Labels

Tuesday, 24 December 2019

ಹರಿಕಥಾ ಶ್ರವಣ ಮಾಡೊ hari katha sravana maado

ಹರಿಕಥಾ ಶ್ರವಣ ಮಾಡೊ - ನಿರಂತರ
ಪರಗತಿಗಿದು ನಿರ್ಧಾರ ನೋಡೊ ಪ.
ಸರಸಿಜನಾಭನ ಸರ್ವದಾ ಹೊಗಳುತ
ದುರಿತ ದೊರಕೀಡಾಡೊ - ಮನುಜಾ 1
ಜ್ಞಾನ - ಭಕುತಿ - ವೈರಾಗ್ಯವೀವ ನಮ್ಮ
ಆನಂದತೀರ್ಥರ ಪಾಡೊ ಮನುಜಾ 2
ಪರಮ ಪುರುಷ ಶ್ರೀ ಪುರಂದರವಿಠಲನ
ಚರಣ ಕಮಲಗಳ ಕೂಡೊ - ಮನುಜಾ 3

No comments:

Post a Comment