Labels

Monday 30 December 2019

ಮತದೊಳಗೆ ಒಳ್ಳೆ ಮತ matadolage olle mata

ಮತದೊಳಗೆ ಒಳ್ಳೆ ಮತ ಮಧ್ವಮತವು - ರಘು - |
ಪತಿ ಪೂಜಾವಿಧಾನಕೆ ಪಾವನ ಮತವು ಪ.
ನಾರಾಯಣನ ನಾಮ ತುಂಬಿದ ಮತವೇದ - |
ಪಾರಾಯಣಕೆ ಅನುಕೂಲ ಮತವು ||
ತಾರತಮ್ಯದಿ ಉದ್ಧರಿಸಿ ಶ್ರುತಿಗಳನೊರೆದ
ಧಾರಣಿಸುರರ ಸಂತೋಷದ ಮತವು 1
ಅಕಲಂಕ ಶ್ರೀಹರಿಗೆ ವಜ್ರಾಂಕಿತ ಮತವು |
ಸಕಲ ದೇಶಕೆ ಸನ್ಮತವಾದ ಮತವು ||
ಅಕುಟಿಲ ಶುಕ - ಸನಕಾದಿ ಮುನೀಂದ್ರರ |
ನಿಖಿಲಕ್ರಿಯ ಪದವೀವ ನಿರ್ಮಲ ಮತವು 2
ಸರಸ ಸದ್ಗುಣ ಸತ್ಯಸಾತ್ತ್ವಿಕ ಮತವಿದು |
ಗುರುಶಿಷ್ಯರಿಗೆ ಅನುಕೂಲ ಮತವು ||
ಪರಮತ ಖಂಡಿಸಿ ಪಂಡಿತರು ಪೇಳಿದ |
ಪುರಂದರವಿಠಲನ ಮತವೆ ಹನುಮನ ಮತವು 3

No comments:

Post a Comment