Labels

Tuesday, 10 December 2019

ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ nambi kettavarillovo

ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ
ನಂಬದೆ ಕೆಡುವುರುಂಟೋ ||pa||
ನಂಬಿದ ಜನರಿಗೆ ಬೆಂಬಲ ತಾನಾಗಿ
ಹಂಬಲಿಸಿದ ಫಲ ತುಂಬಿ ಕೊಡುವರನ್ನ ||a.pa||
ಜಲಧರ ದ್ವಿಜವರಗೆ ತಾನೇ ಒಲಿದು
ಸುಲಭದಿ ಮುಕುತಿಯನಿತ್ತ
ಚಲುವ ಸುತನ ಪಡೆದಲಲನೆಗೆ ತ್ವರದಿಂದ
ಪುಲಿನ ಗರ್ತದಿ ದಿವ್ಯ  ಜಲವ ನಿತ್ತವರನ್ನ ||1||
ಮೃತ್ಯುದೂತರು ತನ್ನನು ಪೊಂದಿದ ನಿಜ
ಭೃತ್ಯನ ಕರೆದೊಯ್ಯಲು
ಸತ್ತ ದ್ವಿಜನ ತಾನು  ಮತ್ತು ಧsರೆಗೆ ತಂದು
ಮೃತ್ಯು ಬಿಡಿಸಿ ಸುಖವಿತ್ತು ಪೊರೆದಿಹರನ್ನಾ ||2||
ಧಿಟ ಗುರುಜಗನ್ನಾಥ ವಿಠಲನೊಲಿಮೆ
ಘಟನವಾದುದರಿಂದ
ಘಟನಾಘಟನ ಕಾರ್ಯ  ಘಟನಾ ಮಾಡುವ ನಮ್ಮ
ಪಟು ಗುರುವರ ಹೃತ್ಪುಟ ದಿರುವೋರನ್ನ ||3||

No comments:

Post a Comment