾಗಿ ಹೇಳಿ ಬಾರೆನಲು
ಎಡಗೈಯ ಮುಚ್ಚಿಕೊಂಡು ಎಣ್ಣೆ ಕುಂಕುಮವನು ನಡೆದಳು ಆಗ ಇನ್ನೊಬ್ಬ ಸೊಸೆಯು

ಬಾಜಾರ ಬಿಟ್ಟು ಬದಲು ಮಾರ್ಗ ಹಿಡಿಯಲು
ಹಾದಿಗೆ ಬಂದು ಅಡ್ಡಗಟ್ಟಿ
ಆದಿ ಶುಕ್ಕುರುವಾರ ಹೇಳಿ ಎನ್ನನ್ನು ಬಿಟ್ಟು
ನೀ ದಾರಿಗೆ ಹೇಳುವಿಯೇ ಭೋಜನಕೆ

ನಮ್ಮ ಗೊಡವೆ ಯಾತಕಮ್ಮ ನಿನಗೆ ಸುಮ್ಮನೆ ಹೋಗು
ಶುಕ್ಕುರುವಾರದಲಿ ನಿನ್ನ
ಎಲೆಯ ಬಡಿಸಿಟ್ಟಿದ್ದು ಇಂದಿಗೆ ಅದೆ
ಉಣಬೇಕಾದರೆ ಹೋಗಮ್ಮ

ತಂಗಳೂಟವನು ಉಂಬೋ ಕಂಗಾಲಿ ನಾನಲ್ಲ
ಬಂಗಾರದಂಥ ಮುತ್ತೈದೆ
ತಿಂಗಳಾಗಲಿ ಹಂಗುನೂಲು ಕಟ್ಟಿ ನಿನ್ನೆಲೆ
ತಂಗಳು ನಿನಗೆ ಉಣಿಸುವೆನು

ಬಡಿವಾರ ಮಾತು ಯಾಕೆ ಬಡಸಿಟ್ಟ ಎಲೆ ಉಂಬೋ
ಬಡವಿ ಅಲ್ಲ ನಾ ಭಾಗ್ಯವಂತೆ
ತಡೆಯದೆ ಬರುವೆನು ತಾ ಎಣ್ಣೆ ಕುಂಕುಮ
ಹಿಡಿದೆಳಕೊಂಡು ನಡೆದಳು

ಕೊಟ್ಟೆಣ್ಣೆ ಕುಂಕುಮ ತಟ್ಟನೆ ಬಂದಳು
ಅಷ್ಟು ವಾರ್ತೆಗಳ ಹೇಳಿದಳು
ದಿಟ್ಟ ಮುತ್ತೈದೆ ದೇಶದ ಮ್ಯಾಲೆ ಕಾಣೆನೆಂದು
ಎಷ್ಟು ಹೇಳಲಿ ಆಕೆಯ ಚೆಲ್ವಿಕೆಯ

ಅಡಿಗೆಯಾದವು ಗೌರೀಪೂಜೆಗಳಾದವು
ಬಡಿದವು ಮೂರು ಗಂಟೆಗಳು
ಉಡಿ ಕುಂಕುಮ ಅರಿಷಿಣ ಬಡಿಸಿಟ್ಟರು ಒಂದೆಲೆ
ಸಡಗರದಿಂದ ಉಂಡರಾಗ

ಮೂರನೇವಾರ ಮುತ್ತೈದೆಗೆ ಹೇಳುವರು
ಮತ್ತ್ಯಾರೆಂದು ವಿಚಾರ ಮಾಡುವರು
ಮಾವನವರೆ ಎನ್ನ ಮಾತು ನೋಡಿರಿ ಎಂದು ತಾ
ಹೋದಳು ಇನ್ನೊಬ್ಬ ಸೊಸೆಯು

ಮುಡಿಬಾಗಿ ಮುಚ್ಚಿ ಕೊಂಡೆಣ್ಣೆ ಕುಂಕುಮವನ್ನು
ಹಿಡಿದಳೂ ಇನ್ನೊಂದು ಓಣಿಯನು
ಬಡ ಬಡ ಬಂದು ಹಿಡಿದೆಣ್ಣೆ ಕುಂಕುಮ
ಕೊಡುವುದು ಇನ್ಯಾರಿಗೆ ಔತಣವ

ಔತಣವಲ್ಲಮ್ಮ ಅತಿ ಬಡವರು ನಾವು
ಗತಿಯಿಲ್ಲ ಗೌರಿ ಹಬ್ಬಕ್ಕೆ
ಸುತರು ಆಡ ಹೋಗ್ಯಾರ ಹುಡುಕುತಾ ಬಂದೆ
ಬಿಡು ದಾರಿ ಈ ಪರಿ ಬಯ್ಯುವರು ಎನ್ನ ಮನೆಯಲಿ

ಉಗುಲುತಗಲಿನ ಮಾತಿನ ಬಗೆಯ ನಾ ಬಲ್ಲೆನೆ
ಹಗರಣಗಿತ್ತಿ ನೀ ಹೌದೆ
ಮೊದಲ ಶುಕ್ಕುರುವಾರ ಹೇಳಿ ಎನ್ನನು ಬಿಟ್ಟು
ಬದಲು ಮುತ್ತೈದೆಗೆ ಹೇಳುವರೆ

ಎರಡು ವಾರ ಔತಣ ಬುರುಡಿ ಊಟಾಯಿತು
ಬರಡು ಎಮ್ಮೆ ಹೈನ ಉಂಡಂತೆ
ಕಡಲೆ ಹೂರಣ ಕಡುಬು ಕಟದಬೆಣ್ಣೆ
ಕಾಸಿ ತುಪ್ಪವ ಬಡಿಸು ಎನಗೆ

ಮೆಚ್ಚಿ ಕೊಂಡು ಆಕೆ ಮಾತಿಗೆ ಮರುಳಾದಳೂ
ಹಚ್ಚಿ ಕುಂಕುಮ ಎಣ್ಣೆ ಕೊಟ್ಟು
ನಿಶ್ಚಯವೇನಮ್ಮಾ ನೀ ಬರುವುದು ಎಂದರೆ
ಈ ಕ್ಷಣ ಬರುವೆನು ಹೋಗೆಂದಳು

ಬಂದು ಹೇಳಿದಳಾಕೆ ಚೆಂದ ಚೆಲ್ವಿಕೆ ಮಾತು
ಒಂದೊಂದು ಮಾಡಿ ವರ್ಣಿಸುತಾ
ಇಂದಾಕೆ ಮನಕೆ ಬಂದಂತೆ ಅಡಿಗೆ
ಮಾಡೋಣೆಂದು ಸಂತೋಷ ಪಡುವರು

ಕಡಲೆ ಹೂರಣ ಗಸಗಸೆ ಕೊಬ್ಬರಿ ಏಲಕ್ಕಿ
ಪುಡಿ ದ್ರಾಕ್ಷಿ ಉತ್ತತ್ತಿ ಹಳಕು
ಕಲಸಿ ಕಲ್ಲುಸಕ್ಕರೆ ಕರಿಗಡುಬು ಬೆಣ್ಣೆ ಕಾಸೀ
ತುಪ್ಪವು ಸೋಸಿಲಿಂದ

ಸಿರಿದೇವಿ ಪೂಜೆ ನೈವೇದ್ಯಗಳಾದವು
ಹೊರಗೆ ಹತ್ತು ತಾಸು ಮೀದವು
ಬರಲಿಲ್ಲ ಮುತ್ತೈದೆ ಎಂದು ಎಲೆ ಬಡಿಸಿಟ್ಟು
ಸರ್ವರೂ :ಊಟವನು ಮಾಡಿದರು

ಹುಟಿದ ಮ್ಯಾಲೆ ಇಂಥ ಕಡುಬು ಕಂಡಿದ್ದಿಲ್ಲ
ನಮ್ಮ ಹೊಟ್ಟೆಗೆ ಉಂಡವರು ನಾವಲ್ಲ
ಮುತ್ತೈದೆ ಪುಣ್ಯದಿಂದ ಈ ಊಟ ದೊರಕಿತು
ಎಂದು ಅಷ್ಟರೂ ನಗುತ ನುಡಿದರು

ನಾಲ್ಕನೇವಾರ ನಾ ಹೇಳಿ ಬರುವೆನೆಂದು
ಆಕೆ ಹೋದಳು ಹಿರಿಮಗನ ಅರಸಿ
ಬೇಕಾದವರು ಬಂದು ಹಾಕ್ಯಾಡಲಿ ಎನ ಕೂಡ
ಯಾಕೆ ಎನಗೆ ಒಬ್ಬರ ಭಿಡೆಯ

ದೊಡ್ಡ ಅಗಸೆಯ ಬಿಟ್ಟು ದಿಡ್ಡಿ ಬಾಗಿಲ ಮುಂದೆ
ಸದ್ದು ಮಾಡದೆ ಬರುತಿರಲು
ವಜ್ರದ ಗೊಂಬೆಯಂತೆ ಹೊಳೆವೋ ಮುತ್ತೈದೆ
ನಿಂತಿದ್ದಳಾಗ ಎದುರಿಗೆ ಬಂದು

ಸರ್ವರೊಳಗೆ ಹಿರಿಸೊಸಿಯು ನಾ ಎಂಬಂಥ
ಗರ್ವ ಅಹಂಕಾರದಿ ನೀನು
ಸರಿಯಾಗಿ ಮೂರುವಾರ ಹೇಳಿ ಬಿಟ್ಟು ಎನ್ನ
ಕರೆಯದೆ ಉಂಬುವ ಕಾರಣ ಏನೆ

ಕರಿಲಿಕ್ಕೆ ಬರಲಿಕ್ಕೆ ಕಾಣೆ ನಿಮ್ಮ ಮನೆ ನಾನು
ತಿರುಗೂವಿ ನಾರದರಂತೆ
ಇರುವ ಮಂದಿರವ ತೋರಿದರೆ ಈಗ ನಾ ಬಂದು
ಕರೆದುಣಿಸುವೆನು ನಿಮ್ಮನ್ನು

ದೂರುಂಟು ನಮ್ಮ ಮನೆ ದಾರಿ ಅಸಾಧ್ಯವು
ನೋಡಿ ಬಂದವರು ದಾರಿಲ್ಲ
ಆಹಾರ ನಿದ್ರೆ ಸಂಸಾರ ಸಮುದ್ರವ
ಮೀರಿದವರಿಗೆ ಕಾಂಬುವುದು

ಮಧ್ಯಾಹ್ನದ ಹೊತ್ತಿಗೆ ಸಿದ್ಧಾಗಿ ಬರುವೆನು
ಭದ್ರವಾಗಿ ವಚನ ಕೊಡುವೆನು
ಶುಭವಾದಂಥ ಕೊಬ್ಬರಿ ಭಾರೀ ಬಟ್ಟಲು
ತರಿಸಿ ಹುರಿಗಡಲೆ ತುಂಬು ಉಡಿಯ

ಆಗರದೊಳಗಿನ ಅರಗಿಣಿ ಮರನೇರಿ
ಮಾಗಿದ ಫಲವ ಮೆದ್ದಂತೆ
ಬ್ಯಾಗ ಬಂದು ಈಗ ನಿಮ್ಮನೆಯಲ್ಲಿ ಊಟವನುಂಡು
ತೇಗುತ ತೃಪ್ತ್ಯಾಗಿ ಬರುವೆ

ಮಾಯಾದೇವಿಯ ಮಾಯಾ ಮಾತಿಗೆ ಮರುಳಾಗಿ
ತಾ ಕೊಟ್ಟೆಳೆಣ್ಣೆ ಕುಂಕುಮವ
ನಾ ಹೋದ ಕಾರ್ಯ ಕಾಯಿ ಆಗೋದೇ ಹಣ್ಣೆಂದು
ಹೇಳಿಕೊಂಡಳು ಹೇಳಿ ಕೊಂಡಳು ಶಿಫಾರಸ್ಸು

ವರಗೌರಿ ಪೂಜೆ ನೈವೇದ್ಯಗಳಾದವು
ಹೊರಗೆ ಆರು ಗಂಟೆ ಬಡಿದವು
ಬರಿಯ ಭರಾಸು ಮಾತಿನ ಜಾಣೆ ಮುತ್ತೈದೆ
ಬರಲಿಲ್ಲವೆಂದು ನುಡಿದರು

ಮತ್ತೊಂದು ಎಲೆ ಬಡಿಸಿಟ್ಟು ಮೃಷ್ಟಾನ್ನಗಳ ಅಷ್ಟರೂ
ಊಟವನು ಮಾಡಿದರು
ಕರ್ಪೂರದ ಅಡಿಕೆ ವೀಳ್ಯಗಳ ತಕ್ಕೊಂಡರು
ಅತ್ಯಂತ ಹರುಷದಿಂದ ಇರುವರು

ಬಂದಿತೀಗ ಐದನೇವಾರ ಮುತ್ತೈದೆಗೆ
ಇಂದು ನೀ ಹೇಳಿಬಾರೆನುತಾ
ಹೆಂಡತಿ ಕರೆದು ಹೇಳಿದ ಕುಂಕುಮ ಎಣ್ಣೆ
ತಕ್ಕೊಂಡು ತಾ ನಡೆದಳು ಬ್ಯಾಗ

ಬೀದಿ ಬಿಟ್ಟು ಬದಲು ಹಾದಿಗೆ ಬಂದಳಾ
ಹಾದಿಗೆ ಬಂದು ಅಡ್ಡಗಟ್ಟಿ
ನೀ ದಯ ಮಾಡಿ ಬಂದೆ ಎನಗೆ ಔತಣವ
ಆದರದಿಂದ ಹೇಳುವುದಕೆ

ಜಪ್ಪಿಸಿಕೊಂಡು ಔತಣವ ತಕ್ಕೊಂಡು ನೀ
ತಪ್ಪಿಸಿಕೊಂಡು ಹೋಗುತಿರೆ
ಒಪ್ಪತ್ತಾದರೂ ಊಟ ಮಾಡದವರ ಮಾತಿಗೆ
ಒಪ್ಪಿಕೊಂಬುವುದು ಹ್ಯಾಗೆ ಹೇಳಮ್ಮಾ

ಬಂದ ಔತಣ ಗಂಡ ಮಕ್ಕಳು ಭಾಗ್ಯ
ಒಲ್ಲೆ ಎಂಬುವರು ಉಂಟೆ ಲೋಕದಲಿ
ಕಂಡಲ್ಲಿ ಔತಣ ಹೇಳಿ ಕರೆಯದೆ ಇರುವುದೇನು
ಚೆಂದವೇ ನಿಮ್ಮ ನಡತೆ

ಲಕ್ಷಣವಂತೆ ನಾ ಎದುರಿಗೆ ಬಂದರೆ
ಲಕ್ಷಣ ಶುಭ ಶಕುನಗಳು
ಇಕ್ಷು ಮ್ಯಾಲೆ ಜೇನು ಇಟ್ಟಂತೆ ಬಂದು ಈಗ
ಲಕ್ಷ್ಮೀ ಸರಿಗೆ ನಾ ಕೂಡುವೆನು

ಅವಕಾಶ ಕೊಡುವೆನು ಸಾವಕಾಶ ಅಡಿಗೆ ಮಾಡು
ದಿವಾಕರ ಮುಣುಗೋ ಕಾಲದಲಿ
ದನಕರು ಬರುವೋ ವ್ಯಾಳ್ಯಕ್ಕೆ ನಾ ಬರುವೆನು
ಮನಕೆ ಸಂದೇಹ ಬ್ಯಾಡಮ್ಮಾ

ಅಂಗಳ ಸಾರಿಸಿ ರಂಗು ಕಾರಣೆ ಕೊಟ್ಟು
ರಂಗವಲ್ಲಿಯ ಚಿತ್ರ ಬರೆದು
ಅಂಬರೂದಿನ ಕಡ್ಡಿ ಅರಮನೆ ಬಾಗಿಲ
ಮುಂದೆ ಒಂದು ಹಚ್ಚಿಡಿಸು ಹಿಲಾಲು

ಮಡಿಪೀತಾಂಬರವುಟ್ಟು ಮಡಿಸೀರೆಯನು ಬಿಟ್ಟು
ಕಡಗ ಕಂಕಣ ಕೈಯಲ್ಲಿಟ್ಟು
ಧೃಢವಾದ ಮುಕುರ ಒಂದಡ್ಡಿಕೆ ಬುಗುಡಿ
ಬಾವುಲಿ ಹೊಳೆಯುತಲಿ

ಕಂಚು ಕಳಶ ಕದಲಾರತಿ ತಕ್ಕೊಂಡು
ಮುಂಚೆ ಬಂದು ಎದುರುಗೊಂಡರೆ ಎನ್ನ
ಮಿಂಚಿನಂತೆ ಹೊಳೆವೋ ಚಿನ್ನದ ಹಲಗೆಯ ತೂಗೋ
ಮಂಚದಿ ಬಂದು ಕೂಡುವೆನು

ಅರಮನೆಯಲ್ಲಿ ನಾವಿರುವೋ ಮೂರಂಕಣ ಮನೆ ಮುಂದೆ
ಮುರುಕು ಚಪ್ಪರವು
ಮರದ ಮಣೆಯು ನಮ್ಮಲ್ಲಿರುವೋದು ಚಿನ್ನದ ಹಲಗೆ
ಮಂಚ ಎಲ್ಲಿ ತರುವೋಣ

ಮಡಿಸೀರೆ ಬಿಟ್ಟರೆ ಇನ್ನೊಂದು ಕೋರಿಗಳಿಲ್ಲ
ಮಡಿ ಪೀತಾಂಬರ ನಾ ಕಂಡಿಲ್ಲ
ಹರಡಿ ಕಂಕಣವೆಲ್ಲೆ ಕರಿಯ ಕಾಜಿನ ಬಳೆ
ಇರಲಮ್ಮ ನಿಮ್ಮ ದಯ ನಮಗೆ

ಬಂಗಾರದ ಬಾಳೆಲಿ ಬೆಳ್ಳಿ ಬಟ್ಟಲು
ಮಂಡಿಗೆ ಹಾಲು ತುಪ್ಪಗಳು
ಉಂಡು ಕೂಡುವೆನು ಕುಂದಣ ಕೆತ್ತಿದ ತಬಕಿನಲಿ
ತಂದು ನೀಡೆನಗೆ ತಾಂಬೂಲ

ಹುಟ್ಟಿದ ಮೇಲೆ ಈ ಬೆಟ್ಟಿಲಿ ಎಲೆಯ ಸುಣ್ಣ ಹಚ್ಚಿ
ಹಾಕಿಕೊಂಡು ನಾನರಿಯೆ
ಕರ್ಪೂರದ ಅಡಿಕೆ ಮುತ್ತಿನ ಸುಣ್ಣ ಎಳೆ ಎಲೆಗೆ ಹಚ್ಚಿ
ನೀ ಮಡಚಿ ಕೊಡು ಎನಗೆ

ಬಂಗಾರ ಎಂಬುದು ನಮ್ಮ ಕಂಗಳು ಕಂಡಿಲ್ಲ
ಮಂಗಳ ಸೂತ್ರದ ಒಂದು ಹೊರತು
ಕುಂದಣ ತಬಕು ಎಲ್ಲಿ ಒಡಕೊಂದು ಹಿತ್ತಾಳೆ
ತುಂಡಾದ ತಾಟೊಂದು ಇರುವುದು

ಬುಟ್ಟದಾರಿ ಬುಗುಡಿ ಅಂಚು ಜರತಾರಿ
ಅಚ್ಚು ಚಿನ್ನದ ಥಳಕಿರವೋ
ಕುಪ್ಪುಸ ಹೊಲಿಸಿಕೊಟ್ಟರೆ ಒಂದರೆ ಕ್ಷಣ
ತೊಟ್ಟು ನಿನಗೆ ಕೊಟ್ಟು ಬರುವೆ

ಹುಟ್ಟಾ ಬಡವರು ನಾವು ಅಷ್ಟದರಿದ್ರರು
ನಿತ್ಯ ಯಾತ್ರೆಯಲಿ ಬದುಕುವರು
ಚಿತ್ತಕ್ಕೆ ತಂದು ನೀವು ದಯಮಾಡಿ ಬರುವೋದು
ಎಂದು ಹಸ್ತವ ಮುಗಿದು ಹೇಳಿದಳು

ಕಡೆಯ ವಾರವು ಕಾಮಧೇನುವಿನಂತೆ ಬರುವೆನು
ಪಡೆದುಕೋ ಮನದ ಇಷ್ಟಾರ್ಥ
ನಡೆದು ಬರುವೆ ನಾಲ್ಕುವಾರದ ದಕ್ಷಿಣಿ
ಕೊಡು ನಾ ಬಿಡುವವಳಲ್ಲ

ಒಂದೊಂದು ಮಾತನಾಡವಳು ಮುತ್ತೈದೆ
ಬಾಯಿಂದ ಮುತ್ತು ಉದುರುವಂದದಲಿ
ಆನಂದದಿಂದ ಹಚ್ಚಿ ಕುಂಕುಮ ಎಣ್ಣೆ ಕೋಟ್ಟಾಗ
ಬಂದಳು ತನ್ನ ಮಂದಿರಕೆ

ಸಾಧ್ಯವಲ್ಲವು ಭಾಳ ಅಸಾಧ್ಯ ಮುತ್ತೈದೆ
ನಿಂತಿದ್ದಳು ಎನ್ನ ಎದುರಿಗೆ ಬಂದು
ನಿದ್ರೆಯೋ ಕನಸೋ ಎಚ್ಚರಿದ್ದಿಲ್ಲ ಎನಗೊಂದು
ನಿರ್ಧಾರವಾಗಿ ತಿಳಿಯದು

ಗತ್ತಿನ ಮಾತು ಚಮತ್ತು ಚಾತುರ್ಯ
ಸಂಪತ್ತಿನ ಸೌಭಾಗ್ಯವಂತೆ
ಎಷ್ಟು ಹೇಳಲಿ ಆಕೆ ಚೆಲ್ವಿಕೆ ಚೆಂದ
ಸಾಕ್ಷಾತ ವಿಷ್ಣುವನ್ನಾದರೂ ಮೋಹಿಸುವಳು

ನಮ್ಮ ಪುಣ್ಯದ ಫಲ ಒದಗಿ ಬಂದಿದ್ದರೆ
ಮನ್ನಿಸಿ ಮನೆಗೆ ಬರುವಳು
ಇನ್ನೇನು ಮಾಡೋಣ ಇದಕೆ ಎಂದು ಆಲೋಚಿಸಿ
ಇನ್ನೊಬ್ಬ ಮುತ್ತೈದೆಗೆ ಹೇಳಿದರು

ಪಾಲು ಸಕ್ಕರೆ ಪಂಚಭಕ್ಷ್ಯ ಪರಮಾನ್ನವು
ಸಾರು ಶಾಕಗಳು ಶಾಲ್ಯಾನ್ನ
ಮಾಲಕ್ಷ್ಮೀ ಪೂಜೆ ನೈವೇದ್ಯ ಮಾಡಿ
ಮಂಗಳಾರತಿ ಬೆಳಗುವರು

ಪಕ್ಷಿವಾಹನ ಪುರುಷೋತ್ತಮನಾದ ಅಧೋಕ್ಷಜ
ಆ ಪರಮಾತ್ಮ ನ ಅಕ್ಷದ ಸುತ ಅಡಗುವ ಕಾಲವನ್ನು
ನಿರೀಕ್ಷಿಸಿ ನೋಡುತಿಹರು

ಅತ್ತ ಮಾಲಕ್ಷ್ಮೀ ತಾ ಪಚ್ಚಕರ್ಪೂರ ಪುನುಗಿನ
ಎಣ್ಣೆ ಸಂಪಿಗೆ ತೈಲ
ಕಸ್ತೂರಿ ಬೆರೆಸಿದ ಬಿಸಿನೀರು ಅರಿಷಿಣ
ಹಚ್ಚಿ ತಾ ಎರಕೊಂಡಳಾಗ

ಸುಳಿಗುರುಳು ಹಿಕ್ಕೆ ಬೈತಲೆ ತಿದ್ದಿ ತಳಪು ಹಾಕಿ
ಚೌರಿ ರಾಗಟೆ ಚಂದ್ರ ಗೊಂಡ್ಯ
ಗಿಳಿಗಿಜ್ಜೆ ಹೆರಳು ಬಂಗಾರ ಕ್ಯಾದಿಗೆ ಮ್ಯಾಲೆ
ಅರಳು ಮಲ್ಲಿಗೆ ಮಾಲೆ ಮುಡಿದು

ಬಿಚ್ಚಿ ನಾನುಟ್ಟಳು ಬಿಳಿಯ ಪೀತಾಂಬರ
ಅಚ್ಚ ಜರದ ಸೆರಗ ಹೊದ್ದು
ಕುತ್ತಣಿ ಕುಬುಸ ಮುತ್ತಿನ ಗೊಂಡ್ಯ ತೋಳಿಗೆ
ಕಟ್ಟುತಿದ್ದಳು ಬಾಜು ಬಂದು

ವಜ್ರದ ವಂಕಿಯು ನಾಗಮುರಿಗೆ ನಾಗಡ್ಡಿಕೆ
ಗೆಜ್ಜಡ್ಡಿಕೆಯು ಕೊರಳಲ್ಲಿ
ದೊಡ್ಡ ಸರಿಗೆ ಮ್ಯಾಲೆ ಅಡ್ಡಿಕೆ ಮುತ್ತಿನ ಕೆಂಪು
ಥಳಕು ಜಳಕು ಹೊಳೆಯುತಲಿ

ಪುತ್ಥಳಿಸರ ಏಕಾವಳಿ ಚಂದ್ರಹಾರ
ಕಟ್ಟಿದಳಾಗ ಕಂಠಿ ಕಟ್ಟಾಣಿ
ಪಚ್ಚ ಮಾಣಿಕ ರತ್ನಪದಕ ನಿರಿಗಳಲಿ
ಜತ್ತಾಗಿ ನಲಿದಾಡುತಿರಲು

ಪರಡಿ ಕಂಕಣ ಹಸ್ತಕಡಗ ಕಮಲದ್ವಾರ್ಯ
ನಡುವಿಗೆ ನವರತ್ನ ಪಚ್ಚೆ
ಬಿಡಿಮುತ್ತು ಬಿಗಿದ ವಜ್ರದ ವಾಲೆ ಬುಗುಡಿ
ಚಂದ್ರಮುರುವು ಮುತ್ತಿನ ಸರಪಳಿಯು

ಸಾಲುಕುಂದಣದ ಆಣಿ ಮುತ್ತಿನ ಮುಕುರ್ಯ
ಬುಲಾಕು ಬಲಕೆ ವಜ್ರದ ಹರಳು
ತೀಡಿ ಕಾಡಿಗೆ ಹಚ್ಚಿ ತಿದ್ದಿ ಕುಂಕುಮವ
ಹಣೆ ಮ್ಯಾಲೆ ಹಚ್ಚಿ ಜೋಳದಕುಡಿಯಂತೆ

ಪಿಲ್ಯ ಕಾಲುಂಗುರ ಲುಲ್ಲು ಪೈಜಣ ರುಳಿ
ಘಲ್ಲು ಘಲ್ಲೆಂತ ಹೆಜ್ಜೆನಿಡುತ
ಗೆಲ್ಲು ಮಿಂಚುಗಳಂತೆ ಥಳಥಳಿಸುತ ಬೀದಿಯಲ್ಲಿ
ಬಂದಳು ಗಜಗಮನೆ

ಬೆಳ್ಳನೆ ಬೆಳ್ಳಿಯ ಮಿಳ್ಳೆ ತನ್ನ ಉಂಗುರ
ಬೆರಳಿನಿಂದ ಹಿಡಿದು ಬೀಸುತಲಿ
ತೆಳ್ಳನೆ ಪಾದ ಪುತ್ಥಳಿಯಂತೆ ಹೊಳೆಯುತ
ಚಿನ್ನ ಬಳ್ಳಿಯಂದದಿ ಬಳುಕುತಲಿ

ರಾಜಾಧಿರಾಜರೆಲ್ಲರು ನಿಂತು ನೋಡುತ
ಲಾಜಾವರದ ಗೊಂಬೆಯಂತೆ
ಭೋಜನಕೆತ್ತ ಪೋಗುವಳೋ ನೋಡುವಣೆಂದು
ಬಹು ಜನರು ಹಿಂದೆ ನಡೆದರು

ದಾವಲೋಕದಿಂದ ಇಳಿದಿಲ್ಲಿ ಬಂದಳು
ದಾರ ಸತಿಯೋ ದಾರ ಸುತಳೋ
ಮೋರೆ ನೋಡಲು ಮೂರ್ಛೆ ಬರುವುದು ಒಯ್ಯಾರಿ
ಮುಂಗಾರು ಮಿಂಚುಗಳಂತೆ ತೋರುವಳು

ಇಂದ್ರನ ಶಚಿಯೋ ಚಂದ್ರಮನ ರೋಹಿಣಿಯೋ
ಸುಂದರ ಸೂರ್ಯನರಸಿ ಸಂಜ್ಞೆಯೋ
ಗಾಂಧರ್ವರರಸಿಯೋ ಗಗನದಿಂದ ಇಳಿದಂಥ
ಗಂಗಾ ಶ್ಯಾಮಲ ಸೀತಾಂಗನೆಯೋ

ರತಿಯೋ ರೇವತಿಯೋ ಅರುಂಧತಿಯೋ ಪಾರ್ವತಿಯೋ ಭಾರತಿ
ಭಾಗ್ಯವಂತೆ ಸರಸ್ವತಿಯೋ
ಪತಿಗಳು ಐವರು ಸತ್ಯ ಪಾಂಡವರರ ಅರಸಿ
ದ್ರೌಪದಿ ಬಂದಳಿಲ್ಲಿಗೆ ಎಂಬುವರು

ಸತ್ಯಭಾಮೋ ರುಕ್ಮಣೀ ಜಾಂಬವಂತೀ ಆಷ್ಟಮ
ಸ್ತ್ರೀಯರೊಳಿಗಿದಾರೋ ಇವತ್ತು
ಸಂಪತ್ತು ಶುಕ್ಕುರುವಾರ ಸಾಕ್ಷಾತ
ಲಕ್ಷ್ಮಿಯೇ ಬಂದಳು ಎಂಬುವರು

ಹಸ್ತವ ಮುಗಿವರು ಸಾಷ್ಟಾಂಗಕ್ಕೆರಗೋರು
ಇತ್ತ ಬನ್ನಿ ಎಂದು ಕರೆವರು
ಶ್ರೇಷ್ಠ ವೈಕುಂಠ ಮೋಕ್ಷಪುರ ಮಾಲಕ್ಷ್ಮೀ
ಬಿಟ್ಟಿಲ್ಲೆ ಬಂದಳೆಂಬುವರು

ಮುಡಿಬಾಗಿ ನಡೆಯುತ ಮುಡಿದ ಹೂವು ಉದುರುತಾ
ಮುಗುಳ್ನಗೆಯಿಂದ ತಾ ನಗುತಾ
ಎಡಬಲದಲಿ ಓರೆನೋಟವ ನೋಡುತಾ
ನಡೆದಳು ಬಡವರ ಮನೆಗೆ

