Labels

Monday 30 December 2019

ಮಕ್ಕಳ ಮಾಣಿಕ ಮನೋಹರ ನಿಧಿ-ವೈರಿ makkala maanika manohar

ಮಕ್ಕಳ ಮಾಣಿಕ ಮನೋಹರ ನಿಧಿ-ವೈರಿ-|
ರಕ್ಕಸ ಶಕಟನ ತುಳಿದು ದೀಪಾದವೆ ಪ
ಬಲಿಯ ದಾನವ ಬೇಡಿ ನೆಲವ ಈರಡಿ ಮಾಡಿ |
ಜಲಧಿಯ ಪಡೆದದ್ದು ಈ ಪಾದವೆ ||
ಹಲವು ಕಾಲಗಳಿಂದ ಶಿಲೆ ಶಾಪವಡೆದಿರಲು |
ಫಲಕಾಲಕ್ಕೊದಗಿದುದೀ ಪಾದವೆ 1
ಕಡುಕೋಪದಿ ಕಾಳಿಂಗನ ಮಡುವ ಕಲಕಿ |
ಹೆಡೆಯನು ತುಳಿದುದು ಈ ಪಾದವೆ ||
ಸಡಗರದಿಂದ ಕೌರವನ ಸಿಂಹಾಸನವ |
ಹೊಡೆಮಗುಚಿ ಕೆಡಹಿದುದೀ ಪಾದವೆ 2
ಶೃಂಗಾರದಿಂದ ಹೆಂಗಳು ಲಕ್ಷುಮಿಯ ಸಹಿತ |
ಅಂಗನೆಯರೊತ್ತುವುದೀ ಪಾದವೆ ||
ಸಂಗಸುಖದಿಂದ ಶ್ರೀ ಪುರಂದರವಿಠಲನ |
ಅಂಗದೊಳಡಗಿದ್ದುದೀ ಪಾದವೆ 3

No comments:

Post a Comment