Labels

Thursday 26 December 2019

ಸೂತ್ರನಾಮಕ | ಸುಂದರನೇಕ sutranamaka sundaraneka

ಸೂತ್ರನಾಮಕ | ಸುಂದರನೇಕ | ಸೂತ್ರನಾಮಕ ಪ
ಸೂತ್ರನಾಮಕ ಸತ್ಪಾತ್ರ ಗರಡ ಶಿಖಿನೇತ್ರ ವಿನುತ ಶುಭಗಾತ್ರ ಪವಿತ್ರ ಅ.ಪ.
ರಾಮಪದ ಭೃಂಗಾ | ರಾವಣ ಮದಭಂಗ | ಗಜಸಿಂಗಾತಾಮಸ ಕುಲಕೆ ನೀ ಧೂಮಕೇತು ಬುಧಸೌಮನಸಾಗ್ರಣಿ ಕಾಮಿತ ಫಲದಾ 1
ಪಾಂಡುನಂದನಾ | ಪಾಲಿಸು ಯನ್ನಾ | ಖಂಡ ಪಾವನಾಅಂಡಜಾಧಿಪನ ಕಂಡು ಭಜಿಸಿ ದೋ-ರ್ದಂಡ ಖಳ ಕುಲ ಚಂಡ ಪ್ರಚಂಡಾ 2
e್ಞÁನದಾಯಕಾ | ಆನಂದತೀರ್ಥ | ದೀನ ಪೋಷಕಭಾನುಕೋಟಿ ತೇಜ ವ್ಯಾಸ ವಿಠಲನಧ್ಯಾನದೊಳಿಹ ಮಮ ಮಾನಸ ಹಂಸಾ 3

No comments:

Post a Comment