ಸಿರಿ ಬಂದು ತಾ ಕಣ್ಣ ತೆರೆದು ನೋಡುತಲಿರೆ
ಅರಮನೆ ಆಯಿತು ಆ ಕ್ಷಣದಿ
ಸುರಗಿ ಮಲ್ಲಿಗೆ ಶ್ಯಾವಂತಿಗೆ ನಾನಾ ಫಲಗಳಿದ್ದ
ವನವಾಯಿತು ಆ ಮನೆ ಸುತ್ತ

ಗಚ್ಚಿನಂಗಳ ವೃಂದಾವನ ಕಟ್ಟೆ ಕಾರಂಜಿ
ಹಚ್ಚನೆ ಗಿಳಿ ಹಂಸ ಗರುಡ ಪಕ್ಷಿ
ನವಿಲು ಪಾರಿವಾಳ ಪಾಂಚಾಲಿ ವೃಕ್ಷ ಅಶ್ವತ್ಥಗಿಡಗಳು

ಪಚ್ಚದಂತೆ ಹೊಳೆವೋ ಶ್ರೀ ತುಳಸಿದೇವಿಯರಲ್ಲಿ
ಅಚ್ಚ ವಜ್ರದ ಗೊಂಬೆಯಂತೆ
ಲಕ್ಷ್ಮಿ ತಾ ನಲಿನಲಿಯುತಲಿ ರಚಿತವಾದ
ಕುರ್ಚಿಯಲಿ ಬಂದು ಕೂಡುವಳು

ಬಡವನ ಮಡದಿಗೆ ಒಡವೆ ವಸ್ತ್ರವಾದವು
ಹರಡಿ ಕಂಕಣವು ಕೈಯಲ್ಲಿ
ಮಡಿಸೀರೆ ಉಟ್ಟಿದ್ದು ಹೋಗಿ ಮಡಿಪೀತಾಂಬರವಾಯ್ತು
ಅಡಿಗೆರಗಿ ಎದುರುಗೊಂಬುವರು

ಗಂಧ ಕುಂಕುಮ ಅರಿಷಿಣ ದಿವ್ಯ ಬುಕ್ಕಿಟ್ಟು
ತಂದು ಹಚ್ಚಿ ಕಾಲ ಜಾವಡಿಯ
ದುಂಡು ಮಲ್ಲಿಗೆ ಪಾರಿಜಾತ ಸಂಪಿಗೆ ಮಾಲೆ
ದಂಡೆ ಮುಡಿಸಿ ಜಡೆಮುಡಿಗೆ

ಕದಳಿ ಫಲಗಳು ಕೊಬ್ಬರಿಬಟ್ಟಲೊಳಗೆ ಹುರಿಗಡಲೆ
ಹಾಕಿ ಉಡಿಯ ತುಂಬುವರು
ಹಿಡಿದು ಕುಂದಣದ ಹರಿವಾಣದೊಳು ಹಾಡಿ
ಪಾಡುತ ಮಾಡಿ ಮುತ್ತಿನಾರತಿಯ

ಇಂದಿರಾದೇವಿ ಆನಂದದಿ ಕುಳಿತಿರೆ
ಇಂದ್ರಾದಿ ಸುರರು ನೋಡುತಲಿ
ಮಂದಾರ ಮಲ್ಲಿಗೆ ಮಳೆಯ ಕರೆದರಾಗ
ದುಂದುಭಿ ಭೇರಿ ಬಡಿದವು

ಎಡಬಲದಲ್ಲಿ ಚಾಮರವನ್ನು ಬೀಸೋರು
ಹಿಡಿದು ಹಿಲಾಲು ನೋಡುವರು
ಬಿಡಿಮಲ್ಲಿಗೆ ತಂದು ನಡೆಮುಡಿ ಹಾಸೋರು
ಸಡಗರದಿಂದ ಎದ್ದಳಾಗ

ಲಕ್ಕುಮಿದೇವಿ ತಾ ಗಕ್ಕನೆ ಬಂದಳು
ಹೊಕ್ಕಳು ದೇವರ ಮನೆಯ
ಚೊಕ್ಕ ಚಿನ್ನದ ಕೊಡವಾಗಿ ತಾ ತೂಗೋ
ಮಾಣಿಕ್ಯ ಮಂಚದಲು ಕೂಡುವಳು

ರನ್ನ ಮಾಣಿಕ್ಯ ರತ್ನ ಹೊನ್ನಹಣವು ಚೊಕ್ಕ
ಚಿನ್ನದ ಮೊಹರ ವರಾಹಗಳು
ಬಣ್ಣದ ಹವಳ ಮುತ್ತು ಭಾರಿ ಬಂಗಾರದಂದಿಗೆಯ
ಬಿಂದಿಗೆ ನೋಡುತಿಹರು

ಶುಕ್ಕುರುವಾರ ಶುಭಕಾಲ ಇವರಿಗೆ
ಸಿಕ್ಕಳು ಸಿಂಧುನಂದನೆಯು
ಬೊಕ್ಕಸದ ಭಾಗ್ಯ ಭಂಡಾರದ ಜಯಲಕ್ಷ್ಮೀ
ದಕ್ಕಿದಳು ಇವರಿಗೆ ಎಂಬುವರು

ಕರ್ಪೂರದಾರತಿ ಮಾಡಿ ಕಾಯಿ ಒಡೆದು
ಬುಕ್ಕಿಟ್ಟು ಕುಂಕುಮ ಹಚ್ಚುವರು
ಪಟ್ಟಣದ ಜನರು ಪತ್ತಲ ಸೀರಿ ಕುಪ್ಪುಸ
ಲಕ್ಷ್ಮಿಗೆ ಉಡುಗೊರೆಯ ಕೊಡುವರು

ನಾಲ್ಕುವಾರದ ಎಲೆ ತೆಗೆದು ನೋಡುತಲಿರೆ
ಹಾಕಿದ ಅನ್ನವು ಆಣಿಮುತ್ತು
ಶಾಕ ಪಾಕವು ಪಲ್ಯ ಪರಮಾನ್ನ ಭಕ್ಷ್ಯ
ಬಂಗಾರ ರಜತ ಬಾಳೆಯೆಲೆಯು

ಬಂದು ನೋಡುತ ನಾಲ್ಕು ಮಂದಿ ಸೊಸೆಯರು
ಹಂಚಿಕೊಂಡರು ಆಗ ಒಂದೊಂದು ಎಲೆಗಳ
ಹಿಂದೆ ಮಾಡಿದ ಪುಣ್ಯ ಒಂದು ಒದಗಿತು ನಮಗೆಂದು
ಸಂತೋಷ ಪಡುವರು

ಬಂದ ಮುತ್ತೈದೆ ಬ್ರಾಹ್ಮಣರೊಡಗೂಡಿ ಕೊಂಡುಂಡು
ವೀಳ್ಯವನೆ ತಕ್ಕೊಂಡು
ಮಂದಗಮನೆ ಲಕ್ಷ್ಮೀ ಮಹಿಮೆ ಕೊಂಡಾಡುತ
ಆನಂದವಾಗಿ ಇರುತ್ತಿದರವರು

ಮುದದಿಂದ ಮೂರ್ಜಗದ ಒಡೆಯ ನಾರಾಯಣನ
ಎದೆಯಲ್ಲಿ ಇರವೋ ಲಕ್ಷ್ಮೀ ನಮ್ಮ
ಸದನಕೆ ಬಂದು ಸಂಪತ್ತು ಶುಕ್ಕುರುವಾರ
ಸಮ ದೃಷ್ಟಿಯಿಂದ ನೋಡುವಳು

ಕಿವುಡಗೆ ಕಿವಿ ಕುರುಡಗೆ ಕಣ್ಣು ಬರುವುದು
ಬರಡು ಆಕಳು ಹೈನವಾಗುವುದು
ಹಡೆಯದ ಬಂಜೆ ಹೊಟ್ಟೆ ಮಕ್ಕಳಾಗೋರು
ಪಡೆವರೋ ಇಷ್ಟಫಲಗಳ

ದನಕರು ತಳಿಯಾಗಿ ಧನಧಾನ್ಯ ಬೆಳೆಯಾಗಿ
ಸದಾಕಾಲ ಶುಭಕಾರ್ಯವಾಗಿ
ಬಳೆ ಕುಂಕುಮ ಅರಿಷಿಣ ಮಾಂಗಲ್ಯ ಮುತ್ತೈದೆತನವ
ಕೊಟ್ಟು ವರವ ನೀಡುವಳು
ಬಡವರ ಮನೆಗೆ ನಡೆದು ಬಂದು ಭಾಗ್ಯದ
ಕೊಡವಾಗಿ ಕೂತಂತ ಕಥೆಯು
ಧೃಢಭಕ್ತಿಯಿಂದ ಹೇಳಿ ಕೇಳಿದ ಜನರಿಗೆ
ಕೊಡುವಳು ಸಕಲ ಸಂಪತ್ತು

ಸಾಮಜವರದ ಸುಧಾಮನ ಸಖನಾದ
ಸ್ವಾಮಿ ಶ್ರೀಹರಿ ಮೋಹದ ಅರಸಿ
ಶ್ರೀಮಹಾಲಕ್ಷ್ಮೀ ಪೂಜೆಯ ಮಾಡಿದವರಿಗೆ
ಭೀಮೇಶಕೃಷ್ಣ ತಾ ಒಲಿವ

Tuesday 21 July 2020

ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ nille nille kolhapur devi

ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ
ಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತ||
ಕರುಣಸಾಗರ ಹರಿತರುಣಿಯೆ ನೀ ಕೋಟಿ
ತರುಣ ಕಿರಣ ರತ್ನಾಭರಣನಿಟ್ಟು
ಮಣಿಕೌಂಸ್ತುಭ ವಕ್ಷ ಸ್ಥಳದಲ್ಲಿದ್ದೊ ್ಹಳೆಯುವ
ಸುಪರಣವಾಹನಾ ಲಕ್ಷ್ಮಿ ಶರಣು ವಂದಿತಳೆ||1||
ಪಂಕಜಾಕ್ಷಿ ಪಂಕಜೋದ್ಭವನ ಜನನಿ
ಪಂಕಜಮುಖಿ ಪಾಲಿಸೆ ಎನ್ನ
ಪಂಕಜನಾಭನ ಅಂಕದಲ್ಲೊಪ್ಪುವ
ಪಂಕಜೆ ನಿನ್ನ ಪಾದಪಂಕಜಕೆರಗುವೆ ||2||
ಮುಗುಳುನಗೆಯ ಮುತ್ತುಗಳು ಜಡಿತ ಕ-
ರ್ಣಗಲ ವಾಲೆಯು ಕದಪಿನಲ್ಲೊ ್ಹಳೆಯೆ
ಬಗೆ ಬಗೆ ಸರ ಬಂಗಾರವನಿಟ್ಟು ಮೂ-
ರ್ಜಗವ ಮೋಹಿಸೊ ಜಗದಾಧಿಪತಿಯ ರಾಣಿ||3||
ಸಾಗರದೊಳಗ್ಹುಟ್ಟಿ ಆಗ ಶ್ರೀನಾಥನ
ಬ್ಯಾಗ ನೋಡಿ ಪರಮೋತ್ಸವದಿ
ನಾಗಶಯನ ನಾಗಾರಿವಾಹನನ-
ರ್ಧಾಂಗಿ ಎನಿಸಿದಾನಂತ ಮಹಿಮಳೆ ||4||
ಶೇಷಗಿರಿಯ ಶ್ರೀನಿವಾಸನ ಎದೆಯಲ್ಲ್ಯಾ
ವಾಸವಾಗಿರಲ್ಯತಿ ಪ್ರೇಮದಲಿ
ಈಶ ನಾರದ ಬ್ರಹ್ಮಾಸುರರೊಡೆಯ ಭೀ-
ಮೇಶಕೃಷ್ಣನ ನಿಜ ದಾಸರಿಗ್ವರನೀಹೊ ||5||

Sunday 12 July 2020

ಆವಿನ ಕೊಂಬಿನ ತುದಿಯಲಿ ಸಾಸಿವೆ aavina kombina tudiyali

.

ಆರು ಮುನಿದು ನಿಮಗೆ ಏನು aaru munidu nimage


U
ಆರು ಮುನಿದು ನಿಮಗೆ ಏನು ಮಾಡುವರಯ್ಯ
ಊರು ಒಲಿದು ನಮಗೇನ ಮಾಡುವುದಯ್ಯ
ಕೊಡಬೇಡ ತಮ್ಮೊಡಲಿಗೆ ತುಸುವನು
ಇಡಬೇಡ ನಮ್ಮ ಶುನಕಗೆ ತಳಿಗಿಯನು
ಆನೆಯ ಬಪ್ಪನ ಶ್ವಾನ ಕಚ್ಚಲು ಬಲ್ಲುದೆ?
ದೀನ ನಾಥ ನಮ್ಮ ಪುರಂದರವಿಠಲ ಉಳ್ಳನಕ
ಆರುಮುನಿದು................||


ಆರು ಅಕ್ಷರವುಳ್ಳ ವ್ಯಾಹೃತಿಯಿಂದ aaru aksharavulla vyahatiyinda


U
ಆರು ಅಕ್ಷರವುಳ್ಳ ವ್ಯಾಹೃತಿಯಿಂದ ಓಂಕಾರವಾಗುವುದು ಕೇಳಿ
ಈ ರೀತಿ ಇಪ್ಪತ್ತು ನಾಲ್ಕು ಅಕ್ಷರಗಳಿಂದ
ತೋರುತಲಿ ಗಾಯತ್ರಿಯ ರಚಿಸಿದ ಹರಿಯು
ಮೆರಿವುವೈ ಪುರುಷ ಸೂಕ್ತಾದಿ ಅನಂತವೇದರಾಶಿ
ದೊರೆ ಎಂದು ಪೊಗಳುವ ಓಂಕಾರ ಶ್ರೀಕಾರ
ಮೆರೆವುವೈ ಅಯ್ವತ್ತೊಂದು ಅಕ್ಷರಗಳು
ಈ ರೀತಿ ಅಶೇಷ ಗುಣಾಧಾರಯೆಂದು
ನಾರಾಯಣೋಥ ಪೂರ್ಣ ಗುಣಯುತ
ಭರದಿ ಙÁÐನ ರೂಪ ಶಬ್ದನೊ
ಮೆರೆವ ದೇವೇಶ ಶತರ್ದನ ಧರಿಸಿದೆ
ಪುರಂದರ ವಿಠಲ.


ಆಯುಸ್ಸು ಇದ್ದರೆ ಅನ್ನಕ್ಕೆ ಕೊರತೆಯಿಲ್ಲ aayussu iddare annakke

ಆಯುಸ್ಸು ಇದ್ದರೆ ಅನ್ನಕ್ಕೆ ಕೊರತೆಯಿಲ್ಲ
ಜೀವಕ್ಕೆ ಎಂದೆಂದಿಗೂ ತನುಗಳ ಕೊರತೆÉಯಿಲ್ಲ
ಸಾವು-ಹುಟ್ಟು ಸಹಜವೆಂಬ ಲೋಕದೊಳಗೆ
ಕಾಲ ಕಾಲದಿ ಹರಿಯ ಕಲ್ಯಾಣ ಗುಣಗಳ
ಕೇಳದವನ ಜನ್ಮ ವ್ಯರ್ಥ ಪುರಂದರವಿಠಲ.

ಆಪೋಶನ ಅಭ್ಯಂಜನ aaposhana abhyanjana

ಆಪೋಶನ ಅಭ್ಯಂಜನ ಆಚಮನ ಮಾಡಲು
ತನ್ನೆಡಗೈಯಿಂದ ತಾನೆ ವರ್ತಿಸಲು
ಆ ಪುರುಷಂಗೆ ಆದ ಪುತ್ರರು ಮಡಿವರು
ಆಪತ್ತು ತಂದು ಬಿಡುವ ಪುರಂದರವಿಠಲ.

ಆನೆಯನ್ನು ಕಾಯುವಾಗ aaneyannu kaayuvaga

ಆನೆಯನ್ನು ಕಾಯುವಾಗ e್ಞÁನವಿದ್ದುದು ಏನು|
ನಾನೀಗ ಕೂಗಲು ಕೇಳದಿದ್ದುದು ಏನು |
ದಾನವಾಂತಕÀ ಹರಿ ದೀನರಕ್ಷಕನೆಂಬ |
ಮಾನ ಉಳಿಸಿಕೊಳ್ಳೋ ಪುರಂದರವಿಠಲ |

ಆದಿ ಸೃಷ್ಟಿಯಲಾರು ಮೊದಲೆ aadi shristitalaaru modale

ಆದಿ ಸೃಷ್ಟಿಯಲಾರು ಮೊದಲೆ ಉದಿಸಿದರೇನು
ಅವರವರೆ ಅಧಿಕರಧಿಕರಯ್ಯ
ಕಾಲಾಜಯಾದಿಗಳು ಮೊದಲೆ ಉದಿಸಿದರೇನು
ಅವರವರೆ ಅಧಿಕರಧಿಕರಯ್ಯ
ಅವರಂತರಂತರ ಅವರ ನೋಡಯ್ಯ
ಅವರವರೆ ಆಧಿಕರಧಿಕರಯ್ಯ
ಪುರಂದರ ವಿಠಲನ ಸಂತತಿ ನೋಡಯ್ಯ
ಅವರವರೆ ಅಧಿಕರಧಿಕರಯ್ಯ

ಆಕಳ ಕಿವಿಗೆ ಎಣ್ಣೆ ಅಂಗೈ aakalan kivige enne angai

ಆಕಳ ಕಿವಿಗೆ ಎಣ್ಣೆ ಅಂಗೈ ಹಳ್ಳವಾಗಿರಬೇಕು
ಉದ್ದು ಮುಣಗುವಂತೆ ಇರಬೇಕು
ನೀರ ಸಾಕಾಗದೆ ಹೆಚ್ಚು ಕಡಮೆ ಸಾಕೆಂಬಷ್ಟು ಕುಡಿದರೆ
ಸಾಕಾರ ಪುರಂದರವಿಠಲ ಮದ್ಯಸಮ ಮಾಡುವ.

ಅಲ್ಲಿ ವನಗಳುಂಟು ಆ ಪ್ರಾಕೃತವಾದ alli vanagaluntu


U
ಅಲ್ಲಿ ವನಗಳುಂಟು ಆ ಪ್ರಾಕೃತವಾದ
ಫಲ ಪುಷ್ಪಗಳಿಂದೊಪ್ಪುತ್ತಲಿಹುದು
ಪಕ್ಷಿಜಾತಿಗಳುಂಟು ಅತಿವಿಲಕ್ಷಣವಾದ
ಕಿಲಕಿಲ ಶಬ್ದವು ರಂಜಿಸುವ ನುಡಿಗಳು
ಮುಕುತರು ಬಂದು ಜಲಕ್ರೀಡೆಗಳ ಮಾಡಿ (ಕುಳಿತು) ಸುಖಿಪರು
ಇಂಥ ಸುಖ ಬೇಕಾದರೆ ನೀಚವೃತ್ತಿಯ ಬಿಟ್ಟು
ಪರಲೋಕ ಸುಖವೀವ ಪುರಂದರ ವಿಠಲನ
ಭಜಿಸು ಜೀವ.


ಅಲ್ಲದ ಕರ್ಮವ ಆಚರಿಸಿದವ allada karmava aacharisidava

ಅಲ್ಲದ ಕರ್ಮವ ಆಚರಿಸಿದವ ಕೆಟ್ಟ
ಬಲ್ಲಿದರೊಳು ಸೆಣಸಿ ಮೆರೆದವ ಕೆಟ್ಟ
ಲಲ್ಲೆ ಮಾತಿನ ಸತಿಯರ ನಂಬಿದವ ಕೆಟ್ಟ
ಫುಲ್ಲನಾಭ ಸಿರಿಪುರಂದರವಿಠಲನ
ಮೆಲ್ಲಡಿಗಳ ನಂಬದವ ಕೆಟ್ಟ
ನರಗೇಡಿ-ಬಲ್ಲಿದರೊಳು ಸೆಣಸಿದವ ಕೆಟ್ಟ.

ಅರ್ಭಕನ ತೊದಲ್ನುಡಿ aarbhakana todalnudi

ಅರ್ಭಕನ ತೊದಲ್ನುಡಿ (ಗೆ) ತಾಯ್ತಂದೆ (ಯರು) ಕೇಳಿ ಮನ |
ಉಬ್ಬಿ ನಲಿವಂದದಲಿ ಉರಗಶಯನ (ನೆ)
ಕೊಬ್ಬಿ ನಾನಾಡಿದರೆ ತಾಳಿ ರಕ್ಷಿಸುವ ಎನ್ನ |
ಕಬ್ಬು ಬಿಲ್ಲನಯ್ಯ ಪುರಂದರ ವಿಠಲ.

ಅಪಾಯ (ಕೋಟಿ) ಕೋಟಿಗಳಿಗೆ apaya koti kotigalige


U
ಅಪಾಯ (ಕೋಟಿ) ಕೋಟಿಗಳಿಗೆ ಉಪಾಯ ಒಂದೇ
ಹರಿ ಭಕ್ತರು ತೋರಿಕೊಟ್ಟ ಉಪಾಯ ಒಂದೇ
ಪುರಂದರ ವಿಠಲನೆಂದು ಭೋರಿಟ್ಟು
ಕರೆವ ಉಪಾಯವೊಂದೇ.


ಅಪರಾಧ ಹತ್ತಕೆ ಅಭಿಷೇಕ ಉದಕ apharadha hattake



ಅಪರಾಧ ಹತ್ತಕೆ ಅಭಿಷೇಕ ಉದಕ
ಅಪರಾಧ ನೂರಕೆ ಕ್ಷೀರ ಹರಿಗೆ
ಅಪರಾಧ ಸಹಸ್ರಕೆ ಹಾಲು -ಮೊಸರು ಕಾಣೊ
ಅಪರಾಧ ಲಕ್ಷಕೆ ಜೀನು-ಘೃತ
ಅಪರಾಧ ಹತ್ತು ಲಕ್ಷಕೆ ಬಲುಪರಿ ಕ್ಷೀರ
ಅಪರಾಧ ಹೆಚ್ಚಿಗೆಗೆ ಹತ್ತು ತೆಂಗಿನಹಾಲು
ಅಪರಾಧ ಕೋಟಿಗೆ ಅಚ್ಚ ಜಲ
ಅಪರಾಧ ಅನಂತ ಕ್ಷÀಮೆಗೆ ಗÀಂಧೋದಕ
ಉಪಮೆರಹಿತ ನಮ್ಮ ಪುರಂದರವಿಠಲಗೆ
ತಾಪಸೊತ್ತಮನ ಒಲುಮೆ ವಾಕ್ಯ.


ಅನ್ಯರೊಬ್ಬರ ಕಾಣೆ anyarobbara kaane

ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ ಆ-
ಪನ್ನರಕ್ಷಕನೆ ಪರಿಪಾಲಿಸೊ ಇನ್ನು |
ಪನ್ನಂಗಶಯನ ಶ್ರೀ ಪುರಂದರ ವಿಠಲನೆ.

ಅನ್ನ ಪಾನಾದಿಗಳೀಯೊ ಅಭ್ಯಾಗತ ಬ್ರಾಹ್ಮಣರಿಗೆ annapaanadigaliyo


U
ಅನ್ನ ಪಾನಾದಿಗಳೀಯೊ ಅಭ್ಯಾಗತ ಬ್ರಾಹ್ಮಣರಿಗೆ
ಅನ್ನ ಪಾನಾದಿಗಳೀಯೊ ಆ ಚಂಡಾಲಸಪ್ತರಿಗೆ
ಅನ್ನ ಪಾನಾದಿಗಳೀಯೊ ಅಂಧ ದೀನ ಕೃಪಣರಿಗೆ
ಹಸಿವೆಗೆ ಹಾಗವನ್ನರ್ಪಿಸೊ ಪುರಂದರವಿಠಲಗೆ.


ಅನುಕೂಲವಿಲ್ಲದ ಸತಿಯ anukulavillada satiya


U
ಅನುಕೂಲವಿಲ್ಲದ ಸತಿಯ ವರ್ಜಿಸಬೇಕು
ವಿನಯದಿ ಗುರು ಹಿರಿಯರ ಪೂಜಿಸಬೇಕು
ಮನಕೆ ಬಾರದ ಠಾವು ಬಿಟ್ಟು ತೊಲಗಬೇಕು
ವನಜನಾಭನ ದಾಸರ ಸಂಗವಿರಬೇಕು
ನೆನೆಯುತಲಿರಬೇಕು ಪುರಂದರವಿಠಲನ.


ಅನಾಮಿಕಾ ಮಧ್ಯದ ಎರಡನೆಯ ಗೆರೆ ಆದಿ anamika madhyada


U
ಅನಾಮಿಕಾ ಮಧ್ಯದ ಎರಡನೆಯ ಗೆರೆ ಆದಿ
ಇನಿತು ಮಧ್ಯಾಂಗುಲಿ ಕೊನೆಗೆರೆ ಕೂಡಿಸಿ
ಮನುಮೂರ್ತಿ ಪರಿಮಾಣ ಅಂಗುಷ್ಠದಿಂದಲಿ
ಎಣಿಸು ತರ್ಜನಿ ಮೂಲ ಪರಿಯಂತ(ರ)
ಘನ ಹತ್ತು ಗೆರೆ ಜಪ ಪುರಂದರವಿಠಲಗೆ
ಮನದಿ ಅರ್ಪಿಸುತ ಗಾಯತ್ರಿ ಜಪವ.


ಅಣುವಿಗೆ ಅಣುವಾಗಿ anuvige anuvige


U
ಅಣುವಿಗೆ ಅಣುವಾಗಿ ಘನಕೆ ಘನವಾಗಿ
ಗುಣತ್ರಯ ತತ್ತ್ವಕ್ಕೆ ಮೀರಿದ ದೊರೆಯಾಗಿ
ತೃಣ ಮೊದಲಾಗಿ ಮೇರು ಪರಿಯಂತ ಇರುವವ ನೀನಾಗಿ
ಗುಣನಿಧಿ ಪುರಂದರ ವಿಠಲ ನಿನ್ನ ಮಹಿಮೆ
ಎಣಿಕೆ ಮಾಡುವರಾರು ಎನ್ನಪ್ಪನೆ.


Monday 22 June 2020

ಅಣು-ರೇಣು-ತೃಣದಲ್ಲಿ anusaar renu trunadalli

U
ಅಣು-ರೇಣು-ತೃಣದಲ್ಲಿ ಪರಿಪೂರ್ಣನಾಗಿರುವ
ಗುಣವಂತನೇ ನಿನ್ನ ಮಹಿಮೆ ಗಣನೆ ಮಾಡುವರಾರು?
ಎಣಿಸಿ ನೋಡುವಳಿನ್ನು ಏಣಾಕ್ಷಿ ಸಿರಿದೇವಿ

ಜ್ಞಾನ ಸುಗುಣತತ್ತ್ವ ವೇಣುಗೋಪಾಲ ಹರೆ
ಕಾಣಿಸೊ ನಿನ್ನ ಮಹಿಮೆ ಪುರಂದರ ವಿಠಲ.

ಅಣುಕದಿಂದಾಗಲಿ ಡಂಭದಿಂದಾಗಲಿ anukadindagali dambhadindagali

U

ಅಣುಕದಿಂದಾಗಲಿ ಡಂಭದಿಂದಾಗಲಿ
ಎಡಹಿದಡಾಗಲಿ ಬಿದ್ದಡಾಗಲಿ
ತಾಗಿದಡಾಗಲಿ ತಾಕಿಲ್ಲದಡಾಗಲಿ
ಮರೆದು ಮತ್ತೊಮ್ಮೆ ಆಗಲಿ
ಹರಿ ಹರಿ ಎಂದವರಿಗೆ ನರಕದ ಭಯವೇಕೆ ?
ಯಮ ಪಟ್ಟಣ ಕಟ್ಟಿದರೇನು
ಯಮ ಪಟ್ಟಣ ಬಟ್ಟ ಬಯಲಾದರೇನು?
ಹರಿದಾಸರಿಗೆ ಪುರಂದರವಿಠಲ

ಅಚ್ಚ್ಯುತನ ಭಕುತರಿಗೆ ಮನಮೆಚ್ಚದವನು ಪಾಪಿ achytana bhakutarige

U
ಅಚ್ಚ್ಯುತನ ಭಕುತರಿಗೆ ಮನ
ಮೆಚ್ಚದವನು ಪಾಪಿ
ಆನರನೊಳ್ ಆಡಿ ನೋಡಿ ನುಡಿಯೆ
ಮನುಜವೇಷದ ರಕ್ಕಸನೋಳ್ ಆಡಿನುಡಿದಂತೆ
ಸಚ್ಚಿದಾನಂದಾತ್ಮ ಪುರಂದರವಿಠಲನು
ಮೆಚ್ಚನು ಮೆಚ್ಚನು ಕಾಣೊ ಎಂದೆಂದಿಗೂ.

ಅಂದು ಬಾಹೋದು, ನಮಗಿಂದೇ ಬರಲಿ anduke baahodu namaginde barali

U
ಅಂದು ಬಾಹೋದು, ನಮಗಿಂದೇ ಬರಲಿ
ಇಂದೆ (ಇಂದು) ಬಾಹುದು ನಮಗೀಗೇ ಬರಲಿ
ಈಗ ಬಾಹೋದು ನಮಗೀಕ್ಷಣವೆ ಬರಲಿ
ಪುರಂದರವಿಠಲನ ದಯೆ(ವೊಂದು) ನಮಗಿರಲಿ.

ಅಂದವಿಲ್ಲದ ಅಶಕ್ತನಿಗೆ ಒಂದೇ ಅರಿವೆಯಿಂದ andavillada ashaktanige

U
ಅಂದವಿಲ್ಲದ ಅಶಕ್ತನಿಗೆ ಒಂದೇ ಅರಿವೆಯಿಂದ
ಮೈದೊಳೆದು ಮಡಿಯುಟ್ಟು ನಾಮಗಳಿಟ್ಟು
ಚೆಂದದಲಿ ಸಂಧ್ಯಾವಂದನೆ ಮಾಡೆ ಫಲವಹುದು
ನಿಂದೆ ಹಿಂಗಲೆಂದು ಮಾಡಿದ ಮನುಜಂಗೆ
ಇಂದ್ರ ಹದಿನಾಲ್ಕು ಮನುನರಕವೆಂದು
ಅಂದು ಪುರಂದರವಿಠಲ ಪೇಳಿದನೆಂದು ಸಿದ್ಧ.

