ಸತ್ಯವೇ ಸ್ನಾನ ಜಪ ನೇಮ - ಹೋಮ - ಅ - |
ಸತ್ಯದಲಿ ನಡೆದು ಮಾಳ್ಪದು ವ್ಯರ್ಥಕರ್ಮ ಪ.
ಅಪ್ಪಳಿಸಿ ಪರರ ದ್ರವ್ಯಗಳನ್ನು ತಂದುಂಡು |
ಒಪ್ಪದಲಿ ಉಪವಾಸ ವ್ರತವ ಮಾಡಿ ||
ತಪ್ಪದಲೆ ತಾ ಸ್ವರ್ಗ ಸೂರೆಗೊಂಬುವನೆಂಬ |
ಸರ್ಪಗಳು ಮಾಡದಪರಾಧವೇನಯ್ಯ ? 1
ಬಿಡದೆ ಮದ - ಮತ್ಸರಾಹಂಕಾರದೊಳು ಮುಳುಗಿ |
ಒಡನೆ ಬೆರಳುಗಳೆಣಿಸಿ ಮೌನದಿಂದ ||
ತಡೆಯದಲೆ ಪರಲೋಕ ಸುಖವನೈದುವೆನೆಂಬ |
ಬಡ ಬಕವು ಮಾಡಿದಪರಾಧವೇನಯ್ಯ 2
ಪರಸತಿಯು ಪರಧನವು ಪರನಿಂದೆ ಪರಹಿಂಸೆ |
ಪರಮ ಪಾತಕದ ಕಾರಣವ ತೊರೆದು ||
ಧರೆಗಧಿಕ ಪುರಂದರ ವಿಠಲನ ನೆರೆಭಜಿಸಿ | ವರವನು ಪಡೆಯೆ ಸಾಲೋಕ್ಯವನ್ನೀವ 3
No comments:
Post a Comment