Labels

Monday, 23 December 2019

ಸುಮ್ಮನೆ ಬಾಹೂದೆ ಮುಕುತಿ ನಮ್ಮ summane bahode mukuti namma

ಸುಮ್ಮನೆ ಬಾಹೂದೆ ಮುಕುತಿ - ನಮ್ಮ |
ಚೆನ್ನಾದಿ ಕೇಶವನ ದಯವಾಗದನಕ ಪ.
ಮನದಲ್ಲಿ ದೃಢವಿರಬೇಕು - ದುರ್ |
ಜನರ ಸಂಗತಿಯನು ನೀಗಲುಬೇಕು ||
ಅನಮಾನಂಗಳ ಬಿಡಬೇಕು - ತನ್ನ |
ತನು - ಮನ ಹರಿಗೆ ಒಪ್ಪಿಸಿ ಕೊಡಬೇಕು 1
ಕಾಮ - ಕ್ರೋಧವ ಬಿಡಬೇಕು - ಹರಿ |
ನಾಮಸಂಕೀರ್ತನೆ ಮಾಡಲುಬೇಕು ||
ಹೇಮದಾಸೆಯ ಸುಡಬೇಕು - ತ |
ನ್ನಾ ಮನ ಹರಿಯ ಪಾದದಲಿಡಬೇಕು 2
ಪಾಪಗಳನೆ ಕಳೆಯಬೇಕು - e್ಞÁನ |
ದೀಪ ಬೆಳಕಿನಲಿ ಲೋಲಾಡ ಬೇಕು ||
ತಾಪ ರಹಿತಗೈಯಬೇಕು - ನಮ್ಮ
ಓಪ ಪುರಂದರವಿಠಲನೊಲೆಯ ಬೇಕು


No comments:

Post a Comment