Saturday 13 June 2020

ಪರಾನ್ನವೇತಕೆ ಬಂತಯ್ಯ - ಎನಗೆ ಇಂದು paarannavetake bantayya


ಪರಾನ್ನವೇತಕೆ ಬಂತಯ್ಯ - ಎನಗೆ ಇಂದು |
ಪರಾನ್ನವೇತಕೆ ಬಂತಯ್ಯ ? ಪ.
ಪರಾನ್ನವೇತಕೆ ಬಂತು ಪರಮೇಷ್ಟಿಜನಕನ |
ಪರನೆಂದು ತಿಳಿಸದೆ ಪರಗತಿ ಕೆಡಿಸುವ ಅಪ
ಸ್ನಾನ ಮಾಡಿಕೊಂಡು - ಕುಳಿತು ಬಹು |
ಮೌನದಿಂದಿರಲೀಸದು ||
ಶ್ರೀನಿವಾಸನ ಧ್ಯಾನಮಾಡದೆ ಮವಿದು |
ತಾನೆ ಓಡುವದು ಶ್ವಾನನೋಪಾದಿಯಲಿ1
ಜಪವ ಮಾಡುವ ಕಾಲದಿ - ಕರೆಯ ಬರೆ |
ವಿಪರೀತವಾಗುವುದು ||
ಸ್ವಪನದಂತೆ ಪೊಳೆದು ನನ್ನ ಮನಕೆ ಬಲು |
ಸುಪಥವ ತಪ್ಪಿಸಿ ಅಪಗತಿ ಕೊಡುವಂಥ2
ಪ್ರಸ್ಥದ ಮನೆಯೊಳಗೆ - ಕರೆಯದೆ ಪೋಗಿ |
ಸ್ವಸ್ಥದಿ ಕುಳಿತುಕೊಂಡು ||
ವಿಸ್ತಾರವಾಗಿ ಹರಟೆಯನೆ ಬಡಿದು ಪ್ರ |
ಶಸ್ತವಾಯಿತು ಎಂದು ಮುಸ್ತಕ ತಿರುವುವ 3
ಯಜಮಾನನು ಮಾಡದ - ಪಾಪಂಗಳ |
ವ್ರಜವು ಅನ್ನದೊಳಿರಲು ||
ದ್ವಿಜರು ಭುಂಜಿಸಲಾಗಿ ಅವರ ಉದರದೊಳು ||
ನಿಜವಾಗಿ ಸೇರುವುದು ಸುಜನರು ಲಾಲಿಸಿ 4
ಮಾಡಿದ ಮಹಾಪುಣ್ಯವು - ಓದನಕಾಗಿ - |
ಕಾಡಿಗೊಪ್ಪಿಸಿ ಕೊಡುತ |
ರೂಢಿಗಧಿಕನಾದ ಪುರಂದರವಿಠಲನ |
ಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ5


ಪರಾಕು ಮಾಡದೆ ಪರಾಮರಿಸಿ ಎನ್ನ paraaku maadade


ಪರಾಕು ಮಾಡದೆ ಪರಾಮರಿಸಿ ಎನ್ನ
ಪರಾಧಂಗಳ ಕ್ಷಮಿಸೋ ಪ
ಧರಾರಮಣ ಫಣಿಧರಾಮರಾರ್ಚಿತ
ಸುರಾಧಿಪತಿ ವಿಧಿ ಹರಾದಿ ವಂದಿತ ಅ.
ನರರೊಳಗೆ ಪಾಮರನು ನಾನಿಹ
ಪರಕೆ ಸಾಧನವರೀಯೆ ಶ್ರೀಹರಿ ||
ಚರಣ ಕಮಲಕೆ ಶರಣುಹೊಕ್ಕೆನು
ಕರುಣದಿಂದ ನಿನ್ನ ಸ್ಮರಣೆಯೆನಗಿತ್ತು 1
ಜಪವನರಿಯೆನು ತಪವನರಿಯೆನು
ಉಪವಾಸ ವ್ರತಗಳ ನಾನರಿಯೆ ||
ಕೃಪಾವಲೋಕನದಿಂದ ಆ ಪಾಪಗಳನೆಲ್ಲ
ಅಪಹತವ ಮಾಡೋ ಅಪಾರಮಹಿಮನೇ 2
ಕರಿರಾಜನುದ್ಧರಿಸಿ ದ್ರೌಪದಿಯ
ಮೊರೆಯ ಲಾಲಿಸಿ ತರುಳಗೊಲಿದು ನೀ
ಸಿರಿರಮಣ ನಿನ್ನ ಸರಿಯಾರ ಕಾಣೆ
ಪುರಾರಿನುತ ಸಿರಿ ಪುರಂದರ ವಿಠಲ 3


ಪರಮ ಪದವಿಯ ನೀವ ಗುರುಮುಖ್ಯ ಪ್ರಾಣನ paramaatma padaviya neeva


ಪರಮ ಪದವಿಯ ನೀವ ಗುರುಮುಖ್ಯ ಪ್ರಾಣನ
ಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ ಪ
ಅಂದು ತ್ರೇತೆಯಲಿ ಹನುಮನಾಗಿ ಅವತರಿಸಿ
ಬಂದು ದಾಶರಥಿಯ ಪಾದಕೆರಗಿ ||
ಸಿಂಧುವನೆ ದಾಟಿ ಮುದ್ರಿಕೆಯಿಕ್ತು ದಾನವರ
ವೃಂದಪುರ ದಹಿಸಿ ಚೂಡಾಮಣಿಯ ತಂದವನ 1
ದ್ಪಾಪರಯುಗದಲಿ ಭೀಮಸೇನ ನೆನಿಸಿ
ಶ್ರೀಪತಿಯ ಪಾದ ಕಡು ಭಜಕನಾಗಿ
ಕೋಪಾವೇಶದಲಿ ದುಃಶಾಸನನನು ಸೀಳಿ
ಭೂಪರ ಬಲದೊಳಗೆ ಜರೆಜರೆದು ಕರೆದವನ 2
ಕಲಿಯುಗದಲಿ ತುರೀಯಾಶ್ರಮವನೆ ಧರಿಸಿ
ಕಲುಷದ ಮಾಯಿಗಳನು ಸೋಲಿಸಿ
ಖಿಲವಾದ ಮಧ್ವಮತವನೆ ನಿಲಿಸಿ ಕಾಗೆ-
ನೆಲೆಯಾದಿ ಕೇಶವನ ಪರದೈವನೆಂದೆನಿಸುವನ * 3


ಪಥ ನಡೆಯದೈಯ patha nadeyadaiyya


ಪಥ ನಡೆಯದೈಯ ಪರಲೋಕಕೈದುವರೆ, ಮ ಪ.
ನ್ಮಥನೆಂಬ ಕಳ್ಳ ಮಾರ್ಗವ ಕಟ್ಟಿ ಸುಲಿಯುತಿರೆ ಅ
ಗಿಳಿವಿಂಡು ಕೋಗಿಲೆ ವಸಂತ ಮಾರುತ ಭ್ರಮರ
ಬಲವೆರಸಿ ಮದನ ಮಾರ್ಗವ ಕಟ್ಟಲು
ಬಲವುಳ್ಳ ಭಟರು ಬಲು ಸನ್ಯಾಸಿ ಯೋಗಿಗಳು
ಸುಲಿಸಿಕೊಂಡರು ಕೆಲರು ಸಿಕ್ಕಿದರು ಕೆಲರು 1
ತನು ರೋಮ ಗಿಡ ವೃಕ್ಷ ತಳಿತ ಭುಜಲತೆ ಮೆರೆಯೆ
ಘನ ಸಿಂಹ ಖಗ ಮೃಗಗಳಟ್ಟಿಣಿಸುವ
ವನಿತೆಯರ ಕಾಯಕಾಂತಾರದಲಿ ದುರ್ಗಮ
ಸ್ತನ ಪರ್ವತದ ಕಣಿವೆಯಲಿ ಕಟ್ಟಿ ಸುಲಿಯುತಿರೆ 2
ಕಾಳಗದೊಳಿದಿರಲ್ಲ ಸುರನರೋರಗರ ಕ
ಟ್ಟಾಳು ಮನ್ಮಥನ ಛಲದಂಕ ಬಿರುದು
ಪೇಳಲೆನ್ನಳವಲ್ಲ ಪುರಂದರವಿಠಲನ
ಆಳು ಸಂಗಡವಿದ್ದರವಗೆ ಭಯವಿಲ್ಲ * 3


ಪಥ ನಡೆಯದೈಯ patha nadeyadiya


ಪಥ ನಡೆಯದೈಯ ಪರಲೋಕಕೈದುವರೆ, ಮ ಪ.
ನ್ಮಥನೆಂಬ ಕಳ್ಳ ಮಾರ್ಗವ ಕಟ್ಟಿ ಸುಲಿಯುತಿರೆ ಅ
ಗಿಳಿವಿಂಡು ಕೋಗಿಲೆ ವಸಂತ ಮಾರುತ ಭ್ರಮರ
ಬಲವೆರಸಿ ಮದನ ಮಾರ್ಗವ ಕಟ್ಟಲು
ಬಲವುಳ್ಳ ಭಟರು ಬಲು ಸನ್ಯಾಸಿ ಯೋಗಿಗಳು
ಸುಲಿಸಿಕೊಂಡರು ಕೆಲರು ಸಿಕ್ಕಿದರು ಕೆಲರು 1
ತನು ರೋಮ ಗಿಡ ವೃಕ್ಷ ತಳಿತ ಭುಜಲತೆ ಮೆರೆಯೆ
ಘನ ಸಿಂಹ ಖಗ ಮೃಗಗಳಟ್ಟಿಣಿಸುವ
ವನಿತೆಯರ ಕಾಯಕಾಂತಾರದಲಿ ದುರ್ಗಮ
ಸ್ತನ ಪರ್ವತದ ಕಣಿವೆಯಲಿ ಕಟ್ಟಿ ಸುಲಿಯುತಿರೆ 2
ಕಾಳಗದೊಳಿದಿರಲ್ಲ ಸುರನರೋರಗರ ಕ
ಟ್ಟಾಳು ಮನ್ಮಥನ ಛಲದಂಕ ಬಿರುದು
ಪೇಳಲೆನ್ನಳವಲ್ಲ ಪುರಂದರವಿಠಲನ
ಆಳು ಸಂಗಡವಿದ್ದರವಗೆ ಭಯವಿಲ್ಲ * 3


ಪತಿಭಕುತಿಯಿಲ್ಲದಿಹ ಸತಿಯ ಸಂಗ patibhakutiyilladiha satiya sanga


ಪತಿಭಕುತಿಯಿಲ್ಲದಿಹ ಸತಿಯ ಸಂಗ
ವ್ರತಗೆಟ್ಟು ಸುಖ ಪಡೆಯಲಿಲ್ಲವೊ ರಂಗ ಪ.
ಗಂಡ ಬಂದರೆ ಎದ್ದುನಿಲ್ಲದೆ ಆ ಕ್ಷಣದಿ
ಕಂಡಾಡಿ ಏಕವಚನಂಗಳನಾಗ
ಅಂಡಲೆದು ಮಾರ್ಮಲೆಂದು ಕಾಡಿಬೇಡುವ - ಇಂಥ
ಭಂಡುದೊತ್ತಿನ ಕೂಟ ಏಳುನಾಗರ ಕಾಟ 1
ಒಂದು ತಂದರೆ ಮನೆಗೆ ಹತ್ತಾಗಿ ಭಾವಿಸದೆ
ತಂದರೆ ಹತ್ತು ಮನೆಯೊಳಗೊಂದ ಮಾಡಿ
ಇಂದಿಗೆ ಇಲ್ಲವೆಂದು ಮುಖವ ತಿರುಹುತಲಿ ಮದ
ದಿಂದ ಹೋಹಳು ನಾರಿ ಬಹು ದೊಡ್ಡ ಮಾರಿ 2
ಮಕ್ಕಳಿಗೆ ಇಡಲಿಲ್ಲ ಮರಿಗಳಿಗೆ ತುಡಲಿಲ್ಲ
ಇಕ್ಕುವಡೆ ಬೆಳ್ಳಿ - ಬಂಗಾರವಿಲ್ಲ
ಚಿಕ್ಕವಳು ನಾ ನಿನ್ನ ಕೈಪಿಡಿದು ಕೆಟ್ಟೆನೆಂಬ
ಮೂರ್ಖ ತೊತ್ತಿನ ಸಂಗ ಕುಲಕೆಲ್ಲ ಭಂಗ 3
ತಾಯನು ಹೊರಡಿಸು ತಂದೆಯನು ತೆರಳಿಸು
ದಾಯಾದಿಯನು ಮನೆಯಲಿರಿಸಬೇಡ
ಬಾಯಿನ್ನು ಮನೆ ಕಟ್ಟಿ ಬೇರಿರುವ ನಾವೆಂಬ
ಮಾಯಾಕಾತಿಯ ಸಂಗ ಅಭಿಮಾನ ಭಂಗ 4
ಇಷ್ಟನೆಲ್ಲವ ಬಿಟ್ಟು ಕೆಟ್ಟೆನೈ ನಾನಿಂದು
ಕಷ್ಟ ಸೆರೆಯೆನುವೆನೆ ಈ ಪರಿಯಲಿ
ಸ್ಪಷ್ಟಿಗಾಧಿಕನಾದ ದಿಟ್ಟ ಶ್ರೀ ಪುರಂದರ
ವಿಠಲ ಪಶ್ಚಿಮದ ರಂಗಧಾಮ 5


Saturday 6 June 2020

ನೋಡೆಯಮ್ಮ ನಾ ಮಾಡಿದ ತಪ್ಪಿಲ್ಲ nodeyamma naa maadida tappilla


ನೋಡೆಯಮ್ಮ ನಾ ಮಾಡಿದ ತಪ್ಪಿಲ್ಲ
ಸುಮ್ಮನೆ ಮುನಿದ ಗೋವಳನಂಮ್ಮ ಪ
ತೆಗೆದು ಕಟ್ಟಿನ ಖಿಲ್ಲ ಚೇವಡೆಗೈದು | ಮುಗುಳಂಬನೆ
ಶಿರದಲಿ ಮನೆಮಾಡಿ | ಅಗಲಿದವರ ಕಟ್ಟೆಸೆವೆನೆಂದು
ಹಗಲಿರಳೂ | ಸಾಗಿಸಿಕೊಂಡಿಹನೆ 1
ನೀರೆಯರ ದೇಹದೊಡನೆ ಬಳುಕಿ ನೆರಹಿ ಕೋಗಿಲೆವಿಂಡ
ಚವರುಚನೆ ಮಾಡಿ | ತರಳ ಮಾವುತಗೆ ಶೇನಾದಿ ಪಟ್ಟವಗಟ್ಟಿ
ಚಾವಕೆ ಗುರಿಮಾಡಿದನಂಮ್ಮಾ 2
ಅಂಗವಿಲ್ಲದವರ ಕಡವಿಯ ಕೇಳಿ | ದೆನೆನಿಸುತದೆ |
ಅವನ ಪುಶಕಾಸೂ ಅಂಗನೆ ತಾರೆಲೆ ಪುರಂದರವಿಠಲನಾ
ಹಿಂಗಿರಲಾರೆನೂ ಮುದ್ದು ಮೂರುತಿಯಾ 3


ನೋಡೆ ಗೋಪೀ ಗೋಕುಲದೊಳು node gopi gokuladolu


ನೋಡೆ ಗೋಪೀ ಗೋಕುಲದೊಳು ಹರಿ |
ಮಾಡುವ ಲೀಲೆಗಳ ಪ್ರತಿಯಮ್ಮ ಪ
ರಂಗನೆತ್ತಿ ಸಂಭ್ರಮದಿಂದಲಿ |
ಅಂಗಣದೊಳಗೆ ನಿಂದಾಡಿಸಲು ||
ತಿಂಗಳ ಬಿಂಬವ ಕಂಡಾಕ್ಷಣ ತ-|
ನ್ನಂಗೈಯೊಳಗೇ ನಿಲಿಸಿಕೊಡೆಂಬ 1
ಚಿನ್ನನು ನೋಡಲಿ ಎಂದಕ್ಕರದಲಿ |
ಕನ್ನಡಿಯನು ತಂದು ಕೈಯಲಿ ಕೊಡಲು ||
ತನ್ನ ಮುಖದ ಪ್ರತಿಬಿಂಬವ ಕಂಡು ಅ-|
ದನ್ನು ಕರೆದು ಬಳಿಯಿರಿಸಿರಿಯೆಂಬ 2
ಅರಿಯದೆ ದೀಪವ ಕೆಂಪಗೆ ಕಂಡು |
ಸೆರಗಿನಲ್ಲಿ ಕೊಡು ಆಡುವೆನೆಂಬ ||
ಕರುವಿನಂತೆ ತನ್ನನು ಕೊಂಡೊಯ್ದು |
ತುರುಗಳ ಮೊಲೆಯನು ಉಣಿಸಿರಿಯೆಂಬ 3
ಪರಿಪರಿಯಿಂದಲಿ ಗೋಡೆಯ ಮೇಲೆ |
ಬರೆದಿಹ ಚಿತ್ರದ ಗೊಂಬೆಯ ನೋಡಿ ||
ಕರವ ಪಿಡಿದು ಎಳೆತಂದು ತನ್ನಯ
ನೆರೆಯಲ್ಲಿಯೆ ನೀವಿರಿಸಿರಿಯೆಂಬ 4
ತರುಣಿ ನಿನ್ನಯ ಸುಕೃತದ ಫಲವು |
ಹರುಷವೆಮಗೆ ಅಭಿವೃದ್ಧಿಯಾಗಿಹುದು ||
ಪುರಂದರವಿಠಲನ ಚರಿಯವ ನೋಡಲು |
ಧರೆಯೊಳಗಿನ ಬಾಲಕರಂತಲ್ಲವೆ 5


ನೋಡುವುದೆ ಕಣ್ಣು, ಕೇಳುವುದೆ ಕಿವಿ noduvade kannu


ನೋಡುವುದೆ ಕಣ್ಣು, ಕೇಳುವುದೆ ಕಿವಿ |
ಪಾಡುವುದೇ ವದನ ಪ
ಗಾಡಿಕಾರ ಶ್ರೀ ವೇಣುಗೋಪಾಲನ |
ಕೂಡಿಕೊಂಡಾಡುವ ಸುಖದ ಸೊಬಗನು ಅ.ಪ
ಎಳೆದುಳಸಿಯ ವನಮಾಲೆಯಿಂದೊಪ್ಪುವ |
ಎಳೆಯ ಗೋವಳರೊಡನಾಡುವ |
ತಳಿತ ತರುವಿನ ನೆಳಲಲ್ಲಿ ನಲಿವನ |
ನಳಿನನಾಭನ ಮುದ್ದು ನಗೆಯ ಸೊಬಗನು 1
ಅರಸಂಚೆಯೋಲು ಕುಣಿವ ನವಿಲಂತೆ ನಲಿಯುವ |
ಮರಿಗೋಗಿಲೆಯಂತೆ ಕೂಗುವನ ||
ಎರಳೆಯಂತೆ ಜಿಗಿಜಿಗಿದಾಡುವ ತುಂಬಿ |
ಶಿರವ ತಗ್ಗಿಸುವಂತೆ ಝೇಂಕರಿಸುವನ 2
ಮೊಲ್ಲೆಮಲ್ಲಿಗೆ ಜಾಜಿ ಪೂಮಾಲೆಗಳ ಧರಿಸಿ |
ಚೆಲ್ವೆಯರಿಗೆ ಮುಡಿಸುವನ ||
ಜಲಕೇಳಿ ವನಕೇಳಿ ಮೊದಲಾದಾಟಗಳಿಂದ |
ಚೆಲ್ಲೆಗಂಗಳ ಮುದ್ದು ಘುಲ್ಲನಯನನ 3
ಪೊಂಗೊಳಲೂದುತ ಮೃಗಖಗ ಜಾತಿಯ |
ಸಂಗಡಿಸುತಲಿಪ್ಪನ ||
ಅಂಗವ ಮರೆತು ನೂರಂಗನೆಯರಲಿ ಬೆಳು-|
ದಿಂಗಳೊಳಗೆ ಕುಣಿದಾಡುವ ದೇವನ 4
ಮುದುಕಿ ಕುಬ್ಜೆಯ ಡೊಂಕ ತಿದ್ದಿ ರೂಪಿಯ ಮಾಡಿ |
ಸೆರಗಪಿಡಿಸಿ ಕೊಂಬನ ||
ಕರುಣಾಕರ ಶ್ರೀ ಪುರಂದರವಿಠಲ |
ಶರಣಾಗತ ರಕ್ಷಕ ರಮೆಯರಸನ 5


ನೋಡುವ ಬನ್ನಿರಯ್ಯ noduva bannirayya


ನೋಡುವ ಬನ್ನಿರಯ್ಯ ಪ
ಕಾವೇರಿಯ ಭವಹಾರಿಯ |
ಮುಕ್ತಿಕಾರಿಯ ನೋಡುವ ಬನ್ನಿರಯ್ಯ ಅ.ಪ
ಮಾತೆಯ ನುತಜನಜಾತೆಯ ಹರಿಮನಃ |
ಪ್ರೀತೆಯ ಭುವನವಿಖ್ಯಾತೆಯ ||
ನೀತಿಯುನ್ನತಕರದಾತೆಯ ಶಿವನ ಸಂ-|
ಭೂತೆಯ ನೋಡುವ ಬನ್ನಿರಯ್ಯ 1
ಬಂದು ಸಕಲ ಮುನಿವೃಂದ ನೆರರೆಯೆ ವಿೂಯ-|
ಲಂದು ನಾರದಮುನಿ ಪೊಗಳುತಿರೆ ||
ಸಂದೇಹವಿಲ್ಲ ನೋಡಿದಡೆ ಮುಕುತಿಯಹು-|
ದೆಂದರೆ ಮುಳುಗಲದೇತಕಯ್ಯ? 2
ಅರ್ಕಚಂದ್ರವಹ್ನಿಪುಷ್ಕರದೊಳು ಮಿಂದು |
ಚಕ್ರತೀರ್ಥದೊಳಗೋಲಾಡಿ ||
ಗಕ್ಕನೆ ಸದ್ಗತಿಯಹುದೆಂದು ಮನೆಗಳ |
ಕಕ್ಕುಲತೆಯ ಬಿಟ್ಟು ನಡೆಯಿರಯ್ಯ 3
ಕಂಡರೆ ಸಕಲ ಪಾತಕ ಪರಿಹಾರ, ಪಡೆ-|
ದುಂಡರೆ ದುರಿತ-ದುರ್ಜನ ದೂರವು ||
ಕೊಂಡಾಡಿದವರಿಗನಂತ ಫಲವು ನೀ-|
ರುಂಡರೆ ಭವಬಂಧ ಮೋಕ್ಷವಯ್ಯ 4
ಗಂಗೆ-ಯಮುನೆಗೆ ಹೋದಡೆ ಮೂರೈದುದಿ-|
ನಂಗಳಿಗಹುದು ಮುಕುತಿಯೆಂದಡೆ ||
ಹಿಂಗದೆ ಕಾವೇರಿಯ ನೋಡಿದಾಕ್ಷಣ ಪಾ-|
ಪಂಗಳಿರದೋಡಿ ಪೋಪುವಯ್ಯ 5
ಯಾಗಾದಿ ಸ್ವರ್ಗಯೋಗದಿ ಪೊಕ್ಕು ಕಾಶಿಯೊಳು |
ಆಗಲೆ ತನುವ ಬಿಡಲು ಮುಕುತಿ |
ಭೋಗಿ ಶಯನನ ದಿನದಲಿ ಕಾವೇರಿಗೆ |
ಹೋಗಿ ಮಿಂದವರಿಗಿದೇ ಗತಿಯಯ್ಯ 6
ಕಾವೇರಿಯ ಗಾಳಿ ಸೋಕಿದ ದೇಶದೊ-
ಳಾವಾವ ಮನುಜರು ಸುಕೃತಿಗಳೇ ||
ಕಾವೇರಿಯ ತೀರವಾಸಿಗಳಿಗೆ ಮಕ್ತಿ
ಆಹೋದು ಸಂದೇಃವಿಲ್ಲವಯ್ಯ7
ಆವಾವ ಜನ್ಮಕರ್ಮಂಗಳು ಸವೆವರೆ
ಕಾವೇರಿಯ ಕಾಡು ಸುಖಬಾಳಿರೈ ||
ಶ್ರೀವರ ಸ್ವಾಮಿ ಶ್ರೀಪುರಂದರವಿಠಲನ
ಸೇವೆಯೊಳನುದಿನವಿಪ್ಪುದಯ್ಯ 8


ನೋಡು ನೋಡು ನೋಡು ಕೃಷ್ಣಾ nodu nodu Krishna


ನೋಡು ನೋಡು ನೋಡು ಕೃಷ್ಣಾ |
ಹೇಗೆ ಮಾಡುತಾನೆ |
ಬೇಡಿಕೊಂಡರೆ ಬಾರ ಕೃಷ್ಣ |
ಓಡಿ ಹೋಗುತಾನೆ ಪ
ಕಂಡಕಂಡವರ ಮೇಲೆ ಕಣ್ಣು ಹಾಕುತಾನೆ |
ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ ||
ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ |
ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ 1
ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ |
ಶರಣು ಹೊಕ್ಕರೆಯು ತಾನು ಕೊಡಲಿ ಮಸೆಯುತಾನೆ ||
ಹರಿಯುವ ವಾನರರ ಕೊಡ ಹಾರಾಡುತಾನೆ |
ಸಿರಿಕೃಷ್ಣ ಹಾಲು - ತುಪ್ಪ ಸೂರೆಮಾಡುತಾನೆ 2
ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ |
ನೀಲಗುದುರೆಯನೇರಿ ಹಾರಿಸಾಡುತಾನೆ ||
ಬಾಲಕರ ಕೂಡಿಕೊಂಡು ಕುಣಿದಾಡುತಾನೆ |
ಲೋಲ ಪುರಂದರ ವಿಠಲ ತಾನು ಕುಣಿಯುತಾನೆ 3


ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ naivaidyava kollo naarayanaswami


ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ
ದಿವ್ಯ ಷಡುರಸಾನ್ನವನಿಟ್ಟೆನೊಪ.
ಘಮಘಮಿಸುವ ಶಾಲ್ಯನ್ನ ಪಂಚಭಕ್ಷ್ಯ
ಅಮೃತ ಕೂಡಿದ ದಿವ್ಯ ಪರಮಾನ್ನವು ||
ರಮಾದೇವಿಯು ಸ್ವಹಸ್ತದಿ ಮಾಡಿದ ಪಾಕ
ಭೂಮಿ ಮೊದಲಾದ ದೇವಿಯರ ಸಹಿತ ತಾನು 1
ಅರವತ್ತು ಶಾಕ ಲವಣ ಶಾಕ ಮೊದಲಾದ
ಸರಸ ಮೊಸರುಬುತ್ತಿ ಚಿತ್ರಾನ್ನವ
ಪರಮ ಮಂಗಳ ಅಪ್ಪಾಲು ಅತಿರಸಗಳ
ಹರುಷದಿಂದಲಿ ಇಟ್ಟ ಹೊಸ ತುಪ್ಪವ 2
ವಡೆಯಂಬೋಡಿಯು ದಧಿವಡೆಯ ತಿಂಢಿಣಿ
ಒಡೆಯಸೆ ಬಡಿಸಿದೆ ಅಧಿಕವಾಗಿ ||
ದೃಢವಾದ ಪಡಿಪದಾರ್ಥವನೆಲ್ಲ ಇಡಿಸಿದೆ
ಒಡೆಯ ಶ್ರೀ ಪುರಂದರವಿಠಲ ನೀನುಣ್ಣೊ 3


ನೆಲೆಸೆನ್ನ ಹೃದಯ ಮಂದಿರದಿ nelesanna hrudaya mandirada


ನೆಲೆಸೆನ್ನ ಹೃದಯ ಮಂದಿರದಿ - ಶ್ರೀ ಹರಿಯೆ ನೀ |
ಸಲಿಸೆಮ್ಮ ಮನದಿಷ್ಟ ಅನುದಿನ ದಯದಿ ಪ
ಸಿರಿಮಿಂಚಿ ಮರುತ್ಯುಪರ್ಣ ಪು - |
ರಾರಿವಂದಿತ ಚರಣ ಸರಸಿಜ ||
ಪರಮಭಕ್ತ ಪ್ರಹ್ಲಾದ ನಾರದ |
ವರಪರಾಶರ ಮುಖಸುಸನ್ನುತ ಅ.ಪ

ನಾರುವಿ ಭಾರವ ಪೊರುವಿ - ಬಲು - |
ಬೇರುಗಳನೆ ಕಿತ್ತು ಮೇಲುವಿ - ಕರಿ - |
ವೈರಿ ರೂಪಗೊಂಡ ಗರುವಿ - ಬ್ರಹ್ಮ - |
ಚಾರಿ ಖಳರ ಕತ್ತರಿಸುವಿ |
ವೀರದಶರಥಸುತ ಸುರಾರ್ಚಿತ |
ಜಾರತನದಲಿ ವ್ರತವ ಕೆಡಿಸುತ |
ತೋರಿ ಮೆರೆವನೆ ತರಳ ಬಲು ಗಂ - |
ಭೀರ ಕುದುರೆಯನೇರಿ ಮೆರೆವನೆ 1
ಅನಿಮಿಷ ಮಂದರೋದ್ಧರಣ - ನೀನಾ - |
ವನಗಪಂಚಾನನವದನ - ವಾ - |
ಮನ ದಾನವರ ಕೊಯ್ವ ಕದನ - ಹೀನ - |
ದನುಜರಾವಣ ಸಂಹರಣ ||
ಧೇನುಕಾಸುರ ಶಕಟಮರ್ದನ |
ಜ್ಞಾನದಾನ ವಿಡಂಬನಾನಕ |
ಭಾನುಮಸ್ತಕ ನೀಲವರಕರ |
ದೀನಜನಸಂತ್ರಾಣ ನಿಪುಣನೆ 2
ಮಚ್ಛಕಚ್ಛಪ ಸ್ವಚ್ಛಕಿರನೆ - ಬಲು - |
ಅಚ್ಚ ಶಿಶುಮೊರೆ ಕೇಳಿದವನೆ ||
ಸ್ವೇಚ್ಛೆಯ ವಟು ಪರಶುಕರನೆ - ರಾಮ - |
ವತ್ಸಾಸುರನ ವಧಿಸಿದವನೆ ||
ತುಚ್ಛ ಜನರಿಗೆ ಕಪಟಕಾರಣ |
ಹೆಚ್ಚಿನಶ್ವದ ಮೇಲೆ ಹೊಳೆವನೆ |
ಮೆಚ್ಚಿ ಪುರಂದರ ವಿಠಲನ ಪರ - |
ಮಾಚ್ಯುತದ ಪದವೀವ ದೇವನೆ 3


ನೆನೆವೆನು ಅನುದಿನ ನಿಮ್ಮ nenevenu anudina nimma


ನೆನೆವೆನು ಅನುದಿನ ನಿಮ್ಮ ಮಹಿಮೆಯನು-ಮಧ್ವರಾಯಾ |
ಸನಕಾದಿ ಮುನಿವೃಂದ ಸೇವಿತ ಪಾದಾಬ್ಜ-ಮಧ್ವರಾಯಾ ಪ
ಕಲಿಮಲದಿ ಙÁ್ಞನ ಕಲುಷಿತವಾಗಲು ಮಧ್ವರಾಯಾ |
ನಳಿನಾಕ್ಷನಾಜ್ಞೆಯಿಂದಿಳೆಯೊಳಗುದಿಸಿದೆ-ಮಧ್ವರಾಯಾ 1
ಗೋವಿತ್ತ ವಿಪ್ರಗೆ ನಿರುತ ಮೋಕ್ಷವನಿತ್ತ-ಮಧ್ವರಾಯಾ |
ಜೀವೇಶರೊಂದೆಂಬ ಮತವ ಭೇದಿಸಿದೆ-ಮಧ್ವರಾಯಾ 2
ಸೂತ್ರಾರ್ಥಂಗಳನೆಲ್ಲ ವೇತೃಗಳಿಗೆ ತಿಳಿಸಿ-ಮಧ್ವರಾಯಾ |
ಶಾಸ್ತ್ರದ ತಾತ್ಪರ್ಯ ಪ್ರಕರಣ ರಚಿಸಿದೆ-ಮಧ್ವರಾಯಾ 3
ಸುಜನರ ಹೃದಯದಿ ಸೇರಿದ್ದ ತಮಸಿಗೆ-ಮಧ್ವರಾಯಾ |
ನಿಜ ಙÁ್ಞನ ರವಿಯಂತೆ ಕಿರಣವ ಹರಡಿದೆ-ಮಧ್ವರಾಯಾ 4
ವ್ಯಾಸದೇವರಿಗಭಿವಂದಿಸಿ ಬದರಿಯಲಿ-ಮಧ್ವರಾಯಾ ||
ಶ್ರೀಶಪುರಂದರವಿಠಲ ದಾಸನಾದೆ-ಮಧ್ವರಾಯಾ 5


