Labels

Friday 27 December 2019

ಇಂದಿರಾ ಪಾಲಿಸು indira paaliso

ಇಂದಿರಾ ಪಾಲಿಸು ಎನ್ನ ಇಂದಿರಾ ಪ
ಇಂದಿರಾ ದೇವಿಯೆ ನಿನ್ನ | ಪಾದಪೊಂದಿದೆ ಸಲಹಬೇಕೆನ್ನಾ | ಆಹಕಂದರ್ಪ ಇಂದ್ರ ಫಣೀಂದ್ರ ಗರುಡ ಕಂದುಕಂಧರ ಬ್ರಹ್ಮಾದಿ ವಂದ್ಯಳೆ ಪಾಲಿಸು ಅ.ಪ.
ಶ್ರೀಮಾಯೆ ಜಯ ಕೃತಿ ಶಾಂತಿ | ದುರ್ಗೆಭೂಮಿ ಶ್ರೀದೇವಿ ಜಯಂತಿ | ಲಕ್ಷ್ಮೀರಮೆ ದಕ್ಷಿಣೆ ಗುಣವಂತಿ | ಸತ್ಯಭಾಮೆ ರುಕ್ಮಿಣಿ ಮಹಾಕಾಂತಿ | ಆಹಈ ಮಹಾನಂತ ರೂಪ ನಾಮಗಳುಳ್ಳಕೋಮಲ ಗಾತ್ರಿಯೆ ಕಾಮಜನನಿ ಕಾಯೆ 1
ಶ್ರೀಭಾಗ ಮಹಾ ಪ್ರಳಯದಲ್ಲಿ | ಪದ್ಮನಾಭಾಗೆ ಬಹು ಭಕ್ತಿಯಲ್ಲಿ | ದಿವ್ಯಆಭರಣಗಳಾಕಾರದಲ್ಲಿ | ಮಿಕ್ಕವೈಭವನೇಕ ರೂಪಾದಲ್ಲಿ | ಆಹಸ್ವಾಭಿಮಾನದಿ ಬಹು ಶೋಭನ ಪೂಜೆಯಲಾಭಗಳೈದಿದ ಶೋಭನವಂತಳೆ 2
ದೇಶಕಾಲಾದಿಗಳಲ್ಲಿ | ಜೀವರಾಶಿ ವೇದಾಕ್ಷರದಲ್ಲಿ | ಇದ್ದುವಾಸುದೇವನ ಬಳಿಯಲ್ಲಿ | ಸರಿಸೂಸಿ ವ್ಯಾಪ್ತಿ ಸಮದಲ್ಲಿ | ಆಹಲೇಸಾಗಿ ಒಪ್ಪುತ್ತ ಈಶ ಕೋಟಿಯೊಳುವಾಸಾಳೆ ಎನ್ನಭಿಲಾಷೆ ಸಲ್ಲಿಸಬೇಕು3
ಅನಾದಿಯಿಂದಲಿ ಬಂದ | ಮೋಹಾe್ಞÁನ ಕಾಮ ಕರ್ಮದಿಂದ | ಕೇತುನಾನಾ ಜನ್ಮದಿ ಬಹು ನೊಂದ | ದೆಲ್ಲಏನ ಪೇಳಲಿ ಭವ ಬಂಧಾ | ಆಹನೀನೆ ಕಳೆದು ದಿವ್ಯ e್ಞÁನ ಭಕುತಿಯಿತ್ತುಪ್ರಾಣಪತಿಯ ಪಾದವನ್ನು ತೋರಿಸಬೇಕು 4
ನಿತ್ಯ ಭಾಗ್ಯವು ನಿನಗೊಂದೆ | ಅಲ್ಲರತ್ನಾಕರನು ನಿನ ತಂದೆ | ತಾಯಿರತ್ನಗರ್ಭಳು ಕೇಳು ಮುಂದೆ | ಪತಿಗತ್ಯಂತ ಪ್ರಿಯಳಾದೆ ಅಂದೆ | ಆಹಸತ್ಯಬೋಧರು ಮಾಳ್ಪ ಅತ್ಯಂತ ಪೂಜೆಯಿಂಯುಕ್ತೆ ಶಿರಿಯೆ ನಿನಗೆತ್ತ ಕತ್ತಲು ಕಾಣೆ 5
ಲೋಕ ಜನನಿಯು ಎಂದು ನಿನ್ನಾ | ಕೀರ್ತಿಸಾಕಲ್ಯವಾಗಿದೆ ಘನ್ನಾ | ಎನ್ನಸಾಕಲಾರದೆ ಬಿಡಲಿನ್ನಾ | ಮುಂದೆಯಾಕೆ ಭಜಿಸುವುದು ನಿನ್ನಾ | ಆಹಸಾಕಾರವಾಗಿನ್ನು ಬೇಕಾದ ವರಗಳನೀ ಕರುಣಿಸಿ ಎನ್ನ ಜೋಕೆ ಮಾಡಲಿ ಬೇಕು 6
ಆವ ಜನ್ಮದ ಪುಣ್ಯಫಲದಿ | ನಿನ್ನಸೇವೆ ದೊರಕಿತೊ ಈ ಕ್ಷಣದಿ | ಎನಗೀವ ಭವ್ಯ ಕೇಳು ಮನದಿ | ಆಹಶ್ರೀ ವ್ಯಾಸ ವಿಠಲನ್ನ ಸೇವಿಪ ಯತಿಗಳ ಸಹವಾಸವನೆ ಇತ್ತು ಭಾವ ಶುದ್ಧನ ಮಾಡು 7

No comments:

Post a Comment