ನೆನೆಯಿರೊ ಭಕುತ ಜನರು-ಅನುದಿನವೂ neneyaro bhakyta janaru


ನೆನೆಯಿರೊ ಭಕುತ ಜನರು-ಅನುದಿನವೂ
ನೆನೆಯಿರೊ ಭಕುತ ಜನರುಗಳು ಪ
ಘನಮಹಿಮನ ಸೇವೆಯ ಮಾಡಿದರಾ
ಮನದಲಿ ನೆನೆದ ಅಭೀಷ್ಟವೀವ ಹನುಮಂತ ಅ.ಪ
ಒಂದು ಯುಗದಿ ಹನುಮಂತಾವತಾರನಾಗಿ
ಬಂದು ನೆರೆದಯೋಧ್ಯಾಪುರಕಾ ||
ಬಂದ ಧೀರನ ನೋಡಿ ಸುಜನರೆಲ್ಲ-ನಂದದಿಂದಲಿ ಪಾಡಿ 1
ವಾಯು ಕುಮಾರಕ ದ್ವಾಪರದಲಿ ಭೀಮ-
ರಾಯನೆಂದೆನಿಸಿದ ಕೌರವ ಬಲದಿ ||
ನಾಯಕನಾಗಿ ಬಂದ ದುಃಶಾಸನ-ಕಾಯವಳಿದು ನಿಂದ2
ಕಾಯಜಪಿತನ ಮುಂದೆ ಕೌರವರ ತಂದು ರಾಜ-
ಸೂಯಯಾಗವ ಮಾಡಿದ ಬಲವಂತ ||
ರಾಯರಾಯರ ಧೀರ-ಹನುಮಂತ-ಪ್ರಿಯ ಜನ ಮಂದಾರ3
ಗುರು ಮಧ್ವಮುನಿಯಾಗಿ ಹರಿಗತಿಪ್ರಿಯನಾಗಿ-
ಕರುಣಾಕರನಾಗಿ ಶರಣರ ಪೊರೆವ ||
ಮೆರೆವ ಶ್ರೀ ಹನುಮಂತನ-ದೇವನ ಸ್ಮರಿಸಿರೊ ಗುಣವಂತನ 4
ಲಂಕಾಪಟ್ಟಣದ ಸಮೀಪ ಸಮುದ್ರ ದಾಟಿ
ಪಂಕಜನಾಭ ಶ್ರೀ ಪುರಂದರವಿಠಲನ
ಲೆಂಕ ರಾವಣನ ಗೆದ್ದ-ಈ ಹನುಮಂತ-ಪಂಕಜಮುಖಿಯ ಕಂಡ 5


ನೆಚ್ಚಿದಿರೋ ಪ್ರಾಣಿ ಸಂಸಾರ necchadiro prani sansara


ನೆಚ್ಚಿದಿರೋ ಪ್ರಾಣಿ ಸಂಸಾರ ಸ್ಥಿರವೆಂದು
ಹುಚ್ಚು ಬುದ್ದಿಯಲಿ ನೀ ಕೆಡಬೇಡ ಪ.
ಎಚ್ಚರಿತುಕೊಂಡು ಧರ್ಮದಿ ನಡೆ ಕಣ್ಣನು
ಮುಚ್ಚಿದ ಮೇಲುಂಟೆ - ನರಜನ್ಮ ಸ್ಥಿರವಲ್ಲ ಅಪ
ಅಷ್ಟಕಂಬವನಿಕ್ಕಿ ತಾಕದುಪ್ಪರಿಗೆಯ
ಕಟ್ಟಿದ ಮನೆ ಇದ್ದಂತಿಹುದು
ಹೊಟ್ಟೆತುಂಬ ಉಣದೆ ಧನವ ಗಳಿಸಿ - ಬ
ಚ್ಚಿಟ್ಟಲ್ಲಿರದೆ ಸಂಗಡ ಬಾಹೋದಲ್ಲ 1
ಅತಿ ಪ್ರೀತಿಯಿಂದ ಮದುವೆಯಾದ ಮೋಹದ
ಸತಿ ತನ್ನ ಮರಣದ ಕಾಲಕ್ಕೆ
ಗತಿಯಾವುದೆನುತಲೆ ಮರುಗಿದಪ್ಪಳಲ್ಲದೆ
ಜತೆಯಾಗಿ ನಿನ್ನ ಸಂಗಡ ಬಾಹಳಲ್ಲ 2
ಒಂದೊಂದು ಪರಿಯ ಬುಧ್ಧಿಯ ಪೇಳಿ ಸಲುಹಿದ
ಕಂದ ನಿನ್ನಾವಸಾನ ಕಾಲಕೆ
ಮುಂದೇನು ಸಂಸಾರ ನಡೆಸಲುಪಾಯವೇ
ನೆಂದು ಚಿಂತಿಸುವ ಸಂಗಡ ಬಾಹನಲ್ಲ 3
ನಾಟರಿಷ್ಟರು ಬಂಧು - ಬಳಗವು ಹರಿ ಕೊಟ್ಟು
ದುಂಟಾದರೆ ಬಂದು ಉಣ್ಣುವರು
ಕಂತಕ ಬಂದರೆ ಹೊತ್ತು ಕಾಷ್ಠದೊಳಿಟ್ಟು
ಕಂತಿಯ ತಂದೊಟ್ಟಿ ಸುಡುವರು ಕಾಣೊ 4
ಇಂತಿದು ಒಂದು ಪ್ರಯೋಜನ ನಿನಗಿಲ್ಲ
ಅಂತ್ಯಕಾಲಕ್ಕೆ ಸಂಗಡ ಬಾಹುದು
ಕಂತುಜನಕ ನಮ್ಮ ಪುರಂದರವಿಠಲನ
ಸಂತತ ಧ್ಯಾನದೊಳಿರು ಕಾಣೋ ಮನುಜಾ 5


ನೆಚ್ಚಬೆÉೀಡ ಭಾಗ್ಯವನು necchabeda bhagyavanu


ನೆಚ್ಚಬೆÉೀಡ ಭಾಗ್ಯವನು ಹುಟ್ಟುಗೊಂಡ ಮನುಜಾ
ವೆಚ್ಚವಾಗಿ ಹೋಗುವುದು ಏಸೊಂದು ಬಗೆಯಲಿ ಪ.
ಮುತ್ತು - ಮಾಣಿಕ - ನವರತ್ನದ ಗದ್ದುಗೆಯು
ಎತ್ತ ನೋಡಲು ಸಿರಿಕೋ ಎನುತಲಿ
ಸತ್ಯ ಹರಿಶ್ಚಂದ್ರ ಮತ್ತೆ ಸುಡುಗಾಡಿನಲ್ಲಿ
ಎತ್ತುವ ಹಣೆಯಕ್ಕಿ ಹಾಗದ ಕಾಸ 1
ದೇವತೆಗಳ ಕೈಯ ಸೇವೆಯ ಕೊಳುತಿರ್ದ
ರಾವಣನ ಬದುಕು ಮತ್ತೇನಾಯಿತು?
ಜೀವದ ಪರಿಯರಿತು ನಾವು ದೊರೆಯೆಂಬುವುದೆ
ಸಾವಿನ ಮನೆಹೊಕ್ಕು ಸಾಹಸ ಪಡಲೇಕೆ 2
ಹದಿನೆಂಟುಕೋಟಿ ಧನ ಉದಯಕೆ ಬರುತಿರಲು
ಒದಗಿತೆ ಆ ರಾಶಿ ದಿನ ಕರ್ಣಗೆ ?
ತುದಿ ಮಧ್ಯಾಹ್ನಕ್ಕೆ ದರಿದ್ರನೆನಿಸುವ
ಇದರಿಂದ ಕಡೆಗಂಡರಾರು ಜಗದೊಳಗೆ ? 3
ಬೆಳ್ಳಿಯ ಗಿಣಿಲು ಬಂಗಾರದ ಹರಿವಾಣ
ಕುಳಿತಲ್ಲಿ ಕನಕದ ರಾಶಿಗಳು
ಗಳಿಗೆಗೆ ಈ ಭಾಗ್ಯ ಕಾಳಬೆಳುದಿಂಗಳು
ಉಳಿದವು ನಾ ಕಾಣೆ ಚಿರಲಕ್ಷ್ಮಿಯೆನಲು 4
ಇಂತು ಈ ಪರಿಯಲನಂತರು ಹೋದರು
ಎಂತು ಪೇಳಲಿ ಅವರ ಪೆಸರುಗಳ ?
ಚಿಂತಾಯತ ಶ್ರೀ ಪುರಂದರವಿಠಲನ
ಸಂತತ ಪಾದಕಮಲವ ಭಜಿಸೊ ಮನುಜಾ 5


ನೆಚ್ಚದಿರೀ ಭಾಗ್ಯ ಆರಿಗೂ ಸ್ಥಿರವಲ್ಲ necchadiru bhagya


ನೆಚ್ಚದಿರೀ ಭಾಗ್ಯ ಆರಿಗೂ ಸ್ಥಿರವಲ್ಲ
ನೆಚ್ಚದಿರೆಚ್ಚರಿಕೆ
ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕೆ
ಮೆಚ್ಚು ಕೇಳೆಚ್ಚರಿಕೆ ಪ.
ಪೊಡವಿಪರೊಲೂಮೆ ಸುಸ್ಥಿರವೆಂದು ಗರ್ವದಿ
ನೆಡೆಯದಿರೆಚ್ಚರಿಕೆ
ಕೊಡವನಂಧಕ ಪೊತ್ತು ನಡೆವಂತೆ ಅಧಿಕಾರ
ಕಡೆಉಒಲ್ಲ ಎಚ್ಚರಿಕೆ
ಕಡುಚಪಲನು ತಾನೆಂದು ಪರರವ
ಗಡಿ ಸದಿರೆಚ್ಚರಿಕೆ
ಬಡವರೆಡರ ಲಾಲಿಸದೆಮುಂದಕ್ಕಿ ಹೆಚ್ಚು
ಇಡಬೇಡವೆಚ್ಚರಿಕೆ 1
ದೊರೆಗಳ ಒಲವಲಂಯಂತೆಂದಲ್ಲರೊಳು ಹಗೆ
ತರವಲ್ಲ ಎಚ್ಚರಿಕೆ
ಉರಗನ ಮುತ್ತಿ ಕಟ್ಟಿರುವೆಯು ಕೊರೆದಂಥ
ತೆರನಪ್ಪುದೆಚ್ಚರಿಕೆ
ಗುರುಹಿರಿಯರ ಕಂಡು ಚರಣಕೆ ಶಿರಬಾಗಿ
ನಡೆಯುತಿರೆಚ್ಚರಿಕೆ
ಸಿರಿಯೆಂಬ ಸೊಡರಿಗೆ ಮಾನ್ಯರ ಅವಮಾನ
ಬಿರುಗಾಳಿ ಎಚ್ಚರಿಕೆ 2
ಲೋಕಾಪವಾದಕೆ ಅಂಜಿ ನಡೆಯುವುದು ವಿ
ವೇಕ ಕೇಳಚ್ಚರಿಕೆ
ನಾಕೇಂದ್ರನಾದರೂ ಬಿಡದಪಕೀರ್ತಿ ಪ
ರಾಕು ಕೇಳೆಚ್ಚರಿಕೆ
ಕಾಕು ಮನುಜರ ಕೊಂಡೆಯ ಕೇಳೀ ಕೋಪದು
ದ್ರೇಕ ಬೇಡೆಚ್ಚರಿಕೆ
ಭೂಕಾಂತೆ ನಡು - ನಡುಗುವಳು ನಿಷ್ಠುರವಾದ
ವಾಕು ಕೇಳೆಚ್ಚರಿಕೆ 3
ನಳ - ಮಾಂಧಾತರೆಂಬವರೇನಾದರು
ತಿಳಿದು ನೋಡೆಚ್ಚರಿಕೆ
ಅಳಿವುದು ಈ ದೇಹ ಉಳಿವೂದೆಂದೇ ಕೀರ್ತಿ
ಇಳೆಯೊಳಗೆಚ್ಚರಿಕೆ
ಅಳಲಿಸಿ ಪರರನು ಗಳಿಸಿದಂಥ ಹೊನ್ನು
ಉಳಿಯದು ಎಚ್ಚರಿಕೆ
ಉಳಿದಲ್ಪಕಾಲದಿ ಬಡವರಾದವರನು
ಹಳಿಯದಿರೆಚ್ಚರಿಕೆ 4
ಪರಸತಿ - ಪರಧನಕಳುಪಲು ಸಿರಿಮೊಗ
ದಿರುಹುವಳಚ್ಚರಿಕೆ
ನೆರೆ ಛಿದ್ರಕುಂಭದ ನೀರಿನಂತಾಯುಷ್ಯ
ಸರಿಯುವುದೆಚ್ಚರಿಕೆ
ಬರುವ ಹಾನಿವೃದ್ಧಿ ತನ್ನ ಕಾಲದ ಮೀರ
ಲರಿಯದು ಎಚ್ಚರಿಕೆ
ವರದ ಪುರಂದರವಿಠಲರಾಯನ
ಮರೆಯದಿರೆಚ್ಚರಿಕೆ 5


ನಾರಾಯಣನೆಂಬ ನಾಮವ ನೇಮದಿ ನೆನೆಯುತಿರೆಚ್ಚರಿಕೆ | naarayananemba naamava


ನಾರಾಯಣನೆಂಬ ನಾಮವ ನೇಮದಿ ನೆನೆಯುತಿರೆಚ್ಚರಿಕೆ |
ನೀರ ಮೇಲಿನ ಗುಳ್ಳೆ ನಡೆಯೆಂಬ ಡಿಂಭವ ನಂಬದಿರೆಚ್ಚರಿಕೆ ಪ.
ಪರರು ಮಾಡಿದ ಪಾತಕವ ನಾಲಿಗೆಯೊಳುಚ್ಚರಿಸದಿರೆಚ್ಚರಿಕೆ
ಗುರು ಹಿರಿಯರ ಸೇವೆ ಮಾಡದೆ ಉದರವ ಪೊರೆಯದಿರೆಚ್ಚರಿಕೆ ||
ಹರಿದಿನದುಪವಾಸ ಇರುಳ ಜಾಗರವ ನೀ ಮರೆಯದಿರೆಚ್ಚರಿಕೆ
ನರಹರಿಯಂಘ್ರಿಯ ಸ್ಮರಿಸದೆ ನರಸ್ತುತಿ ತರವಲ್ಲ ಎಚ್ಚರಿಕೆ 1
ಹೀನ ಮಾನನಿಯರ ಧ್ಯಾನಕಾನನದೊಳಿಳಿಯದಿರೆಚ್ಚರಿಕೆ
ನಾನೆಂಬ ಅಹಂಕಾರ ಮಾಡಿ ನರಕದೊಳು ನರಳದಿರೆಚ್ಚರಿಕೆ ||
ಜಾಹ್ನವಿ ಸ್ನಾನ ಸಂಧ್ಯಾನ ಧಾನ್ಯವ ಸುಜ್ಞಾನ ಮುಂದೆ e್ಞÁಚ್ಚರಿಕೆ
ಜಾನಕಿರಮಣನ ಧ್ಯಾನವೆ ಧರ್ಮ ಸಂತಾನ ಮುಂದೆಚ್ಚರಿಕೆ 2
ಮಡದಿ ಮಕ್ಕಳೆಂಬ ಕಡುಮೋಹಕೆ ಸಿಲುಕಿ ಕೆಡಬೇಡವೆಚ್ಚರಿಕೆ
ನಡೆವಾಗ ನುಡಿವಾಗ ಗಿಡವೆಲ್ಲ ನೆಂಟರು ಕಡೆಗಿಲ್ಲ ಎಚ್ಚರಿಕೆ ||
ಕೊಡುಗೈಯ ಮಾಡದೆ ಮಡುಗಿದ ಧನ ಸಂಗಡ ಬಾರದೆಚ್ಚರಿಕೆ |
ಒಡೆಯ ಶ್ರೀ ಪುರಂದರವಿಠಲನ ನೆನೆದು ನೀ ಕಡೆಹಾಯೇ ಎಚ್ಚರಿಕೆ3


ನೀನೊಲಿದರೇನಾಹುದು - ಶ್ರೀಹರಿಯೆ neenolidarenahudo shri hariya


ನೀನೊಲಿದರೇನಾಹುದು - ಶ್ರೀಹರಿಯೆ - |
ಮುನಿಯೆ ನೀನೆಂತಾಹುದು ಪ
ವಾಲಿ ಬಲ್ಲಿದ ವಾನರರಿಗೆ - ಶ್ರೀಹರಿಯೆ
ನೀ ಮುನಿದು ಎಚ್ಚವನ ಕೊಂದೆ |
ಮೇಲೆ ಕಿಷ್ಕಿಂಧೆಯ ಪುರದ ಸುಗ್ರೀವನ
ವಾಲಿಯ ಪದದಲ್ಲಿಟ್ಟೆ 1
ಮೂರು ಲೋಕವನಾಳುವ - ರಾವಣನ
ಊರ ಬೂದಿಯ ಮಾಡಿದೆ |
ವಾರಿಧಿಯ ಒಳಗಿಪ್ಪ ಲಂಕೆಯ ವಿಭೀಷಣಗೆ
ಸ್ಥಿರಪಟ್ಟವನು ಕಟ್ಟಿದೆ 2
ಪನ್ನಗವನುದ್ಧರಿಸಿದೆ - ಕೌರವರ -
ಹನ್ನೊಂದಕ್ಷೋಣಿ ಬಲವ |
ಛಿನ್ನಛಿದ್ರವ ಮಾಡಿ ಅವರನ್ನು ಮಡುಹಿದೆ
ಪಾಂಡವರ ಪದವಿಯಲಿಟ್ಟೆ 3
ಹಿರಣ್ಯಕನು ಸುತನ ಕೊಲಲು - ಆಗ ನೀ
ಕರುಣದಿಂದೋಡಿ ಬಂದೆ |
ಮರಣವೈದಿಸಿ ಪಿತನ ತರಳ ಪ್ರಹ್ಲಾದನನು
ಶರಣರೊಳು ಸರಿಮಾಡಿದೆ 4
ಭಾಷೆ ಪಾಲಿಪನೆನುತಲಿ - ನಾ ಬಹಳ
ಆಸೆ ಮಾಡುತಲಿ ಬಂದೆ |
ಶೇಷಗಿರಿವಾಸ ಪುರಂದರವಿಠಲ ದಾರಿದ್ರ್ಯ
ನಾಶಮಾಡೆನ್ನ ಸಲಹೊ5


ನೀನೇಕೊ ನಿನ್ನ ಹಂಗೇಕೊ neeneko ninna hangeko


ನೀನೇಕೊ ನಿನ್ನ ಹಂಗೇಕೊ - ನಿನ್ನ -
ನಾಮದ ಬಲವೆನಗಿದ್ದರೆ ಸಾಕೊ ಪ.
ಆ ಮರ ಈ ಮರವೆಂದೆನ್ನುತಿರೆ ರಾಮ - |
ನಾಮವೆ ವ್ಯಾಧನ ಮುನಿಪನ ಮಾಡಿತು 1
ನಾರಾಯಣೆನ್ನದೆ ನಾರಗನೆನ್ನಲು |
ಘೋರ ಪಾತಕಿಯನು ನಾಮವೆ ಕಾಯ್ದಿತೊ 2
ತಂದೆ ಪ್ರಹ್ಲಾದನ ಬಾಧೆಯ ಪಡಿಸೆ - ಗೋ |
ವಿಂದನೆಂಬ ಸಿರಿನಾಮವೆ ಕಾಯ್ದಿತೊ 3
ಉತ್ತರೆಯು ಗರ್ಭದಿ ಸುತ್ತಲಸ್ತ್ರವಿರೆ |
ಚಿತ್ತಜಪಿತ ನಿನ್ನ ನಾಮವೆ ಕಾಯ್ದಿತೊ 4
ಕರಿಮಕರಿಗೆ ಸಿಲ್ಕಿ ಮೊರೆ ಇಡುತಿರುವಾಗ |
ಪರಮಪುರುಷ ಹರಿನಾಮವೆ ಕಾಯ್ದಿತೊ 5
ನಾರಿಯನೆಳತಂದು ಸೀರೆ ಸೆಳೆಯುತಿರೆ |
ದ್ವಾರಕಾಪತಿ ನಿನ್ನ ನಾಮವೆ ಕಾಯ್ದಿತೊ 6
ಹಸುಳೆ ಧ್ರುವರಾಯನು ಅಡವಿಗೆ ಪೋಪಾಗ |
ವಸುದೇವಸುತ ನಿನ್ನ ನಾಮವೆ ಕಾಯ್ದಿತೊ 7
ನಿನ್ನ ನಾಮಕೆ ಸರಿಯಾವುದ ಕಾಣೆನೊ
ಪನ್ನಗಶಯನ ಶ್ರೀ ಪುರಂದರವಿಠಲ 8


ನೀನೇ ದಯಾಳು ನಿರ್ಮಲಚಿತ್ತ neene dayalu nirmala


ನೀನೇ ದಯಾಳು ನಿರ್ಮಲಚಿತ್ತ ಗೋವಿಂದ
ನಿಗಮ ಗೋಚರ ಮುಕುಂದ ಪ
e್ಞÁನಿಗಳರಸು ನೀನಲ್ಲದೆ ಜಗಕಿನ್ನು
ಮಾನದಿಂದಲಿ ಕಾವ ದೊರೆಗಳ ನಾ ಕಾಣೆ ಅ.ಪ
ಬಗೆಬಗೆಯಲಿ ನಿನ್ನ ಸ್ತುತಿಪೆನೊ ನಗಧರ
ಖಗಪತಿವಾಹನನೆ ||
ಮಗುವಿನ ಮಾತೆಂದು ನಗುತ ಕೇಳುತ ನೀನು
ಬೇಗದಿಂದಲಿ ಕಾಯೋ ಸಾಗರಶಯನನೆ 1
ದಾನವಾಂತಕ ದೀನ ಜನ ಮಂದಾರನೆ
ಧ್ಯಾನಿಪರ ಮನದೊಳು ಸಂಚರನೆ ||
ಮೌನನಾದೆನು ನಿನ್ನ ಧ್ಯಾನಾನಂದದಿ ಈಗ
ಸಾನುರಾಗದಿ ಕಾಯೊ ಸನಕಾದಿ ವಂದ್ಯನೆ 2
ಮಂದರೋದ್ಧರ ಅರವಿಂದ ಲೋಚನ ನಿನ್ನ ||
ಕಂದನೆಂದೆನಿಸೂ ಎನ್ನ ||
ಸಂದೇಹವೇತಕೆ ಸ್ವಾಮಿ ಮುಕುಂದನೆ
ಬಂದೆನ್ನ ಕಾಯೊ ಶ್ರೀ ಪುರಂದರ ವಿಠಲನೆ 3


ನೀನೇ ಅನಾಥ ಬಂಧು, neene anath bandhu


ನೀನೇ ಅನಾಥ ಬಂಧು, ಕಾರುಣ್ಯ ಸಿಂಧು
ನೀನೇ ಅನಾಥ ಬಂಧು ಪ
ಪತಿಗಳೈವರಿದ್ದರೇನು ಸತಿಯ ಸಮಯಕ್ಕೊದಗಲಿಲ್ಲ ||
ಗತಿ ನೀನೆಂದು ಮುಕುಂದನೆ ನೆನೆದರೆ
ಅತಿ ಚಮತ್ಕಾರದಿಂದೊದಗಿದೆ ಕೃಷ್ಣ 1
ಮದಗಜವೆಲ್ಲ ಇದ್ದರೇನು
ಅದರ ಸಮಯಕ್ಕೊದಗಲಿಲ್ಲ ||
ಮದನನಯ್ಯ ಮಧುಸೂದನನೆಂದರೆ
ಒದಗಿದೆಯೋ ತಡಮಾಡದೆ ಕೃಷ್ಣ 2
ಶಿಲೆಯ ಕಾಯ ಕುಲಕ್ಕೆ ತಂದೆ
ಬಲಿಯೆನ್ನದೆ ಸತ್ಪದವಿಯನಿತ್ತೆ ||
ಇಳೆಯೊಳು ನಿನ್ನಯ ದಾಸರ ಸಲಹುವಚೆಲುವ ಮೂರುತಿ ಶ್ರೀ ಪುರಂದರ ವಿಠಲ 3


ನೀನೇ ಅಚ್ಚುತ ನೀನೇ ಮಾಧವ neene achyuta neene madhava


ನೀನೇ ಅಚ್ಚುತ ನೀನೇ ಮಾಧವ |
ಹರಿಗೋವಿಂದನು ನೀನೆ ||
ನೀನೆಗತಿಯೆಂದು ನಂಬಿದ ದಾಸಗೆ |
ಅಭಯ ಕೊಟ್ಟಾತನು ನೀನೆ ಪ

ಜಲದೊಳು ಪೊಕ್ಕು ಮೈನಡುಗಿಸಿ ಭಾರವ |
ತಳೆದಾತನು ನೀನೆ ||
ಇಳೆಯ ಕದ್ದ ಸುರನ ದಾಡೆಯಿಂದ ಸೀಳಿ ಕಂಬ |
ದೊಳು ಉದ್ಭವಿಸಿದೆ ನೀನೆ 1
ಬಲಿಯ ಪಾತಾಳಕೆ ತುಳಿದೆಯೊ ನೀನು ಕೊ-|
ಡಲಿಯ ಪಿಡಿದವನು ನೀನೆ ||
ಜಲಧಿಯ ದಾಟಿ-ಅಸುರರ ಕಡಿದು |
ಲಲನೆಯ ತಂದಾತ ನೀನೆ 2
ಗೊಲ್ಲರ ಮನೆಯಲಿ ಬೆಣ್ಣೆಯ ಕದ್ದು |
ಕಳ್ಳನೆನಿಸಿದವ ನೀನೆ ||
ಬಲ್ಲಿದ ತ್ರಿಪುರದಿ ಬತ್ತಲೆ ನಿಂತು |
ಒಳ್ಳೆ ಹಯವ ಹತ್ತಿದೆ ನೀನೆ 3
ಪಾಂಡವರಿಗತಿ ಪ್ರಿಯನೆಂದೆನಿಸಿದ |
ಪುಂಡರೀಕಾಕ್ಷನು ನೀನೆ |
ಪುಂಡಲೀಕ ಪುರುಷೋತ್ತಮ ಮೂರುತಿ |
ಪುರಂದರವಿಠಲನು ನೀನೆ 4


ನೀನೆ ಬಲ್ಲಿದನೊ - ಹರಿ ನಿನ್ನ neene ballidaro Hari ninna


ನೀನೆ ಬಲ್ಲಿದನೊ - ಹರಿ ನಿನ್ನ- |ದಾಸರ ಬಲ್ಲಿದರೊ ಪನಾನಾ ತರದಿ ನಿಧಾನಿಸಿ ನೋಡಲುನೀನೆ ಭಕ್ತಾಧೀನನಾದ ಮೇಲೆ ಅ.ಪಜಲಜಭವಾಂಡದ ಒಡೆಯನೆಂದೆನಿಸಲು |ಬಲುಬಲು ದೊಡ್ಡವನಹುದಹುದಾದಡೆ ||ಅಲಸದೆ ಹಗಲಿರುಳೆನ್ನದೆ ಅನುದಿನ |ಬಲಿಯ ಮನೆಯ ಬಾಗಿಲ ಕಾಯ್ದ ಮೇಲೆ 1
ಖ್ಯಾತಿಯಿಂದ ಪುರುಹೂತ ಸಹಿತ ಸುರ |ವ್ರಾತವು ನಿನ್ನನು ಒತ್ತಿ ಓಲೈಸಲು ||ಭೂತಳದೊಳು ಸಂಪ್ರೀತಿಗೆ ಸಿಲುಕಿ ನೀ |ಪಾರ್ಥನ ರಥಕೆ ಸೂತನಾದ ಮೇಲೆ 2
ಪರಮಪುರುಷ ಪರಬೊಮ್ಮ ನೀನೆನುತಲಿ |ನಿರುತದಿ ಶ್ರೂತಿಯು ಕೊಂಡಾಡುತಿರೆ ||ವರಪಾಂಡವರರ ಮನೆಯೊಳು ಊಳಿಗ |ಕರೆಕರೆದಲ್ಲಿಗೆ ಪೋದಪೋದ ಮೇಲೆ 3
ಧುರದಲಿ ಪಣೆಯನೊಡೆದ ಭೀಷ್ಮನ ಸಂ- |ಹರಿಪೆನೆನುತ ಚಕ್ರವ ಪಿಡಿಯೆ ||ಹರಿ ನಿನ್ನ ಕರುಣದ ಜೋಡು ತೊಟ್ಟಿರಲವ- |ನಿರವ ಕಾಣುತ ಸುಮ್ಮನೆ ತಿರುಗಿದ ಮೇಲೆ 4
ತರಳನು ಕರೆಯಲು ಭರದಿ ಕಂಬದಿ ಬಂದು |ನರಮೃಗರೂಪ ಭಕ್ತರ ತೆತ್ತಿಗನೆ ||ವರದ ಪುರಂದರವಿಠಲರಾಯ ನಿನ |ಸ್ಮರಿಪರ ಮನದಲಿ ಸೆರೆಯು ಸಿಕ್ಕಿದ ಮೇಲೆ 5


ನೀನೆ ದಯಾಸಂಪನ್ನನೊ neene dayasampannano


ನೀನೆ ದಯಾಸಂಪನ್ನನೊ - ಕಾವೇರಿ ರಂಗ
ನೀನೆ ಬ್ರಹ್ಮಾದಿವಂದ್ಯನೊ ಪ
ಬಂಧುಗಳೆಲ್ಲರ ಮುಂದಾ ದ್ರುಪದನ
ನಂದನೆಯೆಳತಂದು ಸೀರೆಯ ಸೆಳೆಯಲು ||
ನೊಂದು ಕೃಷ್ಣ ಸಲಹೆಂದರೆ ಅಕ್ಷಯ
ಕುಂದದಲಿತ್ತ ಮುಕುಂದನು ನೀನೇ 1
ನಿಂದಿತ ಕರ್ಮಗಳೊಂದು ಬಿಡದೆ ಬೇ-
ಕೆಂದು ಮಾಡಿದನಂದಜಮಿಳನು ||
ಕಂದಗೆ ನಾರಗನೆಂದರೆ ಮುಕುತಿಯ
ಕುಂದದಲಿತ್ತ ಮುಕುಂದನು ನೀನೇ 2
ಮತ್ತಗಜವನೆಗಳೊತ್ತಿ ಪಿಡಿಯೆ ಬಲು
ಒತ್ತಿ ರಭಸದಿ ಬಿತ್ತರಿಸಲು ಗುಣ ||
ಭೃತ್ಯವರದ ಶ್ರೀ ಪುರಂದರವಿಠಲ
ಹಸ್ತಿಗೊಲಿದ ಪರವಸ್ತುವು ನೀನೇ 3


ನೀನೆ ಗತಿ ನೀನೆ ಮತಿ ನೀನೆ ಸ್ವಾಮಿ neene gati neene mati


ನೀನೆ ಗತಿ ನೀನೆ ಮತಿ ನೀನೆ ಸ್ವಾಮಿ
ನೀನಲ್ಲದನ್ಯತ್ರ ದೈವಗಳ ನಾನರಿಯೆ ಪ
ನಿನ್ನ ಪಾದಾರವಿಂದದ ಸೇವೆಯನು ಮಾಡಿ
ನಿನ್ನ ಧ್ಯಾನದಲಿರುವ ಹಾಗೆ ಮಾಡು ||
ನಿನ್ನ ದಾಸರ ಸಂಗದಿಂದ ದೂರಿಡದೆನಗೆ
ಸನ್ಮಾರ್ಗವಿಡಿಸೊ ಜಗದೀಶ ಅಘನಾಶ 1
ಕಮಲನಾಭಿಯೊಳು ಬೊಮ್ಮರ ಪುಟ್ಟಿಸಿದೆ ಹರಿಯೆ
ಕಮಲಸಖ ಕೋಟಿ ಪ್ರಕಾಶ ಈಶ
ಕಮಲಕರ ತಳದಿ ಅಭಯವನಿತ್ತು ಭಕುತರಿಗೆ
ಕಮಲಾಕ್ಷನೆನಿಸಿದೆಯೊ ಕಮಲಾರಮಣನೆ 2
ಶಿಶುಪಾಲ ದಂತವಕ್ತ್ರರ ಶಿರವ ಭೇದಿಸಿದೆ
ಪಶುಪತಿಯ ಆಭರಣ ವೈರಿವಾಹನನೆ ||
ಅಸುರಕುಲ ಸಂಹರಿಸಿ ಭಕ್ತಜನರನು ಪೊರೆದೆ
ವಸುಧೇಶ ಸಿರಿ ಪುರಂದರ ವಿಠಲರಾಯಾ 3


ನೀನಾರವ ಪೇಳೆನ್ನ ಕಣ್ಣ ಮುಚ್ಚುವೆ neenarava pelanna kanna mucchuve


ನೀನಾರವ ಪೇಳೆನ್ನ ಕಣ್ಣ ಮುಚ್ಚುವೆ |
ಮೌನಗೊಂಡರಿಯದಂತಿಪ್ಪ ಮಗುವೆ ಪ
ಅತಿ ಚೆಲುವಿಗೆ ರತಿಪತಿಪಿತನೊ-ನೀ |
ಶ್ರುತಿ ಸಕಲಾನ್ವುಯ ಸನ್ನುತನೊ ||
ಚತುರ್ದಶ ಭುವನವನಾಳಿದನೋ-ನೀ |
ಶತ ತಪ್ಪುಗಳನೆಣಿಸಿದವನೊ?1
ವರಗೋಕುಲಕೊಪ್ಪವ ದೊರೆಯೊ-ನೀ |
ಕರಿವೈರಿಯ ಮದಪರಿಹಾರಿಯೊ ||
ಗಿರಿಯನುದ್ಧರಿಸಿದ ನಖರುಚಿಯೊ-ನೀ |
ಮುರದೈತ್ಯನ ಮಡುಹಿದ ಸಿರಿಯೊ? 2
ಮಂಗಳ ಶೋಭನ ಮಣಿಖಣಿಯೊ-ನೀ |
ಹಿಂಗದೆ ಸ್ತುತಿಪರ ಗತಿದಾನಿಯೊ-ಗೋ-||
ಪಾಂಗನೆಯರ ಪ್ರಾಣದ ಧನಿಯೊ-ನೀ |
ಸಿಂಗರ ಸೊಬಗಿನ ಶ್ರೀಪತಿಯೊ 3
ಆಪತ್ತಿಗೆ ನೆನೆವರ ಗೋಚರನೊ-ನೀ |
ಪಾಪಸಂಹಾರ ಪುರುಷೋತ್ತಮನೊ ||
ಚಾಪದಿಂದಸುರರ ಗೆಲಿದವನೊ-ಸಾಂ-|
ದೀಪನ ಮಗನ ತಂದಿತ್ತವನೊ? 4
ಬೆಸಗೊಂಡಳು ಗೋಪಿ ನಸುನಗುತ-ಆಗ |
ಯಶೋದೆಗೆ ಚತುರ್ಭುಜ ತೋರಿಸುತ ||
ಅಸುರಾರಿಯ ಕಂಡು ಮುದ್ದಿಸುತ ನೀ ||
ಶಿಶುವಲ್ಲ ಪುರಂದರವಿಠಲೆನುತ 5


ನೀಚ ಮಾನವರಿಗೆ ಸಿರಿ ಬಂದರೇನು neecha maanavarige siri bandarenu


ನೀಚ ಮಾನವರಿಗೆ ಸಿರಿ ಬಂದರೇನು
ಈಚಲ ಮರ ದಟ್ಟ ನೆರಳಾದರೇನು ಪ.
ನಾಚಿಕಿಲ್ಲದ ನರರು ಬಾಗಿದರೇನು
ಹೀಚಿನೊಳಿಹ ಫಲ ಹಣ್ಣಾದರೇನು ಅಪ
ಹೊಲೆಯರೊಳು ಪದುಮಿನಿ ಹೆಣ್ಣು ಹುಟ್ಟಿದÀರೇನು
ಮೊಲೆಯ ತೊರೆಯದ ನಾಯಿ ಈದರೇನು
ಕಳಹೀನ ಕಾಮಿನಿಗೆ ಕಾಂತಿ ಹೆಚ್ಚಿದರೇನು
ಬಿಲದೊಳಗೆ ಸರ್ಪ ಹೆಡೆಯೆತ್ತಿದರೇನು ? 1
ಕೋತಿಯ ಮೈಯೊಳು ಭಾಂಡ ತುಳಕಲೇನು
ಹೋತಿನ ಗಡ್ಡವು ಹಿರಿದಾದರೇನು
ಯಾತಕೂ ಬಾರದ ಬದುಕು ಬಾಳಿದ್ದರೇನು
ರೀತಿಯಿಲ್ಲದ ನೆರೆಯ ಸ್ನೇಹವಿನ್ನೇನು 2
ರಕ್ಷಣೆಯಿಲ್ಲದ ರಾಜ ರಾಜಿಸಲೇನು
ಭಿಕ್ಷೆ ಹುಟ್ಟದ ಊರು ತುಂಬಿದ್ದರೇನು
ಲಕ್ಷ್ಯವಿಲ್ಲದವಗೆ ಲಕ್ಷ್ಯ ಬಂದರೇನು
ಪಕ್ಷಪಾತವಿಲ್ಲದವನ ಅಶ್ರಯವಿನ್ನೇನು 3
ಫಣಿಯ ಮಸ್ತಕದ ಮೇಲೆ ಮಣಿಯ ಮಿಂತಲೇನು
ಉಣಿಸಿ ದಣಿಸದ ಧನಿಯಿದ್ದರೇನು
ಋಣಗೇಡಿ ಮಕ್ಕಳ ರಟ್ಟೆ ಬಲಿತರೇನು
ಕ್ಷಣಚಿತ್ತವಿಲ್ಲದವನ ಸ್ಮರಣೆಯು ಇನ್ನೇನು 4
ಸಾಕಲಾರದಾತನ ಸತಿಯ ಮೋಹವೇನು
ಜೊತೆ ಮಾಡದಾ ಹಣ ಗಳಿಸದರೇನು
ಕಾಕುಮಾನವರ ಸೇವೆ ಮಾಡಿದರೇನು
ಬೇಕೆಂದು ಭಜಿಸಿರೋ ಪುರಂದರವಿಠಲನ 5


ನೀ ದಯಾಪರನೊ, ನಿನ್ನವರ ಸಾಧನವೊ ? nee dayaparano ninnavara sadhanavo


ನೀ ದಯಾಪರನೊ, ನಿನ್ನವರ ಸಾಧನವೊ ? |
ಮುದ್ದು ಹಯವದನ ಪೇಳಿದನ ಪ.
ಮದಕರಿಯು ಸರಸಿಯೊಳು ಮಕರಿಬಾಧೆಗೆ ಸಿಲುಕಿ |
ಪದುಮಾಕ್ಷ ಪದುಮೇಶ ಪದುಮನಾಭ ||
ಪದುಮಸಂಭವನಯ್ಯ ಪಾಹಿ ಪಾಹಿ - ಯೆನಲು |
ಒದಗಿ ರಕ್ಷಿಸದೆ ತವ ದಯೆಯೊ, ಸಾಧನವೊ ? 1
ಅಂತ್ಯಜೆಯ ಸಹವಾಸದಲಿ ವಿಪ್ರವರನೊಬ್ಬ |
ಸಂತಸದಿಂದ ಬಹುಕಾಲ ಕಳೆದು ||
ಅಂತ್ಯಕಾಲಕೆ ತನ್ನ ಮಗನ ಕರೆಯಲು ಕಾಯ್ದೆ |
ಚಿಂತಾಯತನೆ, ವೈರಾಗ್ಯ ಸಾಧನವೊ ? 2
ಅವರವರ ಯೋಗ್ಯತೆಯನರಿತು ಪ್ರೇರಕನಾಗಿ |
ಅವರಿಂದ ನುಡಿಸಿ ನುಡಿನುಡಿಗೆ ಹಿಗ್ಗಿ ||
ಅವರಿಗೊಲಿದೆ ನಮ್ಮ ಪುರಂದರವಿಠಲ |
ಅವನೀಶ ನಿನ್ನ ದಯವೊ ಸಾಧನವೊ ? 3


ನೀ ಕೊಡೆ ನಾ ಬಿಡೆ nee kode naa bide


ನೀ ಕೊಡೆ ನಾ ಬಿಡೆ ಕೇಳಯ್ಯ-ಹರಿ-|
ಗೋಕುಲ ಪತಿ ಗೋವಿಂದಯ್ಯ ಪ
ನೋಡುವೆ ನಿನ್ನನು ಪಾಡುವೆ ಗುಣಗಳ |
ಕಾಡುವೆ ಬೇಡುವೆ ನಾಡೊಳಗೆ ||
ಮೋಡಿಯ ಬಿಡು ಕೊಡು ಮೊದಲಿಗೆ ಬಡ್ಡಿಯ |
ಕಾಡೊಳು ತುರುಗಳ ಕಾಯ್ದರಸನೆ ಹರಿ 1
ಎಂಟಕ್ಷರವಿವೆ ದ್ವಯಸಾಕ್ಷಿಗಳಿವೆ |
ಗಂಟಿಗೆ ಮೋಸವೆ ದಾಸರಿಗೆ ||
ಎಂಟುಂಟೆನಿಸುವೆ ಬಂಟರ ಬಾಯಲಿ |
ತುಂಟತನವ ಬಿಡು ತುಡುಗರರಸೆ 2
ಅಪ್ಪನೆ ಅಯ್ಯನೆ ಅಮರರಿಗೊಲಿದನೆ |
ಸರ್ಪನೆ ಮೇಲೆ ಮಲಗಿಪ್ಪವನೆ |
ಒಪ್ಪಿಸಿಕೊಟ್ಟರೆ ಪುರಂದರ ವಿಠಲನೆ |
ಒಪ್ಪವ ತೋರುವೆ ಒಡೆಯನಿಗೆ 3


ನಿಲ್ಲಬೇಕಯ್ಯಾ ನೀನು ಕೃಷ್ಣಯ್ಯಾ nillabekayya neenu


ನಿಲ್ಲಬೇಕಯ್ಯಾ ನೀನು ಕೃಷ್ಣಯ್ಯಾ
ನಿಲ್ಲಬೇಕಯ್ಯಾ ನೀನು ಪ
ನಿಲ್ಲಬೇಕಯ್ಯಾ ನೀ ಮಲ್ಲಮರ್ದನ ಸಿರಿ
ವಲ್ಲಭ ಎನ್ನ ಹೃದಯದಲಿ ಸತತ ಅ.ಪ
ಸುಪ್ಪಾಣಿ ಮುತ್ತಿಟ್ಟು ನೋಡುವೆ ನಿನ್ನ
ಚಪ್ಪಾಳಿ ತಟ್ಟುತ ನಾ ಪಾಡುವೆ ||
ಅಪ್ಪ ಶ್ರೀ ಕೃಷ್ಣ ನಿನ್ನನೆತ್ತಿ ಮುದ್ದಿಸಿಕೊಂಬೆ
ಸರ್ಪಶಯನ ಕೃಪೆ ಮಾಡೆಂದು ಬೇಡುವೆ 1
ಚೆಂದದ ಹಾಸಿಗೆ ಹಾಸುವೆ ಪುನಗು
ಗಂಧದ ಕಸ್ತೂರಿಯ ಪೂಸುವೆ ||
ತಂದು ಮುದದಿ ಮುತ್ತಿನ ಹಾರ ಹಾಕುವೆ
ಅಂದದಿಂದಲಿ ನಿನ್ನನೆತ್ತಿ ಮುದ್ದಿಸಿಕೊಂಬೆ 2
ನೀಲದ ಕಿರೀಟವನಿಡುವೆ ಬಲು
ಬಾಲಲೀಲೆಗಳನು ಪಾಡುವೆ ||
ಚೆಲ್ವ ಶ್ರೀ ಪುರಂದರ ವಿಟ್ಠಲರಾಯನೆ
ನಿಲ್ಲು ಎನ್ನ ಮನದಲಿ ಒಂದೇ ಗಳಿಗೆ 3


ನಿನ್ನನಾಶ್ರಯಿಸುವೆ - ನಿಗಮಗೋಚರ ನಿತ್ಯ ninnashriyisuve nigamagochara


ನಿನ್ನನಾಶ್ರಯಿಸುವೆ - ನಿಗಮಗೋಚರ ನಿತ್ಯ
ಬೆನ್ನ ಬಿಡದಲೆ ಕಾಯೊ ಮನದಿಷ್ಟವೀಯೋ ಪ
ಕುಂದಣದ ಆಶ್ರಯವು ನವರತ್ನಗಳಿಗೆಲ್ಲ
ಚಂದಿರನ ಆಶ್ರಯ ಚಕೋರಗಳಿಗೆ ||
ಕಂದರ್ಪನಾಶ್ರಯ ವಸಂತ ಕಾಲಕ್ಕೆ ಗೋ
ವಿಂದ ನಿನ್ನಾಶ್ರಯವು ಮರಣಕಾಲದೊಳು 1
ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವು
ಪುಣ್ಯನದಿಗಳು ಋಷಿಗಳಿಂಗೆ ಆಶ್ರಯವು ||
ಕಣ್ಣಿಲ್ಲದಾತನಿಗೆ ಕೈಗೋಲಿನಾಶ್ರಯವು
ಎನ್ನಿಷ್ಟ ಪಡೆಯುವರೆ ನಿನ್ನ ಆಶ್ರಯವು 2
ಪತಿವ್ರತಾವನಿತೆಗೆ ಪತಿಯೊಂದೆ ಆಶ್ರಯವು
ಯತಿಗಳಿಗನುಶ್ರುತದಿ ಪ್ರಣವದಾಶ್ರಯವು ||
ಮತಿವಂತನಿಗೆ ಹರಿ ಸ್ತುತಿಗಳೇ ಆಶ್ರಯವುಹಿತವಹುದು ಪುರಂದರವಿಠಲನಾಶ್ರಯವು 3


ನಿನ್ನ ಮಗನೇನೇ ಗೋಪಿ-ಗೋಪಮ್ಮ ninna maganene gopi


ನಿನ್ನ ಮಗನೇನೇ ಗೋಪಿ-ಗೋಪಮ್ಮ |
ನಿನ್ನ ಮಗನೇನೆ ಗೋಪಿ? ಪ
ಚೆನ್ನಾರ ಚೆಲುವ ಉಡುಪಿಯ ಕೃಷ್ಣ ಬಾಲ |
ನಿನ್ನ ಮಗನೇನೆ ಗೋಪಿ? ಅ.ಪ
ಕಟವಾಯ ಬೆಣ್ಣೆ ಕಾಡಿಗೆಗಣ್ಣು ಕಟಿಸೂತ್ರ |
ಪಟವಾಳಿ ಕೈಪ ಕೊರಳೊಳು ಪದಕ ||
ಸಟೆಯಲ್ಲ ಬ್ರಹ್ಮಾಂಢ ಹೃದಯದೊಳಿರುತಿರಲು |
ಮಿಟಿಮಿಟಿ ನೋಡುವ ಈ ಮುದ್ದು ಕೃಷ್ಣ 1
ಮುಂಗುರುಳ ಮುಂಜೆಡೆ ಬಂಗಾರದರಳೆಲೆ |
ರಂಗಮಾಣಿಕದ ಉಂಗುರವಿಟ್ಟು ||
ಪೊಂಗೆಜ್ಜೆ ಕಾಲಲಂದುಗೆ ಘಿಲ್ಲುಘಿಲ್ಲೆನುತ |
ಅಂಗಳದೊಳಗಾಡುತಿಹ ಮುದ್ದು ಕೃಷ್ಣ 2
ಹರಿವ ಹಾವನೆ ಕಂಡು ಹೆಡೆಹಿಡಿದು ಆಡುವ |
ಕರುವಾಗಿ ಆಕಳ ಮೊಲೆಯುಣ್ಣುವ ||
ಅರಿಯದಾಟವ ಬಲ್ಲ ಅಂತರಂಗದ ಸ್ವಾಮಿ |
ಧರೆಯೊಳಧಿಕನಾದ ಪುರಂದರವಿಠಲಯ್ಯ3


ನಿನ್ನ ಮಗನ ಲೂಟಿ ಘನವಮ್ಮ ninna magana looti


ನಿನ್ನ ಮಗನ ಲೂಟಿ ಘನವಮ್ಮ-ಕರೆದು |
ಚಿಣ್ಣಗೆ ಬುದ್ಧಿಯ ಹೇಳೇ ಗೋಪಮ್ಮ ಪ
ಶಿಶುಗಳ ಕೈಲಿದ್ದ ಬೆಣ್ಣೆಗೆ ಉಳಿವಿಲ್ಲ |
ಪಸು-ಕರುಗಳಿಗೆ ಮೀಸಲುಗಳಿಲ್ಲ ||
ಮೊಸರ ಮಡಕೆಯಲಿ ಮಾರಿ ಹೊಕ್ಕಂತಾಯ್ತು |
ಶಶಿ ಮುಖಿಯರು ಗೋಳಿಡುತಿಹರಮ್ಮ 1
ಮರೆತು ಮಲಗಿದ್ದವರ ಮೊಲೆಗಳ ತಾನುಂಬ |
ಕಿರಿಯ ಮಕ್ಕಳಿಗೆ ಮೊಲೆಹಾಲಿಲ್ಲವೊ ||
ಹೊರಗೆ ಲೂಟಿ ಒಳಗೆ ಈ ಲೂಟಿ-ಎ-|
ಚ್ಚರದ ಬಟ್ಟೆಯ ಕಾಣೆವಮ್ಮ ಗೋಪಮ್ಮ 2
ಊರೊಳಗಿರಲೀಸ ಊರ ಬಿಟ್ಟು ಹೋಗಲೀಸ |
ಈರೇಳು ಭುವನಕೆ ಒಡೆಯನಂತೆ ||
ವಾರಿಜನಾಭ ಶ್ರೀ ಪುರಂದರವಿಠಲನ |
ಕೇರಿಯ ಬಸವನ ಮಾಡಿ ಬಿಟ್ಟೆಯಮ್ಮ 3


ನಿನ್ನ ಮಗನ ಮುದ್ದು ನಿನಗಾದರೆ ninna magana muddu


ನಿನ್ನ ಮಗನ ಮುದ್ದು ನಿನಗಾದರೆ ಗೋಪಿ ಆರಿಗೇನೆ? |
ಎನ್ನ ಕೂಡ ಸರಸವಾಡಲು ಓರಗೆಯೇನೆ? ಪ
ಹೆಚ್ಚಿನ ಸತಿಯರ ಕಚ್ಚೆಯ ಬಿಚ್ಚುವ ಹುಚ್ಚನೇನೆ?-ಅಮ್ಮ |
ಇಚ್ಛೆಯರಿತು ನಮ್ಮ ಗಲ್ಲವ ಕಚ್ಚುವ ನೆಚ್ಚನೇನೆ? 1
ಚೆಂಡೆಂದು ಮಿಂಡೆಯರು ದುಂಡು ಕುಚವ ಪಿಡಿವ ಗಂಡನೇನೆ? |
ಕಂಡಕಂಡಲ್ಲಿ ಉದ್ದಂಡವ ಮಾಡುವ ಪುಂಡನೇನೆ 2
ಹೊಸ ಕೂಟವರಿತು ಹಾಸಿಗೆಯನು ಹಾಕುವ ಶಿಶುವು ಏನೆ? |ಅಸಹಾಯ ಶೂರ ಶ್ರೀ ಪುರಂದರವಿಠಲರಾಯ ಕಾಣೆ 3


ನಿನ್ನ ಭಕುತಿಯನು ಬೀರೊ ninna bhakutiyanu beero


ನಿನ್ನ ಭಕುತಿಯನು ಬೀರೊ ಎನ್ನ
ಮನ್ನಿಸಿ ಸಲಹುವರಾರೋ ಪ
ಸನ್ನುತ ಸನ್ಮಾರ್ಗ ತೋರೋ ಆ
ಪನ್ನರಕ್ಷಕ ಬೇಗ ಬಾರೋ ಅ.ಪ
ಪನ್ನಗಶಯನ ಲಕ್ಷ್ಮೀಶಾ ವೇದ
ಸನ್ನುತ ಪಾದ ಸರ್ವೇಶಾ
ಇನ್ನು ಬಿಡಿಸು ಭವಪಾಶಾ ಪ್ರ
ಸನ್ನ ರಕ್ಷಿಸೊ ಶ್ರೀನಿವಾಸಾ 1
ನಾರದ ಗಾನವಿಲೋಲಾ ಸ್ವಾಮಿ
ಭೂರಿ ಭಕ್ತರ ಪರಿಪಾಲಾ
ಶ್ರೀ ರಮಣ ಕರುಣಾಲವಾಲ - ದೇವ
ನೀರದ ಶ್ಯಾಮ ಗೋಪಾಲಾ 2
ಕರಿರಾಜವರದ ಪ್ರಮೇಯಾ ಎನ್ನ
ನರಿತು ನಡೆಸೊ ಯೋಗಿಧ್ಯೇಯ ||
ಸುರಮುನಿ ಹೃದಯ ನಿಕಾಯ -ನಮ್ಮ
ಪುರಂದರ ವಿಠಲರಾಯಾ 3


ನಿನ್ನ ನೋಡಿ ಧನ್ಯನಾದೆನೊ ninna nodi dhanyanaadeno


ಈ ಪಟ್ಟಣವು ಯಮುನಾ ನದಿಯ

ನಿನ್ನ ನೋಡಿ ಧನ್ಯನಾದೆನೊ - ಹೇ ಶ್ರೀನಿವಾಸ ಪನಿನ್ನ ನೋಡಿ ಧನ್ಯನಾದೆ ಎನ್ನ ಮನದಿ ನಿಂತು ಸುಪ್ರ-ಸನ್ನ ದಯಮಾಡಿ ನೀನು ಮುನ್ನಿನಂತೆ ಸಲಹ ಬೇಕೋ ಅ.ಪಲಕ್ಷ್ಮಿರಮಣ ಪಕ್ಷಿವಾಹನ ಲಕ್ಷ್ಮಿ ನಿನ್ನ ವಕ್ಷದಲ್ಲಿ ರಕ್ಷಣ ಶಿಕ್ಷಣ ದಕ್ಷ ಪಾಂಡವ ಪಕ್ಷ ಕಮಲಾಕ್ಷ ರಕ್ಷಿಸು 1
ದೇಶದೇಶಗಳನು ತಿರುಗಿ ಆಶಾಬದ್ಧನಾದೆ ಸ್ವಾಮಿದಾಸನೆನಿಸಿ ಎನ್ನ ಜಗದೀಶ ಕಾಯೋ ವಾಸುದೇವ 2
ಕಂತುಜನಕ ಕೊಟ್ಟು ಎನಗೆ ಅಂತರಂಗದ ಸೇವೆಯನ್ನುಅಂತರವಿಲ್ಲದೆ ಪಾಲಿಸಯ್ಯ ಹೊಂತಕಾರಿ ಪುರಂದರವಿಠಲ * 3


ನಿನ್ನ ನಾಮವೆ ಎನಗೆ ಅಮೃತಾನ್ನವು ninna naamve enage amrutannavu


ನಿನ್ನ ನಾಮವೆ ಎನಗೆ ಅಮೃತಾನ್ನವು |ಇನ್ನು ಹಸಿದಿರಲೇಕೆ ಎನಗೆ ನೀನೊಲಿದಿರಲು ಪಓಂಕಾರವೆಂಬ ನಾಮ ಉಪ್ಪು - ಉಪ್ಪಿನಕಾಯಿ |ಶಂಖಪಾಣಿಯ ನಾಮ ಪಾಕಾದಿ ಸೂಪ ||ಸಂಕರ್ಷಣನ ನಾಮ ದಿವ್ಯ ಶಾಲ್ಯನ್ನವು |ಪಂಕಜಾಕ್ಷನ ನಾಮ ಪಳಿದೆ ಬಗೆಬಗೆ ಸಾರು 1
ಕೇಶವನೆಂಬ ನಾಮ ಕರಿದ ಹೂರಣಗಡಬು |ವಾಸುದೇವನ ನಾಮ ವಡೆ - ಸೇವಗೆ ||ಸಾಸಿರದ ನಾಮಗಳು ಸವಿಸವಿಯ ಪರಮಾನ್ನ |ದೋಷದೂರನ ನಾಮ ದೋಸೆ - ಸೂಸಲಗಡಬು 2
ನಾರಾಯಣನ ನಾಮ ನೊರೆಹಾಲು ಸಕ್ಕರೆ |ಶ್ರೀರಾಮ ನಾಮ ಸರವಳಿ ಸಜ್ಜಿಗೆ ||ಕಾರಣ್ಯನಿಧಿ ನಾಮ ಕರಿದ ಹಪ್ಪಳ - ಸಂಡಿಗೆ |ಪಾರಾಯಣನ ನಾಮ ಪರಿಪರಿಯ ಪಕ್ವಾನ್ನ 3
ಯದುಪತಿಯೆಂಬ ನಾಮ ಎಣ್ಣೂರಿಗೆಯ ರಾಶಿ |ಮಧುಸೂದನನ ನಾಮ ಮಧುರ ಮಂಡಿಗೆಯು ||ಚದುರಗೋವಳ ನಾಮ ಚೆಲುವ ಬೀಸೂರಿಗೆ |ಪದುಮನಾಭನ ನಾಮ ಪರಿಪರಿಯ ಭಕ್ಷ್ಯ 4
ದೇವಕಿಸುತನ ನಾಮ ವಧ್ಯನ್ನದಾ ಮುದ್ದೆ |ಗೋವಿಂದನ ನಾಮ ಗುಳ್ಳೋರಿಗೆ ||ಮಾವಮರ್ದನನ ನಾಮ ಕಲಸುಮೇಲೋಗರ |ರಾವಣಾರಿಯ ನಾಮ ಇಡ್ಡಲಿಗೆ - ಸಖಯುಂಡೆ 5
ಗರುಡವಾಹನನ ನಾಮ ಘೃತಪಯೋದಧಿತಕ್ರ |ಪರಮಪುರುಷನ ನಾಮ ಪನ್ನೀರ ಪಾನ ||ಕರಿವರದ ನಿನ್ನ ನಾಮ ಕರ್ಪುರದ ವೀಳ್ಯವು |ಶರಧಿಶಯನನ ನಾಮ ಶಯನಪರ್ಯಂಕ 6
ಈ ಪರಿಯ ನಾಮಾವಳಿಯನು ಸವಿದುಂಡು |ಆಪತ್ತು ಬಿಡಿಸೆಕಿನ್ನ ಕ್ಷುಧೆಯ ನೂಕಿ ||ಗೋಪಾಲ ಉರಗಾದ್ರಿ ಪುರಂದರವಿಠಲನ |ಶ್ರೀಪಾದವನೆ ನಂಬಿ ಅಪವರ್ಗ ಸೇರುವ 7


ನಿನ್ನ ನಾನೇನೆಂದನೋ - ರಂಗಯ್ಯ ninna naanendeno rangayya


ನಿನ್ನ ನಾನೇನೆಂದನೋ - ರಂಗಯ್ಯ ರಂಗನಿನ್ನ ನಾನೇನೆಂದೆನೊ ಪನಿನ್ನ ನಾನೇನೆಂದೆ ಚಿನ್ಮಯ ಮೂರುತಿಪನ್ನಗಶಯನ ಪಾಲ್ಲಡಲೊಡೆಯನೆ ಕೃಷ್ಣ ಅ.ಪಧೀರಸೋಮಕ ವೇದಚೋರನ ಮಡುಹಿದೆವಾರಿಧಿಗಿಳಿದ ಪರ್ವತವ ಪೊತ್ತೆಧಾರಿಣಿಯನು ತಂದು ದನುಜದಲ್ಲಣನಾದೆನಾರಸಿಂಹ ನಿನಗೆ ನಮೊ ಎಂದೆನಲ್ಲದೆನೀರ ಪೊಕ್ಕವನೆಂದೆನೆನೆ - ಬೆನ್ನಿನ ಮೇಲೆಭಾರ ತಾಳ್ದವನೆಂದೆನೆನೆ - ಮದ್ಲಿನಗಿದುಬೇರ ಮೆದ್ದವನೆಂದೆನೆ - ರಕ್ಕಸರೊಳುಹೋರಾಡಿದವನೆಂದು ಹೊಗಳಿದೆನಲ್ಲದೆ 1
ಧರೆಯದಾನವ ಬೇಡಿ ನೆಲವ ಮೂರಡಿ ಮಾಡಿಪರಶುವಿಡಿದು ಕ್ಷತ್ರಿಯರ ಸವರಿಚರಣದಿ ಪಾಷಾಣ ಹೆಣ್ಣು ಮಾಡಿದ ಪುಣ್ಯಚರಿತ ಯಾದವ ಸತಿ ಶರಣೆಂದೆನಲ್ಲದೆತಿರುಕ ಹಾರುವನೆಂದೆನೆ - ಹೆತ್ತ ತಾಯಶಿರಕೆ ಮುನಿಹವನೆಂದೆನೆ - ವನ ದೇಶದಿಧುರಕೆ ನಿಂದವನೆಂದೆನೆ - ಪೂತನಿಯ ಮೊಲೆಯಹರಿದು ಕೊಂದವನೆಂದು ಸ್ತುತಿಸಿದೆನಲ್ಲದೆ 2
ಚಿತ್ತಜ ಕೋಟಿಲಾವಣ್ಯ ಮುಪ್ಪುರದೊಳುಉತ್ತಮ ಸ್ತ್ರೀಯರ ವ್ರತವಳಿದೆಮತ್ತೆ ಕಲ್ಕಿಯಾದೆ ಮಲೆತರ ಮಡುಹಿದೆಉತ್ತಮ ಶ್ರೀರಾಮನೆಂದು ಸ್ತುತಿಸಿದೆನಲ್ಲದೆ.ಬತ್ತಲೆನಿಂತªನೆಂದೆನೆ ತೇಜಿಯನೇರಿಒತ್ತಿಬಾಹವನೆಂದೆನೆ ಬಾರಿಬಾರಿಗೆಸತ್ತುಹುಟ್ಟುವನೆಂದೆನೆ ಪುರಂದರ ವಿಠಲಹತ್ತವತಾರದ ಹರಿಯೆಂದೆನಲ್ಲದೆ * 3


ನಿನ್ನ ನಂಬಿದೆನೊ ನೀಯೆನ್ನ ninna nambideno neeyanna


ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯ
ಎನ್ನ ಗುಣದೋಷಗಳ ಎಣಿಸಬೇಡಯ್ಯ ಪ
ಬಾಲ್ಯದಲಿ ಕೆಲವು ದಿನ ಬಿರಿದೆ ಹೋಯಿತು ಹೊತ್ತು
ಮೇಲೆ ಯೌವನಮದದಿ ಮುಂದರಿಯದೆ ||
ಸ್ಥೂಲ ಸಂಸಾರದಲಿ ಸಿಲುಕಿ ಬಳಲಿದೆ ನಾನು
ಪಾಲಿಸೈ ಪರಮಾತ್ಮ ಭಕುತಿಯನು ಕೊಟ್ಟು 1
ಆಸೆಯೆಂಬುದು ಅಜನ ಲೋಕ ಮುಟ್ಟುತಲಿದೆ
ಬೇಸರದೆ ಸ್ತ್ರೀಯರಲಿ ಬುದ್ದಿಯೆನಗೆ ||
ವಾಸುದೇವನೆ ನಿನ್ನ ಪೂಜೆಗೆಯ್ದವನಲ್ಲ
ಕೇಶವನೆ ಕ್ಲೇಶವನು ನಾಶ ಮಾಡಯ್ಯ 2
ಈ ತೆರದಿ ಕಾಲವನು ಕಳೆದೆ ನಾನಿಂದಿರೇಶ
ಭೀತಿ ಮೋಹದಿ ಙÁ್ಞನರಹಿತನಾದೆ ||
ಮಾತೆ ಶಿಶುವನು ಕರೆದು ಮನ್ನಿಸುವ ತೆರನಂತೆ
ದಾತ ಶ್ರೀ ಪುರಂದರ ವಿಠಲ ದಯಮಾಡೈ 3


ನಿನ್ನ ನಂಬಿದೆ ನೀರಜನಯನ ninna nambide neerajanayana


ನಿನ್ನ ನಂಬಿದೆ ನೀರಜನಯನ
ಎನ್ನ ಪಾಲಿಸೊ ಇಂದಿರೆ ರಮಣ ಪ
ಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದ
ಪನ್ನಗ ಶಯನ ನೀ ಪರಮ ಪುರುಷನೆಂದು ಅ.ಪ
ಹರಿಸರ್ವೋತ್ತಮನಹುದೆಂಬ ಬಾಲಕನ
ಹಿರಣ್ಯಕಶಿವು ಪಿಡಿದು ಬಾಧಿಸಲು ||
ನರಹರಿ ರೂಪಿಂದಲವನ ವಕ್ಷವ ಸೀಳ್ದೆ
ಪರಮ ವಿಶ್ವಾತ್ಮಕನಹುದೆಂದು ಮೊರೆ ಹೊಕ್ಕೆ 1
ಪಾದವ ಪಿಡಿದು ನೀರೊಳಗೆಳೆದ ನಕ್ರನ
ಬಾಧೆಗಾರದೆ ಕರಿಮೊರೆಯಿಡಲು ||
ಆದಿ ಮೂರುತಿ ಚಕ್ರದಿಂದ ನಕ್ರನ ಕೊಂದ
ವೇದಾಂತವೇದ್ಯ ಅನಾಥ ರಕ್ಷಕನೆಂದು 2
ಇಳೆಗೊಡೆಯನ ತೊಡೆ ನಿನಗೇತಕೆಂದು ಆ
ಲಲನೆ ಕೈ ಪಿಡಿದೆಳೆಯಲರ್ಭಕನ ||
ನಳಿನಾಕ್ಷ ನಿನ್ನನೆದೆಯೊಳಿಟ್ಟು ತಪವಿರ್ದ
ಬಲು ಬಾಲಕಗೆ ಧ್ರುವ ಪಟ್ಟಿಗಟ್ಟಿದನೆಂದು3
ಸುದತಿ ಗೌತಮಸತಿ ಮುನಿಶಾಪದಿಂದಲಿ
ಪಢದಿ ಪಾಷಾಣವಾಗಿ ಬಿದ್ದಿರಲು ||
ಮುದದಿಂದಲಾಕೆಯ ಮುಕ್ತ ಮಾಡಿದ ಯೋಗಿ
ಹೃದಯ ಭೂಷಣ ನಿನ್ನ ಪದ ವೈಭವವ ಕಂಡು 4
ಪರಮಪಾವನೆ ಜಗದೇಕಮಾತೆಯನು
ದುರುಳ ರಾವಣ ಪಿಡಿದು ಕೊಂಡೊಯ್ಯಲು ||
ಶರಣೆಂದು ವಿಭೀಷಣ ಚರಣಕೆರಗಲಾಗಿ
ಸ್ಥಿರಪಟ್ಟವನು ಕೊಟ್ಟ ಜಗದೀಶ ನೀನೆಂದು 5
ಅಂಬರೀಷನೆಂಬ ನೃಪತಿ ದ್ವಾದಶಿಯನು
ಸಂಭ್ರಮದಿಂದ ಸಾಧಿಸುತಿರಲು ||
ಡೊಂಬೆಯಿಂದ ದೂರ್ವಾಸ ಶಪಿಸಲಾಗಿ
ಬೆಂಬಿಡದಲೆ ಚಕ್ರದಿಂದ ಕಾಯ್ದವನೆಂದು 6
ಧರೆಯೊಳು ನಿಮ್ಮ ಮಹಿಮೆಯ ಪೊಗಳ್ವಡೆ
ಸರಸಿಜೋದ್ಭವ-ಶೇಷಗಸದಳವು ||
ಸ್ಮರಣೆಮಾತ್ರದಿ ಅಜಾಮಿಳಗೆ ಮೋಕ್ಷವನಿತ್ತ
ಪುರಂದರ ವಿಠಲ ಜಗದೀಶ ನೀನೆಂದು 7


ನಿನ್ನ ದಿವ್ಯ ಮೂರುತಿಯ ninna divya muratiya


ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿ
ಧನ್ಯನಾದೆನು ಧರೆಯೊಳು ||
ಇನ್ನು ಈ ಭವ ಭಯಕೆ ಅಂಜಲೇತಕೆ ದೇವ
ಚೆನ್ನ ಶ್ರೀ ವೆಂಕಟೇಶಾ ಈಶಾ ಪ
ಏಸು ಜನುಮದ ಸುಕೃತ ಫಲವು ಬಂದೊದಗಿತೋ
ಈ ಸ್ವಾಮಿ ಪುಷ್ಕರಣಿಯೊಳ್
ನಾ ಸ್ನಾನವನು ಮಾಡಿ ವರಾಹ ದೇವರ ನೋಡಿ
ಶ್ರೀ ಸ್ವಾಮಿ ಮಹಾದ್ವಾರಕೆ
ಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿ
ಲೇಸಿನಿಂದಲಿ ಪೊಗಳುತ
ಆ ಸುವರ್ಣದ ಗರುಡ ಗಂಬವನು ಸುತ್ತಿ ಸಂ
ತೋಷದಿಂ ಕೊಂಡಾಡಿದೆ ಬಿಡದೆ 1
ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲು
ದಟ್ಟಣೆಯ ಮಹಾಜನದೊಳು
ಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂ
ಗೆಟ್ಟು ಹರಿಹರಿಯೆನುತಲಿ
ಗಟ್ಟಿ ಮನಸಿನಲಿ ತಲೆಚಿಟ್ಟಿಟ್ಟು ಶೀಘ್ರದಲಿ
ಕಟ್ಟಂಜನಕೆ ಪೋಗುತ
ಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆ
ಸುಟ್ಟೆ ಎನ್ನಯ ದುರಿತವಾ-ದೇವಾ 2
ಶಿರದಲಿ ರವಿಕೋಟಿ ತೇಜದಿಂದೆಸೆಯುವ
ಕಿರೀಟ ವರ ಕುಂಡಲಗಳ
ಕೊರಳಲ್ಲಿ ಸರ ವೈಜಯಂತಿ ವನಮಾಲೆಯನು
ಪರಿಪರಿಯ ಹಾರಗಳನು
ಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳ
ವರನಾಭಿಮಾಣಿಕವನು
ನಿರುಪ ಮಣಿಖಚಿತ ಕಟಿಸೂತ್ರ ಪೀತಾಂಬರವ
ಚರಣಯುಗದಂದುಗೆಯನು - ಇನ್ನು 3
ಇಕ್ಷುಚಾಪನ ಪಿತನೆ ಪಕ್ಷೀಂದ್ರವಾಹನನೆ
ಲಕ್ಷ್ಮೀಪತಿ ಕಮಲಾಕ್ಷನೆ
ಅಕ್ಷತ್ರಯ ಅಜ ಸುರೇಂದ್ರಾದಿವಂದಿತನೆ
ಸಾಕ್ಷಾಜ್ಜಗನ್ನಾಥನೇ
ರಾಕ್ಷಸಾಂತಕ ಭಕ್ತ ವತ್ಸಲ ಕೃಪಾಳು ನಿರ
ಪೇಕ್ಷ ನಿತ್ಯತೃಪ್ತನೇ
ಕುಕ್ಷಿಯೊಳಗಿರೇಳು ಭುವನವನು ಪಾಲಿಪನೆ
ರಕ್ಷಿಸುವುದೊಳಿತು ದಯದಿ -ಮುದದಿ 4
ಉರಗಗಿರಿಯರಸ ನಿನ್ನ ಚರಣ ನೋಡಿದ ಮೇಲೆ
ಉರಗ ಕರಿ ವ್ಯಾಘ್ರ ಸಿಂಹ
ಅರಸು ಚೋರಾಗ್ನಿ ವೃಶ್ಚಿಕ ಕರಡಿ ಮೊದಲಾದ
ಪರಿಪರಿಯ ಭಯಗಳುಂಟೇ
ಪರಮ ವಿಷಯಗಳ ಲಂಪಟದೊಳಗೆ ಸಿಲುಕಿಸದೆ
ಕರುಣಿಸುವುದೊಳಿತು ದಯವಾ
ಸ್ಮರಗಧಿಕ ಲಾವಣ್ಯ ಪುರಂದರ ವಿಠಲನೇ
ಶರಣಜನ ಕರುಣಾರ್ಣವಾ ದೇವಾ 5


ನಿನಗಾರು ಸರಿಯಿಲ್ಲ ಎನಗನ್ಯ ninagaru sariyalli


ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲಎನಗೂ ನಿನಗೂ ನ್ಯಾಯ ಹೇಳುವರಿಲ್ಲ ಪಒಂದೇ ಗೂಡಿನೊಳು ಒಂದು ಕ್ಷಣವಗಲದೆಎಂದೆಂದು ನಿನ್ನ ಪಾದ ಪೊಂದಿರುವೆ ||ಬಂದ ವಿಷಯಂಗಳಿಗೆ ಎನ್ನನೊಪ್ಪಿಸಿಕೊಟ್ಟುಅಂಧಕನಂತೆ ನೀ ನೋಡುವುದುಚಿತವೆ 1
ಪರಸತಿಗಳುಪಿರೆ ಪರಮ ಪಾಪಿಷ್ಠನೆಂದುಪರಿಪರಿ ನರಕವ ನೇಮಿಸುವೆ ||ಪರಸತಿಯರ ಒಲುಮೆ ನಿನಗೆ ಒಪ್ಪಿತು ದೇವದೊರೆತನಕಂಜಿ ನಾ ಶರಣೆಂದೆನಲ್ಲದೆ 2
ನಿನ್ನಾಜ್ಞೆಯವ ನಾನು ನಿನ್ನ ಪ್ರೇರಣೆಯಿಂದಅನಂತವಿಧದ ಕರ್ಮವ ಮಾಡಿದೆ ||ಎನ್ನಪರಾಧಗಳೆಣಿಸಲಾಗದು ದೇವಪನ್ನಗ ಶಯನ ಶ್ರೀಪುರಂದರ ವಿಠಲ 3


ನಿತ್ಯವಲ್ಲ ನಿತ್ಯವಲ್ಲ ಅನಿತ್ಯ ದೇಹವಿದಣ್ಣ nityavalla nityavalla


ನಿತ್ಯವಲ್ಲ ನಿತ್ಯವಲ್ಲ ಅನಿತ್ಯ ದೇಹವಿದಣ್ಣ ಪ.
ಮತ್ತೆ ಮುರಾರಿ ಶ್ರೀ ಕೃಷ್ಣನ ನೆನೆದರೆ |
ಮುಕ್ತಿಸಾಧನವಣ್ಣ ದೇಹ ಅಪ
ಮಾನಿನಿಯರ ಕುಚಕೆ ಮರುಳಾಗದಿರು ಮಾಂಸದ ಗಂಟುಗಳಲ್ಲಿ |
ನಾನಾ ಪರಿಯಲಿ ಮೋಹಮಾಡದಿರು
ಹೀನಮೂತ್ರದ ಕುಳಿಯಲ್ಲಿ
ಜಾನಕಿರಮಣನ ನಾಮವ ನೆನೆದರೆ
ಜಾಣನಾಗುವೆಯಲ್ಲೋ - ಪ್ರಾಣಿ 1
ತಂದೆ-ತಾಯಿ ಅಣ್ಣ-ತಮ್ಮಂದಿರು ಮಕ್ಕಳು ಹರಿದು ತಿಂಬರೆಲ್ಲ |
ಹೊಂದಿ ಹೊರೆಯುವಾ ನಂಟರಿಷ್ಟರು
ನಿಂದೆ ಮಾಡುವರೆಲ್ಲ ||
ಮುಂದೆ ಯಮನ ದೂತರು ಎಳೆದೊಯ್ಯಲು
ಹಿಂದೆ ಬರುವರಿಲ್ಲೋ - ಪ್ರಾಣಿ 2
ಕತ್ತಲೆ ಬೆಳುದಿಂಗಳು ಸಂಸಾರವು ಕಟ್ಟು ಧರ್ಮದ ಮೊಟ್ಟಿ |
ಹೊತ್ತನರಿತು ಹರಿದಾಸರ ಸೇರೆಲೊ ಪೇಳ್ವರು ತತ್ತ್ವವ ಗಟ್ಟಿ |
ಚಿತ್ತಜನಯ್ಯ ಪುರಂದರವಿಠಲನ
ಹೊಂದೋ ನೀ ಸುಖಬುಟ್ಟಿ - ಪ್ರಾಣಿ 3


ನಿಂದೆಯಾಡಲುಬೇಡ ನೀಚಾತ್ಮ nindeyadalubeda neechatma



ನಿಂದೆಯಾಡಲುಬೇಡ ನೀಚಾತ್ಮ - ನಿನ
ಗೆಂದೆಂದು ದೊರಕನು ಪರಮಾತ್ಮ ಪ.
ನರಜನ್ಮಕೆ ಬಂದು ನೀ ನಿಂತಿ - ಪರಿ
ಪರಿ ಮಾಡಿದೆಯೊ ಪರದ ಚಿಂತಿ
ಗರುವದಿಂದ ಹಲ್ಲುತಿಂತಿ - ಇದು
ಸ್ಥಿರವಲ್ಲ ಮೂರುದಿನದ ಸಂತಿ 1
ಪರಸತಿಯರ ಕಂಡು ಹೋಗಿ - ಅಲ್ಲಿ
ಪರಮಾತ್ಮನ ಧ್ಯಾನವನ್ನು ನೀ ನೀಗಿ
ಪರಲೋಕ ಹೇಗೆ ಕಾಣುವೆ ಕಾಗಿ - ನೀನು
ಪರಪರಿಯಲಿ ನೋಡಲೊ ಗೂಗಿ 2
ಬಾಳಿಗೆ ಒಂದೇ ಫಲವು ನೋಡು - ಅಲ್ಲಿ
ಕಳ್ಳಸುಳ್ಳರಿಗೆ ಬಲು ತೋಡು
ಬಾಳ್ವೆವಂತರ ಹುಡುಕಾಡು - ಶ್ರೀ
ಲೋಲ ಪುರಂದರವಿಠಲನೊಳಾಡು 3


Friday 5 June 2020

ನಿಂದಕರಿರಬೇಕಿರಬೇಕು nindakarirabeku


ನಿಂದಕರಿರಬೇಕಿರಬೇಕು
ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ ಹಾಗೇ ಪ.
ಅಂದಂದು ಮಾಡಿದ ಪಾಪವೆಂಬ ಮಲ
ತಿಂದು ಹೋಗುವರಯ್ಯ ನಿಂದಕರು
ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ
ಪೊಂದಿಗ ಪುಣ್ಯವನ್ನೆಯ್ಯುವರಯ್ಯ 1
ದುಷ್ಠ ಜನರು ಈ ಸೃಷ್ಟಿಯೊಳಿದ್ದರೆ
ಶಿಷ್ಟ ಜನರಿಗೆಲ್ಲ ಕೀರ್ತಿಗಳೂ
ಇಷ್ಟಪ್ರದ ಶ್ರೀ ಕೃಷ್ಣನೆ ನಿನ್ನೊಳು
ಇಷ್ಟೇ ವರವನು ಬೇಡುವೆನಯ್ಯ 2
ದುರುಳ ಜನಂಗಳು ಚಿರಕಾಲ ಇರುವಂತೆ
ಕರವ ಮುಗಿದು ವರ ಬೇಡುವೆನು
ಪರಿಪರಿ ತಮಾಸಿಗೆ ಗುರಿಯಿಲ್ಲದೆ
ಪರಮ ದಯಾನಿಧಿ ಪುರಂದರವಿಠಲ 3


ನಾಲಗೆ ನಾಲಗೆ ನಾಲಗೆ naalage naalage naalage


ನಾಲಗೆ ನಾಲಗೆ ನಾಲಗೆ - ಸಿರಿ - |
ಲೋಲನ ನೆನೆ ಕಾಣೊ ನಾಲಗೆ ಪ.
ವಾಸುದೇವನ ನಾಮ ನಾಲಗೆ - ನೀ
ಲೇಸಾಗಿ ನೆನೆ ಕಾಣೊ ನಾಲಗೆ ||
ಆಸೆಯೊಳಗೆ ಬಿದ್ದು ಮೋಸ ಹೋಗಲು ಬೇಡ |
ಕೇಶವನ ನಾಮವ ನೆನೆ ಕಾಣೊ ಮರುಳೆ 1
ಮಾತನಾಡುವಲ್ಲಿ ನಾಲಗೆ - ನೀ ಅ - |
ನೀತಿ ನುಡಿಯದಿರು ನಾಲಗೆ ||
ಆತನ ನಾಮವ ಗೀತದಿ ಪಾಡುತ |
ಸೀತಾಪತಿ ರಘುನಾಥನ ನೆನೆ ಕಾಣೊ 2
ಅಚ್ಯುತನಾಮವ ನಾಲಗೆ ನೀ - |
ಬಿಚ್ಚಿಟ್ಟ ನೆನೆ ಕಾಣೊ ನಾಲಗೆ ||
ನೆಚ್ಚಿ ಕೆಡಲಿ ಬೇಡ ನಿಚ್ಚ ಶರೀರವ |
ಅಚ್ಯುತನಾಮವ ನೆನೆ ಕಾಣೊ ಮರುಳೆ 3
ನನ್ನದು ತನ್ನದು ನಾಲಗೆ - ನೀ- |
ನೆನ್ನದಲಿರು ಕಾಣೊ ನಾಲಗೆ |
ಇನ್ನು ಮೂರು ದಿನದೀ ಸಂಸಾರದಿ |
ಪನ್ನಗಶಯನನ ನೆನೆ ಕಾಣೊ ಮರುಳೆ 4
ಅನುದಿನ ಹರಿನಾಮ ನಾಲಗೆ - ನೀ |
ನೆನೆಯುತಿರು ಕಾಣೊ ನಾಲಗೆ ||
ಘನಮಹಿಮ ನಮ್ಮ ಪುರಂದರವಿಠಲನ |
ಕ್ಷಣ ಕ್ಷಣಕೊಮ್ಮೆ ನೆನೆ ಕಾಣೊ ಮರುಳೆ 5


ನಾರಿರನ್ನೆಯ ಕಂಡೆಯಾ ಪವಾರಿಜನಾಥ naariranneya kandeya


ನಾರಿರನ್ನೆಯ ಕಂಡೆಯಾ ಪವಾರಿಜನಾಥ ದೇವರದೇವ ಸುಗಣ ಬೇಲೂರ ಚೆನ್ನಿಗರಾಯನ ಎನ್ನಪ್ರಿಯನ ಅ.ಪಹೊಸಬಗೆ ಮಾಟದ ಹೊಳೆವ ಕಿರೀಟದ |ಎಸೆವ ಮಾಣಿಕದೋಲೆಯ ||ಶಶಿಕಾಂತಕಕಧಿವೆಂದೆನಿಪ ಮೂಗುತಿಯಿಟ್ಟ |ಬಿಸಜಾಕ್ಷ ಚನ್ನಿಗರಾಯನ ಎನ್ನ ಪ್ರಿಯನ 1
ತಿದ್ದಿದ ಕಸ್ತೂರಿ ತಿಲಕದಿಂದೊಪ್ಪುವ |ಮುದ್ದು ಮೊಗದ ಸೊಂಪಿನ ||ಹೊದ್ದಿದ ಕುಂಕುಮ ರೇಖೆ ಪೀತಾಂಬರ |ಪೊದೆದ ಚೆನ್ನಿಗರಾಯನ ಎನ್ನ ಪ್ರಿಯನ 2
ಮಘಮಘಿಸುವ ಜಾಜಿ ಮಲ್ಲಿಗೆ ಸಂಪಿಗೆ |ಬಗೆಬಗೆ ಪೂಮಾಲೆಯ ||ಅಗರು ಚಂದನ ಗಂಧದನುಲೇಪವ ಗೈಯ್ದ |ಜಗವ ಮೋಹಿಪ ಚೆನ್ನನ ಎನ್ನ ಪ್ರಿಯನ 3
ಧನುಜರಗಂಡನೆಂದೆನಿಪ ಪೆಂಡೆಯವಿಟ್ಟು |ಮಿನುಗುವ ಪೊಂಗೆಜ್ಜೆಯ ||ಘನ ಶಂಖ ಚಕ್ರ ಗದಾಂಕಿತನಾದನ |ಅನುಪಮ ಚೆನ್ನಿಗರಾಯನ ಎನ್ನ ಪ್ರಿಯನ 4
ಲೀಲೆಯಿಂದಲಿ ಬಂದು ಮೇಲಾಪುರದಿ ನಿಂತ |ಪಾಲುಗಡಲ ಶಾಯಿಯಾದನ ||ಪಾಲಕ ಇಂದು ಶ್ರೀ ಪುರಂದರವಿಠಲ |ಬೇಲೂರ ಚೆನ್ನಿಗರಾಯನ ಎನ್ನ ಪ್ರಿಯನ 5


ನಾರಾಯಣಾಯ ನಮೋ ನಾಗೇಂದ್ರ naarayanaya namo naagendra


ನಾರಾಯಣಾಯ ನಮೋ ನಾಗೇಂದ್ರ ಶಯನಾಯ |ನಾರದಾದ್ಯಖಿಳ ಮುನಿನಮಿತ ಪಾದಾಂಭೋಜ |ಸೇರಿದರೆ ಪೊರೆವ ಕಂಸಾರಿ ರಕ್ಷಿಪನೆಮ್ಮ |ಕಾರುಣ್ಯದಿಂದ ಒಲಿದು ಪಪಾಂಡ್ಯದೇಶದೊಳು ಇಂದ್ರದ್ಯುಮ್ನನೆಂಬ ಭೂ |ಮಂಡಲಾಧಿಪನು ವೈರಾಗ್ಯದಲಿ ಹರಿಪಾದ |ಪುಂಡರೀಕಧ್ಯಾನಪರನಾಗಿ ತಪದೊಳಿರೆಚಂಡತಾಪಸನಗಸ್ತ್ಯ ||ಹಿಂಡು ಶಿಷ್ಯರುವೆರೆಸಿ ಬರಲು ಸತ್ಕರಿಸದಿರೆ |ಕಂಡುಗ್ರಶೋಪದಿಂ ಗಜವಾಗಿ ಜನಿಸಲು |ದ್ದಂಡ ಶಾಪವನಿತ್ತು ಮುನಿ ತಿರುಗತ್ತಲೈಶುಂಡಾಲನಾದನರಸ 1
ಕ್ಷೀರಸಾಗರದಲೆರಡೀರೈದು ಯೋಜನದ |ಮೇರೆಯಲಿ ವರತ್ರಿಕೂಟಾದ್ರಿ ಶೃಂಗತ್ರಯದಿ |ರಾರಾಜಿಸುವ ತಾಮ್ರ-ರಜತ-ಕಾಂಚನದಿಂದ ನಾರಾಯಣಾಂಶದಿಂದ ||ಪಾರಿಜಾತಾಂಭೋಜ ಬಕುಳ ಮಲ್ಲಿಗೆ ಜಾಜಿ |ಸೌರಭದಲಶ್ವತ್ಥ ಪೂಗ ಪುನ್ನಾಗ ಜಂ |ಬೀರ ತರು ಗುಲ್ಮ ಶಾಖಾಮೃಗಗಳೆಸೆವಲ್ಲಿವಾರಣೀಂದ್ರನು ಮೆರೆದನು 2
ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲ್ಲಿ |ಕಾನನದಿ ತೊಳಲುತ್ತ ಬೇಸಗೆಯ ಬಿಸಿಲಲ್ಲಿ |ತಾನು ನೀರಡಿಸಿ ಬಂದೊಂದು ಸರಸಿಯ ತಟಕೆಪಾನಾಭಿಲಾಷೆಯಿಂದ ||ನಾನಾಪ್ರಕಾರದಿಂ ಜಲಕ್ರೀಡೆಯಾಡುತಿರ |ಲೇನಿದೆತ್ತಣ ರಭಸವೆಂದುಗ್ರಕೋಪದಿಂ |ಆನೆಗಳು ಬಾಯ್ದೆರೆದು ನುಂಗಿತೊಂದಂಘ್ರಿಯನುಏನೆಂಬೆನಾಕ್ಷಣದೊಳು 3
ಒತ್ತಿ ಪಿಡಿದೆಳೆಯುತಿರೆ ಎತ್ತಣದಿನೇನೆನುತ |ಮತ್ತ ಇಭರಾಜನೌಡೊತ್ತಿ ನೋಡುತ್ತಂಘ್ರಿ |ಎತ್ತಿ ತಂದನು ತಡಿಗೆ ಮತ್ತೆ ನಡುಮಡುವಿನೊಳುಅತ್ತಲೇ ತಿರುಗೆ ನೆಗಳೆ ||ಇತ್ತಂಡದಿಂತು ಕಾದಿದರು ಸಾವಿರ ವರುಷ |ಉತ್ತರಿಸಿತೇನೆಂಬೆ ಮತ್ತಾ ಗಜೇದ್ರಂಗೆ |ಸತ್ತ್ವ ತಗ್ಗಿತು ತನ್ನ ಮನದೊಳಗೆ ಚಿಂತಿಸಿತುಮತ್ತಾರು ಗತಿಯೆನುತಲಿ 4
ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ |ದಿಂದ ದಿವ್ಯಜ್ಞಾನ ಕಣ್ದೆರೆದು ಮನದೊಳರ |ವಿಂದನಾಭಾಚ್ಯುತ ಮುಕುಂದ ಮಾಧವ ಕೃಷ್ಣ ನಿಖಿಲ ಮುನಿವೃಂದವಂದ್ಯ ||ಇಂದಿರಾರಮಣ ಗೋವಿಂದ ಕೇಶವ ಭಕ್ತ |ಬಂಧು ಕರುಣಾಸಿಂಧು ತಂದೆ ನೀ ಗತಿಯೆನಗೆ |ಇಂದು ಸಿಲ್ಕಿದೆನು ಬಲು ದಂದುಗದ ಮಾಯಾ ಪ್ರ-ಬಂಧಕನೆ ನೆಗಳಿನಿಂದ 5
ಪರಮಾತ್ಮ ಪರಮೇಶ ಪರತತ್ತ್ವ ಪರಿಪೂಜ್ಯ |ಪರತರ ಪರಂಜೋತಿ ಪರಮ ಪಾವನಮೂರ್ತಿ |ಪರಮೇಷ್ಟಿ ಪರಬ್ರಹ್ಮ ಪರಮ ಪರಮಾಕಾಶ |ಪರಿಪೂರ್ಣ ಪರಮಪುರುಷ ||ನಿರುಪಮ ನಿಜಾನಂದ ನಿರ್ಲಯ ನಿರಾಕಾರ |ನಿರವಧಿಕ ನಿರ್ಗುಣ ನಿರಂಜನ ನಿರಾಧಾರ |ನಿರವದ್ಯ ನಿಸ್ಸಂಗ ನಿಶ್ಚಿಂತ ನಿಖಿಲೇಶಇರದೆ ನೀ ಸಲಹೆಂದನು 6ಇಂತೆನುತ ಮೂಚ್ರ್ಛೆಯಲಿ ಗುಪ್ತಕಂಠಸ್ವರದ |ಕಾಂತ ನಡುನೀರೊಳಗೆ ತೇಲಿ ಮುಳುಗುತಲಿರೆ ಅ- |ಚಿಂತ್ಯ ಮಹಿಮನು ಕೇಳಿ ಕರುಣದಿಂದಾ ಮಹಾ-ನಂತಶಯನದೊಳೆದ್ದನು ||ಸಂತವಿಡುತುಡೆ- ಮುಡಿಯ ಗರುಡನೇರದೆ ಬಂದು |ಚಿಂತೆ ಬೇಡೆನುತಭಯಹಸ್ತವನು ಕೊಡುತ ಶ್ರೀ- |ಕಾಂತ ಭಕ್ತನ ಬಳಿಗೆ ಬಂದೆಡದ ಕೈಯಿಂದದಂತಿವರನನು ನೆಗಹಿದ 7

ನೆಗಳ ಬಾಯನು ಚಕ್ರದಲಿ ಸೀಳಿ ಕರಿವರದ |ಒಗುವ ಕರಣದಲಿ ಮೈದಡಹಲ್ಕೆ ಗಜಜನ್ಮ |ತೆಗೆದುದಾಕ್ಷಣಕೆ ಮಣಿಮುಕುಟ - ಕುಂಡಲದಿಂದ ನಗಧರನು ಓಲೈಸಿದ ||ವಿಗಡದೇವಲ ಮುನಿಯ ಶಾಪದಲಿ ದಾರುಣಿಯೊ- |ಳಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ |ಮಗುಳಿ ಪುರವನು ಕಂಡು ನಿಜಗತಿಗೆ ಐದಿದಿನುಕಮಲಾಕ್ಷಮಿಗೆ ಮೆರೆದನು 8
ಮಣಿಮುಕುಟ ಕುಂಡಲ ಪದಕಹಾರ ಕಡಗಕಂ- |ಕಣ ಕೌಸ್ತು ಭೊಜ್ವ ್ಜಲಾಂಗದವೈಜಯಂತಿ ಭೂ- |ಷಣ ಶಂಖ-ಚಕ್ರ-ಗದೆ-ಪದ್ಮ ಧರಿಸಿಹ ಹಸ್ತಪಣಿಯ ಕಸ್ತುರಿ ತಿಲಕದಾ ||ಝಣಝಣಿಪ ನೂಪುರದ ದಂತಪಂಕ್ತಿಯ ಕೃಪೇ- |ಕ್ಷಣದ ಸಿರಿಮೊಗದ ಪೀತಾಂಬರದ ಮೂರುತಿಗೆ |ಮಣಿದು ಜಂiÀi ಜಯ ಜಯಾ ಎಂಬ ಸುರನರರಸಂ- |ದಣಿಯಿಂದೆ ಹರಿ ಮೆರೆದನು 9
ಹರಹರಿಎನುತ್ತಂಘ್ರಿಗೆರಗಲಿಭವರನನಾ- |ದರದಿಂದಲೆತ್ತುತಲಿ ಕೇಳ್ಮಗನೆ ನೀನೆನ್ನ |ವಿರಜ ಶರಪರಿಧಿಯಾ ಸರವನಹಿಪತಿಯನ್ನುಪರಜನ್ಮನೀ ಲಕುಮಿಯ ||ಪರಮೇಷ್ಟಿ-ಭವರ ಮನು-ಮುನಿಗಳನು ಧರಣಿಯನು |ತರಣಿ ಶಶಿ ನವಶಕ್ತಿ ವಿಷ್ಣಧರ್ಮವತಾರು- |ಪರ ವರಗದಾ ಶಂಖ ಚಕ್ರಾಂಬುಜಂಗಳನುಸ್ಮರಿಸುವರ ಕಾವೆನೆಂದ 10
ಆವಾವನಿದನುದಯದಲ್ಲೆದ್ದು ಭಕ್ತಿಯಲಿ |ಭಾವಶುದ್ಧಿಯಲಿ ತಾ ಹೇಳಿಕೊಳುವನೊ ಅವನ- |ಘಾವಳಿಯ ಪರಿಹರಿಸಿ ಸುಙÁ್ಞನವೀವೆ ದೇ-ಹಾವಸಾನದಲೆನುತಲಿ ||ಶ್ರೀವಾಸುದೇವನಾಜ್ಞಾನೆಸಿ ಗಜೇಂದ್ರ ಸಹಿ- |ತಾವಿಹಂಗಾಧಿಪನನೇರಿ ವೈಕುಂಠಕ್ಕೆ |ದೇವ ಬಿಜಯಂಗೈದ ಪುರಂದರ ವಿಠಲನಸೇವಕರಿಗಿದುಚಿತ್ರವೆ 11


ನಾರಾಯಣನೆಂಬ ನಾಮದ ಬೀಜವ narayananemba naamada


ನಾರಾಯಣನೆಂಬ ನಾಮದ ಬೀಜವ ನಿಮ್ಮ
ನಾಲಿಗೆ ತುದಿಯಿಂದಲಿ ಬಿತ್ತಿರಯ್ಯ ಪ.
ಹೃದಯಹೊಲವನು ಮಾಡಿ ಮನವ ನೇಗಿಲ ಮಾಡಿ |
ಶ್ವಾಸೋಚ್ವಾಸ ಎರಡೆತ್ತಮಾಡಿ ||
ಜ್ಞಾನವೆಂಬ ಹಗ್ಗ ಕಣ್ಣಿಯ ಮಾಡಿ ||
ನಿರ್ಮಮವೆಂಬ ಗುಂಟೆಲಿ ಹರಗಿರಯ್ಯ 1
ಮದಮತ್ಸರಗಳೆಂಬ ಮರಗಳನೆ ತರಿದು |
ಕಾಮಕ್ರೋಧಗಳೆಂಬ ಕಳೆಯ ಕಿತ್ತಿ ||
ಪಂಚೇಂದ್ರಿಯವೆಂಬ ಮಂಚಿಕೆಯನೆ ಹಾಕಿ |
ಚಂಚಲವೆಂಬ ಹಕ್ಕಿಯ ಹೊಡಿಯಿರಯ್ಯ 2
ಉದಯಾಸ್ತಮಾನವೆಂಬ ಎರಡು ಕೊಳಗದಲಿ |
ಆಯುಷ್ಯವೆಂಬ ರಾಶಿ ಅಳೆಯುತಿರೆ ||
ಸ್ವಾಮಿ ಶ್ರೀ ಪುರಂದರವಿಠಲನ ನೆನೆದರೆ |
ಪಾಪ ರಾಶಿಯ ಪರಿಹರಿಸುವನಯ್ಯ* 3


ನಾರಾಯಣ ನಿನ್ನ ನಾಮವನು ನೆನೆದರೆ narayana ninna naamavanu nenedare


ನಾರಾಯಣ ನಿನ್ನ ನಾಮವನು ನೆನೆದರೆ |
ಹಾರಿಹೋಹುದು ಪಾಪ ಜನ್ಮಜನ್ಮಾಂತರದಿ |
ಶ್ರೀ ರಮಣ ನಿನ್ನ ಕೃಪೆಯಿತ್ತೆಮಗೆ ಮುಕ್ತಿಯ -
ದಾರಿ ತೋರಿಸೊ ಮುರಾರಿ ಪ
ಸಕಲ ವೇದ ಪುರಾಣ _ ಶಾಸ್ತ್ರವನು ತಿಳಿದೋದಿ |
ತಿಯಿಂಭಕುತ ತಾಯ್ತಂದೆಗಳ ಚಿತ್ತವಿಡಿದರ |
ರಕುಷಣೆಯ ಮಾಡಿ ಜಗದೊಳಗೆ ವಿಖ್ಯಾತ ಸುಕು -
ಮಾರ ತಾನೆಸಿಸಿಕೊಂಡ 1
ಪ್ರಕೃತಿಯಲಿ ಹೋಮಕೋಸ್ಕರ ಸಮಿಥೆ ತರಹೋಗಿ |
ಶುಕರುಮಗಳಿಂದ ಚಾಂಡಾಲಿಲೆಯ ಕಂಡು ತಾ - |
ಮೂಕನಾಗಿ ನಿಂದು ಮೈಮರೆದು ಪಾತಾಕಿಯ ಬಹ -
ದುರಿತವನು ತಾನರಿಯದೆ 2
ನಿಲ್ಲು ನಿಲ್ಲೆಲೆ ಕಾಂತೆ, ನಿನಗೊಲಿದೆ ನೀನಾರೆ |
ಸೊಲ್ಲಿಸೆನ್ನೊಡನೆ ಸತಿಯರ ಕುಲಕೆ ಕಟ್ಟಾಣಿ |
ಚೆಲ್ಲೆನ್ನ ಮೇಲೆ ಕರುಣವನಿಂತು ಕೋಮಲೆಯೆ
ನಿಲ್ಲೆಂದು ಸೆರಗ ಪಿಡಿದ 3
ಎಲೊ ವಿಪ್ರ ಕೇಳು ನಾ ಕುಲಹೀನೆ ನಮ್ಮ ಮನೆ |
ಹೊಲನೆನದು ಗೋಮಾಂಸ ಚರ್ಮದಾ ಹಾಸಿಕೆಯು |
ಎಲುವಿನಾ ರಾಶಿ ಒದರುವ ನಾಯ ಹಿಂಡುಗಳು -
ಬಹು ಘೋರಘೋರ ವಿಹುದು 4
ಬಲೆಗೆ ಸಿಲ್ಕಿದ ಪಕ್ಷಿ ಬೇಟೆಗಾರನದಲೇ ? |
ಕುಲವನ್ನು ಕೂಡೆ ನಾ ಕಾಮಿನೀರನ್ನಳೆ |
ಚಲದಿಂದ ಬದುಕುವೆನು ಸುಖದಿಂದಲಿರುವೆ ನೀ
ಒಲವು ನನಗೊಂದೆ ಎಂದ 5
ವ್ಯರ್ಥ ಎನ್ನೊಡನೆ ಮಾತೇತಕೆಲೊ ಹಾರುವಾ |
ಚಿತ್ತ ನನ್ನಲ್ಲಿ ಇದ್ದರೆ ಹೋಗಿ ನೀ ನಿನ್ನ |
ಹೆತ್ತ ತಾಯ್ತಂದೆಯರ ಕೇಳು ಸಮ್ಮತಿಸಿದರೆ -
ಮತ್ತೆ ನಿನಗೊಲಿವೆನೆನಲು 6
ಅತ್ತ ಕಾಮಿನಿಯ ಒಡಗೊಡಿ ತನ್ನಯ ಪಿತನ |
ಹತ್ತಿರಕೆ ಹೋಗಿ ಕೇಳಿದರೆ ಆತನು ಎಂದ |
ಉತ್ತಮದ ಕುಲವನೀಡಾಡಿ ಈ ಪಾತಾಕಿಯ -
ಹಸ್ತಕೊಳಗಾಗದಲಿರೈ 7
ಆಗದಾಗದು ನನ್ನ ಕುಲಬಂಧು - ಬಳಗವನು |
ನೀಗಿ ನಿನ್ನೊಡನೆ ಕೂಡುವೆನೆಂಬ ಮತವೆನಗೆ |
ನಾಗಭೂಷಣನ ಪಣೆಗಣ್ಣಿಲುರಿದನ ಬಾಣ
ತಾಗಿತೆನ್ನೆದೆಗೆ ಎಂದ 8
ಕೂಗಿ ಹೇಳುವೆ ನಿನ್ನ ಕುಲವಳಿಯದಿರು ಎಂದ |
ಹೋಗಿ ಕೂಡದೆ ನಿನ್ನ ಹೆತ್ತ ತಾಯ್ತಂದೆಗಳಿ - |
ಗಾಗದಿದ್ದರೆ ಆಚೆಯಾ ಮನೆಯೊಳಗೆ ಹೋಗಿ
ಇಬ್ಬರೂ ಇರುವೆವೆಂದ 9
ಹಾಲಂತ ಕುಲವ ನೀರೊಳಗದ್ದಿ ಪೂರ್ವದಾ |
ಶೀಲವನ್ನಳಿದು ಸತಿಯಳ ಕೂಡಿ ತಾನು ಚಾಂ - |
ಡಾಲಿತಿಗೆ ಹತ್ತು ಮಕ್ಕಳನು ಪಡೆಕೊಂಡವರ
ಲೀಲೆ ನೋಡುತಲಿ ಹಿಗ್ಗಿ10
ಬಾಳಿನಲ್ಲೀ ರೀತಿ ಅಜಮಿಳನು ಇರುತಿರಲು |
ಕಾಲ ಬಂದೊದಗಿತ್ತು ಕರೆಯಿರೆವೆ ಪಾತಕನ |
ಜೋಲುದುಟಿ ಡೊಂಕು ಮೋರೆಯ ಅಬ್ಬರದಿ ಯಮನ -
ಆಳುಗಳು ಬಂದರಾಗ11
ಎಡಗೈಯೊಳಗೆ ಪಾಶ ಹಿಡಿದು ಚಮ್ಮತಿಗೆಗಳ |
ಒಡನೆ ಜಾವಳಿನಾಯಿ ವಜ್ರಮೋತಿಯ ಕಾಯಿ |
ತುಡಿಕಿರೋ ಕೆಡಹಿ ಕಟ್ಟಿರೋ ಪಾತಕನನೆಂದು
ಘುಡುಘುಡಿಸಿ ಬಂದರಾಗ12
ಗಡಗಡನೆ ನುಡುಗಿ ಕಂಗೆಟ್ಟು ಅಜಮಿಳನು ತಾ |
ಕಡೆಯ ಕಾಲಕೆ ಅಂಜಿ ಮಗನ ನಾರಗನೆಂದು |
ಒಡನೊಡನೆ ಕರೆಯಲ್ಕೆ ಯಮನಾಳ್ಗಳೋಡಿದರು
ಮುಟ್ಟಿದುದು ಹರಿಗೆ ದೂರು13
ಕೊರಳ ತುಳಸಿಯ ಮಾಲೆಯರಳ ಪೀತಾಂಬರದ |
ವರಶಂಖ ಚಕ್ರದ್ವಾದಶನಾಮಗಳನಿಟ್ಟ |
ಹರಿಯ ದೂತರು ಅಂಜಬೇಡ ಬೇಡನ್ನುತಲಿ
ಹರಿದೋಡಿಬಂದರಲ್ಲಿ14
ಪುಂಡರೀಕಾಕ್ಷನೀ ಭೃತ್ಯನನು ಬಾಧಿಸುವ |
ಲಂಡಿರಿವರಾರು ನೂಕಿರಿ ನೂಕಿರೆಂತೆಂದು |
ದಂಡವನು ತೆಗೆದು ಬೀಸಾಡಿ ಯಮನವರಿಗು - |
ದ್ದಂಡರಿವರೆಂದರಾಗ 15
ತಂದೆ ಕೇಳಿರಿ ಒಂದು ಭಿನ್ನಪವ ಲಾಲಿಸಿರಿ |
ಒಂದು ದಿನ ಹರಿಯೆಂದು ಧ್ಯಾನವನ್ನರಿಯ ನಾವ್ - |
ಬಂದಾಗ ಆತ್ಮಜನ ನಾರಗನೆ ಎಂದೆನಲು
ಕುಂದಿದುವೆ ಇವನ ಪಾಪ ?16
ಹಂದೆ - ಕುರಿಗಳಿಗೆ ನಿಮಗಿಷ್ಟು ಮಾತುಗಳೇಕೆ |
ನಿಂದಿರದೆ ಹೋಗಿ ನಿಮ್ಮೊಡೆಯನಿಗೆ ಪೇಳೆನಲು |
ಸಂದಲಾ ಯಮಭಟರು ಅಜಮಿಳನ ಹರಿಭಟರು
ತಂದರೈ ವೈಕುಂಠಕೆ 17
ಮದ್ಯಪಾನವ ಮಾಡಿ ಪೆಂಗಳನು ಒಡಗೂಡಿ |
ಅದ್ದಿದೆನು ನೂರೊಂದು ಕುಲವ ನರಕದೊಳೆಂದು |
ಹದ್ದಿನಾ ಬಾಯೊಳಗಿನುರಗನಂತಜಮಿಳನು
ಇದ್ದನವ ನೆರೆಮರುಗುತ18
ವಿಪ್ರಕುಲದಲಿ ಹುಟ್ಟಿ ವೇದಶಾಸ್ತ್ರವನೋದಿ |
ಮುಪ್ಪಾದ ತಾಯಿ - ತಂದೆಗಳೆಲ್ಲರನು ಬಿಟ್ಟು |
ಒಪ್ಪಿ ಧಾರೆಯನೆರೆದ ಕುಲಸತಿಯ ಬಿಟ್ಟು ಕಂ -
ದರ್ಪನಾ ಬಲೆಗೆ ಸಿಕ್ಕಿ19


ನಾರಾಯಣ ನಿನ್ನ ನಾಮದ narayana ninna namada


ನಾರಾಯಣ ನಿನ್ನ ನಾಮದ ಸ್ಮರಣೆಯ |
ಸಾರಮೃತವೆನ್ನ ನಾಲಗೆಗೆ ಬರಲಿ ಪ
ಕೂಡುವಾಗಲು ನಿಂತಾಡುವಾಗಲು ಮತ್ತೆ |
ಹಾಡುವಾಗಲು ಹರಿದಾಡುವಾಗ ||
ಖೋಡಿ ವಿನೋದದಿ ನೋಡದೆ ನಾ ಬಲು |
ಮಾಡಿದ ಪಾಪ ಬಿಟ್ಟೋಡಿ ಹೋಗುವ ಹಾಗೆ 1
ಊರಿಗೆ ಹೋಗಲಿ ಊರೊಳಗಿರಲಿ-|
ಕಾರಾಣಾರ್ಥಗಳೆಲ್ಲ ಕಾದಿರಲಿ ||
ವಾರಿಜನಾಭ ನರ ಸಾರಥಿ ಸನ್ನುತ |
ಸಾರಿಸಾರಿಗೆ ನಾ ಬೇಸರಿಸದ ಹಾಗೆ 2
ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ |
ರಸ-ಕಸವಿರಲಿ ಹರುಷವಿರಲಿ ||
ವಸುದೇವಾತ್ಮಜ ಶಿಶುಪಾಲಕ್ಷಯ ||
ಅಸುರಾಂತಕ ನಿನ್ನ ಹೆಸರು ಮರೆಯದಂತೆ 3
ಕಷ್ಟದಲ್ಲಿರಲಿ ಉತ್ಕøಷ್ಟದಲ್ಲಿರಲಿ-|
ಎಷ್ಟಾದರು ಮತಿಗೆಟ್ಟಿರಲಿ ||
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ |
ಅಷ್ಟಾಕ್ಷರ ಮಹಾಮಂತ್ರದ ನಾಮದ 4
ಕನಸಿನೊಳಾಗಲಿ ಕಳವಳಿಕಾಗಲಿ |
ಮನಸುಗೊಟ್ಟಿರಲಿ ಮುನಿದಿರಲಿ ||
ಜನಕಜಾಪತಿ ನಿನ್ನ ಚರಣಕಮಲವನು |
ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳುವ ಹಾಗೆ 5
ಜ್ವರ ಬಂದಾಗಲು ಚಳಿ ಬಂದಾಗಲು |
ಮರಳಿ ಮರಳಿ ಮತ್ತೆ ನಡೆವಾಗಲು ||
ಹರಿನಾರಾಯಣ ದುರಿತ ನಿವಾರಣ |
ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ 6
ಸಂತತ ಹರಿ ನಿನ್ನ ಸಾಸಿರನಾಮವ |
ಅಂತರಂಗದಾ ಒಳಗಿರಿಸಿ ||
ಎಂತೋ ಪುರಂದರವಿಠಲರಾಯನೆ |
ಅಂತ್ಯಕಾಲದಲಿ ಚಿಂತಿಸುವಂತೆ 7


ನಾರಾಯಣ ತೇ ನಮೋ ನಮೋ narayana te namo namo


ನಾರಾಯಣ ತೇ ನಮೋ ನಮೋ |ನಾರದಸನ್ನುತ ನಮೋ ನಮೋ ಪಮುರಹರ ನಗಧರ ಮುಕುಂದ ಮಾಧವ |ಗರುಡಗಮನ ಪಂಕಜನಾಭ ||ಪರಮ ಪುರುಷ ಭವಭಂಜನ ಕೇಶವ |ನರಮೃಗ ಶರೀರ ನಮೋ ನಮೋ 1
ಜಲಧಿಶಯನ ರವಿಚಂದ್ರ ವಿಲೋಚನ |ಜಜರುಹಭವನುತ ಚರಣಯುಗ ||ಬಲಿಬಂಧನ ಗೋವರ್ಧನಧಾರಿ |ನಳಿನೋದರ ತೇ ನಮೋ ನಮೋ 2
ಆದಿದೇವ ಸಕಲಾಗಮ ಪೂಜಿತ |ಯಾದವಕುಲ ಮೋಹನರೂಪ ||ವೇದೋದ್ದರ ಶ್ರೀವೆಂಕಟನಾಯಕ |ಮೋದದ ಪುರಂದರ ವಿಠಲ ನಮೋ ನಮೋ3


ನಾರಾಯಣ ಗೋವಿಂದ narayana govinda


ನಾರಾಯಣ ಗೋವಿಂದ - ಹರಿಹರಿ
ನಾರಾಯಣ ಗೋವಿಂದ ಪ
ನಾರಾಯಣ ಗೋವಿಂದ ಮುಕುಂದ
ಪರತರ ಪರಮಾನಂದ ಅ.ಪ
ಮೊದಲು ಮತ್ಸ್ಯನಾಗಿ ಉದಿಸಿ ಸೋಮನನು
ಸದೆದು ವೇದಗಳ ತಂದ 1
ಮಂದರಗಿರಿಯಲಿ ಸಿಂಧುಮಥಿಸಿ ಸುಧೆ
ತಂದು ಭಕ್ತರಿಗುಣಲೆಂದ 2
ಭೂಮಿಯ ಕದಿದಾ ಖಳನನು ಮರ್ದಿಸಿ
ಆ ಮಹಾಸತಿಯಳ ತಂದ 3
ದುರುಳ ಹಿರಣ್ಯನ ಕರುಳುಬಗೆದು ತನ್ನ
ಕೊರಳೊಳಗಿಟ್ಟಾನಂದದಿಂದ 4
ಪುಟ್ಟನಾಗಿ ದಾನಕೊಟ್ಟ ಬಲಿಯ ತಲೆ
ಮೆಟ್ಟಿ ತುಳಿದ ಬಗೆಯಿಂದ 5
ಧಾತ್ರಿಯೊಳಗೆ ಮುನಿಪುತ್ರನಾಗಿ ಬಂದು
ಕ್ಷತ್ರಿಯರೆಲ್ಲರ ಕೊಂದ 6
ಮಡದಿಗಾಗಿ ತಾ ಕಡಲನೆ ಕಟ್ಟಿ
ಹಿಡಿದು ರಾವಣನ ಕೊಂದ 7
ಗೋಕುಲದೊಳು ಹುಟ್ಟಿ ಆಕಳ ಕಾಯ್ದ
ಶ್ರೀಕೃಷ್ಣನು ತಾ ಬಂದ 8
ಛಲದಲಿ ತ್ರಿಪುರರ ಸತಿಯರ ವ್ರತದ
ಫಲವನಳಿದ ಬಗೆಯಿಂದ 9
ಧರೆಯೊಳು ಪರಮ ನೀಚರ ಸವರಲು ಕು -
ದುರೆಯನೇರಿದ ಕಲಿ ಚೆಂದ 10
ದೋಷದೂರ ಶ್ರೀ ಪುರಂದರ ವಿಠಲ
ಪೋಷಿಪ ಭಕ್ತರ ವೃಂದ 11


ನಾರಾಯಣ ಎನ್ನಿರೊ narayana enniro


ನಾರಾಯಣ ಎನ್ನಿರೊ - ಶ್ರೀ ನರಹರಿ |
ನಾರಾಯಣ ಎನ್ನಿರೊ ಪ.
ನಾರಾಯಣನೆಂದು ಅಜಮಿಳ ಕೈವಲ್ಯ |
ಸೂರೆಗೊಂಡನೆಂಬ ಸುದ್ದಿಯನರಿಯಿರಾ ? ಅಪ
ಚೋರರ ಭಯ ಎಲ್ಲವೊ - ಇದಕೆ ನೋಡೈ - |
ದಾರರಂಜಿಕೆ ಇಲ್ಲವೊ ||
ಊರನಾಳುವ ದೊರೆಯ ಭೀತಿ ಇನಿತಿಲ್ಲವೊ ||
ಘೋರ ಪಾತಕವೆಲ್ಲ ಹಾರಬಿಡುವುದಿದು 1
ಕಾಶಿಗೆ ಹೋಗಲೇಕೆ - ಕಾವಡಿ ಹೊತ್ತು - |
ಬೇಸತ್ತು ತಿರುಗಲೇಕೆ |
ವಾಸುದೇವನ ನಾಮ ವರ್ಣಿಸಿದವರಿಗೆ |
ಕ್ಲೇಶವೆಂಬುವುದಿದು ಲೇಶಮಾತ್ರವು ಇಲ್ಲ 2
ಸ್ನಾನವ ಮಾಡಲೇಕೆ - ಸಂಧ್ಯಾವಂದನೆ - |
ಮೌನ ಮಂತ್ರಗಳೇತಕೆ ||
ದೀನರಕ್ಷಕ ಬೆಟ್ಟದೊಡೆಯನಾದವನ |
ಧ್ಯಾನಕೆ ಸಮವುಂಟೆ ಪುರಂದರವಿಠಲನ 3


ನಾರಾಯಣ ಎನ್ನಬಾರದೆ narayana ennabaarade


ನಾರಾಯಣ ಎನ್ನಬಾರದೆ - ನಿಮ್ಮ |
ನಾಲಿಗೆಯೊಳು ಮುಳ್ಳು ಮುರಿದಿಹುದೇ ? ಪ.
ವಾರಣಾಸಿಗೆ ಪೋಗಿ ದೂರ ಬಳಲಲೇಕೆ |
ನೀರ ಕಾವಡಿಯನು ಪೊತ್ತು ತಿರುಗಲೇಕೆ ||
ಊರುರು ತಪ್ಪದೆ ದೇಶಾಂತರವೇಕೆ |
ದಾರಿಗೆ ಸಾಧನವಲ್ಲವೆ ಹರಿನಾಮ ? 1
ನಿತ್ಯ ಉಪವಾಸವಿದ್ದು ಹಸಿದು ಬಳಲಲೇಕೆ |
ಮತ್ತೆ ಚಳಿಯೊಳು ಗಂಗೆ ಮುಳಗಲೇಕೆ ||
ಹಸ್ತವ ಪಿಡಿದು ಮಾಡುವ ಜಪ - ತಪವೇಕೆ
ಮುಕ್ತಿಗೆ ಸಾಧನವಲ್ಲವೇ ಹರಿನಾಮ ? 2
ಸತಿ - ಸುತರನು ಬಿಟ್ಟು ಯತಿಗಳಾಶ್ರಮವೇಕೆ
ವ್ರತ - ಕೃಚ್ಛ್ರ ನೇಮ - ನಿಷ್ಟೆಗಳೇತಕೆ ||
ಪೃಥಿವಿಯೊಳಗೆ ನಮ್ಮ ಪುರಂದರವಿಠಲನ |
ಅತಿ ಭಕುತಿಯಿಂದೊಮ್ಮೆ ನೆನೆದರೆ ಸಾಲದೆ 3


ನಾಮವನೊದಗಿಸಯ್ಯ -ಶ್ರೀಹರಿ ನಿನ್ನ naamavanodagisayya


ನಾಮವನೊದಗಿಸಯ್ಯ -ಶ್ರೀಹರಿ ನಿನ್ನ |
ನಾಮವನೊದಗಿಸಯ್ಯ ಪ
ನಾಮವನೊದಗಿಸಯ್ಯ ನಾನೆಂಬ ಕರ್ತೃತ್ವ ಬಿಡಿಸಿ |
ಸಾಮಜಪೋಷಕ ನಿನ್ನ ಪಾದಸರಸಿಜಗಳಿಗೆರಗುವೆ ಅ.ಪ
ಮಾತನಾಡುವಾಗ ಮಲಗುವಾಗ ನಡೆಯುವಾಗ |
ಭೀತಿಗೊಂಡಾಗ ಎಡಹಿಬೀಳುವಾಗ |
ಸೀತಾರಾಮ ಗೋವಿಂದ ಶ್ರೀ ವೈಕುಂಠಾಧೀಶ ಅ-|
ನಾಥ ಬಾಂಧವ, ಕೃಷ್ಣಾ, ಕೃಷ್ಣಾ ಎಂದು ಕರೆವ 1
ತನು ತಾಳದಂಥ ಕ್ಷುಧೆ ದಾಹವಿಕಾರಗ-|
ಳನುಭವಿಸುತ ಕಂಗೆಡುವಂಥ ಸಮಯದಲ್ಲಿ ||
ವನಜನಾಭ ಗೋವಿಂದ, ವಾಣೀಪತಿಪಿತ ಕೃಷ್ಣ |
ದನುಜ ಮರ್ದನ ಭಕ್ತ ವತ್ಸಲನೆಂದು ಕರೆವ 2
ಆಸಹ್ಯವಾದ ಜರೆ ರೋಗಂಗಳಾವರಿಸಿ |
ಅಸುಗಳು ಕಂಠಗತವಾಗಿ ಧೃತಿತಪ್ಪಿ ||
ವಿಷಮದೂತನ ಕೈವಶವಪ್ಪ ಸಮಯದಲ್ಲಿ |
ಬಿಸಜಾಕ್ಷ ಪುರಂದರವಿಠಲನೆಂದು ಕರೆವ 3


ನಾನೇನ ಮಾಡಿದೆನೊ naanena maadideno


ನಾನೇನ ಮಾಡಿದೆನೊ-ರಂಗಯ್ಯ ರಂಗ
ನೀನೆನ್ನ ಕಾಯಬೇಕೋ ಪ
ಮಾನಾಭಿಮಾನವು ನಿನ್ನದು ಎನಗೇನು
ದೀನ ರಕ್ಷಕ ತಿರುಪತಿ ವೆಂಕಟರಮಣ ಅ.¥
ರಕ್ಕಸತನುಜನಲ್ಲೇ - ಪ್ರಹ್ಲಾದನು
ಚಿಕ್ಕ ಪ್ರಾಯದ ಧ್ರುವನು ||
ಸೊಕ್ಕಿನ ಪಾಪ ಮಾಡಿದಜಮಿಳನು ನಿನ್ನ
ಅಕ್ಕನ ಮಗನು ಮಗನು ಏನೋ -ರಂಗಯ್ಯ 1
ಕರಿರಾಜ ಕರಿಸಿದನೇ - ದ್ರೌಪದಿದೇವಿ
ಬರದೋಲೆ ಕಳುಹಿದಳೇ ||
ಕರುಣದಿಂದಲಿ ಋಷಿಪತ್ನಿಯ ಶಾಪವ
ಪರಿಹರಿಸಿದೆಯಲ್ಲವೋ -ರಂಗಯ್ಯ
ಒಪ್ಪಿಡಿಯವಲಕ್ಕಿಯ -ನಿನಗೆ ತಂದು
ಒಪ್ಪಿಸಿದವಗೊಲಿದೆ ||
ಒಪ್ಪುವೆ ನಿನಗೆ ಶ್ರೀ ಪುರಂದರ ವಿಠಲವ
ರಪ್ಪಂತೆ ಎನ್ನ ಕಾಯೋ -ರಂಗಯ್ಯ 3


ನಾನೇಕೆ ಬಡವನೊ naaneke badavano


ನಾನೇಕೆ ಬಡವನೊ -ನಾನೇಕೆ ಪರದೇಶಿ
ನೀನಿರುವತನಕ ಹರಿಯೇ ಪ
ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರರು ನೀನೆ
ಅಷ್ಟೆಲ್ಲ ಬಳಗ ನೀನೆ ||
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠಮೂರುತಿ ಕೃಷ್ಣ ನೀನಿರುವ ತನಕ 1
ಒಡಹುಟ್ಟಿದಣ್ಣ ನೀನೆ, ಒಡಲ ಹೊರೆವನ ನೀನೆ
ಇಡು-ತೊಡುವ ವಸ್ತು ನೀನೆ ||
ಮಡದಿ ಮಕ್ಕಳನೆಲ್ಲ ಕಡಹಾಯ್ಸುವವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವ ತನಕ 2
ವಿದ್ಯೆ ಹೇಳುವ ಗುರು ನೀನೆ ಬುದ್ಧಿ ಹೇಳುವ ಧಣಿ ನೀನೆ
ಉದ್ಧಾರಕರ್ತ ನೀನೆ ||
ಮದ್ದು ಶ್ರೀ ಪುರಂದರ ವಿಠಲನ ಪಾದದಲಿ
ಬಿದ್ದು ಲೋಲಾಡುತಿರು ಕಾಣು ಮನವೆ 3


ನಾನೇಕೆ ಪರದೇಶಿ ನಾನೇಕೆ ಬಡವನೊ naaneke paradeshi


ನಾನೇಕೆ ಪರದೇಶಿ ನಾನೇಕೆ ಬಡವನೊ
ಮಾನಾಭಿಮಾನದೊಡೆಯ ವಿಠಲ ಎನಗಿರಲು ಪ
ಮೂರುಲೋಕದ ಒಡೆಯ ಶ್ರೀಹರಿಯು ಎನ್ನ ತಂದೆ
ವಾರಿಜಾಂಬಕೆ ಲಕ್ಷ್ಮೀ ಎನ್ನ ತಾಯಿ ||
ಮೂರು ಅವತಾರದವರೆನ್ನ ಗುರು ಕಾಣಿರೊ
ಸಾರ ಹೃದಯರು ಎನ್ನ ಬಂಧು ಬಳಗ1
ಇಪ್ಪತ್ತುನಾಲ್ಕು ನಾಮಗಳೆಂಬ ಹಳನಾಣ್ಯ
ಒಪ್ಪದಲಿ ಉಣಲುಂಟು ಉಡಲುಂಟು ತೆಗೆದು ||
ತಪ್ಪದಲೆ ನವಭಕ್ತಿಯೆಂಬ ನವರತ್ನಗಳು
ಮುಪ್ಪು ಇಲ್ಲದ ಭಾಗ್ಯ ಎನಗೆ ಸಿದ್ಧವಿರಲಿಕ್ಕೆ 2
ಎನಗೆ ಎಂಬವನ ಹೆಸರೇನೆಂಬೆ ಶ್ರೀನಿವಾಸ
ತನಗೆಂದರೆಂದು ಬಗೆವನು ಕಾಣಿರೊ ||
ಘನಮಹಿಮನಾದ ಸಿರಿ ಪುರಂದರ ವಿಠಲನು
ಅನುಮಾನವಿರದೆನ್ನ ಶಿರದ ಮೇಲಿರಲಿಕ್ಕೆ 3


ನಾಚಿಕೆಪಡಬೇಡ - ಮನದೊಳು naachike padabeda


ನಾಚಿಕೆಪಡಬೇಡ - ಮನದೊಳು -
ಯೋಚಿಸಿ ಕೆಡಬೇಡ ಪ.
ನಿಚ್ಚ ನೆನೆಯೊ ನಮ್ಮಚ್ಯುತನಾಮವ |
ಮೆಚ್ಚಿ ಕೊಟ್ಟರೆ - ಅಚ್ಯುತ ಪದವೀವ ಅಪ
ಹರಿಹರಿಯೆಂದೊದರೋ - ಹತ್ತಿದ - |
ದುರಿತಗಳಿಗೆ ಬೆದರೋ ||
ವಾರಿಜಾಕ್ಷನ - ವೈಕುಂಠಪುರವ |
ಸೇರಿಸೇರಿ ನೀ ಕುಣಿಕುಣಿದಾಡೊ 1
ಆರಗೊಡವೆ ಏನೋ - ನರಕದ |
ದಾರಿ ತಪ್ಪಿಸುವರೆ ||
ನೀರಜಾಕ್ಷ ನಮ್ಮ ನಿರ್ಜರ ಪತಿಯಲಿ |
ಸೇರಿ - ಸೇರಿಸಿ ಮನ ನಲಿನಲಿದಾಡೊ 2
ಭಕ್ತಜನರ ಕೂಡೊ - ಭವಭಯ |
ಬತ್ತಿಪೋಪುದು ನೋಡೊ ||
ಮುಕ್ತಿದಾಯಕ ಶ್ರೀ ಪುರಂದರವಿಠಲನ |
ಭಕ್ತಿಯಿಂದ ನೀ ಹಾಡಿ ಕೊಂಡಾಡೊ 3


ನಾ ಮುಂದೆ ಕೃಷ್ಣ ನೀ ಎನ್ನ ಹಿಂದೆ naa munde krishna


ನಾ ಮುಂದೆ ಕೃಷ್ಣ ನೀ ಎನ್ನ ಹಿಂದೆ-ನಿನ್ನ-|
ನಾಮವೆ ಕಾಯಿತು ನಾನೇನೆಂದೆ ಪ
ಸುರತರು ನೀನು ಫಲ ಬಯಸುವೆ ನಾನು |
ಸುರಧೇನು ನೀನು ಕರೆದುಂಬೆ ನಾನು ||
ವರಚಿಂತಾಮಣಿ ನೀನು ಪರಿಚಿಂತಿಸುವೆ ನಾನು |
ಶರಧಿಕ್ಷೀರನು ನೀನು ತರಳನೈ ನಾನು 1
ಅನಾಥನೈ ನಾನು ಎನಗೆ ಬಂಧುವು ನೀನು |
ದೀನ ಮಾನವ ನಾನು ದಯವಂತ ನೀನು ||
ದಾನವಂತಕ ನೀನು ಧೇನಿಸುವೆನು ನಾನು |
e್ಞÁನಗಂಭೀರ ನೀನು ಅಙÁ್ಞನಿ ನಾನು 2
ಒಂದರೊಳೊಂದೊಂದು ನಿನಗೆ ನಾ ಸಲಿಸುವೆ |
ಚೆಂದವಾಯಿತು ನಿನ್ನ ಸ್ತುತಿಯಿಂದಲಿ ||
ತಂದೆ ಪುರಂದರವಿಠಲರಾಯ ನೀ |
ಬಂದೆನ್ನ ಮನದಲ್ಲಿ ನಲಿನಲಿದಾಡೊ 3


ನಾ ಮಾಡಿದ ಕರ್ಮ ಬಲವಂತವಾದರೆ naa maadida karma balavantavadare


ನಾ ಮಾಡಿದ ಕರ್ಮ ಬಲವಂತವಾದರೆ |
ನೀ ಮಾಡುವುದೇನೊ ದೇವಾ ಪ
ಸಾಮಾನ್ಯವಲ್ಲವಿದು ಬ್ರಹ್ಮಬರೆದ ಬರೆಹ |
ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ ಅ.ಪ
ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ -ಪರ -|
ಸತಿಯರ ಸಂಗವ ಗಳಿಗೆ ಬಿಟ್ಟವನಲ್ಲ ||
ಮತಿಹೀನನಾಗಿ ಮರುಳಾಗಿದ್ದೆನೋ ದೇವ |
ಗತಿ ಯಾವುದೈ ಎನಗೆ ಗರುಡವಾಹನ ಕೃಷ್ಣ 1
ಅನ್ನಪಾನಂಗಳಿಗೆ ಅಗ್ರಗಣ್ಯನು ಆಗಿ |
ಸ್ನಾನ ಸಂಧ್ಯಾದಿ ಕರ್ಮಂಗಳ ನೀಗಿ ||
ದಾನವಾಂತಕ ನಿನ್ನ ಧ್ಯಾನವ ಮಾಡದೆ |
ಶ್ವಾನನಂತೆ ಮನೆಮನೆ ತಿರುಗುತಲಿದ್ದೆ 2
ಇನ್ನಾದರು ನಿನ್ನ ದಾಸ ಸಂಗವನಿತ್ತು |
ಮನ್ನಿಸಿ ದಯಮಾಡೊ ಮನ್ಮಥಜನಕ ||
ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ |
ಪನ್ನಂಗಶಯನ ಶ್ರೀಪುರಂದರವಿಠಲ 3


ನಾ ನಿನ್ನ ಧ್ಯಾನದೊಳಿರಲು naa ninna dhyanadoliralu


ನಾ ನಿನ್ನ ಧ್ಯಾನದೊಳಿರಲು - ಇಂಥ
ಹೀನ ಮಾನವರಿಂದೇನಾಹೋದು ಹರಿಯೆ ಪ.
ಮಚ್ಚರಿಸಿದರೇನ ಮಾಡಲಾಪರೊ ಎನ್ನ
ಅಚ್ಯುತ ನಿನ್ನದೊಂದು ದಯವಿರಲು ||
ವಾಚ್ಛಲ್ಯ ಬಿಡದಿರು ನಿನ್ನ ನಂಬಿದ ಮೇಲೆ
ಕಿಚ್ಚಿಗೆ ಗೊರಲೆ ಮುತ್ತುವುದೆ ಕೇಳೆಲೊ ರಂಗ 1
ದಾಳಿಯಲಿ ತೇಜಿ ವೈಹಾಳಿಯಲಿ ನಡೆಯಲು
ಧೂಳು ರವಿಗೆ ತಾನು ಮುಸುಕುವುದೇ ||
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ ?
ಗಾಳಿಗೆ ಗಿರಿ ನಡುಗುವುದೆ ಕೇಳೆಲೊ ರಂಗ 2
ಕನ್ನಡಿಯೊಳಗಿನ ಗಂಟ ಕಂಡು ಕಳ್ಳ
ಕನ್ನವಿಕ್ಕಲು ವಶವಾಗುವುದೇ ?
ನಿನ್ನ ಧ್ಯಾನವ ಮಾಡೆ ಪುರಂದರವಿಠಲನೆ
ಚಿನ್ನಕ್ಕೆ ಪುಟವಿಕ್ಕಿದಂತೆ ಕೇಳೆಲೊ ರಂಗ 3


ನಾ ನಿನಗೇನ ಬೇಡುವುದಿಲ್ಲ naa ninagena beduvadilla


ನಾ ನಿನಗೇನ ಬೇಡುವುದಿಲ್ಲ - ಎನ್ನ
ಹೃದಯಕಮಲದೊಳು ನೆಲಸಿರು ಹರಿಯೆಪ
ಶಿರ ನಿನ್ನ ಚರಣಕೆರಗಲಿ -ಚಕ್ಷು
ಎರಕದಿಂದಲಿ ನಿನ್ನ ನೋಡಲಿ ಹರಿಯೆ ||
ನಿರುಮಾಲ್ಯ ನಾಸ ಘ್ರಾಣಿಸಲಿ -ಎನ್ನ
ಕರಣ ಗೀತಂಗಳ ಕೇಳಲಿ ಹರಿಯೆ 1
ನಾಲಗೆ ನಿನ್ನ ಕೊಂಡಾಡಲಿ ಎನ್ನ
ತೋಳು ಕರಂಗಳ ಮುಗಿಯಲಿ ಹರಿಯೆ ||
ಕಾಲು ತೀರ್ಥಯಾತ್ರೆಗೆ ಪೋಗಲಿ -ಮನ
ಓಲೈಸಿ ನಿನ್ನನು ಸ್ಮರಿಸಲಿ ಹರಿಯೆ 2
ಚಿತ್ತ ನಿನ್ನೊಳು ಮುಳುಗಾಡಲಿ -ನಿನ್ನ
ಭಕ್ತ ಜನರ ಸಂಗ ದೊರಕಲಿ ಹರಿಯೆ ||
ತತ್ತ್ವಯೋಗಾಭ್ಯಾಸಕ್ಕಾಗಲಿ -ಉಕ್ಕಿ
ಸತ್ಯ ಮೂರುತಿ ನಮ್ಮ ಪುರಂದರ ವಿಠಲ * 3


ನಳಿನಜಾಂಡ ತಲೆಯದೂಗೆ nalinajanda taleyaduge


ನಳಿನಜಾಂಡ ತಲೆಯದೂಗೆ |
ಇಳೆಯು ನಲಿದು ಮೋಹಿಸುತಿರಲು ||
ಕೊಳಲ ಪಿಡಿದು ಬಾರಿಸಿದನು |
ಚೆಲುವ ಕೃಷ್ಣರಾಯನು ಪ
ಪೊಳೆವ ಪೊಂಬಟ್ಟೆಯ ದಟ್ಟಿ |
ಅಳವಡಿಸಿ ನೆಗಹಿನಿಂದ ||
ಹಲವು ರನ್ನದುಂಗುರವಿಟ್ಟ |
ಚೆಲುವ ಬೆರಳ ನಟಿಸುತ ||
|ಲಲಿತ ವಾಮಭಾಗ ತೋಳ-|
ಲೊಲಿದು ಓರೆನೋಟದಿಂದ ||
ಬಲದ ಪಾದ ಎಡಕೆ ಚಾಚೆ |
ನಳಿನಪದಗಳೊಪ್ಪುತಿರಲು 1
ಸೆಳನಡುವಿನೊಳಗೆ ಕತ್ತರಿ |
ಕಳೆಯ ಸಂಚಿ, ಗಜುಗು ಚೀಲ ||
ಬಿಳಿಯ ಮಣಿಯು ಗುಳ್ಳೆಗಳಿರಲು |
ಮಲಯಜಾನು ಲೇಪನ ||
ಜಲಜನೇತ್ರ ಕೌಸ್ತುಬಾಧಿ-|
ಗಳದಿ ಸ್ವರಗಳೊಪ್ಪುತಿರಲು ||
ಲಲಿತ ವೇಣು ಕಲ್ಪನೆಯಲಿ ಗೋ-|
ವಳರೆಲ್ಲರು ಕುಣಿಯಲು 2
ಮಾರವಿ ದೇಸಿ ಗುರ್ಜರಿ ಭೈರವಿ |
ಗೌರಿ ನಾಟಿ ಸಾವೇರಿ ಆಹೇರಿ ||
ಪೂರವಿ ಕಾಂಬೋದಿ ಪಾಡಿ ದೇಶಾಕ್ಷಿ ಶಂ-|
ಶಕರಾಭರಣ ರಾಗದಿ ||
ಪೂರವಿ ಕಲ್ಯಾಣಿ ವಸಂತ ತೋಡಿ |
ವರಾಳಿ ಗುಂಡಕ್ರಿ ಸಾರಂಗ ಸಾಳಗ ||
---------------------
ಸೋರಟ ಭೂಪಾಳಿ ಶ್ರೀ ರಾಗದಿಂದಲಿ 3
ಹರುಷದಿ ಬಾರಿಸುವ ರವಕೆ |
ಪುರದ ಸ್ತ್ರೀ ಜನರು ಎಲ್ಲ ||
ಮರೆದು ಮಕ್ಕಳ ಮನೆಯ ಕೆಲಸ |
ಮರೆದು ಹರಿಯ ಬಳಸಲು ||
ಕರಿಯು ಮೃಗವು ಕೇಸರಿ ಶರಭ |
ಹರಿಣ ನವಿಲು ಉರಗ ಮೋಹಿಸಿ ||
ನೆರೆದು ಮರೆದು ಜಾತಿವೈರವ |
ಸ್ವರವ ಕೇಳುತಿರಲು 4
ಕರಗೆ ಗಿರಿಯ ಕಲ್ಲು ತರುಗ-|
ಳೆರಗಿ ಪಕ್ಷಿ ತತಿಗಳಿರಲು ||
ಸುರರು ಸುಮನ ಸುರಿಯುತಿರಲು |
ಧರೆಯು ಮುದದಿ ಕುಣಿಯುತಿರಲು ||
ಶರಧಿ ಉಕ್ಕಿ ಸರಿತು ಸೊಕ್ಕಿ |
ಪುರರಿಪು ವಿಧಿ ಪೊಗಳುತಿರಲು ||
ವಿರಚಿಸಿದ ಪುರಂದರವಿಠಲ |
ಮುರಲಿಗಾನ ಮಾಡಿದ 5


Thursday 4 June 2020

ನಲಿದಾಡೆ ಎನ್ನ ನಾಲಿಗೆ ಮೇಲೆ nalidaade enna naalige mele


ನಲಿದಾಡೆ ಎನ್ನ ನಾಲಿಗೆ ಮೇಲೆ - ಸರಸ್ವತಿ ದೇವಿ ಪ
ಕುಣಿದಾಡೆ ಎನ್ನ ನಾಲಗೆ ಮೇಲೆ ಅ.ಪ
ಸಲಿಲಜೋದ್ಬವನ ವದನ ನಿಲಯಳೇ
ಇಳೆಯೊಳಪ್ರತಿಮ ಗುಣಾಂಬುಧಿ ತಾಯೆ ಅ.ಪ
ಘಿಲುಘಿಲು ಘಿಲ್ಲು ಗೆಜ್ಜೆಯ ನಾದ | ಭಳಿ ಭಳಿರೆಂಬಂದುಗೆ |
ಹೊಳೆವ ಬೆರಳುಂಗುರ ಕಿಣಿಕಿಣಿನಾದ | ಎಳೆಯ ಮಾವಿನ |
ತಳಿರ ಪೋಲುವ ದಿವ್ಯ ಪಾದ | ಚೆಲ್ವಪೆಂಡೆಯ ಭೇದ ||
ನಲಿವ ಯುಗಳ ಜಂಘೆ | ಜಲಗುಳ್ಳೆಯಂತೆ ಜಾನು |
ಥಳಥಳಿಸುವ ತೊಡೆ ಹೊಳೆವ ಸುಗುಣಿಯೆ1
ದಿನಕರ ಕೋಟಿ ತೇಜದಿ ಹೊಳೆವ ಅನುಪಮವಾದ |
ಕನಕವಸನದಿಂದಲಿ ಎಸೆವ | ಘನವಾದ ಜಘನಗ-
ಗನದಂದದಿ ಕಟಿಯಲ್ಲಿ ಮೆರೆವ | ಮಣಿದಾಮವಿಭವ ||
ತನು ಜಠರವು ಜಾಹ್ನವಿ ಸುಳಿ ನಾಭಿಯು |
ಘನಸ್ತನಯುಗಳ ಚಂದನಲೇಪಿತಳೆ2
ದುಂಡಮುತ್ತಿನ ಕೊರಳ ಹಾರ | ಉದ್ದಂಡಮಣಿ ಪ್ರ-|
ಚಂಡ ಮಿಣಿಮಿಣಿಸುವ ಹೊನ್ನಿನ ಹಾರ | ಕರಿರಾಜಪೋತನ |
ಸೊಂಡಿಲಿನಂತೆ ಭುಜದ ಭಾರ ನಡೆವ ಒಯ್ಯಾರ ||
ಮಂಡಿತವಾದ ಕಂಕಣ ತೋಳ್ಬಳೆಗಳು |
ದುಂಡು ಹವಳ ಕೈಕಟ್ಟುಳ್ಳವಳೆ 3
ನಸುನಗು ಮುಖವು ನಾಸಾಭರಣ | ಎಸೆವ ಕಪೋಲ |
ಹೊಸ ಕುಂಡಲ ಚಳಿತುಂಬುಳ್ಳ ಶ್ರವಣ | ಬಿಸಜದಳದಂತೆ |
ಎಸೆವ ಕರ್ಣಾಂತವಾದ ನಯನ | ತಿಲಕದ ಹಸನ ||
ಶಶಿ ಸೂರ್ಯರ ಆಭರಣ ಸುಶೋಭಿತೆ |
ಕುಸುಮ ಮುಡಿದ ಮೂರ್ಧಜವುಳ್ಳವಳೇ 4
ಸಿಂಗಾರದ ಜಡೆಬಂಗಾರ | ಹೊಂಗೇದಗೆ ಮುಡಿದ |
ಬಂಗಾರದ ಹೆರಳಿನ ರಾಗುಟಿವರ | ಭೃಂಗಾದ ಸ್ವರ |
ಹಿಂಗದೆ ಭಕ್ತರ ಸಲಹುವ ಭಾರ | ಕಂಗಳ ಮನೋಹರ ||
ರಂಗ ಪುರಂದರ ವಿಟ್ಠಲರಾಯನ |ಮಂಗಳ ಮೂರ್ತಿಯ ತೋರೆ ಶುಭಾಂಗಿ 5


ನರಸಿಂಹ ಮಂತ್ರ ಒಂದೇ ಸಾಕು narasimha mantra onde saaku


ನರಸಿಂಹ ಮಂತ್ರ ಒಂದೇ ಸಾಕು -ಮಹಾ - |
ದುರಿತಕೋಟೆಗಳ ಸಂಹರಿಸಿ ಭಾಗ್ಯವನೀವ ಪ
ಹಸುಳೆ ಪ್ರಹ್ಲಾದನ ತಲೆಗಾಯ್ದುದೀ ಮಂತ್ರ |
ಅಸುರನೊಡಲ ಬಗೆದ ದಿವ್ಯವiಂತ್ರ ||
ವಸುಧೆಯೊಳು ದಾನವರ ಅಸುವ ಹೀರಿದ ಮಂತ್ರ |
ಪಶುಪತಿಗೆ ಪ್ರಿಯವಾದ ಮೂಲ ಮಂತ್ರ 1
ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ |
ಶಿಷ್ಟ ವಿಭೀಷಣನ ಪೊರೆದ ಮಂತ್ರ ||
ತುಟ್ಟತುದಿಯೊಳಜಾಮಿಳನ ಸಲಹಿದ ಮಂತ್ರ |
ಮುಟ್ಟಭಜಿಪರಿಗಿದು ಮೋಕ್ಷಮಂತ್ರ 2
ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ |
ಕೊಂಡಾಡೆ ಲೋಕಕುದ್ದಂಡ ಮಂತ್ರ ||
ಗಂಡುಗಲಿ ಪ್ರಚಂಡ ಹಿಂಡು ದಾನವರ |
ಗಂಡ ಪುರಂದರವಿಠಲನ ಮಹಾ ಮಂತ್ರ 3


ನರನಾದ ಮೇಲೆ naranaada mele


ನರನಾದ ಮೇಲೆ |
ಹರಿನಾಮ ಜಿಹ್ವೆಯೊಳಿರಬೇಕು ಪ.
ಭೂತದಯಾಪರನಾಗಿರಬೇಕು |
ಪಾತಕವೆಲ್ಲವ ಕಳೆಯಲು ಬೇಕು |
ಮಾತು - ಮಾತಿಗೂ ಹರಿ ಎನಬೇಕು 1
ವೇದ - ಶಾಸ್ತ್ರಗಳನೋದಲು ಬೇಕು |
ಭೇದಾಭೇದವ ತಿಳಿಯಲು ಬೇಕು |
ಸಾಧು - ಸಜ್ಜನರ ಸಂಗದೊಳಿರಬೇಕು 2
ತಂದೆ - ತಾಯಿಗಳ ಸೇವೆಯು ಬೇಕು |
ಬಂದುದನುಂಡು ಸುಖಿಸಲು ಬೇಕು |
ತಂದೆ ಪುರಂದರವಿಠಲನ ದಯೆಬೇಕು 3


ನಮ್ಮಪ್ಪ ಸುಮ್ಮಗಿರೊ ಗೋಪಾಲಾ nammappa summagiro gopala


ನಮ್ಮಪ್ಪ ಸುಮ್ಮಗಿರೊ ಗೋಪಾಲಾ-|
ಗುಮ್ಮನು ಎಳೆದೊಯ್ವನು ಪ
ಎಡದ ಕೈಯಲಿ ಕಪಾಲ-ಗೋಪಾಲಾ-|
ಬಲದ ಕೈಯಲಿ ತ್ರಿಶೂಲ ||
ಚಳಿಬೆಟ್ಟದ ಹೆಣ್ಣ ಮೈಯೊಳಿಟ್ಟವನಂತೆ |
ಅಲೆದು ಸ್ಮಶಾನವ ತಿರುಗುವನಂತೆ 1
ಮೂರು ಕಣ್ಣಿನವನೊ-ಗೋಪಾಲಾ-|
ಐದು ತಲೆಗಳವನೊ ||
ದಾರಿಯ ಪೋಗುವ ನಾರಿಯನೆಳತಂದು |
ಸೇರಿಸಿ ಶಿರದಲ್ಲಿ ಹೊತ್ತನೊ 2
ಚಂದ್ರನರ್ಧವ ಪಿಡಿದು-ತಲೆಯ ಮೇಲೆ-
ಚೆಂದಕಿಟ್ಟಿರುವನಂತೆ ||
ಅಂದಗಾರನಂತೆ [ಅನಲನೇತ್ರನಂತೆ] |
ಮುಂದಿಪ್ಪ ಹುಡುಗನ ಕೊಂದು ತಿಂದವನಂತೆ 3
ನಿನ್ನ ಮಗನ ಮಗನೊ-ಗೋಪಾಲಾ-|
ಪನ್ನಗ ಭೂಷಣನೋ ||
ಧನ್ಯನಾಗಿ ಶ್ರೀರಾಮ ನಾಮವನು |
ಚೆನ್ನಾಗಿ ಚಿಂತಿಪನೊ 4
ಕರಿಯಜಿನ ಪೊತ್ತವನೊ ಗೋಪಾಲಾ-|
ನೆರೆದ ಭೂತ ತಂದವನೊ ||
ಶರಧಿ ಶಯನ ನಿನ್ನ ಚರಣ ಪಂಕಜ ಭೃಂಗ |
ಪುರಂದರವಿಠಲ ಪನ್ನಂಗ ಶಯನನೆ 5


ನಡೆದು ಬಾ ನಾಲ್ವರಿದ್ದೆಡೆಗೆ nadedu baar nalvariddedage


ನಡೆದು ಬಾ ನಾಲ್ವರಿದ್ದೆಡೆಗೆ ಎನ್ನಯ ನಿನ್ನತೊಡರ ನಿರ್ಣಯಿಸಿಕೊಂಬೆನು ತೋಯಜಾಕ್ಷ ಪಆದಿಯಲ್ಲಿ ಎನ್ನ ತಾತ ಮುತ್ತಾತರುಪಾದ ಸೇವೆಯ ಮಾಡಿ | ಹಲವು ಕಾಲ ||ಸಾಧಿಸಿದರ್ಥವ ಸಲೆ ಎನ್ನ ಜೀವಕ್ಕೆಆಧಾರವಾದುದನು ಏಕೆ ಕೊಡಲೊಲ್ಲೆ 1
ಸಾಲವ ಕೇಳಲು ಸಟೆ ಟೌಳಿಯನಾಡಿಕಾಲವ ಕಳೆವೆ ನೀ ಕಪಟದಿಂದ ||ಮೇಲಿನ ವಿಬುಧರು ಮೆಚ್ಚುವಂತೆ ನಿನ್ನಕಾಲಿಗೆ ಎನ್ನ ಕೊರಳ ಕಟ್ಟಿಕೊಳ್ಳುವೆ 2
ಸನಕಾದಿ ಮುನಿಗಳ ಸಾಕ್ಷಿಯಿಂದಲಿ ಎನ್ನಮನಕೆ ಬಪ್ಪಂತೆ ನೀ ಘನ ನಂಬುಗೆಯಿತ್ತೆಅನುಮಾನವೇಕೆ ದಯೆಪಾಲಿಸೈ ಈಗವನಜಾಕ್ಷ ತಂದೆ ಪುರಂದರವಿಠಲ 3


ನಡುಮನೆಯೊಳಗೊಂದು ನಾಲ್ಕು nadumaneyolagondu nalku tenginamara


ನಡುಮನೆಯೊಳಗೊಂದು ನಾಲ್ಕು ತೆಂಗಿನಮರ -
ಹೇ ಗಿಣಿ - ಹೇ ಗಿಣಿಯೇ |
ಕಡೆಮೊದಲಿಲ್ಲದೆ ಅದು ಕಾತು ಹಣ್ಣಾಯ್ತ - ಹೇಗಿಣಿ ಪ.
ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ - ಹೇ ಗಿಣಿ
ತಲೆಯೆಲ್ಲದವ ಬಂದು ಹೊತ್ತು ಕೊಂಡುಹೋದ - ಹೇ ಗಿಣಿ 1
ಕಣ್ಣಿಲ್ಲದವ ನೋಡಿ ಕೆಂಪಿನ ಹಣ್ಣೆಂದ - ಹೇ ಗಿಣಿ
ಬಾಯಿಲ್ಲದವ ನುಂಗಿ ಬಸಿರೊಳಗಿಂಬಿಟ್ಟ - ಹೇ ಗಿಣಿ 2
ಬಲೆಯ ಹಾಕಿದರು ಬಲೆಯದಾಟುವದಯ್ಯ - ಹೇ ಗಿಣಿ
ಚೆಲುವ ಪುರಂದರವಿಠಲನೇ ಬಲ್ಲ - ಹೇ ಗಿಣಿ 3


ನಗೆಯು ಬರುತಿದೆ - ಎನಗೆ nageyu barutide



ನಗೆಯು ಬರುತಿದೆ - ಎನಗೆ
ನಗೆಯು ಬರುತಿದೆ ಪ.
ಜಗದೊಳಿದ್ದ ಮನುಜರೆಲ್ಲ
ಹಗರಣ ಮಾಡುವುದ ನೋಡಿ ಅಪ
ಪರಸತಿಯರ ಒಲುಮೆಗೊಲಿದು
ಹರುಷದಿಂದ ಅವರ ಬೆರೆದು
ಹರಿವ ನೀರಿನೊಳಗೆ ಮುಳುಗಿ
ಬೆರೆಳನೆಣಿಸುವರ ಕಂಡು 1
ಪತಿಯ ಸೇವೆ ಬಿಟ್ಟು, ಪರ
ಸತಿಯ ಕೂಡೆ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಡುವರ ಕಂಡು 2
ಹೀನಗುಣವ ಮನದೊಳಿಟ್ಟು
ತಾನು ವಿಷದ ಪುಂಜನಾಗಿ
ಮಾನಿ ಪುರಂದರವಿಠಲನ
ಧ್ಯಾನ ಮಾಡುವವರ ಕಂಡು 3


Wednesday 20 May 2020

ನಂಬಿದೆ ನಿನ್ನ ಪಾದವ - ವೆಂಕಟರಮಣ nambide ninna paadava


ನಂಬಿದೆ ನಿನ್ನ ಪಾದವ  ವೆಂಕಟರಮಣ
ನಂಬಿದೆ ನಿನ್ನ ಪಾದವ \\ ಪ\\
ನಂಬಿದೆ ನಿನ್ನ ಪದಾಂಬುಜಯುಗಳವ
ಇಂಬಿತ್ತು ಸಲಹಯ್ಯ ಶಂಖ-ಚಕ್ರಧರನೆ
ತಂದೆಯು ನೀನೆ ತಾಯಿಯು ನೀನೆ ಬಂಧು ಬಳಗವು ನೀನೆ ||
ಬಂದ ದುರಿತವೆನ್ನ ಹೊಂದಿಕೊಳ್ಳದಂತೆ
ತಂದೆ ಸಲಹೊ ಮುಕುಂದ ಮುರಾರಿ \\1\\
ಚಿಕ್ಕಂದು ಮೊದಲು ನಾನು ನಿನ್ನಯ ಪಾದ ಹೊಕ್ಕು ಜೀವಿಸುತಿಹೆನು ||
ಗಕ್ಕನೆ ಜ್ಞಾ ನವನಕ್ಕರೆಯಲಿ ಕೊಡು ಮಕ್ಕಳ ಮಾಣಿಕ್ಯ ರುಕ್ಮಿಣಿಯರಸಾ \\2\\
ಮರೆತು ನಾ ಮಾಯೆಯೊಳು ಮುಳುಗಿದೆ ಅದ ನರಿತು ಅರಿಯದಾದೆ ||

ಮರೆಯದೆ ಎನ್ನನು ಪೊರೆಯೆ ಕೃಪಾನಿಧಿ ವರದ ಶ್ರೀವೆಂಕಟ ಪುರಂದರ ವಿಠಲ \\3\\